ಒಟ್ಟು 7 ಕಡೆಗಳಲ್ಲಿ , 1 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನಿರುದ್ಧ ನೀಯನ್ನ ಮಾಧವ ಕೃಷ್ಣಾ ಪ ಪಾಂಡುತನಯ ಪರಿಪಾಲನ ಹರಿ ವೆತಂಡ ವರದ ಶ್ರೀಕುಂಡಲಿ±ಯÀನ 1 ಅಂಡಜಗಮನ ಪ್ರಂಚಂಡ ಮಹಿಮಾ ಭವ ಖಂಡನ ಮುನಿನುತ ಮಂಡನಭೀಮ 2 ನವನೀತ ಚೋರ ಗೋ ಪಾಲ ಮುರಾರಿ ದಯಾಲು ರಮೇಶ 4 ಕಂಬುಕಂಠ ಕನ ಕಾಂಬರಧರ ಶಶಿ ಬಿಂಬ ವಿಜಿತ ಮುಖ ಅಂಬುರುಹಾಕ್ಷ 5 ಪಾಪರಹಿತ ನಿರ್ಲೇಪ ನಿರಂಜನ ಶ್ರೀಪತಿ ಘನ ಹೆನ್ನೆಪುರನಿಲಯ 6
--------------
ಹೆನ್ನೆರಂಗದಾಸರು
ಕರುಣಿಸೆಲೊ ಮುಕುಂದ ಮಾಧವ ಶ್ರೀರಾಮ ಧರಣಿಧರನೆನಿಸಿ ನಿಮ್ಮ ದಾಸ್ಯವ ಪ ಅಂಬುಜಾಕ್ಷ ಕಂಬುಕಂದರ ವಿನುತ ಮುರಹರ ಶಂಬರಾರಿ ಜನಕ ಗಿರಿಧರ ಶೌರಿ ಶುಭಕರ 1 ಚಾರು ಸುಚರಿತ ಶ್ರೀರಾಮ ವನಜನಾಭ ಮುನಿ ವಂದಿತ ದನುಜ ಗರ್ವ ಸಂಹಾರಾಚ್ಯುತ ಶ್ರೀರಾಮ ಅನಘ ಕನಕವಸನ ಭೂಷಿತ 2 ಪನ್ನಗೇಂದ್ರಶಯನ ವಾಮನ ಉದಧಿ ಬಂಧನ ಹೆನ್ನೆಪುರನಿಲಯ ಜನಾರ್ದನ ಶ್ರೀರಾಮಯನ್ನ ಮೊರೆಯ ಕೇಳಿ ಬೇಗನೆ 3
--------------
ಹೆನ್ನೆರಂಗದಾಸರು
ದೇವಕಿ ನಂದನ ಕೃಷ್ಣಾ ಭಂಜನ ಭಾವಜಪಿತ ಶ್ರೀಕೃಷ್ಣಾ ಪ ಇಭರಾಡ್ಪರದ ಶ್ರೀಕೃಷ್ಣ 1 ಶ್ರೀಕೇಶವ ಶಶಿ ಶೇಖರನುತ ಕರುಣಾಕರ ರೂಪ ಶ್ರೀಕೃಷ್ಣ 2 ಕುಂದರದನ ಕಾಲಿಂದೀವರ ಮನ್ಮಂದಿರೋದ್ಧಾರ ಶ್ರೀಕೃಷ್ಣಾ 3 ಶ್ರೀ ಖಗಪತಿವಾಹನ ಕೃಷ್ಣ 4 ಚಾರುಚರಿತ ವಿಸ್ತಾರ ಮಹಿಮಾ ನೀರೇರುಹಲೋಚನ ಕೃಷ್ಣ 5 ಕೈಟಭ ದಾನವ ಖಂಡನ ಭಾಸುರ ಹಾಟಕಾಂಬರಧರ ಕೃಷ್ಣ 6 ಶ್ರೀಪತಿಭವ ಸಂತಾಪಹರಣ 'ಹೆನ್ನೆಪುರನಿಲಯ' ಕೃಷ್ಣಾ 7
--------------
ಹೆನ್ನೆರಂಗದಾಸರು
ಪಡೆದಲ್ಲದೆ ಮಿಗಿಲು ಬರಲರಿಯದು ಎಡೆ ಬಿಡದೆ ಎಲೆ ಮನವೇ ಏಕೆ ಬಳಲುವಿ ವೃಥಾ ಪ ವನನಿಧಿಯೊಳು ಪೊಕ್ಕು ಸಲಿರೆಡಿ ನೋಡಿದರೂ ಭರದಿ ಬಲುಭಾರವನು ಹೊರಲಿ ಬೆನ್ನಿಲಿ ಧರಗೆ ತಲೆಯನ್ನು ಬಾಗಿ ತಾನು ಯೋಚನೆ ಮಾಡಿ ಪರಿ ಪರಿಯಲಿ ಭಯಂಕರ 1 ಬಡವನೆಂದ್ಹೇಳ ಭರಬಾಗಿಲಲಿ ನಿಂದಿರಲು ದೃಢದಿ ವೈರಿಗಳ ಖಂಡಿಸಲು ಮುದದಿ ಅಡವಿ ಸಂಚರಿಸುತಲಿ ಹಾರೈಸಿ ಹುಡುಕಿದರು ಕಡು ಕಳ್ಳತನ ಕಲೆತು ಕಂಡಕಡೆ ತಿರುಗಿದರು 2 ಬರಿಯ ಬತ್ತಲು ನಿಂತು ನರರಿಗ್ಹೊಂನವ ತೋರಲು ತುರಗವನ್ನೇರಿ ಧರಣಿಯನು ಪಾಲಿಸಲಿ 'ವರ ಹೆನ್ನೆಪುರನಿಲಯ ನರಹರಿಯು ಮಾಡಿದ್ದ ಬರಿದೆ ಚಿಂತಿಸಿ ನೀನು ಭಾಗ್ಯವದರಿಂದೇನು 3
--------------
ಹೆನ್ನೆರಂಗದಾಸರು
ಯಾರಂದರೇನು ಫಲವದೆ ನಮ್ಮ ದೃಷ್ಟ ಈ ರೀತಿ ಕಾಡಲು ಬರಿದೆ ಪ ಯಕ್ಷ ಕಿನ್ನರಾದಿವಂದಿತ ಪರಮಾತ್ಮ ಜಲ- ಜಾಕ್ಷ ಕೃಷ್ಣ ಮಾಧವಾಚ್ಯುತ ಪಕ್ಷಿವಾಹನ ಪಾಲಿಸು ಕರಿವರದ ಬೇಗನೆ ನೀನು ಪೇಕ್ಷಿಸದೆ ರಕ್ಷಿಸೆನ್ನ 1 ಇನ ಶಶಿ ಕುಜರಾಹು ಗುರುಬಲ ಇದರ ಮೇಲೆ ಶನಿ ಸೌಮ್ಯ ಕೇತು ಶುಕ್ರ ಗ್ರಹಗಳ ಘನದಿ ಸುಫಲ ಲೇಶಕಾಣದೆ ಬಳಲುವ ವೇಳೆ ಅನಿಮಿಷರೊಡೆಯನ ಮೊರೆ ಹೋಗದೆ 2 ಪರಮ ಪುರುಷ ಪತಿತ ಪಾವನ ಬಿರುದುಳ್ಳ ಹೆನ್ನೆಪುರನಿಲಯ ನರಹರಿ ಚರಣ ಸ್ಮರಣೆ ಹರುಷದಿಂದ ನಿರುತ ಮನದೊಳಾವಾಗ ಪರರ ನಿಂದೆಗೊಳಗಾಗಿ ವೃಥಾ 3
--------------
ಹೆನ್ನೆರಂಗದಾಸರು
ವಾಸುದೇವಯನ್ನ ಸಲಹೋ ವಾರಿಜಾಸನ ಈಶವಾಸವಾರ್ಚಿತ ಚರಣ ವನಜೋದರ ಭಾಸುರಾಂಗ ಕೋಟಿ ಪ್ರಭಾಕರ ಪ್ರಕಾಶ ಮಂದಹಾಸ ಕಮಲಾಚಲನಿವಾಸ ಶ್ರೀ ಜಗದೀಶ ಪ ತಾಪಸೋತ್ತಮ ಸತಿಗೆ ಕೋಪದಿಂದ ಪಾಷಾಣರೂಪವಾಗಿ ಬಿಟ್ಡೆನುತ ಶಾಪಕೊಡಲು ಕೋಪನಾಮಣಿ ಬಲು ಪ್ರಲಾಪಿಸುತ ಮನದಿ ನಿಷ್ಪಾಪರರ ನುಡಿಯಂತೆ ಧರಿಯಲಿಬಿದ್ದಿರಲು ಪಾದ ಸ್ಪರ್ಶಿಸಲಾಕ್ಷಣ ಸೀತಾಪತಿಯ ಸೇವೆಯಿಂದ ಸುಂದರಿಯಾದಳು ತ್ವರದಿ 1 ಪಾಪಗಳು ಮಾಡಿದವನಂತ್ಯ ಕಾಲದಲಿ ಸುತನ ನಾರಗೆಂದು ಕರಿಯೇ ಗತಿ ತೋರಿದಿ ಹಿತದ ಲಾಮರಾಮರೆಂಬ ನಿನ್ನ ಹರುಷದಲಿ ಪೊರೆದೆ ಕ್ಷಿತಿ ನಾಥ ಹರಿ ಮಹೋನ್ನತ ಚರಿತನೆ ಪತಿತ ಪಾವನ ಬಿರುದು ಪರಮಾತ್ಮ ನಿನಗಿರಲು ಸ್ತುತಿಸುವೆನು ಗೋವಿಂದ ಶುಭಕರ ಶ್ರೀ ಮುಕುಂದ 2 ಶರಧಿ ಗಂಭೀರ ಹಾಟಕಾಂಬರ ಶೋಭಿತ ಪುರುಷೋತ್ತಮಾನಂತ ಮುರವೈರಿ ಮುರಲೀರವ ವಿನೋದ ಗರುಡಗಮನ `ವರ ಹೆನ್ನೆಪುರನಿಲಯ' ಪರಮಪಾವನ ನೃಹರೆ ಉರಗೇಂದ್ರಶಯನ ಮಂದರಧರ ಕೃಪಾಂಬುಧೆ3
--------------
ಹೆನ್ನೆರಂಗದಾಸರು
ಹರಿಯಂದು ಸ್ಮರಿಸುವರ ದುರಿತಪರಿಹಾರವೆಂದು ನೆರೆಪೇಳ್ವ ಶೃತಿ ತಿಳಿದು ಮನವೆ ಕರುಣಾಸಾಗರನಾದ ಕಮಲಾದ್ರಿವಾಸ ನರಹರಿಯಪಾದ ಭಜಿಸುವ ಮನವೆ ಪ ಸುತನ ನಿಂದಗನೆಂದು ಹಿತದಂತ್ಯಕಾಲ ಸಂಘಾತನೆ ಹಿತ ವೇಳ್ವೆ ಕರಿಯಲು ಮನವೆ ಚತುರಾಸ್ಯ ಜನಕ ಮನ್ಮಥಕೋಟಿರೂಪ ಸದ್ಗತಿ ತೋರಿಸಲಹುದೇನು ಮನವೆ 1 ಆ ಮರರೀಮರ ಎಂಬ ಪಾಮರಗೆ ಪಟ್ಟಾಭಿರಾಮ ಭಕ್ತರ ಪ್ರೇಮ ಮನವೆ ಕಾಮಿತಾರ್ಥವನಿತ್ತ ಕಂಜಾಕ್ಷದಯದಿ ಸೀತಾಮನೋಹರ ರಾಮ ಮನವೆ 2 ಕರಿಯು ಮಕರಿಗೆ ಶಿಲ್ಕಿ ನೆರಳುತಲಿ ಪರಮಾತ್ಮ ಪರಬ್ರಹ್ಮನೆಂದು ಸ್ತುತಿಸಿ ಮನವೆ ಗರುಡವಾಹನ ಹೆನ್ನೆಪುರನಿಲಯ ಮರಿಯದಲೆ ಪರಿಪಾಲಿಸಿ ಪೊರೆವ ಮನವೆ 3
--------------
ಹೆನ್ನೆರಂಗದಾಸರು