ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಡಿ ಜಾಗಟೆ ಹೊಡಿ ನಗಾರಿ ಪಿಡಿ ತುತ್ತೂರಿಯನು ನಡಿ ಮುಂದೆ ಅಡಿ ಇಡು ಹೆದರದೆ ನುಡಿ ಹರಿಯನಾಮ ಪ. ಬಿಗಿ ನಡುವನು ಮುಗಿ ಕೈಯ್ಯನು ಒಗಿ ದುರಭಿಮಾನ ಚಿಗಿ ಭಕ್ತಿರಸ ಮುಖದಲಿ ನಗಿ ತೋರು ನಯದಿ 1 ಪರಿ ಪರಿ ಕರಿ ಕುಣಿಸು ಕಾಲ್ಕಿರಿ ಗೆಜ್ಜೆ ಭರ ಧರಿಯಲ್ಲಿ ಮೆಟ್ಟೆ 2 ಗಟ್ಟಿ ಮಾಡಿ ಮನ ತಟ್ಟಿ ಚಪ್ಪಾಳೆ ಮೆಟ್ಟಿ ಖಳರ ಎದÉಯ ಶ್ರೇಷ್ಠ ಮಧ್ವಮತ ಗುಟ್ಟು ದಾಸತ್ವವು ದುಷ್ಟರರಿಯರೆಂದು 3 ಶುದ್ಧ ಗುರುವು ತಂದೆ ಮುದ್ದುಮೋಹನರು ಉದ್ಧಾರವನೆ ಮಾಡಿ ವಿದ್ಯಾನಾಮ ಅನಿರುದ್ಧಾನಂಕಿತಗಳ ಬದ್ಧಾಗೀವರೆಂದು 4 ಕೆಟ್ಟ ಕರ್ಮಗಳ ಕಟ್ಟು ಹರಿದು ಮುಕ್ತಿ ಕೊಟ್ಟು ಪೊರೆವನೆಂದು 5
--------------
ಅಂಬಾಬಾಯಿ
ಮುದದಿ ಪಾಲಿಸೊ ಮುದತೀರಥರಾಯಾ ಸದ್ಭುಧ ಜನಗೇಯಾ ಪ ಪದುಮನಾಭ ಪದ ಪದುಮ ಮಧುಪ ಸದಯಾ ಸದಮಲ ಶುಭಕಾಯಾ ಅ.ಪ ವದಗಿ ರಾಮಕಾರ್ಯದಿ ನೀ ಮನಸಿಟ್ಟಿ ಲಂಕಾಪುರ ಮೆಟ್ಟಿ ಹೆದರದೆ ದಿತಿಜರನೆಲ್ಲ ಕೊಂದುಬಿಟ್ಟೆ ಪುಚ್ಛದಿ ಪುರಸುಟ್ಟ ಕದನದಿ ಭೀಮ ವೃಕೋದರ ಜಗಜಟ್ಟಿ ಸಂನ್ಯಾಸತೊಟ್ಟಿ1 ಸೀತಾಶೋಕ ವಿನಾಶನ ಮಹಂತಾ ಮಹಬಲಿ ಹನುಮಂತ ವಾತಜ ವಾರಿಜ ಜಾತನಾಗುವಂತಾ ಖ್ಯಾತಿಯುಳ್ಳ ವಂಥಾ ಜಯವಂತಯತಿನಾಥನೆ ಶಾಂತಾ 2 ಶಿರಿಗೋವಿಂದ ವಿಠಲನ ಪ್ರೀತಿ ಕಂದಾ ಭೀಮನೆ ಆನಂದಾಗರಿದು ಮುರಿದು ಪರಮತವನೆ ಆನಂದಾ ಮುನಿ ರೂಪದಲಿಂದ ಬದರಿಗೆ ನಡೆತಂದಾ 3
--------------
ಅಸ್ಕಿಹಾಳ ಗೋವಿಂದ
ಏನೆಂತೊಲಿದೆ ಇಂತವರಂತೆ ಕೆಡುಬುದ್ಧಿ - ಎನ್ನೊಳಿಲ್ಲಗುಣ |ಹೀನರಲ್ಲದ ದೀನ ಜನರ ಪಾಲಿಪ ಬುದ್ಧಿ ನಿನ್ನೊಳಿಲ್ಲ ಪತರಳ ಪ್ರಹ್ಲಾದನಂದದಿ ನಿನ್ನಯರೂಪ ಕೆಡಿಸಲಿಲ್ಲನರನಂತೆ ತನ್ನ ಬಂಡಿಯ ಬೋವನ ಮಾಡಿ ಹೊಡಿಸಲಿಲ್ಲ ||ಸುರನದೀಸುತನಂತೆ ಪಣೆಯೊಳು ಬಾಣವ ಸಿಡಿಸಲಿಲ್ಲದೊರೆ ಅಂಬರೀಷನಂದದಿ ಈರೈದು ಜನ್ಮವ ಪಡಿಸಲಿಲ್ಲ 1ನಾರದನಂತೆ ಕಂಡವರ ಕೊಂಡೆಯವ ನಾ ಪೇಳಲಿಲ್ಲ |ಪರಾಶರನಂತೆ ನದಿಯೊಳಂಬಿಗ ಹೆಣ್ಣ ಕೊಡಲಿಲ್ಲ ||ಆ ರುಕುಮಾಂಗದನಂತೆ ಸುತನ ಕೊಲ್ಲಲು ಧೃಢಮಾಡಲಿಲ್ಲಮಾರುತನಂತೆ ನೀನುಣುತಿದ್ದ ಎಡೆಯ ಕೊಂಡೋಡಲಿಲ್ಲ 2ವಿದುರನಂತೆ ನನ್ನ ಸದನವ ಮುರಿದು ನಾ ಕುಣಿಯಲಿಲ್ಲಮದಕರಿಯಂತೆ ಮಕರಿಯ ಬಾಯೊಳು ಸಿಕ್ಕಿ ಒದರಲಿಲ್ಲ ||ಹೆದರದೆ ಬಲಿಯಂತೆ ಭೂಮಿಯ ಧಾರೆಯನೆರೆಯಲಿಲ್ಲಸದರ ಮಾತುಗಳಾಡಿ ಶಿಶುಪಾಲನಂತೆ ನಾ ಜರೆಯಲಿಲ್ಲ3ಸನಕಾದಿ ಮುನಿಯಂತೆಅನುದಿನ ಮನದೊಳು ಸ್ಮರಿಸಲಿಲ್ಲಇನಸುತ ಕಪಿಯಂತೆ ವಂಚಿಸಿ ವಾಲಿಯ ಕೊಲಿಸಲಿಲ್ಲ ||ಬಿನುಗು ಬೇಡತಿಯಂತೆ ಸವಿದುಂಡ ಹಣ್ಣ ನಾ ತಿನಿಸಲಿಲ್ಲಘನ ಅಜಾಮಿಳನಂತೆ ಸುತನ ನಾರಗನೆಂದು ಕರೆಯಲಿಲ್ಲ4ವರ ಶೌನಕನಂತೆನಿತ್ಯ ಸೂತನ ಕಥೆ ಕೇಳಲಿಲ್ಲಪಿರಿದು ತುಂಬುರುನಂತೆ ನಾಟ್ಯ - ಸಂಗೀತವ ಪೇಳಲಿಲ್ಲ ||ಉರಗಾಧಿಪತಿಯಂತೆ ಉದರದೊಳಿಟ್ಟು ನಾ ತೂಗಲಿಲ್ಲಪಿರಿದು ಕುಚೇಲನ ತೆರನಂತೆ ಅವಲಕ್ಕಿ ಈಯಲಿಲ್ಲ 5ಭೃಗುಮುನಿಯಂತೆ ಗರ್ವದಿ ನಿನ್ನ ಎದೆಯನು ಒದೆಯಲಿಲ್ಲಅಗಣಿತ ಮಹಿಮ ನೀನಹುದೆಂದು ಧ್ರುವನಂತೆ ಪೊಗಳಲಿಲ್ಲ ||ಖಗರಾಜನಂತೆ ನಿನ್ನನು ಪೊತ್ತು ಗಗನದಿ ತಿರುಗಲಿಲ್ಲಅಗಜೆಯರಸನಂತೆ ಮಸಣದಿ ರಾಮನ ಸ್ಮರಿಸಲಿಲ್ಲ 6ಅವಹಿತದಲಿ ವಿಭೀಷಣನಂತೆ ಅಣ್ಣನ ಕೊಲಿಸಲಿಲ್ಲಯುವತಿ ದ್ರೌಪದಿಯಂತೆ ಪತ್ರಶಾಕವನುಣಬಡಿಸಲಿಲ್ಲ ||ತವೆ ಪುಂಡಲೀಕನಂದದಿ ಇಟ್ಟಿಗೆಯ ಮೇಲೆ ನಿಲಿಸಲಿಲ್ಲ ದೇವಇವರಂತೆಪುರಂದರ ವಿಠಲ ನಿನ್ನಯ ಕೃಪೆಯೆನ್ನೊಳಿಲ್ಲ7ಅಂಕಿತದಲ್ಲೂ ಇವೆ.)
--------------
ಪುರಂದರದಾಸರು
ವಾಯು ದೇವರುಮುದದಿ ಪಾಲಿಸೊ ಮುದತೀರಥ ರಾಯಾಸದ್ಬುಧ ಜನ ಗೇಯಾ ಪಪದುಮನಾಭ ಪದ ಪದುಮ ಮುದುಪ ಸದಯಾಸದಮಲಶುಭಕಾಯಾ ಅ.ಪ.ವದಗಿರಾಮ ಕಾರ್ಯದಿ ನೀ ಮನಸಿಟ್ಟಿಲಂಕಾಪುರ ಮೆಟ್ಟಿಹೆದರದೆ ದಿತಿಜರನೆಲ್ಲ ಕೊಂದು ಬಿಟ್ಟೆಪುಚ್ಚದಿಪುರ ಸುಟ್ಟಕದನದಿ ಭೀಮವೃಕೋದರ ಜಗಜಟ್ಟಿಸಂನ್ಯಾಸ ತೊಟ್ಟಿ 1ಸೀತಾಶೋಕವಿನಾಶನ ಮಹಂತಾಮಹಬಲಿ ಹನುಮಂತದಾತಜವಾರಿಜಜಾತನಾಗುವಂತಾಖ್ಯಾತಿಯುಳ್ಳವಂಥಾಕೋತಿರೂಪಿಧರ್ಮಾನುಜಜಯವಂತಯತಿನಾಥನೆ ಶಾಂತಾ 2ಶಿರಿಗೋವಿಂದ ವಿಠಲನ ಪ್ರೀತಿ ಕಂದಾಭೀಮನೆ ಆನಂದಾಗರಿದು ಮುರಿದು ಪರಮತವನೆಆನಂದಾ ಮುನಿ ರೂಪದಲಿಂದ ಶಿರಿರಾಮನಸುತರ ಪ್ರೀಯ ಭರದಿಂದಾಬದರಿಗೆ ನಡೆ ತಂದಾ 3
--------------
ಸಿರಿಗೋವಿಂದವಿಠಲ
ಸದಾ ಪೂಜಿಪೆ ನಿನ್ನ ಸೌಭಾಗ್ಯಳೆ ಪಇಂದಿರಾದೇವಿಯೆ ಮಂದರೋದ್ಧರನ ರಾಣಿಇಂದೀವರಾಕ್ಷಿ ಆನಂದದಲಿ 1ಪದ್ಮಾಕ್ಷಿ ಎನ್ನ ಹೃತ್ಪದ್ಮದಿ ಹರಿಪಾದಪದ್ಮವ ತೋರಿ ಉದ್ಧರಿಸುವಳೆ 2ಅಂಬುಜಪಾಣಿಯೆ ಅಂಜುಜಾಕ್ಷನ ರಾಣಿಅಂಬುಧಿಶಯನನ ಪೊಂದಿರ್ಪಳೆ 3ಆದಿಕಾರಿಣಿ ಪತ್ರಾದಿ ರೂಪದಿ ಹರಿಯಆರಾಧಿಸುವಿ ಸರ್ವರಾಧಾರಿಯೆ 4ಹೆದರದೆ ಭೃಗುಮುನಿ ಒದೆಯೆ ಪಾದದಿಂದಕದನವ ಮಾಡಿದ ಕಲ್ಯಾಣಿಯೆ 5ಭಕ್ತಜನರು ನಿನ್ನ ಭಕ್ತಿಯಿಂ ಪೂಜಿಸಲುಮುಕ್ತಿ ಮಾರ್ಗವ ತೋರಿ ಸಲಹುವಳೆ 6ಸರಸಿಜಾಸನ ಮಾತೆ ಸ್ಮರಿಸುವೆ ನಿಮ್ಮಪಾದಸ್ಮರಣೆ ಮರೆಯದಂತೆ ಕರುಣಿಪುದು 7ಪಂಕಜನಾಭನ ಕಿಂಕರರನ್ನು ಕಾಯ್ವಬಿಂಕನಿನ್ನದು ಸರ್ವ ಅಲಂಕಾರಿಣಿ8ಕಮಲನಯನನೆ ಶ್ರೀ ಕಮಲನಾಭ ವಿಠ್ಠಲನಕ್ಷಣ ಬಿಡದಲೆ ತೋರು ನಮಿಸುವೆನು 9
--------------
ನಿಡಗುರುಕಿ ಜೀವೂಬಾಯಿ