ಒಟ್ಟು 6 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಕೊಟ್ಟನೆ ಮಗಳಾ ಉದಾ | ಸೀನದಿ ಭಿಕ್ಷುಕ ಶಿವಗೀಂದು ಗಿರಿಜಾ ಪ ಹೆತ್ತವಳಿಲ್ಲಾ ಸೀ ಹುಟ್ಟತ ಪರದೇಶೀ | ನೆತ್ತಿಗೆ ಎಣ್ಣಿಲ್ಲಾ ನೆರೆಬಿಸಿ ನೀರಿಲ್ಲಾ | ದೊತ್ತಿದ ಕೂದಲು ದುರ್ಜಟಿ ಯಾಗಲು | ಹೊತ್ತಿದ ತಲೆಯಿಂದ ಹಣೆ ಉರಿಗಣ್ಣಾದ | ಇತ್ತಿ ಹೊದಿಯಲಿಲ್ಲಾದೀ ಭಸ್ಮ ಲೇಪನಾ | ಮೆತ್ತಿದ ಗುಣದಿಂದ ಮೈ ಯಲ್ಲ ಬೆಳ್ಚಾದಾ | ಎತ್ತ ನೇವುವನು ಭೂತ ಗಣಾ | ಯೋಗಿ - ಕು | ಲೋತ್ತ ಮನೆನಿಸಿದನು ಇಂಥ | ಹತ್ತು ಭುಜವ ತಾಳಿ ದೈದು ಮೊರೆಯುಗವ 1 ಶರಥಿ ಮಥನದಲ್ಲಿ ಸಲೆ ವಿಷ ಹೊರಡಲಿ | ಸುರರ ಮಾತು ಕೇಳಿ ಶೀಘ್ರದಿ ಸುರಿಯಲಿ | ಉರಿಹೆಚ್ಚಿ- ಮೈಯ್ಯಲಿ ಉಬ್ಬಸ ಗೊಳುತಲಿ | ಸುರಗಂಗಿಯ ಹೊತ್ತ ಸೀತಾಂಶು ಕಳೆವತ್ತ | ಮರುಳವೆ ತಿರುಗುವ ಮತ್ತೆ ಭೋಳಾದೇವ | ತ್ವರಿತವ ಕೋಪದಯ ಮನಿಯೊಳು ಹಿಡಿದಿಹ | ಸುರರಿಗೆ ವಲಿದಿಹನು ಬೇಡಿದ | ವರಗಳನ್ನು ಕೊಡತಿಹನು ಬೆನ್ನಟ್ಟಿ | ಬರೆ ದುಷ್ಟ ಓಡಿದನು ಶ್ರೀ ವಿಷ್ಣು | ಕರುಣದಿ ಶರೆಯ ಬಿಡಿಸೆ ಕೊಂಡವನಿಗೆ 2 ಕರಿಚರ್ಮ ತಾಳಿದಾ ಕಾಡೊಳು ಸೇರಿದಾ | ಉರಗ ಭೂಷಣನಿವ ಊಧ್ರ್ವರೇತಾದವ | ಹೊರೆ ಹುಲಿದೊಗಲಾ ಹಾಸಿಗೆ ಮಾಡಿದಾ | ಕೊರಳಳು ರುಂಡಮಾಲಾ ಕರದೊಳು ಕಪಾಲಾ | ಧರಿಸಿದ ನೀತನು ದೊರೆಯಲ್ಲದಾತನು | ನೆರೆದುಣ - ಲುಡಿಲಿಲ್ಲಾ ನರಸುರ ರೊಳಗಲ್ಲಾ | ಪರಕ ಪರೆನಿಸುವರು ಸ್ಮರಿಸಿದಾ ಆ ಗುರುವರ ಮಹಿಪತಿ ಪ್ರಭು ಸಾಂಬನೆಂಬವನಿಗೆ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಾರಾಯಣ ನಾರಾಯಣ ನಾರಾಯಣ ನಾರಾಯಣ ನಾರಾಯಣ ಲಕ್ಷುಮಿ ಅರಸನೇ ಪ. ನಾರಾಯಣ ಲಕ್ಷುಮಿಅರಸನೆ ಹಯವದನ ಸ್ವಾಮಿ ನೀ ಒಲಿದು ದಯವಾಗು ಅ.ಪ. ಕೊಂಡ ಕ್ರೋಧವೆಂಬ ಕನ್ನಡಿ (ಕೆಂಗಿಡಿ?) ಲೋಭಮೋಹಗಳನುವಾದೊ ಲೋಭಮೋಹಗಳನುವಾದೊ ಹಯವದನ ಸ್ವಾಮಿ ನೀ ಒಲಿದು ದಯವಾಗು 1 ಮನುಗಳ ಕಾಲದಲ್ಲಿ ಜಲದೊಳಗವತರಿಸಿ ಜಗವೇಳು ಧರೆಯ ನೆಗಹಿದೆ ಜಗವೇಳು ಧರೆಯ ನೆಗಹಿದೆ ಹಯವದನ ಮತ್ಸ್ಯವತಾರ ದಯವಾಗು 2 ಕೂರ್ಮಾವತಾರದಲಿ ಭೂಮಿಯ ನೆಗಹಿದೆ ಕೂಡೆ ಸಜ್ಜನರ ಸಲಹಿದೆ ಕೂಡೆ ಸಜ್ಜನರ ಸಲಹಿದೆ ಹಯವದನ ಕೂರ್ಮಾವತಾರ ದಯವಾಗು 3 ದುರುಳ ದಾನವಗಂಜಿ ಕೋರೆದಾಡೆಯಲಿ ನೆಗಹಿದೆ ಕೋರೆದಾಡೆಯಲಿ ನೆಗಹಿದೆ ಹಯವದನ ವರಾಹಾವತಾರ ದಯವಾಗು 4 ಸೊಕ್ಕಿದ ಅಸುರನ ಕರುಳ ಕುಕ್ಕಿ ಮಾಲೆಯ ಮಾಡಿ ಭಕ್ತನಿಗಭಯ ಸಲಿಸಿದೆ ಭಕ್ತನಿಗಭಯ ಸಲಿಸಿದೆ ಹಯವದನ ಅಪ್ಪ ನರಸಿಂಹ ದಯವಾಗು 5 ವಾಮನನಾಗಿ ನೀ ಭೂಮಿದಾನವ ಬೇಡಿ ಭೂಮಿ ಪಾದದಲಿ ಅಳೆದೆಯೊ ಭೂಮಿ ಪಾದದಲಿ ಅಳೆದೆಯೊ ಹಯವದನ ವಾಮನಾವತಾರ ದಯವಾಗು 6 ಹೆತ್ತವಳ ಶಿರ ಕಡಿದು ಕ್ಷತ್ರಿಯಕುಲ ಸವರಿ ಮತ್ತೆ ಕೊಡಲಿಯ ಪಿಡಿದೆಯೊ ಮತ್ತೆ ಕೊಡಲಿಯ ಪಿಡಿದೆಯೊ ಹಯವದನ ಅಪ್ಪ ಭಾರ್ಗವನೆ ದಯವಾಗು 7 ಸೀತೆಗೋಸ್ಕರವಾಗಿ ಸೇತುವೆ ಕಟ್ಟಿಸಿದೆ ಪಾತಕಿ ರಾವಣನ ಮಡುಹಿದೆ ಪಾತಕಿ ರಾವಣನ ಮಡುಹಿದೆ ಹಯವದನ ಖ್ಯಾತ ರಘುನಾಥ ದಯವಾಗು 8 ಕೃಷ್ಣಾವತಾರದಲಿ ದುಷ್ಟಕಂಸನ ಕೊಂದೆ ಹೆತ್ತವಳ ಬಂಧನ ಬಿಡಿಸಿದೆ ಹೆತ್ತವಳ ಬಂಧನ ಬಿಡಿಸಿದೆ ಹಯವದನ ಕೃಷ್ಣಾವತಾರ ದಯವಾಗು 9 ಉತ್ತಮ ಸತಿಯರ ಹೆಚ್ಚಿನ ವ್ರತ ಸವರಿ ಮತ್ತೆ ಹಯವೇರಿ ಮೆರೆದೆಯೊ ಮತ್ತೆ ಹಯವೇರಿ ಮೆರೆದೆಯೊ ಹಯ[ವದನ ಉತ್ತಮ ಬೌದ್ಧ ಕಲ್ಕಿ ದಯವಾಗು] 10 ಅಂಗಜನಯ್ಯನೆ ಮಂಗಳಮಹಿಮನೆ ಗಂಗೆಯ ಪೆತ್ತ ಗರುವನೆ ಗಂಗೆಯ ಪೆತ್ತ ಗರುವನೆ ಹಯವದನ ಮಂಗಳ ಮಹಿಮ ದಯವಾಗು 11 ವಾದಿರಾಜರಿಗೊಲಿದೆ ಸ್ವಾದೆಪುರದಲಿ ನಿಂತೆ ವೇದಾಂತ ಕಥೆಯ ಹರಹಿದೆ ವೇದಾಂತ ಕಥೆಯ ಹರಹಿದೆ ಹಯವದನ ವೇದಮೂರುತಿಯೆ ದಯವಾಗು 12
--------------
ವಾದಿರಾಜ
ವನಜ ಮುಖಿಯರ ಮನದಿಷ್ಟಾರ್ಥವನೀವನ - ಶ್ರೀ ಕೃಷ್ಣ ಎನ್ನಿರೊಮನು ಮುನಿಜನರನು ಅನುದಿನದೊಳು ಪೊರೆವನ - ಶ್ರೀ ಕೃಷ್ಣ ಎನ್ನಿರೊ ಪ ಪಣ್ಣ ಕೊಯ್ದನನುಜಗೆ ಸಹಾಯನಾದನ _ ಶ್ರೀ ಕೃಷ್ಣ ಎನ್ನಿರೊಸಣ್ಣ ಸೀರೆಯ ನಲ್ವೆಣ್ಣು ರೂಪಾದನ _ ಶ್ರೀ ಕೃಷ್ಣ ಎನ್ನಿರೊಅಣ್ಣನ ವೈರಿಯ ಮಗನ ಕೊಂದಾತನ _ ಶ್ರೀ ಕೃಷ್ಣ ಎನ್ನಿರೊಬಣ್ಣಿಸಲರಿಯೆ ನಾನಿವನ ಮಹಿಮೆಯ _ ಶ್ರೀ ಕೃಷ್ಣ ಎನ್ನಿರೊ 1 ಮುತ್ತಯ್ಯನಿರೆ ಮೊಮ್ಮಗಗೆ ಪಟ್ಟಗಟ್ಟಿದನ _ ಶ್ರೀ ಕೃಷ್ಣ ಎನ್ನಿರೊಹೆತ್ತವಳಿರೆ ತಾಯ ಬೇರೆ ಪಡೆದಾತನ _ ಶ್ರೀ ಕೃಷ್ಣ ಎನ್ನಿರೊಮತ್ತೇಭಗಾಮಿನಿಗಾಗಿ ವನವಾಸ ಪೋದನ _ ಶ್ರೀ ಕೃಷ್ಣ ಎನ್ನಿರೊಮತ್ತೆ ಹಿರಣ್ಯಕಗೆ ಕಂಬದಲಿ ತೋರ್ದನ - ಶ್ರೀ ಕೃಷ್ಣ ಎನ್ನಿರೊ 2 ಉಗುರು ಕೊನೆಗಳಿಂದ ನಗವನೆತ್ತಿದನ _ ಶ್ರೀ ಕೃಷ್ಣ ಎನ್ನಿರೊಬೊಗಸೆಗಂಗಳ ಬಾಲೆಯರ ತಂದಾತನ _ ಶ್ರೀ ಕೃಷ್ಣ ಎನ್ನಿರೊಮಗಳ ಗಂಡನ ಶಿರವನೆ ಛೇದಿಸಿದನ _ ಶ್ರೀ ಕೃಷ್ಣ ಎನ್ನಿರೊಸುಗುಣ ತನ್ನ ಕಾಗಿನೆಲೆಯಾದಿಕೇಶವನ _ ಶ್ರೀ ಕೃಷ್ಣ ಎನ್ನಿರೊ 3
--------------
ಕನಕದಾಸ
ನಿನ್ನನು ನಂಬಿದೆನು ನಾ ಸುಂದರ ಗೋವಿಂದನೇ | ಪನ್ನಗಾಶಯನಗೋಪಿಕಂದನೇ | ಮುಕುಂದನೆದುಷ್ಟರ ಶಿಕ್ಷಿಪಘೋರಕಾಲನೆ | ರಣಶೂರನೆ |ಶಿಷ್ಟರ ರಕ್ಷಿಪ ಭಕ್ತಪಾಲನೆ ಗುಣಶೀಲನೇ ಪಹೊಳೆವ ಮತ್ಸ್ಯಾವತಾರನೆನ್ನಿಸಿಇಳೆಯ ಭಾರವ ಕಳೆದನೆ ||ಜಲದಿವಾಸವಮಾಡಿಕೊಂಡು |ಜಲದಿನಾಲ್ದೆಸೆ ನಲಿದನೆ 1ಧರೆಯ ಬೆನ್ನಲಿ ಪೊತ್ತು ನೆಲಸಿದಕೂರ್ಮನೆ |ಸ್ಮøತಿಧರ್ಮನೇ ||ಶರದ ಸೇತುವೆ ಧರಿಸಿ ನಿಂದಾ |ಮರ್ಮವರಿತೇ | ಸುಶರ್ಮನೆ 2ರಸತಳದಿ ಕೆಸರೊಳಗೆ ಹೊರಳುವಹಂದಿಯೇ | ಭೂಮಿ ತಂದಿಯೇ ||ಬಸುರ ಬಗಿದಾ ಹೇಮನೇತ್ರನಕೊಂದೆಯೇ ಮಮ ತಂದೆಯೇ 3ಕಂಬದಲಿ ಮೈದೋರಿ ತರಳನ |ಪೊರೆದನೇ ನರಸಿಂಹನೇಕುಂಭಿನಿಯ ಬಾಧಿಸಲು ದುರುಳನ |ಕರುಳನೇ ಹರಿದೆಳದನೇ 4ಭೂಮಿಯಲಿ ಮೂರಡಿಯದಾನವ ಕೊಟ್ಟಾನೇಬಲಿಕೆಟ್ಟಾನೇವಾಮನನು ಎರಡಡಿಯ ತೀರಿಸಿ |ಮೆಟ್ಟುತಲಿವರಕೊಟ್ಟನೇ 5ಕೊರಳ ಕುತ್ತಿಯೆ ಮಾಲೆಮಾಡುತ್ತಾಹೆತ್ತವಳ ಕತ್ತರಿಸಿದೆ ||ಧರಣಿಪರ ಶಿರವದೆಭಾರ್ಗವ|ಸತ್ಯ ಭೂಮಿಯ ಸುತ್ತಿದೆ6ವನದಿ ರಾಮನ ಸತಿಯರಾವಣ ಕದ್ದನೇ ವಿಷ ಮೆದ್ದನೇ ||ವನದಿ ಕಪಿಗಳ ಕೂಡಿ ದೈತ್ಯರಕೊಂದನೆ ಸೀತೆಯ ತಂದನೇ 7ಸರಸಿಯಲಿ ಮೊರೆಯಿಡುವ ಗಜವ |ಕಾಯ್ದನೇ ಯಾದವನೇ ||ಧುರದಿ ಕಾಳಿಯ ಶಿರದಿ ನಲಿದ |ದೇವನೇ ಮಾಧವನೇ 8ಬತ್ತಲೆಯ ಬೌದ್ಧಾವತಾರನೆ |ಮೃತ್ಯು ತೆಕ್ಕಲ ಹೊಕ್ಕನೇ ||ಸತ್ಯ ಧರ್ಮವನರಿಯದಧರ್ಮರ |ಸೊಕ್ಕ ಮುರಿವನೆ ಪಕ್ಕನೆ 9, 10ಕಲಿಯುಗದ ಕಡುಪಾಪಿ ನರರನು |ಕಡುಗದಿಂದಲಿ ಕಡಿದನೇ ||ಕಾಲಭೈರವನಂತೆ ಕಲ್ಕ್ಯನು |ಕಿಡಿಯನುಗುಳುತ ಸುಡುವನೇ 11ದಾಸಜನರನು ಪೊರೆವಶ್ರೀನಿವಾಸನೇ | ಜಗದೀಶನೇ |ಶೇಷಶಯನನೆಂದೆನಿಪ |ಗೋವಿಂದನೇ | ಗುಣವೃಂದನೇ 12
--------------
ಗೋವಿಂದದಾಸ