ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎತ್ತಣ ಪಯಣವೋ ಕೃಷ್ಣಯ್ಯ ನಿನ ಗಿತ್ತ[ಏನವ]ಸರ ಏಕೋ ರಂಗಯ್ಯ ಪ ಹೆತ್ತತಾಯಿಯ ಮುಂದಾಡದೆ ಇ ನ್ನೆತ್ತ ಯಾರಿಗೆ ಲೀಲೆ ತೋರುವೆ ಅ.ಪ ಗೊಲ್ಲ ಗೋಪಿಯರೆಲ್ಲ ಚೆಲ್ಲಾಟದಿಂದ ನಿನ್ನ ಗಲ್ಲವ ಹಿಡಿದುಕೊಂಡು ಅಲ್ಲಾಡಿಸಿ ಸೊಲ್ಲು ಸೊಲ್ಲಿಗೆ ಮುತ್ತಿಟ್ಟು ನೋಯಿಸಿದರೆಂದು ಬಿಲ್ಲ ಹಬ್ಬವ ನೋಡಲೊಲ್ಲದೆ ಪೋಪೆನೆಂಬೆ 1 ನೂರೆಂಟು ಕನ್ನೆಯರೋರಂತೆ ನಿನ್ನ ಬಳಿ ಸೇರಿರ್ಪುದನು ಕಂಡು ಕಲಹಪ್ರಿಯ ನಾರಿಯೊಬ್ಬಳ ತನಗಾರಿಸಿ ಕುಡಲೆಂದು [ಯಾರಬಳಿ ಮಸಲತ್ತು ಮಾಡಹೊರಟೆಯೊ] 2 ಬಾಲೆ ರುಕ್ಮಿಣಿಯನು ದುರಳಶಿಶು ಪಾಲಂಗೀಯುವರೆಂದು ಪೇಳಿದ್ದೆಯಲ್ತೆ ಬಾಲೆಯ ತರ್ಪೆನೆಂದೇ ಶ್ರೀ ಮಾಂಗಿರಿಯ ರಂಗ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ತಾಳು ತಾಳೆಲೊ ಕೋಪ ಜಾಲಮಾಡದೆ ಭೂಪ ಕೇಳಿಕೊಂಬೆನು ನಿನ್ನ ಕಾಲಪಿಡಿವೆನೊ ಪ. ಫಾಲಲೋಚನನುತ ಶ್ರೀಲೋಲ ನಿನ್ನನೇ ಕೇಳಿಕೊಂಬೆನು ಮಾತಕೇಳೋ ಕಾಳುಮಾಡದೆ ಮಾತ 1 ದುರುಳತನದಲಿ ನಿನ್ನ ತೆರೆದಕಣ್ಣಳನೆಂದು ಜರಿದು ಪೇಳಿದೆನೋ ತಿರುಗಿ ನಾ ನಿನ್ನ ಗಿರಿಯ ಬೆನ್ನೊಳು ಪೊತ್ತು ಮೆರೆಯುವ ದಡ್ಡನೆಂದೊರೆದ ಕಾರಣದಿಂದ 2 ಕೋರೆಯೊಳ್ ಕೊರೆದು ಕೊನ್ನಾರಿಗೆಡ್ಡೆಯ ತಿಂದು ಳೀರಡಿ ಮಾಡಿದೆ ಘೋರವಿಕ್ರಮನೆಂದು ದೂರಿದೆನದರಿಂದ3 ಹೆತ್ತತಾಯಿಯ ಕೊಂದು ಮತ್ತೆ ಕಪಿಗಳ ಕೂಡಿ ಚಿತ್ತವಸೆರೆಗೈದ ಮತ್ತನೆಂದೆನಲಾಗಿ 4 ಉತ್ತಮಸತಿಯರ ಚಿತ್ತವ ಕಲಕಿದ ಮತ್ತನೆಂದಾಡಿದೆನೋ ಮತ್ತೆ ಕುದುರೆಯನೇರಿ ಕತ್ತಿಯ ಪಿಡಿದೆತ್ತಿ ಸುತ್ತುವನಿವನುನ್ಮತ್ತನೆಂದುದರಿಂದ 5 ಪಿತ್ತವು ತಲೆಗೇರಿ ಮತ್ತೆ ಮತ್ತೆ ನಾನಿನ್ನ ಒತ್ತೊತ್ತಿಜರಿದೆನೊ ಚಿತ್ತಜಪಿತನೆ ಮತ್ತೊಮ್ಮೆ ಬೇಡುವೆ ಗತಿನೀನೆ ನಮಗೆಂದು ಪತಿಕರಿಸೆನ್ನಪರಾಧವ ಮನ್ನಿಸಿ 6 ಕಂದನಿವಗೈದ ಕುಂದುಗಳೆಣಿಸದೆ ತಂದೆ ಸಲಹಯ್ಯ ಶ್ರೀ ಶೇಷಗಿರಿವರ 7
--------------
ನಂಜನಗೂಡು ತಿರುಮಲಾಂಬಾ