ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಯವ ನೆರೆನಂಬಿ ಕೆಡದಿರು ಮಾಯೆಯ ತಿಳಿದೇಳು ಪ. ನ್ಯಾಯವನರಿಯದೆ ನೀ ಮಾಯಾಮೋಹವೆ ಹೇಯಕಾರ್ಯರಿದೊಳಪಾಯದಿ ನರಳುವ ಅ.ಪ. ತನುಮನಕನಕವಿದು ನಿತ್ಯದಿ ತನದಾಗಿಹುದೆಂದು ಹೊನ್ನು ಮಣ್ಣು ಹೆಣ್ಣೆಂಬೀ ಮೂರರ ಬಣ್ಣದೆ ಬಗೆಗೆಟ್ಟು ಕಣ್ಣು ಕಾಣದೆ ಮುಂಬರುತಿಹ ಭಿನ್ನವನೆಣಿಸದೆಯೆ ಸಣ್ಣತನದಿ ಜೀವನ ವ್ಯರ್ಥವೆನಿಸುವ 1 ಸುಜನರ ಸಂಗತಿ ತ್ಯಜಿಸಿ ಮದದಲಿ ಕುಜನರ ಕೂಟವ ಬಯಸಿ ಋಜುಮಾರ್ಗವ ತೊರೆದು ಕಾಲವ ಅಜಗರನಂದದಿ ಕಳೆದು ಗಜಪತಿ ವರದನ ಪದಪಂಕಜ ಮಹಿಮೆಯ ನಿಜವರಿಯದೆ ದುರ್ಜೀವನವೆನಿಸುವ 2 ನೀರಗುಳ್ಳೆಯ ತೆರದಿ ಕರಗುವ ಸಾರವಿಲ್ಲದ ಭವದಿ ಮೂರುದಿನದ ಬಾಳೆಂದು ನೆನೆಯದೆ ಹಾರಾಡುವರೇ ನಿಂದು ಮಾರಪಿತನ ಪದಸಾರಸವನು ನೆನೆ [ನೆನೆದು] ನೀರ ಶೇಷಗಿರಿವರನೆÀ ಗತಿಯೆನೆ 3
--------------
ನಂಜನಗೂಡು ತಿರುಮಲಾಂಬಾ
ದಾಟು ಭವಾಟವಿಯನ್ನು ಮನುಜ ನೀದಾಟು ಭವಾಟವಿಯನ್ನುಕೈಟಭಾಂತಕನಾಮಪಾತಕರೊಡಗೂಡಿನೀಟಾಗದಂದದ ಪಾಟಿಯ ಕೇಳಿನ್ನು ಪ.ಹೆಣ್ಣೆಂಬ ಹೆದ್ದೋಳ ತಿರುಗುತಿವೆ ಬಲುಪುಣ್ಯಮಾರ್ಗವ ನಡಿಗುಡವುಬಣ್ಣ ಬಣ್ಣದ ಮೃತ್ಯುಗಳೆಂಬ ಹೆಬ್ಬುಲಿಕಣ್ಣಲಿ ಕಂಡರೆ ಬಿಡವುಸಣ್ಣಮಕ್ಕಳು ನೆಂಟರಿಷ್ಟ ನರಿಗಳರ್ಥಪೆಣ್ಣಿನ ನಾತಕೆ ಓಡ್ಯಾಡುವುವುಹಣ್ಣುಕಾಯಿಗಳೆಲ್ಲ ವಿಷಮಯವಾಗಿಹ ಅರಣ್ಯದ ಖಳರೆಂಬ ಗಿಡವು 1ಆರಿಂದ್ರಿಯ ಕಳ್ಳರೆಂಬ ಕಾಮವೆಂಬಚೋರನಾಯಕನುಪಟಳವುಭೂರಿಕಾಲದ ಧರ್ಮವೆಂಬ ದ್ರವ್ಯವೆಲ್ಲಸೂರ್ಯಾಡಿಸುಲಕೊಂಬ ಹಯವುಮೂರು ಬಗೆಯಿಂದ ಸುಡುತ ಕಂಗೆಡಿಸುವದಾರುಣತರ ದಾವಾನಳವುಚೀರುವ ನಿಂದಕ ಝಲ್ಲಿಕದುಶಾಸ್ತ್ರ ನಿಸ್ಸಾರ ಘೂಕಗಳ ರವವು 2ಅಡ್ಡಡ್ಡ ಬಂದು ಅಜ್ಞಾನ ಕಾಳೋರಗವೆಡ್ಡುಗೊಳಿಸಿ ಕಚ್ಚುತಿವೆದೊಡ್ಡೆಂಟು ಮದವೆಂಬೊ ಮದ್ದಾನೆ ಎದೆಯೆಂಬಗುಡ್ಡದೊಳಗೆ ಸುತ್ತುತಿವೆಹೆಡ್ಡನೆಂದು ಚುನ್ನವಾಡಿ ಮನೋಬುದ್ಧಿಗಡ್ಡದ ಕಪಿ ಕಾಡುತಿವೆ 3ಜನ್ಮಮರಣ ಹಸುತೃಷೆಜರಾವ್ಯಾಧಿಯೆಂಬುಮ್ಮಳಿಕೆಯ ಪೊರೆಯುಂಟುಹಮ್ಮುಮಮತೆ ಎಂಬ ತಲೆಹೊರೆ ಭಾರಾಗಿಒಮ್ಮೆಗಿಳಿಯಲಿಲ್ಲ ಗಂಟುಸ್ವರ್ಮಂದಿರವೆ ಹೆಬ್ಬೆಟ್ಟನಾಯಕನರ್ಕಕಮ್ಮರಿಗಳು ಇಪ್ಪತ್ತೆಂಟುಸನ್ಮಾನ ರಾಗಭೋಗಗಳೆಂಬ ಬಯಲಾಸೆಯ ಮೃಗತೃಷ್ಣೆಯ ನಂಟು 4ಅಲ್ಲಿಗಲ್ಲಿಗೆ ಸುಖದು:ಖನೆಳಲುಬಿಸಲಲ್ಲಿಗಲ್ಲಿಗೆ ಪ್ರಿಯತರುವುಬಲ್ಲಿದರಿಂದಾಹ ಭಯದಂತೆ ಸೂಚಿಪಕಲ್ಲುಕೊಳ್ಳಗಳ ನಿರ್ಝರವುಕೊಲ್ವಾರಿನೃಪದೂತರೆಂಬ ಸೂಕರಮೋಹÀಹಲ್ಲೊಳಗಘಕೂಪದಿರವುಕ್ಷುಲ್ಲಕ ಪಿಸುಣರೆಂಬುವ ಋಕ್ಷಬಿಡಾಲಹೊಲ್ಲನಖಿಗಳ ಸಂಚರವು 5ಈಷಣತ್ರಯಯಂತ್ರ ಏಳು ಪ್ರಾಕಾರದಿದ್ವೇಷಿಗಳಿದ್ದ ದುರ್ಗಗಳುದೂಷಣ ಸ್ತುತಿ ಎಂಬ ಕಾಕಪಿಕೋಕ್ತಿ ಪ್ರದೋಷದ ಮಳೆ ಮಂಜುಗಳುನೈಷಧನುಂಡು ಕೊಬ್ಬಿದ ಇಂದ್ರಿಯಗೋಳಕಮೂಷಕಗಳಿಹ ಬಿಲಗಳುದೋಷ ದುರ್ವಾರ್ತೆ ದುರಿತವೆಂಬ ಕ್ರವ್ಯಾದಘೋಷಣ ಭಯಂಕರಗಳು 6ಈ ರೀತಿಕಾಂತಾರದಾಟುವ ಧೀರಗೆಮಾರುತಿ ಮತ ಪಕ್ಷ ಬೇಕುನಾರಾಯಣನೆ ಸರ್ವೋತ್ತಮನೆಂದೆಂಬತೋರ ಗಧಾಯುಧ ಬೇಕುಘೋರಾದ್ವೈತ ಕಕ್ಷವ ಛೇದಿಸುವ ಸುಕುಠಾರ ತತ್ವಗಳಿರಬೇಕುಸಾರಜÕಜನಪ್ರಭು ಪ್ರಸನ್ವೆಂಕಟಕೃಷ್ಣನಾರಸಿಂಹನಸ್ಮøತಿಬೇಕು7
--------------
ಪ್ರಸನ್ನವೆಂಕಟದಾಸರು