ಒಟ್ಟು 8 ಕಡೆಗಳಲ್ಲಿ , 6 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಳಿಸಿಕೊಳ್ಳಿರೊ ಸಾಧು ಸಜ್ಜನರ ಸಂಗವ ಗಳಿಗಿಯೊಳು ದೋರಿಕೊಡುವರು ಅಂತರಂಗವ ಧ್ರುವ ಹೊಟ್ಟಿಗೆ ಮೊಟ್ಟಿಗೆ ಕಟ್ಟು ಹೋಗಬ್ಯಾಡಿರೊ ಹುಟ್ಟಿಬಂದ ಮ್ಯಾಲೆ ಹರಿನಾಮ ಘಟ್ಟಗೊಳ್ಳಿರೊ ಗುಟ್ಟಲಿದ್ದ ವಸ್ತು ನೀವು ಮುಟ್ಟಿ ಮನಗಾಣಿರೊ ಕೆಟ್ಟ ಗುಣಕಾಗಿ ಬಿದ್ದು ಸಿಟ್ಟು ಹಿಡಿಯಬ್ಯಾಡಿರೊ 1 ಹೊನ್ನಿಗೆ ಹೆಣ್ಣಿಗೆ ಬಾಯಿ ತೆರಿಯಬ್ಯಾಡಿರೊ ಕಣ್ಣಗೆಟ್ಟು ಹೋಗಿ ನೀವು ದಣ್ಣನೆ ದಣಿಯಬ್ಯಾಡಿರೊ ಹೆಣ್ಣಿಗಾಗಿ ರಾವಣೇನು ಪಡೆದುಕೊಂಡ ಕಾಣಿರೊ ಹೊನ್ನಿಗಾಗಿ ವಾಲಿ ಏನು ಸುಖವ ಪಡೆದ ನೋಡಿರೊ 2 ಉರ್ವಿಯೊಳು ಬಂದು ನೀವು ಗರ್ವಹಿಡಿಯ ಬ್ಯಾಡಿರೊ ಕೌರವೇಶ ಮಣ್ಣಿಗೆ ಗರ್ವಹಿಡಿದು ಕೆಟ್ಟ ನೋಡಿರೊ ಅರ್ವಪಥವ ಬಿಟ್ಟು ಮರ್ವಿಗ್ಹೋಗಬ್ಯಾಡಿರೊ ಸರ್ವಸಾರಾಯ ಸುಖ ಹರಿಯ ಭಕ್ತಿ ಮಾಡಿರೊ 3 ಕಾಮ ಕಳವಳಿಗಿನ್ನು ಕುಣಿದು ಕೆಡಬ್ಯಾಡಿರೊ ನೇಮದಿಂದ ಸ್ವಾಮಿ ಶ್ರೀಪಾದ ಬೆರೆದು ಕೂಡಿರೊ ನಾಮರೂಪಕವಗಿ ಬಿದ್ದು ಹಮ್ಮು ಹಿಡಿಯಬ್ಯಾಡಿರೊ ತಾಮಸೆಂಬ ದೈತ್ಯನ ಸುಟ್ಟು ಹೋಮಮಾಡಿರೊ 4 ಭವ ಬಂಧವಾದ ದುಸ್ತರ ಹೋಳಿಯಾಡಬೇಕು ಒಂದೆ ಸೀಳಿ ಮದಮತ್ಸರ ಹೇಳಿಕೊಟ್ಟ ಗುರುವಿನ ಕೊಂಡಾಡಬೇಕು ಎಚ್ಚರ ಬೋಧ ಶ್ಯಾಸ್ತರ 5 ಲೋಕವೆಲ್ಲ ಬಂದು ಹೊನ್ನ ಹೆಣ್ಣು ಮಣ್ಣಿಗಾಯಿತು ಬೇಕಾದ ವಸ್ತು ಬಿಟ್ಟು ಪೋಕುಬುದ್ಧಿಗ್ಹೋಯಿತು ಸುಖ ಸೂರೆಗೊಳ್ಳದೆ ತೇಕಿ ದಣಿದುಹೋಯಿತು ಏಕವಾಗಿ ನೋಡಲು ದೈಥಯ್ಯಗೊಟ್ಟಿತು 6 ಮಹಿಪತಿಯ ಸ್ವಾಮಿಯ ನೆನೆದು ಒಮ್ಮೆ ನೋಡಿರೊ ಇಹಪರಸುಖ ಸೂರ್ಯಾಡಿ ನಲಿದಾಡಿರೊ ಮಹಾಮಹಿಮೆದೋರುತದೆ ಮಯ್ಯ ಮರಿಯಬ್ಯಾಡಿರೊತ್ರಾಹಿತ್ರಾಹಿ ಎಂದು ಮನಗಂಡು ಕುಣಿದಾಡಿರೊ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತನ್ನೊಳಗಿಹುದು ತನಗೆ ತಿಳಿಯದು | ತನ್ನಂಥ ಮಹಿಮಗೆತೋರುವದು | ಇನ್ನೊಬ್ಬ ಮೂಢಗೆ ತೋರಿಸೆನೆಂದರೆಸಕ್ಕರಿಯೊಳಗಿನ ಸವಿ ಇದ್ಧಾಂಗೆ | ಹಾಂಗೆ ನಿಜವಸ್ತು 1 ನೂಕದು ಪೀಕದು ದೇಹಕ್ಕೆ ತಾಕದು | ಏಕಾಗಿ ಇಹುದುಮಾತಾಡದು ಪ್ರಾಕೃತ ಜನರಿಗೆ | ಮುಸುಕು ಹಾಕಿಹುದು ಕಾಷ್ಠದ ಒಳಗಿನ ಅಗ್ನಿ ಇದ್ಧಾಂಗೆ | ಹಾಂಗೆ ನಿಜವಸ್ತು 2 ಕಣ್ಣಿಗೆ ತೋರದು ಬೈಲಾಗಿ ಹೋಗದು | ಕಣ್ಣಿಗೆ ಕಣ್ಣಾಗಿ ನಿಂತಿಹುದು | ಹೆಣ್ಣಿಗೆ ಗಂಡಿಗೆ ಕುಣಿಸ್ಯಾಡುತಿಹುದು | ಕುಸುಮದ ಒಳಗಿನ ಪರಿಮಳದ್ಹಾಂಗೆ | ಹಾಂಗೆ ನಿಜವಸ್ತು 3 ಕೆಳಗದ ಮೇಲದ ಎಡಕದ ಬಲಕದ ಹಿಂದದ ಮುಂದದ ಜಡವದ | ಒಳ ಹೊರಗೆ ತುಂಬೇದ ಬ್ರಹ್ಮಾಂಡ ಮೀರೇದ | ಚಂದ್ರನ ಒಳಗಿನ ಬೆಳದಿಂಗಳ್ಹಾಂಗ ಹಾಂಗೆ ನಿಜವಸ್ತು 4 ನರಸಿಂಹ ಸದ್ಗುರು ರಾಮನ ದಯದಿಂದ ಪರವಸ್ತು ಎನಗೆ ಪ್ರಕಟಾಯಿತೊ ಪರರ ಮುಖದಿಂದಹೇಳುವದಲ್ಲ | ಪರವಸ್ತು ತಿಳಿದಂಥ ಯೋಗಿಯೆಬಲ್ಲಾ || ಹಾಂಗೆ ನಿಜವಸ್ತು 5
--------------
ನರಸಿಂಹ
ಬಲ್ಲವನಿವನು ಚಿಕ್ಕವನಲ್ಲವೆ ಬಾಲಕನು ಇಲ್ಲದ ನುಡಿಗಳ ಎನ್ನೊಡನುಸುರಲು ಇಲ್ಲಿಗೆ ಬಂದಿರೆ ಗೋಪಿಯರÉಲ್ಲರು ಪ ಮಣಿಮಯದೊಡಿಗೆಯನು ತೆಗೆತೆಗೆದ್ಹಣಿವನೆ ಬಲ್ಲವನು ಉಣಲೊಲ್ಲ ಉಡಲೊಲ್ಲ ಚಲಗೊಂಡಳುವ ಜಾರ ಚೋರನಂಬರೇ 1 ಹೆಣ್ಣಿಗೆ ಮರುಳಾಗುವ ಪ್ರಾಯವೆ ಕಣ್ಣು ನಿಮಗೆ ಕಾಣವೆ ಸಣ್ಣವನಿವಗೆ ನಿಲುಕದ ನೆಲುವಿನ ಪಾ ಲ್ಬೆಣ್ಣೆಯ ಮೆದ್ದೋಡಿ ಬಂದನೆಂದೆಂಬರೆ 2 ಅಂಬರದೊಳು ಮೂಡಿದ ಚಂದ್ರಬಿಂಬವ ತಾರೆನುತ ಕುಂಬಿನಿಯೊಳು ಬಿದ್ದು ಹೊರಳುವ ತರಳ ಹಿಡಿಂಬೆಯ ರಮಣ ಕೋಣೆಯ ಲಕ್ಷ್ಮೀರಮಣನು 3
--------------
ಕವಿ ಪರಮದೇವದಾಸರು
ರಕ್ಷಿಸೊ ಸ್ವಾಮಿ ನೀ ಪಕ್ಷಿ ಸುವಾಹನ ಭಿಕ್ಷೆ ಸುನೀಡೊ ನೀ ಲಕ್ಷ ಸುಸಾಧನ ಅಕ್ಷಯಾನಂದ ನೀ ಲಕ್ಷುಮಿ ಜೀವನ ಪಕ್ಷ ನೀ ಪ್ರಾಣಕ ಈಕ್ಷಿಸಿದವನ 1 ಸೃಷ್ಟಿಗಧಿಕ ನೀ ವಿಷ್ಣು ಜನಾರ್ಧನ ಕಷ್ಟ ನೀ ಹಿಂಗಿಸೊ ದುಷ್ಟರ ಮರ್ದನ ಶಿಷ್ಟರ ಪಾಲಕ ಶ್ರೇಷ್ಠ ನಾರಾಯಣ ದೃಷ್ಟಿಸಿ ನೋಡೊ ನೀ ಕೃಷ್ಣ ಕೃಪಾಘನ2 ಈಶನೆಂದರಿಯದೆ ದೋಷದ ರಾಶಿ ನಾ ವಾಸನೆ ಪೂರಿಸೊ ದಾಸರ ದಾಸ ನಾ ಏಸು ತಾ ಜನ್ಮಕೆ ಬಂದು ಸೂಸಿದೆನೊ ಹೇಸಿತು ಜೀವನ ಸ್ಮರಿಸಬೇಕೆಂದು ನಾ 3 ನಿಮ್ಮನೆ ನೋಡಬೇಕೆಂದು ಬಂದೆ ನಾ ಘಮ್ಮನೆ ಪೂರಿಸೊ ಭಾವನೆ ಕಂದನ ತಮ್ಮನೆ ಬೇಡಿಕೊಂಬುದು ತಾ ವಂದನ ಅಮ್ಮ ನಮ್ಮಪ್ಪನೆ ಬಂಧು ನೀ ಎಂದೆ ನಾ 4 ಕಾಣದ ಪಾಮರ ಹೀನ ಸೂಕರ ಏನು ತಾ ಬಲ್ಲದು ಲೂನದ ಸೂಕರ ನೀನೆ ದಯಾನಿಧೆ ಜ್ಞಾನದ ಸಾಗರ ನ್ಯೂನ ನೋಡದೆ ತಾರಿಸೊ ಶ್ರೀಧರ 5 ಪಾರ ನೀ ಗೆಲಿಸೊ ದ್ವಾರಕಿನಾಥನೆ ಸಾರಿ ನೀ ಬೋಧವ ತಾರಿಸೊ ದಾತನೆ ತೋರಿ ನೀ ಪಾದವ ಬೀರು ಸ್ವಹಿತನೆ ಸಿರಿ ಲೋಲನೆ ನೀಕರುಣಿಸಿ ಮಾತನೆ 6 ಪಾಲಿಸೊ ಪ್ರಾಣವ ಬಾಲಮುಕುಂದನೆ ಲಾಲನೆ ನೋಡು ಗೋಪಾಲ ಗೋವಿಂದನೆ ತ್ಯಕ್ತ ನಾ ತಾಳು ನೀ ಸಚ್ಚಿದಾನಂದನೆ ಕೀಲನೆ ಹೇಳು ನೀ ಭಕ್ತಿಯ ವಂದನೆ 7 ದೇವರ ದೇವನೆ ಕಾವ ಕರುಣನೆ ಜೀವದ ಜೀವ ನೀ ಸ್ವಾಮಿ ಸರ್ವೇಶನೆ ಭಾವದ ಭಾವ ನೀ ಸಾವಿರ ನಾಮನೆ ಸೇವೆಗೆ ಯೋಗ್ಯನ ಮಾಡು ಸರ್ವೋತ್ಮನೆ 8 ಹಿಂಡ ದೈವಕೆ ಪ್ರಚಂಡ ಪರೇಶನೆ ಗಂಡು ಹೆಣ್ಣಿಗೆ ತಾ ಒಬ್ಬ ಸರ್ವೇಶನೆ ಮಂಡಿ ಮರೆಯಲಿಹನೆ ಮಹೇಶನೆ ಕಂಡುಕಾಂಬ ಸುಖದೋರು ದೇವನೆ 9 ವೇದಕ ನಿಲ್ಕದಾಭೇದ್ಯ ಪುರುಷನೆ ಸಾರ ಸುರಸನೆ ಅದಿಗಿಂದತ್ತಲ್ಯಾನಾದಿ ನಿರ್ವಿಶೇಷನೆ ಹಾದಿದೋರಿಕೊಡೊ ಭಕ್ತಿಗೊಂದೀಶನೆ 10 ಮಹಿಪತಿಗೆ ನೀ ಸ್ವಾಮಿ ಶ್ರೀನಾಥನೆ ಬಾಹ್ಯ ಅಂತ್ರಕೆ ನೀನೆವೆ ಸುದಾತನೆ ಸೋಹ್ಯದೋರಿಕೊಡೊ ಸಾಹ್ಯವುಳ್ಳಾತನೆ ತ್ರಾಹಿಯಂದವನ ಮಾಡು ಸನಾಥನೆ 11
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ವಸ್ತು ತಾ ಬೇರೆ ಅದೆ | ನಿಜವಸ್ತು ಅರಿತವ ಬಲ್ಲಾ ಪ ಮಣಿ ಎಣಿಸುವದಲ್ಲ ||ಹೊನ್ನು ಹೆಣ್ಣಿಗೆ ಮೆಚ್ಚಿ ಬಣ್ಣದ ಮಾತಾಡಿ |ಚೆನ್ನಿಗ ತನದಿಂದ ತಿರುಗುವದಲ್ಲ 1 ಮಾನ ಮನ್ನಣೆಗಾಗಿ ಜ್ಞಾನದ ಮಾತುಗಳಾಡಿ |ಧ್ಯಾನ ಮೌನವನು ತೋರುವರು |ಮನ್ನಣೆಯಾಗದಿರೆ ಛಾನಸತನದಿಂದ ಜನರ ದೂರುವರಲ್ಲ 2 ಮನವ ಸ್ವಸ್ಥವ ಮಾಡದೆಅನೇಕ ವ್ಯಥೆ ಕೂಡಿ ಕನಕದಾಶೆಗಾಗಿ ಕೆಡಬೇಡ |ಬಲ್ಲ ರಾಯರ ಪ್ರಭು ರುಕ್ಮಭೂಷಣ ಕೂಡಿಕ್ಷುಲ್ಲಕ ತನವ ಬಿಟ್ಟು ಸುಖಿಸಿರಯ್ಯ 3
--------------
ರುಕ್ಮಾಂಗದರು
ವಿಭೂತಿ ತುಂಬಿ ತಾಂಡುವರೇ | ಪ್ರೇತಗಳ ಹುಯ್ಯಲ್ಲಿ ಗೋ ಎಂದು ನಿಡಿದವರೇ ಸುಯ್ಯಲ್ಲಿ ಸೋಂಕಲಿಸದೆ ಘನದ ಯೋಗದಲಿದ್ದು ನೋಡ ಬಂದ ಕಂತುನ ನೋಡಿ ಬೂದಿ ಮಾಡುವರೇ ಪ ಭಿಲ್ಲನಾಗಿ ಕುಲವ ಕಳೆವರೆ | ನರನ ಬಲವು ಮಲ್ಲಯುದ್ಧ ಮಾಡಿ ತಿರುವರೆ | ಬಲ್ಲಾತನಾಗಿ ಫುಲ್ಲನೇತ್ರಗೆ ರತಿ ಗೆಲುವರೆ || ಸಲ್ಲದಂಗವ ತೋರಿ ನೀ ತಿರುಕನಾಗಿ ತಿರುಗುತ ಮತ್ತೆಲ್ಲ ಮುನಿಗಳ ಸತಿಯರ ಧರ್ಮವನಳಿವರೆ 1 ಕಣ್ಣಿಲಿ ಕಿಚ್ಚು ಗರೆವರೆ | ವರೇಣ್ಯನಾಗಿಹೆಣ್ಣಿಗೆಯ ರಂಗ ಮಾರುವರೆ ಶ-ರಣ್ಯನಾಗಿ ಸಣ್ಣವನ ಶಿರವ ತರುವರೆ |ಮಣ್ಣಿನ ಭಂಡಿಯನೇರಿ ಕಲ್ಲಿನ ಬಿಲ್ಲನೇರಿಸಿ |ಮುಪ್ಪುರಗಳ ಗೆಲಿದು ಸುಡುಗಾಡ ಸೇರುವರೆ 2 ಬತ್ತಲೆ ಕುಣಿವುತಲಿರುವರೆ | ಸ್ಮøತಿಕತ್ತಿನಾಗಿ ಎತ್ತನೇರಿಕೊಂಡು ಮೆರೆವರೆ |ಪುಣ್ಯಾತ್ಮನಾಗಿ | ಸತ್ತನೀ ಚರ್ಮವ ಪೊರುವರೆ |ಉತ್ತಮ ರುಕ್ಮವರ್ಣದ ಜಡೆಯುಳ್ಳ ಸದಾಶಿವನ |ನಂಜಿಗಂಜದೆ ಸವಿಮಾಡಿ ಬಿಗಿಬಿಗಿ ಸುರಿವರೆ 3
--------------
ರುಕ್ಮಾಂಗದರು
ಸತ್ಯವಂತರ ಸಂಗವಿರಲು ತೀರ್ಥವ್ಯಾತಕೆನಿತ್ಯ ಜ್ಞಾನಿಯಾದ ಮೇಲೆ ಚಿಂತೆಯಾತಕೆ ಪ ಕಾಲ ಬದುಕಲ್ಯಾತಕೆಮಾನಿನಿಯ ತೊರೆದ ಮೇಲೆ ಭೋಗವ್ಯಾತಕೆ 1 ಮಾತು ಕೇಳದೆ ಮಲೆತು ನಡೆವ ಮಕ್ಕಳ್ಯಾತಕೆಪ್ರೀತಿಯಿಲ್ಲದೆ ಎಡೆಯಲಿಕ್ಕಿದ ಅನ್ನವ್ಯಾತಕೆನೀತಿಯರಿತು ನಡೆಯದಿರುವ ಬಂಟನ್ಯಾತಕೆಸೋತ ಹೆಣ್ಣಿಗೆ ಓತು ನಡೆಯದ ಪುರುಷನ್ಯಾತಕೆ 2 ಸನ್ನೆಯರಿತು ನಡೆಯದಿರುವ ಸತಿಯು ಯಾತಕೆಮನ್ನಣಿಂದ ನಡೆಸದಿರುವ ದೊರೆಯು ಯಾತಕೆಮುನ್ನ ಕೊಟ್ಟು ಪಡೆಯದಿನ್ನು ಬಯಸಲ್ಯಾತಕೆಚೆನ್ನ ಆದಿಕೇಶವನಲ್ಲದ ದೈವವ್ಯಾತಕೆ 3
--------------
ಕನಕದಾಸ
ಸಿಕ್ಕಿದೆಯೋ ಎಲೆ ಜೀವ-ನಿನ್ನ-ಕುಕ್ಕಿ ಕೊಲ್ಲದೆ ಬಿಡರು ಪಸೊಕ್ಕಿದ ಹೆಣ್ಣಿಗೆ ನೀ ಮರುಳಾದೆ |ಉಕ್ಕಿನ ಕಂಬಕೆ ನೀ ಗುರಿಯಾದೆ ಅ.ಪಹಾಳೂರ ಕೋಳಕೆ-ಕಾಲು ಚಾಚಿದ ಹಾಗೆ |ಮೂಳ ಸಂಸಾರಕೆ ನೀ ಗುರಿಯಾಗಿ ||ತೇಲುತ ಮುಳುಗುತ ಇಲ್ಲಿಗೆ ಬಂದೆ 1ಸತಿ-ಸುತರೆಂಬುವರೆ - ಹಿತರೆಂದು ನಂಬಿದೆಯೊ |ಯತಿಗಳ ತಿಥಿಗಳು ಬಂದರೆ ಮನೆಗೆ-||ಗತಿಯಿಲ್ಲವೆಂದು ಖತಿಗೊಂಡೆಯಲ್ಲೊ 2ಶುನಕನಂದದಿ ನೀನು ಮನೆಮನೆಯನು ತಿರುಗಿ |ಘನಘನವಾದ ಕೂಳನೆ ತಿಂದು ||ತನುವ ತಗ್ಗಿಸಿ ಇಲ್ಲಿಗೆ ಬಂದೆ 3ಕಂಡವರ ಒಡವೆಯ-ಖಂಡುಗ ಧನವನು |ಮಿಂಡೆಯರ ಒಡವೆಯ ಭಂಡತನದಲಿ ||ಕಂಡುಕಾಣದೆ ನೀ ತಿಂದೆಯಲ್ಲೊ 4ಗೋಪಾಲಕೃಷ್ಣಯ್ಯ-ತಾಪತ್ರಯವ ಕಳೆವ |ಆಪತ್ತೆಲ್ಲ ಪರಿಹಾರ ಮಾಡುವ ||ಶ್ರೀಪತಿ ಪುರಂದರವಿಠಲನ ನೆನೆಯದೆ 5
--------------
ಪುರಂದರದಾಸರು