ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾಕಾಂತೆಯರಸನ ತೋರೆನಗಮ್ಮ ಸಾಕುವ ಸರಸನ ತೋರೆ ಪ. ಕಣ್ಣೆರಡು ಸಾಸಿರುಳ್ಳವನಂಗದಿ ಕಣ್ಣಮುಚ್ಚಿ ಮಲಗಿಪ್ಪನ ಹೊನ್ನು ಮಣ್ಣಿನ ರಾಶಿಯಿಂದ ಕೂಡಿಪ್ಪನ ಮಣ್ಣ ಕೂಡಿದ ದಿವ್ಯಕಾಯನ 1 ಮಣ್ಣಿನ ದೇವರ ಮುಖದಿಂದ ಮಣ್ಣಿಗೆ ಸೆಣಸುವರ ಭುಜದಿಂದ ಮಣ್ಣ ಪಾ(ನಾ?)ಡುವರ ತೊಡೆಯಲ್ಲಿ ಮೂಡಿ ಮತ್ತೆ ಮಣ್ಣ ಚರಣದಿ ಪುಟ್ಟಿಸಿದನ 2 ಕಣ್ಣ ಮುಚ್ಚದನ ಕಣ್ಣ ತೋರದನ ಹೆಣ್ಣಾಳಿನುರುಬಿನಲಿ ಮುಕ್ಕಣ್ಣನ ಮಣ್ಣನಳೆದು ಮಣ್ಣಿನರಸನೊರೆಸಿದ ಮಣ್ಣಿನ ಮಗಳನಾಳಿದನ 3 ಮಣ್ಣ ಪೊತ್ತನಧರಿಸಿದ ಚಿಣ್ಣನ ಮಣ್ಣ ಮೆದ್ದ ಸಣ್ಣ ಬಾಯೊಳು ಮಣ್ಣನೆ ತೋರಿದ ನಂದನರಾಣಿಗೆ ತಲ್ಲಣ ಹಬ್ಬವ ಕೊಟ್ಟ ಧೀರ4 ಕನ್ನಗಳ್ಳರ ಕೊಂದು ಕಣ್ಣಿಲ್ಲದವರಿಗೆ ಕಣ್ಣ ತರಿಸಿಕೊಟ್ಟ ಚದುರನ ಕಣ್ಣಿಲ್ಲದವನಿಗೆ ಕಣ್ಣ ಕೊಟ್ಟನಂತ ಕಣ್ಣುಳ್ಳ ರೂಪವ ತೋರ್ದನ 5 ಹೆಣ್ಣ ಮೋಹಿಸುವನ ಸುಟ್ಟುರಿ- ಗಣ್ಣನ ಮರುಳು ಮಾಡಿದನ ಹೆಣ್ಣನುಂಗುಟದಿ ಪಡೆದು ತಮ್ಮಣ್ಣನ ಮಣ್ಣಿನೊಡೆಯ ಮಾಡಿಸಿದನ 6 ಮಣ್ಣಿಗಾಗಿ ಬಂದ ಮಣ್ಣನಾಳಿದ ದುರ್ಜನ ದಾನವರ ಕೊಂದನ ಹೆಣ್ಣು ಮಣ್ಣೊಲ್ಲದ ವಾದಿರಾಜನಿಗೆ ಪ್ರಸನ್ನನಾದ ಹಯವದನನ 7
--------------
ವಾದಿರಾಜ
ಇಂಥ ಹೆಣ್ಣನು ನಾನೆಲ್ಲಿ ಕಾಣೆನೊ |ಹೊಂಚತಾರಿ ಕಾಣಿರೊ ಪಸಂತತ ಸುರರಿಗೆ ಅಮೃತವನುಣಿಸಿದಪಂತಿಯೊಳಗೆ ಪರಪಂತಿಯ ಮಾಡಿದ ಅ.ಪಮಂದರಗಿರಿ ತಂದು ಸಿಂಧುವಿನೊಳಗಿಟ್ಟುಚೆಂದದಿಂದಲಿ ಕಡೆದಮೃತವ ತೆಗೆದು ||ಇಂದುಮುಖಿಯೆ ನೀ ಬಡಿಸೆಂದು ಕೊಟ್ಟರೆ |ದಂಧನೆಯನು ಮಾಡಿ ದೈತ್ಯರ ವಂಚಿಸಿದ 1ವಿಸುವಾಸದಿಂದಲಿ ಅಸುರಗೆ ವರವಿತ್ತು |ತ್ರಿಶುಲಧರನು ಓಡಿ ಬರುತಿರಲು ||ನಸುನಗುತಲಿ ಬಂದು ಭಸುಮಾಸುರನಿಗೆ |ವಿಷಯದಾಸೆಯ ತೋರಿ ಭಸುಮವ ಮಾಡಿದ 2ವಸುಧೆಯೊಳಗೆ ಹೆಣ್ಣು ಒಸಗೆಯಾಗದ ಮುನ್ನ |ಬಸುರಿಲ್ಲದೆ ಬೊಮ್ಮನ ಪಡೆದಿಹಳು ||ಕುಸುಮನಾಭ ನಮ್ಮ ಪುರಂದರವಿಠಲನ |ಪೆಸರ ಪೊತ್ತವಳು ಈ ಹೊಸ ಕನ್ನಿಕೆಯು 3
--------------
ಪುರಂದರದಾಸರು
ಎಚ್ಚರದಲಿ ನಡೆ ಮನವೆ - ನಡೆಮನವೆ - ಮುದ್ದುಅಚ್ಯುತನ ದಾಸರ ಒಡಗೂಡಿ ಬರುವೆ ಪ.ಧರ್ಮವ ಮಾಡುವುದಿಲ್ಲಿ - ಇನ್ನುಬ್ರಹ್ಮನ ಸಭೆಯ ತೋರುವರು ಮುಂದಲ್ಲಿಕರ್ಮಯೋಜನೆಗಳು ಇಲ್ಲಿ - ಬೆನ್ನಚರ್ಮವ ಸುಲಿಸಿ ತಿನ್ನಿಸುವರು ಅಲ್ಲಿ 1ಅನ್ನದಾನವ ಮಾಳ್ಪುದಿಲ್ಲಿ - ಮೃಷ್ಟಾನ್ನವ ತಂದು ಮುಂದಿಡುವರು ಅಲ್ಲಿಅನ್ಯಾಯ ನುಡಿಯುವುದಿಲ್ಲಿ - ಭಿನ್ನಭಿನ್ನವ ಮಾಡಿ ತಿನ್ನಿಸುವರು ಅಲ್ಲಿ 2ಮೋಸವ ಮಾಡುವದಿಲ್ಲಿ - ಸೀಸಕಾಸಿ ಬಾಯೊಳಗೆ ಹೊಯ್ಯುವರಲ್ಲಿದಾಸರ ಪೂಜಿಪುದಿಲ್ಲಿ - ಉರ್ವೀಶಾಧಿಪತಿ ಬಂದನೆಂಬರು ಅಲ್ಲಿ 3ವಂಚನೆ ಮಾಡುವದಿಲ್ಲಿ - ಕಾದಹಂಚಿನ ಪುಡಿಯ ತಿನ್ನಿಸುವರು ಅಲ್ಲಿಪಂಚಾಮೃತದ ಪೂಜೆ ಇಲ್ಲಿ ನಿನಗೆಕಂಚು - ಕಾಳಾಂಜಿಯ ಪಿಡಿದಿಹರಲ್ಲಿ 4ಚಾಡಿಯ ನುಕಿವುದು ಇಲ್ಲಿ ಅದ -ನಾಡಿದ ನಾಲಗೆ ಸೀಳುವರಲ್ಲಿಬೇಡಬಂದರೆ ಬಯ್ವುದಿಲ್ಲಿ ನಿನ್ನ -ಓಡಾಡುವ ಕಾಲು ಕತ್ತರಿಪರಲ್ಲಿ 5ಮದ್ದಿಕ್ಕಿ ಕೊಲ್ಲುವುದಿಲ್ಲಿ ಒದ್ದು -ಹದ್ದು ಕಾಗೆಗಳಿಗೆ ಈಯುವರಲ್ಲಿಕ್ಷುದ್ರ ಬುದ್ಧಿಯ ನಡೆಪುದಿಲ್ಲಿ ದೊಡ್ಡ -ಗುದ್ದಲಿ ಬೆನ್ನೊಳು ಎಳೆಯುವರಲ್ಲಿ 6ಕೊಟ್ಟಭಾಷೆಗೆ ತಪ್ಪುವುದಿಲ್ಲಿ ಕೈಯ -ಕಟ್ಟಿ ಈಟಿಯಿಂದ ಇರಿಯುವರಲ್ಲಿಕೊಟ್ಟ ಧರ್ಮವ ನಡೆಸುವುದಿಲ್ಲಿ ಬಲುಶ್ರೇಷ್ಠ ನೀನೆಂದು ಕೊಂಡಾಡುವರಲ್ಲಿ 7ಆಲಯದಾನವು ಇಲ್ಲಿ ವಿ -ಶಾಲ ವೈಕುಂಠನ ಮಂದಿರವಲ್ಲಿಆಲಯ ಮುರಿಯುವುದಿಲ್ಲಿ ನಿನ್ನ -ಶೂಲದ ಮೇಲೇರಿಸಿ ಕೊಲುವರಲ್ಲಿ 8ತಂದೆ ಮಾತನು ಮೀರುವುದಿಲ್ಲಿ ಹುಲ್ಲು -ದೊಂದೆಯಕಟ್ಟಿ ಸುಡಿಸುವರಲ್ಲಿತಂದೆ ತಾಯ್ಗಳ ಪೂಜೆ ಇಲ್ಲಿ ದೇ -ವೇಂದ್ರನ ಸಭೆಯ ತೋರುವರು ಮುಂದಲ್ಲಿ 9ಗಂಡನ ಬೈಯ್ಯುವುದಿಲ್ಲಿ ಬೆಂಕೆಕೆಂಡವ ತಂದು ಬಾಯಲಿ ತುಂಬುವರಲ್ಲಿಕೊಂಡೆಯ ನಡಿಸುವುದಿಲ್ಲಿ ಬೆಂಕೆಕುಂಡವ ತಂದು ತಲೆಯಲಿಡುವರಲ್ಲಿ 10ಹೊನ್ನು ಹೆಣ್ಣನು ಬಯಸುವುದಿಲ್ಲಿ ನಿನ್ನಕಣ್ಣಿಗೆ ಸುಣ್ಣವ ತುಂಬುವರಲ್ಲಿಕನ್ಯಾದಾನವ ಮಾಳ್ಪುದಿಲ್ಲಿ ನಮ್ಮಚಿನ್ನಪುರಂದರವಿಠಲನೊಲಿವನು ಅಲ್ಲಿ11
--------------
ಪುರಂದರದಾಸರು
ಕಣ್ಣೆತ್ತಿ ನೋಡಲುಬೇಡ - ಅವಳಸಣ್ಣ ಜೈತಲೆ ಕಂಡು ಮರುಳಾಗಬೇಡ ಪ.ಕಣ್ಣಿಟ್ಟ ಕೀಚಕ ಕೆಟ್ಟ -ಪರಹೆಣ್ಣಿಗಾಗಿ ರಾವಣ ತಲೆಕೊಟ್ಟಏನು ಮಾಡಿದಳಣ್ಣ ನಷ್ಟ -ಪರಹೆಣ್ಣನು ಮೋಹಿಸಿದವ ಬಲು ಭ್ರಷ್ಠ 1ದೂರದಲ್ಲಿಯ ಸುಖದಣ್ಣ - ಅವಳಚಾರು ಕಂಚುಕದೊಳಗಿನ ಕುಚವಣ್ಣಸೀರೆಯ ಬಿಗಿದುಟ್ಟ ಹೆಣ್ಣ - ಅವಳಓರೆನೋಟ ನೋಡಿ ಹಾರಬೇಡಣ್ಣ 2ಹಸಿವು ಇಲ್ಲರ ಸವಿಯೂಟ - ತನ್ನವಶಕೆ ಬಾರದ ಪರಹಸ್ವಿನ ಕೂಟದೆಸೆದೆಸೆಗಪಕೀರ್ತಿಯಾಟ - ನಮ್ಮವಸುಧೀಶ ಪುರಂದರವಿಠಲನೊಳ್ನೋಟ 3
--------------
ಪುರಂದರದಾಸರು