ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲೆ ಮನಾ ವ್ಯರ್ಥಗಳೆವರೇ ಜನುಮವನು | ನೆಲಿಯ ನಿನ್ನರುವದಾ ಹೊಲಬು ಮರೆದು ಪ ಇಳಿಯೊಳಗ ನರದೇಹದಲಿ ಜನಿಸಿ ಕೊಡುವದು | ಸುಲಭವಲ್ಲವೊ ಹೋದ ಬಳಿಕ ನಿನಗದು ಮುಂದ ಅ.ಪ ಮೇದಿನಿಯೊಳಗ ಮಿಗಿಲಾದ ಜನ್ಮದಿ ಬಂದು| ಐದಿದಾವರ್ಣ ಕರ್ಮಾಧರಿಸಿ ಮಾಡುತಲಿ | ಗೈದು ನಿತ್ಯಾನಿತ್ಯ ವೈದಿಕ ವಿಚಾರವನು | ಆದಿ ಪುರುಷನ ಕಾಂಬ ಹಾದಿ ಕೂಡಿ | ಖೇದವನು ಕುಡುವ ವಿವಾದ ಗುಣವನೆ ನೀಗಿ | ಮೋದದಲಿ ಶರಣ್ಹೊಕ್ಕು ಸಾಧು ಜನರನು ಸರಿಸಿ | ವೇದಾಂತ ಬ್ರಹ್ಮ ಸೂತ್ರಾದಿ ವಾಕ್ಯಾರ್ಥವನು 1 ಬೋಧೆಯಲಿ ಪಡೆದು ಜ್ಞಾನೋದಯ ಕಾಣದೆ ಭವ ಶರಧಿಯನು ಗೆಲಲಾಗಿ | ಶರಣ ಜನರಿಗೆ ತೆಪ್ಪ ಪರಿಯಂದಾತಾಗಿಹ | ಹರಿನಾಮವ ನೆನೆದು ಹರಿಧ್ಯಾನಗೈವುತಲಿ | ಹರುಷದಲಿ ಪದಿನಾರು ತೆರ ಪೂಜಿಸಿ | ಪರಮ ಸದ್ಭಾವದಲಿ ಗುರುಡಿಂಗರ ಮೇಳದಲಿ | ಭರದಿ ತಾಳದಂಡಿಗೆಯ ಕರದೊಳಗ ತಾ ಪಿಡಿದು | ಶರೀರ ಭಾವನೆ ಮರೆದು ಭರಿತ ಪ್ರೇಮಿತನಾಗಿ | ಇರಳು ಹಗಲು ಪಾಡುತಲಿ ಹರಿಭಕ್ತನಾಗದೇ 2 ವನಧಿಯೊಳು ಥೆರೆಸಂಗ ಧನುಮತದಿದೋರ್ವ | ಗುಳ್ಳಿಯ ಪರಿಸೇವೆಯೀತನು ವೆಂದು-ದರಿಯು | ಆನದೊಳಗ ಉತ್ಕ್ರಷ್ಟ ತನದಿ ಮೆರೆಸ್ಯಾಡುತಿಹ | ಕನಕದಧಿದೇವಿ ಕಿವಿಯನು ಬೀಸುವಾಗ | ಅಣುಗ ಕರಿಯಂತೆ ಅರಕ್ಷಣದವಳು ಯಂದು ಅತಿ | ಹೆಣಗುತಿಹ ಸಾಯಾಸವನೆ ತ್ಯಜಿಸಿ ತಾ ದೊರಕಿ | ಧನಿತದರಿಂತುಷ್ಟವನು ಕರಿಸಿ ದೃಢದಿಂದ | ಘನ ನಂಬು ಗುರು ಮಹಿಪತಿ ಚರಣ ಬಿಡದಂತೆ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಿನಗ್ಯಾಕೋ ಜನರಂಜನೆ | ವಣಾ ಭಂಜನೆ ಪ ಎಲ್ಲವಿದ್ಯವ ಸಾಧಿಸಿ ಮೆರೆಯಬೇಕೆಂಬ | ಬಲ್ಲವಿಕೆ ಹೆಮ್ಮೆಗೆ ಬೀಳುರೆ | ಯಳ್ಳಿಗೆ ಬೆಲ್ಲವ ಹುಯಲು ಹೋದಂತವಯ | ಸುಳ್ಳಿನ ಭ್ರಾಂತಿ ಕಳುವರೇ 1 ಹೆಣಗುತಿ ದೀಕ್ಷಿತನೆಂಬ ಮನ್ನಣಿಗ್ಯಾಗಿ | ದಣಿವರೆ ಕರ್ಮದಿ ದಣ್ಣನೆ | ಮುಣುಗುವವನ ತೆಲಿಮ್ಯಾಲ ಕಲ್ಲನ್ನಿಟ್ಟರೆ | ಗಣಿಸದೇ ದಾಟಲು ಬಲ್ಲನೆ 2 ಶರಣ ಕೊಳಬೇಕೆಂದು ಬೂದಿ ರುದ್ರಾಕ್ಷಿಯ | ಧರಿಸಿ ಕಾವಿಯ ಸೋಗು ಮಾಡುವರೆ | ಹರುಷದಿ ಖಜ್ಜಿಗೆ ಬಿಸಿನೀರು ಹೊಯ್ದಂತೆ | ಮರುಳೆ ಜನ್ಮ ಸಾಧನ ಕೂಡುರೇ 3 ಕಾಲನುಕೂಲವಿದ್ದ ಕೈಯಲಿ ಪರಗತಿ | ಕೀಲವರಿತು ಜ್ಞಾನ ಪಡೆವುದ | ಕೊಳ್ಳೆ ಹೋದ ಬಳಿಕ ಕೂಗುವ ಪರಿಯಲಿ | ಚಾಲವರಿದರಾಗ ಬಾರದು 4 ಒಂದೇ ನಿಷ್ಠೆ ಒಂದೇ ಮಾರ್ಗದಿ ಮನ | ದಂದುಗ ಬಿಟ್ಟು ಶರಣ ಹೊಕ್ಕರೆ | ತಂದೆ ಮಹಿಪತಿ ಸುತ ಪ್ರಭು ಬೀರುವ | ಮಂದನಾಗದೇ ತಿಳಿ ಇನ್ನಾದರೆ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ವ್ಯರ್ತವಾಯಿತು ಜನುಮಾ | ಹರಿಭಕ್ತಿ | ಅರ್ಥಿಯ ನೆಲೆಗೊಳ್ಳದೇ ಪ ನೊಣ ಮಧು ಬಿಂದುದಲೀ ಕುಳಿತಂತೆ | ವಣ ವಿಷಯದ ಸುಖಕ | ಹೆಣಗುತ ನಿಶಿದಿನದೀ | ತಾಪತ್ರಯ | ಕುಣಿಯೊಳು ಹೊರಳುತಲೀ 1 ಅವನಿಲಿ ಸಂಸಾರದೀ ಸಂಟರ್ಘಾಳಿ | ರವದಿಯಾ ತೆರೆ ಶಿಲುಕೀ | ವಿಧಿ ಬರ | ಹ್ಯಾವ ತಿಳಿಯದೆ ಮರುಗೀ 2 ಭೋಗಿನಾ ತ್ಯಾಗಿಯಾಗಿ ಆಯುಷ್ಯ | ನೀಗಿ ಯಚ್ಚರವಿಲ್ಲದೇ | ಶ್ರೀ ಗುರುಮಹಿಪತಿ ಸುತಪ್ರಭು | ಭಾಗವತರ ಕೂಡದೇ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು