ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲವು ನಿನ್ನಾಧೀನ | ನಾ ಬಲ್ಲೆನೆಂಬುದಜ್ಞಾನ ಪ ವಿಧಿ ಪರಿಯಂತವು ನೀ- ನಿಲ್ಲದೆ ಕದಲದು ನಿಜವಿದು ನಿಜವಿದು ಅ.ಪ ಸುಖವನಪೇಕ್ಷಿಸುತಿಹರು | ದು- ಸಖ ನೀನೆನ್ನದೆ ದಾರಾ ಪುತ್ರಾ- ದ್ಯಖಿಳ ಸಂಪದವ ಬಯಸಿ ಕೆಡುವರು 1 ಹಣ ಸಂಪಾದಿಸುವದಕು | ಸ- ದ್ಗುಣ ವಂತನೆನಿಸುವದಕೂ ಹೆಣಕೆ ಸಮಾನನು ಇವನೆಂಬುವದಕೂ | ಹಿರಿಯ- ನೆನಿಸಿ ಪೂಜಿಸಿ ಕೊಂಬುವುದಕೂ 2 ನೀನೊಲಿದರೆ ವಿಷವಮೃತ | ಬರಿ- ಜ್ಞಾನಿಗಳರಿಯುವರೀ ನಾನಾ ಬಗೆ 3 ಜ್ಞಾನ ಭಕ್ತಿಯು ವಿರಾಗ | ವೆಂ- ಬೀನಿದಾನವೇ ಯೋಗ ಆನಂದ ಪಡುವುದೇ ಬಲು ತ್ಯಾಗ 4 ಕ್ಷೇಮದಿಂದಲಿರುವದಕೂ | ನಿ- ರ್ನಾಮವೈದಿ ಕೆಡುವುದಕೂ ಪಾಮರ ಜೀವರು ತಾವರಿಯರು ಗುರು ರಾಮ ವಿಠಲ ನೀನಾ ಮಮತೆ ಕೊಡದಿರೆ 5
--------------
ಗುರುರಾಮವಿಠಲ
ಧನವಂತನಾದವನೆ ಘನವಂತ ಜಗದಿ ಧನವಂತನಾಗದವ ಹೆಣಕೆ ಕಡೆ ಇಹ್ಯದಿ ಪ ಧನಿಕನ ಮನೆಮುಂದೆ ದಿನಕರನ ಪ್ರಭೆಯಂತೆ ಜನಸಮೂಹ ನೆರೆಯುತಿಹ್ಯದನುದಿನವು ಬಿಡದೆ ಮಣಿದು ಅವನಿಗೆ ತಮ್ಮ ಮನೆಯ ಪರಿವ್ಯಿಲ್ಲದೇ ಮನ್ನಿಪರು ಅವನೊಚನ ಘನಭಕುತಿಲಿಂದ 1 ಸಿರಿಯಿಲ್ಲದವ ಬಂದು ಶರಣೆಂದು ಕರಮುಗಿಯೆ ಗರುವದಿಂ ಕೂಡ್ರುವರು ಶಿರವೆತ್ತಿ ನೋಡದೆ ತಿರುಕುದೆ ಇವನು ಹೆರಕೊಂಡು ತಿನಲಿಕ್ಕೆ ತಿರುಗುವನು ಎಂದೆನುತ ತಿರಿಸುವರು ಹೀನ 2 ಬಂಧುಬಳಗವುಯೆಂದು ಬಂದು ಕರೆಯಲವನ ಮುಂದೆ ನುಡಿಯುವರು ನಿನ್ನ ಮಂದಿರಕೆ ಬಂದು ಚಂದದಿಂದುಂಡೇವೇನೆಂದು ಜರೆವರು ಮನಕೆ ಬಂದ ತೆರದವನ ಮನನೊಂದಳಲುವಂತೆ 3 ಹತ್ತಿರದವರಾರು ಹತ್ತಿರಕೆ ಬಾರರು ಸತ್ತ್ಹೆಣನ ಕಂಡಂತೆ ಮತ್ತಿವನ ಕಂಡು ಅತ್ತಿತ್ತ ಪೋಗುವರು ಸುತ್ತಿ ಪಥಸೇರುವರು ಆರ್ಥಿಲ್ಲದವನಿರವು ವ್ಯರ್ಥ ಮತ್ರ್ಯದೊಳು 4 ಹರಿದ್ಹೋಗ ಸಿರಿಯೆಂದು ಅರಿಯದೆ ಗರುವದಿ ಚರಿಸುವ ಅಧಮಜನರಿರವೇನು ಜಗದಿ ಗರುವಿಕರ ಸಿರಿಗಿಂತ ಶರಣರ ಬಡತನವೇ ಪಿರಿದೆಲೋ ಶ್ರೀರಾಮ ಅರಿದು ನಾನು ಬೇಡ್ವೆ 5
--------------
ರಾಮದಾಸರು
ಸಂಗಬೇಡವೈ ಆಶಾ ಪ ಸಂಗದಿಂದ ನಿನಗೆ ಅಂಗವೇ ಭಂಗವಾಹುದೈ ಅ.ಪ ಇದ್ದ ಕಡೆ ಇರಲೀಸದು | ಅ ಶುದ್ಧ ಮನುಜನಾದರೆಯು ಅ - ವಿದ್ಯದಿ ಮುಳುಗಿಸುವುದು 1 ನೋಡಿದುದು ಬಯಸುವುದು | ಬಲು ಮೋಡಿಯಿಂ ತಿರುಗಿಸುವುದು ಮಾಡಿಸಿ ಮಾಡಿಸಿ ದಣಿಸುವುದು 2 ಹಣವಿದ್ದರು ಕಳೆವುದು | ದುರ್ ಮನದಿ ಸಾಲ ಮಾಡಿಸುವುದು ಗುಣಿಯಲಿ ದುರ್ಗುಣವೇ ಕಾಣಿಸಿ ಹೆಣಕೆ ಸಮವೆಂದೆನಿಸುವುದು 3 ಬೋಧೆಯ ಕೇಳಲೀಯದು | ಮನೋ ವ್ಯಾಧಿಯಲ್ಲಿ ಕೃಶಿಸುವುದು ಹಾದಿ ಹೋಕರ ಕಂಡವರಂತೆ ಸಾಧನವ ಮಾಡಿಸುವುದು 4 ಅನ್ನಬಾರದನ್ನಿಸುವುದು ತಿನ್ನಬಾರದ್ದು ತಿನ್ನಿಸುವುದು ನನ್ನದೂ ನಾನೆಂಬ ಗರ್ವದಿ ಇನ್ನೂ ಮುನ್ನೆ ಕೆಡಿಸುವುದು 5 ಆಗೋ ಕಾರ್ಯ ಮಾಡಲೀಯದು ಹೋಗದೂರಿಗೇ ಹೊರಡಿಸುವುದು ಭೋಗಗಳೊಳಪೇಕ್ಷೆ ಪುಟ್ಟಿಸಿ ರೋಗದಿ ಬಳಲಿಸುವುದು 6 ಕೋಪಾದಿಗಳು ಹೆಚ್ಚುವುದು ಪಾಪಬುದ್ದಿ ಪುಟ್ಟುವುದು ಶರಣರಿಗಿದು ಸಲ್ಲದು 7
--------------
ಗುರುರಾಮವಿಠಲ
ಸಾಲದೆ ನಿನ್ನದೊಂದು ದಿವ್ಯನಾಮ - ಅ-ಕಾಲ ಮೃತ್ಯುವಿನ ಗಂಟಲಗಾಣ ಹರಿಯೆ ಪ ರಣದೊಳಗೆ ಅಂಗಾಂಗ ಖಂಡತುಂಡಾಗಿ ಪ್ರತಿರಣವನುತ್ತರಿಸಿ ಮರಣವ ತಾಳಿರೆಪ್ರಣವ ಗೋಚರ ನೀನು ಗೋಚರಿಸಿ ಬಂದೆನ್ನಹೆಣಕೆ ಪ್ರಾಣವ ಪ್ರಯೋಗಿಸಿದಂತರಾತ್ಮ1 ಕುಂತದಿಂ ತೂಂತುಗೊಂಡೆನ್ನ ಬೆನ್ನಿಂದಿಳಿವಸಂತತ ನೆತ್ತರನೊರಸಿ ಬಿಸುಟೆತಿಂತ್ರಿಣಿಯ ಮರದಡಿಯೆ ಹಾವು ಕಡಿದೊರಗಿರಲುಮಂತ್ರಿಸಿ ಮನೆಗೆ ಕಳುಹಿದೆ ಗರುಡಗಮನ 2 ಗರಳ ತೈಲವ ಸೇವಿಸೆವೇಣುನಾದದಲಿ ಹಣೆಯನೇವರಿಸಿ ಪಂಚಪ್ರಾಣ ಪ್ರತಿಷ್ಠೆಯ ಮಾಡಿದೆ ಮಹಾತ್ಮ 3 ತಮ್ಮ ಹವಣನರಿಯದೆ ಕೊಬ್ಬಿದ ಪಿಶಾಚಿಗಳುಎಮ್ಮ ಮನೆಗೊಂದೆ ಸಮ ಕಲ್ಲಲಿಟ್ಟುಹೆಮ್ಮಕ್ಕಳ ಬಾಧಿಸುವುದನು ಕಂಡುಬೊಮ್ಮಜಟ್ಟಿಗರ ಶಿರವರಿದೆ ನರಹರಿಯೆ 4 ಓದಿ ಹೇಳಿದರೊಂದು ಕಥೆಯಾಗುತಿದೆ ಮಹಾಂಬೋಧಿಶಯನನೆ ವೇದಶಾಸ್ತ್ರ ಮುಖದಿಬಾಧಿಸುವ ದುರಿತಾಗ್ನಿಗಂಬು ಶ್ರೀ ಕಾಗಿನೆಲೆಯಾದಿಕೇಶವನ ನಾಮ ಸಂಕೀರ್ತನ 5
--------------
ಕನಕದಾಸ