ಒಟ್ಟು 5 ಕಡೆಗಳಲ್ಲಿ , 3 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಣೆಯೇನೇ ತಂಗಿ | ಇವನಾ ಕಾಣೆಯೇನೇ ತಂಗಿ ಪ ವೇಣುವನೂದುವ ಮುದ್ದು ಮೋಹನ್ನನ ಅ.ಪ ಪೂತನಿಯಸುವಾ ಹೀರಿದನಿವನು ಮಾತೆಗೆ ಬಾಯಲಿ ಜಗವ ತೋರಿದನು 1 ಬಕ ಶಕಟಾಸುರನಿಕರವ ಸದೆದ ವಿಕಟ ಕಾಳಿಂಗನ ಹೆಡೆಯನು ತುಳಿದ 2 ಬೃಂದಾವನದಾನಂದ ಮುಕುಂದ ನಂದನಕಂದ ಮಾಂಗಿರಿಯ ಗೋವಿಂದ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ವಾಸುದೇವ ನಿನ್ನ ಮರ್ಮಕರ್ಮಂಗಳದೇಶದೇಶದಲ್ಲಿ ಪ್ರಕಟಿಸಲೊ ಪ ಬೇಸರದೆ ಎನ್ನ ಹೃದಯಕಮಲದಲ್ಲಿ ವಾಸವಾಗಿ ಸುಮ್ಮನಿದ್ದೀಯೊ ಅ.ಪ. ತರಳತನದಲಿದ್ದು ದುರುಳನಾಗಿ ಬಂದುಒರಳಿಗೆ ಕಟ್ಟಿಸಿಕೊಂಡುದನುತುರುವ ಕಾಯಲಿ ಹೋಗಿ ಕಲ್ಲಿಯೋಗರವನುಗೊಲ್ಲರ ಕೂಡೆ ನೀ ಉಂಡುದನುನೆರೆಮನೆ ಹೊರಮನೆಗಳ ಪೊಕ್ಕು ಬೆಣ್ಣೆಯಅರಿಯದಂತೆ ಕದ್ದು ಮೆದ್ದುದನುಕೇಳಿಸಿದೆಯಾದರೆ ಒದರುವೆ ಎಲೊ ನರ -ಹರಿ ಎನ್ನ ಬಾಯಿಗೆ ಬಂದುದನು 1 ಕಟ್ಟಿ ಕರೆವ ಏಳುದಿನದ ಮಳೆಗೆ ಪೋಗಿಬೆಟ್ಟವ ಪೊತ್ತದ್ದು ಹೇಳಲೊಅಟ್ಟಿಸಿಕೊಳ್ಳುತ ಯಾಗಶಾಲೆಗೆ ಪೋಗಿಹೊಟ್ಟೆಯ ಹೊರೆದದ್ದು ಹೇಳಲೊದುಷ್ಟ ಹಾವಿನ ಹೆಡೆಯನು ತುಳಿದಾಡಿದದುಷ್ಟತನವನು ಹೇಳಲೊನೆಟ್ಟುನೆ ಅಂಬರಕೆತ್ತಿದನ ಹೊಯ್ದುಹಿಟ್ಟುಕಟ್ಟಿಟ್ಟುದ ಹೇಳಲೊ 2 ಪಿಡಿಯವಲಿಗೆ ಮೆಚ್ಚಿ ಸಂಪದವನು ಕೊಟ್ಟಬೆಡಗತನವನಿಲ್ಲಿ ಹೇಳಲೊಹಿಡಿಯ ಬಂದ ಕಾಲಯವನಿಗಂಜಿ ಕಲ್ಲಪಡೆಯ ಹೊದ್ದುದ ಹೇಳಲೊಮಡಿದ ಮಗನ ಗುರುವಿಗೆ ಕೊಡಬೇಕೆಂಬಸಡಗರತನವಿಲ್ಲಿ ಹೇಳೆಲೊಮಡದಿ ಮಾತಿಗೆ ಪೋಗಿ ನೀ ಪಾರಿಜಾತವತಡೆಯದೆ ತಂದದ್ದು ಹೇಳಲೊ 3 ಮೌನಗೌರಿಯ ನೋಡ ಬಂದ ಹೆಂಗಳನ್ನೆಲ್ಲಮಾನವ ಕೊಂಡದ್ದು ಹೇಳಲೊತಾನಾಗಿ ಮೊಲೆಯನೂಡಿಸ ಬಂದವಳನ್ನುಪ್ರಾಣವ ಕೊಂಡದ್ದು ಹೇಳಲೊಕಾನನದೊಳು ತುರುವಿಂಡುಗಳನು ಕಾಯ್ದಹೀನತನವನಿಲ್ಲಿ ಹೇಳಲೊಮಾನಿನಿಯರ ಮನೆಗಳ ಪೊಕ್ಕು ಬೆಣ್ಣೆಯಹಾನಿಯ ಮಾಡಿದ್ದು ಹೇಳಲೊ 4 ಧರಣಿಮಗನ ಕೊಂದು ತರುಣಿಯರನುದುರುಳತನವನಿಲ್ಲಿ ಹೇಳಲೊಜರೆಯ ಮಗನಿಗಂಜಿ ಪುರವ ಬಿಟ್ಟು ಹೋಗಿಶರಧಿಯ ಪೊಕ್ಕದ್ದು ಹೇಳಲೊಧರೆಯೊಳಧಿಕ ಶ್ರೀರಂಗಪಟ್ಟಣದಲ್ಲಿಸ್ಥಿರವಾಗಿ ನಿಂತದ್ದು ಹೇಳಲೊಶರಣಾಗತರ ಕಾವ ರಂಗವಿಠಲನ್ನಪರಮ ದಯಾಳೆಂದು ಹೇಳಲೊ 5
--------------
ಶ್ರೀಪಾದರಾಜರು
ತೋಳು ತೋಳು ತೋಳು ಕೃಷ್ಣ-ತೋಳನ್ನಾಡೈ |ನೀಲಮೇಘಶ್ಯಾಮ ಕೃಷ್ಣ ತೋಳನ್ನಾಡೈಪಗಲಿಕೆಂಬಂದುಗೆ ಉಲಿಯುವ ಗೆಜ್ಜೆಯ ತೋ-|ಅಲುಗುವ ಅರಳೆಲೆ ಮಾಗಾಯ್ಮಿನುಗಲು ತೋ-|ನೆಲುವು ನಿಲುಕದೆಂದೊರಳ ತಂದಿಡುವನೆ ತೋ-|ಚೆಲುವ ಮಕ್ಕಳ ಮಾಣಿಕ್ಯವೆ ನೀ ತೋ- 1ದಟ್ಟಡಿಯಿಡುತಲಿ ಬೆಣ್ಣೆಯ ಮೆಲುವನೆ ತೋ-|ಕಟ್ಟದ ಕರಡೆಯ ಕರುವೆಂದೆಳೆವನೆ ತೋ-||ಬೊಟ್ಟಿನಲ್ಲಿ ತಾಯ್ಗಣಕಿಸಿ ನಗುವನೆ ತೋ-|ಬಟ್ಟಲ ಹಾಲನು ಕುಡಿದು ಕುಣಿವನೆ ತೋ- 2ಅಂಬೆಗಾಲಿಲೊಂದೊರಳನ್ನೆಳೆವನೆ ತೋ-|ತುಂಬಿದ ಬಂಡಿಯ ಮುರಿಯಲೊದ್ದವನೆ ತೋ-|ಕಂಬದಿಂದಲವತರಿಸಿದವನೆ ನೀ ತೋ-|ನಂಬಿದವರನುಹೊರೆವಕೃಷ್ಣ ತೋ3ಕಾಲಕೂಟದ ವಿಷವ ಕಲಕಿದ ತೋ-|ಕಾಳಿಂಗನ ಹೆಡೆಯನು ತುಳಿದ ತೋ-||ಕಾಳೆಗದಲಿ ದಶಕಂಠನ ಮಡುಹಿದ ತೋ-|ಶಾಲಕ ವೈರಿಯೆ ಕರುಣಿಗಳರಸನೆ ತೋ 4
--------------
ಪುರಂದರದಾಸರು
ಮಕ್ಕಳ ಮಾಣಿಕ ಮನೋಹರ ನಿಧಿ-ವೈರಿ-|ರಕ್ಕಸ ಶಕಟನ ತುಳಿದು ದೀಪಾದವೆ ಪಬಲಿಯ ದಾನವ ಬೇಡಿ ನೆಲವಈರಡಿಮಾಡಿ |ಜಲಧಿಯ ಪಡೆದದ್ದು ಈ ಪಾದವೆ ||ಹಲವು ಕಾಲಗಳಿಂದಶಿಲೆಶಾಪವಡೆದಿರಲು |ಫಲಕಾಲಕ್ಕೊದಗಿದುದೀ ಪಾದವೆ 1ಕಡುಕೋಪದಿ ಕಾಳಿಂಗನ ಮಡುವ ಕಲಕಿ |ಹೆಡೆಯನು ತುಳಿದುದು ಈ ಪಾದವೆ ||ಸಡಗರದಿಂದ ಕೌರವನ ಸಿಂಹಾಸನವ |ಹೊಡೆಮಗುಚಿ ಕೆಡಹಿದುದೀ ಪಾದವೆ 2ಶೃಂಗಾರದಿಂದ ಹೆಂಗಳು ಲಕ್ಷುಮಿಯ ಸಹಿತ |ಅಂಗನೆಯರೊತ್ತುವುದೀ ಪಾದವೆ ||ಸಂಗಸುಖದಿಂದ ಶ್ರೀ ಪುರಂದರವಿಠಲನ |ಅಂಗದೊಳಡಗಿದ್ದುದೀ ಪಾದವೆ 3
--------------
ಪುರಂದರದಾಸರು
ಹೇಗೆ ಮಾಡಲಿ ಮಗುವಿಗೇನಾಯಿತೊ - ಇದರ - |ಆಗಮವ ಬಲ್ಲವರು ತಿಳಿದೆಲ್ಲ ಪೇಳಿ ಪ.ತೂಗಿ ಮಲಗಿಸೆ ಕಣ್ಣ ಮುಚ್ಚಲೊಲ್ಲನು, ಬೆನ್ನ - |ಮೇಗೆ ಬುಗುಟಿಯು, ಎದೆಯು ಕಲ್ಲಾಗಿದೆ |ರೋಗವನೆ ಕಾಣೆ ದಾಡೆಯಲಿ ನೀರಿಳಿಯುತಿದೆ |ಕೂಗುವ ಧ್ವನಿಯೊಮ್ಮೆ ಕುಂದಲಿಲ್ಲ 1ಖಂಡಸಕ್ಕರೆ ಹಣ್ಣ ಕೊಟ್ಟರೊಲ್ಲದೆ ಮಣ್ಣ |ಹೆಂಡೆಯನು ಬೇಡಿ ತಾ ಪಿಡಿವ ಕೊಡಲಿ ||ಮಂಡೆ ಜಡೆಗಟ್ಟಿಹುದು ಮಾಡಲಿನ್ನೇನಿದಕೆ |ಹಿಂಡುಸತಿಯರ ದೃಷ್ಟಿ ಘುನವಾಯಿತೇನೊ2ಮೊಲೆಯನುಂಬಾಗ ಮೈಯಂಬರವನೊದೆಯುತಿದೆ |ಕಲಕಿತದಲಿ ಎನ್ನ ಕೊಲುವುದೇಕೋ ||ತಿಳಿದಿದರ ನೆಲೆಯನರಿತವರನೊಬ್ಬರ ಕಾಣೆ |ಚೆಲುವಸಿರಿಪುರಂದರವಿಠಲ ತಾ ಬಲ್ಲ3
--------------
ಪುರಂದರದಾಸರು