ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮನವೇ ಕೊಬ್ಬ ಬ್ಯಾಡ ಉಬ್ಬ ಬ್ಯಾಡಾ ಪ ನೆನುವಿನೊಳಿಟ್ಟು ಮಾನುಭಾವರ ಚರಣ ಕಮಲವನು ಜನುಮ ಸಾರ್ಥಕವನು ಮಾಡು ಕಂಡ್ಯಾ ಅ.ಪ ವಿದ್ಯೆ ವಶವಾದರೆ ನೀ ತಿದ್ದಿ ಕಲಿಸು ಆರ್ತರಿಗೆ | ಬುದ್ಧಿವಂತರ ಕೂಡಾ ತರ್ಕಸ್ಯಾಡ ಬೇಡಾ ನೋಡಬ್ಯಾಡಾ | ಉಧೃತ ಶಕ್ತಿಯ ಬಲದಿಂದ ಸಂತ ಸೇವೆ ಮಾಡು | ಗುದ್ದಿ ಹೆಟ್ಟಿ ಪರರ ಪೀಡಿ ಕುಡಬ್ಯಾಡಾ ಮಾಡಬ್ಯಾಡಾ | ಮುದ್ದಿ ಘನವಾದರ ಸತ್ಪಾತ್ರಕ ನಿವೇದಿಸು | ಮದ್ದು ತಿಂದು ನುಡಿವವನಂತ ಪರರ ದೋಷ ಗುಣಾ | ಬದ್ಧವಚನವ ನುಚ್ಚರಿಸದಿರು 1 ರಾಜಮುದ್ರಿಯ ನೆವದಿ ಉದರ ತುಂಬಲಾಗಿ ನೀತಿ ಬಿಟ್ಟು | ಈ ಜನರನಾ ದಂಡಿಸುವದಲ್ಲಾ ಇದುಸಲ್ಲಾ | ಆ ಜನ ಹೊಟ್ಟೆ ಹಾಕಿ ಬರೆಗೈಯ್ಯ ಹೋಗುವಂತೆ | ನೀ ಜಯಿಸಿ ಬಂದದಲ್ಲಾ ಸಂದದಲ್ಲಾ | ತ್ಯಾಜದಿಂದ ದೊಡ್ಡವ ನೀನೆಂದು ಸೆಜ್ಜಿ ತೆನೆಯಂತೆ | ಸುಜನರೊಳಗ ಗರ್ವ ಹಿಡಿಯದಿರು ಪಡೆಯದಿರು | ವಾಜಿಯಲಿ ನವಣಿ ತೆನೆಯಂತ ಬಾಗಿ ನಡೆದರೆ| ಶ್ರಿ ಜನಾರ್ಧನ ರಕ್ಷೀಸುಚ ಕಂಡ್ಯಾ 2 ಜರಿದು ಕೈಯಲ್ಲಿಂದ ಸಬಕಾರ ನೀರೊಳಗ ಬಿದ್ದ | ತೆರದಿಂದ ತಿರುಗಿ ತಿರುಗಿ ಯಾತಿಗಳನು | ಭರದಿಂದ ಕಡಿಯಲಿ ಪುಣ್ಯ ಫಲ ವಶದಿಂದ| ನರದೇಹವನು ತಾಳಿ ಬಂದಿ ನೀನು ತಿಂದಿ ನೀನು | ತ್ವರಿತ ಸುತಪ್ರಿಯ ಗುರು ಮಹಿಪತಿ ಚರಣಕ | ಮೊರೆ ಹೊಕ್ಕು ಗತಿ ಪಡೆ ಭಾವದಿಂದ ಜೀವದಿಂದ | ಧರೆಯೊಳು ಗಾಳಿಯೊಳಗಿನ ದೀಪ ತೋರುವಂತೆ | ಸ್ಥಿರವಲ್ಲಾ ಆಗಲ್ಹೋ ಈಗಲಿದು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸೃಷ್ಟಿಯೊಳಗೆಲ್ಲ ದುಷ್ಟರ ಪ್ರಭೆಯಾಗಿ ನಿಷ್ಠರುದೋರದಂತಾದರು ಮಾ ಧ್ರುವ ಭ್ರಷ್ಟರು ಬೂಟಿಕಿ ಶಿಷ್ಠರೆ ಕೈಕೊಂಡು ನಿಷ್ಠರಿಗಾಟ್ಲಿ ತಂದರು ಮಾ ತುಟ್ಟಿಲೆ ಮಿಸುಕದೆ ಗುಟ್ಟಿಲಿದ್ದವರ ಬಟ್ಟೆಗ್ಯಳದಿನ್ನು ತಾಹರು ಮಾ ಹೊಟ್ಟೆಯೊಳು ಹೊಕ್ಕು ಕಟ್ಟಲೆ ಕುಳಿತಿನ್ನು ನೆಟ್ಟ ನೇರಿಷ್ಟ ನೇಮಿಸುರು ಮಾ ಇಟ್ಟ ತೊಟ್ಟವರನು ಕೆಟ್ಟದೃಷ್ಟಿಲೆ ನೋಡಿ ದಿಟ್ಟತನದಿ ಪ್ರಾಣಕೊಂಬರು ಮಾ 1 ಕೊಟ್ಟು ಹಣಹೊನ್ನು ಇಟ್ಟದ್ದು ಬೇಡಲು ಕುಟ್ಟಿ ಅವನಬಾಯಿ ಹಾರರು ಮಾ ತುಟ್ಟಿಲೆ ವಂದಾಡಿ ಹೊಟ್ಟಲೆ ವಂದಿಟ್ಟು ನೆಟ್ಟನೆ ಘಾಸಿಮಾಡರು ಮಾ ಗಂಟುಳ್ಳವರ ಕಂಡು ಕಟ್ಟಿದಂಡಗಳನ್ನು ನಷ್ಟತನದಿ ಹೊಟ್ಟೆ ಹೊರುವರು ಮಾ ಬಟ್ಟಿಲೆ ತೋರಲು ಬಿಟ್ಟಿಯ ಹಿಡಿದಿನ್ನು ಹೆಟ್ಟಿ ಅವನ ಮುಂದೆ ನಡೆಸುರು ಮಾ 2 ಶುದ್ದಿಯು ಇಲ್ಲದೆ ರಾಜ್ಯಾಧಿಪತಿಗಳು ಇದ್ದು ಇಲ್ಲದಂತಾದರು ಮಾ ಮಂದಮತಿಗಳು ಅಂದಣವೇರಿನ್ನು ಬುದ್ಧಿವಂತರೀಗ್ಹೀನತಂದರು ಮಾ ಮುದ್ರಾಧಾರಿಗಳೆಲ್ಲ ಕ್ಷುದ್ರದೃಷ್ಟಿಯು ಮಾಡಿ ಕ್ಷುದ್ರತನದಿ ಕೆಡುತಿಹರು ಮಾ ಸಿದ್ಧಸಾಧಕರೆಲ್ಲ ಗುದ್ದನೇ ಹೊಕ್ಕರು ಇದ್ದರೆ ಬುದ್ಧಿಹೀನರು ಮಾ 3 ಉಳಿಯಮುಟ್ಟಿದ ದೈವ ಉಳಿಯದೇ ಹೋದವು ಉಳಿಗಾಲ ವಿಲ್ಲದಂತಾಯಿತು ಮಾ ತಿಳಿವಳಿಕುಳ್ಳವರೆಲ್ಲ ತಲೆಮುಸಕ್ಹಾಕಿನ್ನು ಕಳ್ಳರೆ ಸಾಜರು ಆದರು ಮಾ ಒಳ್ಳೆಯವರ ನುಡಿ ಎಳ್ಳಷ್ಟು ಮಾಡುತ ಸುಳ್ಳರು ನಿಜನುಡಿವೆಂಬುರು ಮಾ ಉಳ್ಳವರು ಖಳಬುದ್ಧಿ ಕೈಕೊಂಡು ಇಳೆಯೊಳು ಧರ್ಮವ ಜರೆದರು ಮಾ 4 ಸಾಧುಸಜ್ಜನರೆಲ್ಲ ಭೇದವ ಅಡಗಿಸಿ ಮೇಧಿನಿಯಲು ಗುಪ್ತರಾದರು ಮಾ ಇದ್ದರ ಘನಸುಖ ಸಿದ್ಧರ ನೆರೆಯಲಿ ಬುದ್ಧಿಹೀನರು ತಾವು ಅರಿಯರು ಮಾ ಸದ್ಗುರು ಕೃಪೆಯಿಂದ ಸದ್ಬ್ರಹ್ಮದ ನೆಲೆಯ ಸತ್ ಶಿಷ್ಯಮಹಿಪತಿ ತಿಳಿದನು ಮಾ ಎಂದಿಗೆ ಬೇಡಿನ್ನು ದುರ್ಜನರ ಸಂಗವು ತ್ರಾಹಿ ತ್ರಾಹಿ ತ್ರಾಹಿ ಎಂದನು ಮಾ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಆಟಪಾಟವ ನೋಡಿ ಧನ್ಯರು ರಂಗಯ್ಯನಾಡ್ವಆಟಪಾಟವ ನೋಡಿ ಧನ್ಯರು ಪ.ಹೊಕ್ಕಳಲ್ಲಿರೊ ಮಗನು ಕಂಡರೆನಕ್ಕಾನೆಂಬ ಹೇಯ ಬಿಟ್ಟುಚಿಕ್ಕರೊಡನೆ ನಂದವ್ರಜದಿಮಕ್ಕಳಂತಲಿಪ್ಪ ರಂಗನಾಟ 1ಅಂಗಳದಲ್ಲಿದ್ದ ಪಂಕದಲ್ಲಿಮುಂಗೈಯ ಮುರಾರಿ ಕೃಷ್ಣಸಂಗದೆಳೆಯ ಮಕ್ಕಳೊಡನೆಹಿಂಗದೆ ಬೈಯ್ಯಾಟವಾಡುವಾಟ 2ಚಿನ್ನ ಬಾ ನೀ ಹಸಿದೆಯೆಂದುಚೆನ್ನ ನೀ ಉಣಿಸಿದರೊಲ್ಲದೆಕನ್ನವಿಕ್ಕಿ ಗೊಲ್ಲರ ಮನೆಯಬೆಣ್ಣೆಮೊಸರಸೂರ್ಯಾಡಿಮೆಲ್ಲುವಾಟ3ರಂಬಿಸಿಗೋಪಿನೀಲವರ್ಣದಬೊಂಬೆ ಬಾಲ ತೋಟಿ ಬೇಡೆನೆಕೊಂಬು ಕೊಳಲು ಸೆಳೆದು ಹೆಟ್ಟಿಕುಟ್ಟುವಡೆÉೂಂಬಿಕಾರ ವೀರಧೀರನಾಡುವಾಟ 4ಅಡಗಿದರ್ಭಕರ ಬಲ್ಪಿನಿಂದಲೆಹಿಡಿದುತಂದು ಚಿಣ್ಣಿ ಚಂಡನಾಡುತಬಡಿದು ಸೋಲಿಸಿ ದೂರು ಬರುವ ಮುನ್ನೆಹುಡಿಯ ಹೊರಳೇಳುವ ತೊಂಡೆಕಾರ ದೇವನಾಟ 5ಮೃತ್ತಿಕೆಯನುಂಬ ಮಗನ ಕಂಡುಮತ್ತೆಶೋದೆ ಅಕ್ಕಟೆಂದುತುತ್ತಿಸಿದ ಮಣ್ಣ ತೆಗೆಯಲಾಗಳೆಮತ್ರ್ಯನಾಕವಿಸ್ತಾರ ತೋರಿದ6ಹಲವು ಹಗ್ಗದಿಂ ಕಟ್ಟಿದಗೋಪಿಲಲನೆಗಚ್ಚರಿಯಾಗಿ ಉಲೂಖಲನ ಎಳೆದು ಮತ್ತಿಯ ಮರಗಳಛಲದಿ ಮುರಿದ ವಿಚಿತ್ರ ಚರಿತ್ರನ 7ಕರುಣದೋರಿ ಗೋಪಾಂಗನೇರತೋರದ ಮೊಲೆಯುಂಡ ವರಶಿಶುಗಳಉರುಳಗೆಡಹ್ಯವರೊಳು ನಲಿವದುರುಳಮಾಯಕಾರಖಿಳರೊಡೆಯನ8ಆರ ಪುಣ್ಯವೆಂತಂತೆ ಲೀಲೆಯತೆÉೂೀರಿ ಮುದ್ದು ಮೋಹವ ಬೀರಿದಸಾರಿದ ಭಕ್ತವತ್ಸಲ ನಮ್ಮಜಾರಚೋರ ಪ್ರಸನ್ವೆಂಕಟೇಶನಾಡುವ ಆಟ 9
--------------
ಪ್ರಸನ್ನವೆಂಕಟದಾಸರು