ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನೋ ಮನವೇ ನೀಹೀಂಗಾದಿ ಧ್ರುವ ಏನೋ ಮನವೇ ನೀ ಹೀಂಗಾದಿ | ಸ್ವಾನಂದ ಸುಖ ತಿಳಿಯದೆ ಬಳದಿ | ಮಾನುಭವರ ವಿಡಿನಿಜ ಹಾದಿ | ಭವ ವ್ಯಾಧಿ 1 ಮಂದ ಮತಿತನ ಬಿಡು ಗುಣದಾ | ಹೊಂದೋ ಸದ್ಗುರುವಿನ ಪಾದಾ | ಛಂದದಿ ಪಡಿಯೋ ನಿಜ ಬೋಧಾ | ಸಂದೇಹ ಬಿಡಿಸೆಚ್ಚರಿಸುವದಾ2 ಹೊಗೆ ಅಗ್ನಿಯ ಮುಸುಕಿಹ ಪರಿಯಾ | ಮಾಯಾ | ಬಿಗಿದಾವರಿಸಿಹುದು ನೋಯಾ | ಬ್ಯಾಗನೆ ತಿಳಿ ಗೆಲುವ ಉಪಾಯಾ 3 ಮುಂದ ಹಾಕಿದ ಹೆಜ್ಜೆಯನು | ಹಿಂದಕ ತಿರುಗಿಸದಿರು ನೀನು | ನಿಂದಿಸಲೊಂದಿಸಲಾರೇನು | ಮುಂದಗಿಡದೆ ಬೆರಿ ವಸ್ತವನು 4 ನಿನ್ನ ಸುದ್ದಿಯು ತಾ ನಿನಗಿಲ್ಲಾ | ಇನ್ನಾರೆ ತಿಳಿತನು ಸ್ಥಿರವಲ್ಲಾ | ಮುನ್ನಿನ ಪರಿಕೆಡುವುದು ಸಲ್ಲಾ | ಮನ್ನಿಸು ಮಹಿಪತಿ ಜನ ಸೊಲ್ಲಾ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಳ್ಳನ ಹೆಜ್ಜೆಯನು | ಜಗದೊಳು ಕಳ್ಳನೇ ತಾ ಬಲ್ಲ | ಎಲ್ಲರಿಗಿದು ತಾನು | ಭೇದಿಸಿ | ನೋಡಲು ಅಳವಲ್ಲಾ ಪ ನಡುಮನಿಯೊಳು ಬಂದಾ | ಮಂದಿರಕನ್ನವ ಕೊರೆದಾ 1 ಸ್ವಪ್ರಭೆಯಲ್ಲಿ ಮೆರೆವಾ | ಅಲ್ಲಿಯ ಚಿದ್ರತ್ನವ ಕದ್ದಾ | ಸ್ವಾನುಭವದಿ ಮೆದ್ದಾ 2 ಕಳ್ಳರ ಸಂಗತಿಯಾ | ಮಹಿಪತಿ | ನಂದನ ತಾ ಮಾಡಿ | ಕದಿಯುತ ನೋಡಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು