ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆವ ತಾ ಸುಖವೊ ಮತ್ತಾವನಂದವೊ | ಈ ಉಡುಪಿ ಯಾತ್ರಿ ಮಾಡಿದ ಮನುಜಗೆ ಪ ಮನದೊಳಪೇಕ್ಷಿಸೆ ಅವನೀಗ ಹದಿನಾಲ್ಕು | ಮನುಗಳು ಭೂಮಿ ಆಳುವ ತನಕಾ | ಕನಕ ರಜತಪೀಠ ಗೋಕುಲದಿಂದ | ಸ | ಜ್ಬನ ಮಾರ್ಗದಲ್ಲಿ ಗುಣವಂತ ನೆನೆಸುವ 1 ಒಂದು ಹೆಜ್ಜೆಯನಿಟ್ಟು ಸಾಗಿ ಬರುತಲಿರೆ | ಅಂದೆ ಸುರರೊಳು ಗಣನೆ ಎನ್ನಿ | ಒಂದಕ್ಕೆ ನೂರಾರು ಯಾಗ ಮಾಡಿದ ಫಲ | ತಂದು ಕೊಡುವ ಅಜನಾದಿ ಕಲ್ಪ ಪರಿಯಂತ2 ಅರ್ಧ ಮಾರ್ಗವು ಬರಲು ಬಂದೆ ದಿವಸದಲ್ಲಿ | ಸಾಧರ್À ತ್ರಿಕೋಟಿ ದೇವತೆಗಳಲಿ | ಊಧ್ರ್ವರೇತಸನಾಗಿ ಮಿಂದ ಫಲವಕ್ಕು | ಪರಿಯಂತ 3 ಕ್ಷೇತ್ರದ ಬಳಿಗಾಗಿ ಬರಲು ಅವನ ಏಳು | ಗೋತ್ರ ನೂರೊಂದು ಕುಲದವರು | ಗಾತ್ರವ ಮರೆದು ರೋಮಾಂಚನದಿಂದಲಿ | ಪಾತ್ರವನಾಡೋರು ಮೋಕ್ಷಮಾರ್ಗವ ಸಾರಿ4 ಕರವ ಜೋಡಿಸಿ ನಿಂದು | ಸನ್ನುತಿಸಿ ದರ್ಶನ ಮಾಡಲು | ಕರವ ತಿಳಿದು ಜ್ಞಾನ ಭಕುತಿ ಸಂ | ಪನ್ನ ವಿರುಕುತಿಲಿ ಗತಿಗಭಿಮುಖನಾಹ 5 ಮಧ್ವ ಸರೋವÀರದಲ್ಲಿ ಸ್ನಾನವಗೈದು | ಸಿದ್ಧಾಂತ ಕರ್ಮಗಳನನುಸರಿಸೀ | ಶುದ್ಧಾತ್ಮ ಕೃಷ್ಣನ ದೇವಾಲಯವ ಸಾರೆ | ಪೊದ್ದಿದಾ ಸತ್ಯಲೋಕದ ಸಭೆಯೊಳಗೆ 6 ಕೃಷ್ಣ ಕೃಷ್ಣ ಯೆಂದು | ನವ ವಿಧ ಪೂಜೆಯನ್ನು | ದೃಷ್ಟಿಯಿಂದಲಿ ನೋಡೆ ಅವನೆ ಮುಕ್ತಾ | ಮುಟ್ಟಿ ಪೂಜಿಸುವರ ಸತ್ಪುಣ್ಯ ವಿಜಯ | ವಿಠ್ಠಲ ತಾ ಬಲ್ಲ ನರರೆಣಿಸಲಳವಲ್ಲಾ 7
--------------
ವಿಜಯದಾಸ
ಎಂದಪ್ಪಿಕೊಂಬೆ ರಂಗಯ್ಯನ ಎಂದಪ್ಪಿಕೊಂಬೆ ಪ ಎಂದಪ್ಪಿಕೊಂಬೆನೋ ಎಂದು ಮುದ್ದಾಡುವೆನಂದ ಕಂದನ ಗೋವಿಂದನೆಂಬುವ ಕೂಸ ಅ.ಪ. ಕರದಲಿ ತನ್ನಯ ಬೆರಳು ಬಾಯೊಳಗಿಟ್ಟುಜುರು ಜುರು ಚೀಪುವ ವರಮುದ್ದು ಬಾಲನ1 ಗುರುಳು ಮಧ್ಯದಿ ರತ್ನ ಅರಳೆಲೆ ಹೊಳೆಯುತಜರದ ಕುಂಚಿಗೆ ಹೊದ್ದು ಚರಿಸುವ ಕೂಸಿನ್ನ 2 ಪುಟ್ಟ ಪುಟ್ಹೆಜ್ಜೆಯನಿಟ್ಟು ಗೋಕುಲದೊಳುತುಷ್ಟಿ ನೀಡಲು ಬಾಲಕೃಷ್ಣನೆಂಬುವ ಕೂಸ 3 ಬಾಲೆರ ಮನೆಪೊಕ್ಕು ಪಾಲುಮೊಸರು ತಿಂದಲೀಲೆ ಮಾಡುತ ಅಂಬೆಗಾಲನಿಕ್ಕುವ ಕೂಸ 4 ಕಾಲಕಡಗ ರುಳಿಯ ಪೂಲು ಪೈಜಣನಿಟ್ಟುಮ್ಯಾಲೆ ಉಡುದಾರ ಪೊಳೆವಂಥ ಕೃಷ್ಣನ5 ತಂದೆ ತಾಯರ ಮುಂದೆ ನಿಂದು ಮಾತಾಡಿದನಂದ ಬಾಲಕನಾದ ಇಂದಿರೇಶನೆ ಬೇಗ 6
--------------
ಇಂದಿರೇಶರು
ಬಿಡಿ ರಚನೆಗಳು ವೆಂಕಣ್ಣಕವಿಯ ಹಾಡುಗಳು ಕುಣಿದಾಡೋ ಕೃಷ್ಣ ಕುಣಿದಾಡೋ | ಒಮ್ಮೆ | ಕುಣಿದಾಡೋ ಪ ಮುದ್ದು ಮೊಗದೊಲವ ಮುಗುಳ್ನಗೆದೋರಿ | ತದ್ಧಿಮಿಕೆಂದು ಮುರಾರಿ1 ಹಸ್ತಾಂಗುಲಿ ಅಭಿನಯಗಳ ಪಟ್ಟು ನ್ಯಸ್ತದಿ ಹೆಜ್ಜೆಯನಿಟ್ಟು 2 ಗೆಜ್ಜೆ ನೂಪುರ ಘಲ್ಘಲ್ ಘಲರವದಿಂದ ತದ್ದಣಿಕೆಂದು ಮುಕುಂದ 3 ಸ್ಥಾಯಿ ಮೃದಂಗ ತಾಳದಿ ಶ್ರುತಿಗೂಡಿ ಮಾ-ಗಾಯಿ ಕುಂಡಲಗಳೋಲಾಡಿ4 ಧಾಮ 5
--------------
ಅನ್ಯದಾಸರು
ಮುದ್ದು ತಾರೋ ರಂಗಾ ಮುದ್ದು ತಾರೋ ಕೃಷ್ಣಾ ಸಿದ್ಧ ವೇದಾ ಗಮಾ ಭೇದ್ಯ ಮೋಹನ್ನಾ ಪ ಕಾಣಲಿಕ್ಕೆ ಹಸಿವೆ ತೃಷೆಗಳೇ ಮರೆವದು ಏಣಾಂಕ ಬಿಂಬ ಮೊದಾ ಬಾಯಿಂದಾ 1 ಕರ್ಪುರವಾ ಕರಡಿಗಿಯಂತೆ ಹೊಳೆವುತಾ ವಪ್ಪುತಿಹ ಚಲ್ವ ಪುಟ್ಟ ಬಾಯಿಂದಾ2 ಅಮ್ಮ ತಾರಮ್ಮ ನಾನುಂಡೆನೆಂದು ಕೈಯ ಬೀಸಿ ಝಮ್ಮನೇ ತೊಡಲು ನುಡಿ ಬಾಯಿಂದಾ 3 ತಪ್ಪ ಹೆಜ್ಜೆಯನಿಟ್ಟು ಘಲಘಲನೆ ನಡೆವುತ ಧಪ್ಪನೆ ಬೀಳುತ್ತಾ ಬಿರಿವ ಬಾಯಿಂದಾ4 ಹಣೆಯ ಅರಳೆಲೆ ಮಾಗಾಯಿಗಳಲ್ಲಾ ಆಡಿಸುತಾ ಕುಣಿದು ಬೆಣ್ಣೆಯ ಬೇಡುವ ಬಾಯಿಂದಾ5 ಕೋರಳಿಗೆ ಅಂಟಹಾಕಿ ಕೈಗಳಿಂದಾ ಬಿಗಿದಪ್ಪಿ ಗುರು ಮಹಿಪತಿ ನಂದನ ಜೀವನ್ನಾ 6
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಯಾವದು ಸುಖವೇ ಮತ್ಯಾನಂದವೇ ಪ ಈ ಉಡುಪಿಯ ಯಾತ್ರೆ ಮಾಡಿದ ಮನುಜಗೆ ಅ.ಪ. ಮನದಲಪೇಕ್ಷಿಸೆ ಅವನಿಗೆ ಹದಿನಾಲ್ಕು ಕನಕನ ಚಿತ್ತನಾಗಿ ಗೋಕುಲದಿಂದ ಸ ಜ್ಜನ ಮಾರ್ಗದಲಿ ಗುಣವಂತನೆನಿಸಿಕೊಂಬ 1 ಒಂದು ಹೆಜ್ಜೆಯನಿಟ್ಟು ಸಾಗಿ ಬರುತಲಿರೆ ಅಂದೆ ಸುರರೊಳು ಗಣನೆ ಎನ್ನೆ ಒಂದಕ್ಕೆ ನೂರಾರು ಯಾಗ ಮಾಡಿದ ಫಲ ತಂದು ಕೊಡುವ ಅಜನಾದಿಕಲ್ಪ ಪರಿಯಂತ2 ಅರ್ಧ ಮಾರ್ಗದಿ ಬರಲು ಬಂದು ನಿಲ್ಲಲು ಅವರ ಸಾಗರದಿ ಕೋಟಿ ಸ್ನಾನ ಮಾಡಲು ಊಧ್ವರೇತಸ್ಥನಾಗಿರ್ದ ಫಲವಕ್ಕೆ ಪರಿಯಂತ 3 ಸನ್ನುತ ಸಾಧನವನು ಮಾಡಲು ಸನ್ನುತರ ತೆಗೆದು ಜ್ಞಾನ ಭಕುತಿ ಸಂ ಪನ್ನವಿರಕುತಿಗೆ ಯತಿಗಾದಿ ಮುಖನಾದ4 ಕರವ ಜೋಡಿಸಿ ನಿಂದು ದೃಷ್ಟಿಯಿಂದಲಿ ನೋಡಿದವನೆ ಮುಕ್ತಾ ಮುಟ್ಟಿ ಭಜಿಸುವರ ಸತ್ಪುಣ್ಯ ವಿಜಯವಿಠ್ಠಲನಾತನೆ ಬಲ್ಲ ಅರುಹಲಳವಲ್ಲ 5
--------------
ವಿಜಯದಾಸ
ಶುಭವೆನ್ನಿರೆ ಎಲ್ಲ ಶುಭವೆನ್ನಿರೆ ಪ ಅಭಯ ಹಸ್ತದಿ ಉಭಯಕುಶಲ ಕಾಯುವ ಹರಿಗೆ ಅ.ಪ ಆಲದೆಲೆಯ ಮೇಲೆ ಪವಡಿಸಿ ಬಂದ ಹಾಲುತನದ ಬದುಕ ಭೂಮಿಗೆ ತಂದ ಹಾಲುಗಲ್ಲದ ಮುದ್ದÀು ಕೃಷ್ಣನು ಬರುತಿಹ ಶುಭವೆನ್ನಿರೆ ಎಲ್ಲ ಶುಭವೆನ್ನಿರೆ 1 ನಟ್ಟನಡುರಾತ್ರಿಯಲಿ ದಿಟ್ಟ ಕಾವಲಿನಲ್ಲಿ ದಟ್ಟ ಕತ್ತಲನೆಲ್ಲ ಜಗದಿಂದ ಜಾಡಿಸುತ ಬಟ್ಟ ಬೆಳಕನು ಬೀರಿ ಮೂಡುತಿಹ ಕೃಷ್ಣಂಗೆ ಶುಭವೆನ್ನಿರೆ ಎಲ್ಲ ಶುಭವೆನ್ನಿರೆ2 ಅಷ್ಟಮಿಯ ದಿನದಂದು ರಂಗವಲ್ಲಿಯ ಮೇಲೆ ಇಷ್ಟತಿಂಡಿಗಳನಿಷ್ಟಿಷ್ಟೆ ಮೆಲ್ಲಲು ಪುಟ್ಟ ಹೆಜ್ಜೆಯನಿಟ್ಟು ಬರುತಿರುವ ಕೃಷ್ಣಂಗೆ ಶುಭವೆನ್ನಿರೆ ಎಲ್ಲ ಶುಭವೆನ್ನಿರೆ 3 ರುಕುಮಾಂಗದನ ತಂತ್ರ ಫಲಿಸದಂತಳಿಸಿ ರುಕುಮಿಣಿಯ ಮನಗೆದ್ದು ರಥದ ಮೇಲಿರಿಸಿ ಅಕ! ಅಲ್ಲಿ ಬರುತಿಹ ಮದುವಣಿಗ ಕೃಷ್ಣಂಗೆ ಶುಭವೆನ್ನಿರೆ ಎಲ್ಲ ಶುಭವೆನ್ನಿರೆ 4 ಚೆಲುವ ಚೆನ್ನಿಗ ನಮ್ಮ ಜಾಜೀಪುರೀಶಂಗೆ ಶುಭವೆನ್ನಿರೆ ಎಲ್ಲ ಶುಭವೆನ್ನಿರೆ 5
--------------
ನಾರಾಯಣಶರ್ಮರು