ಒಟ್ಟು 4 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯ ಲಕ್ಷ್ಮಿ ಬಾ ಹಸೆಗೆ ಜಯ ಜಯ ಜಗನ್ಮಾತೆ ತ್ರೈಲೋಕವಿಖ್ಯಾತೆ ಪ ಮುತ್ತಿನ ಮಂಟಪದಿ ರತ್ನಪೀಠವಿರಿಸಿ ಮುತ್ತೈದೆಯರು ನಿನ್ನ ಅರ್ಥಿಯಲಿ ಕರೆವರು ಅ.ಪ ಗೆಜ್ಜೆ ಸರಪಣಿ ಕಾಲಗೆಜ್ಜೆ ನಾದದಿಂದ ಹೆಜ್ಜೆನಿಡುತ ಬಾ ಬಾ ಸಜ್ಜನರಕ್ಷಕಳೆ1 ಅಚ್ಚ ಜರಿ ಪೀತಾಂಬರ ಹೆಚ್ಚಿನಾಭರಣಗಳು ಮಿತ್ರೇರಲಂಕರಿಸುವರು ಅಚ್ಚುತನೊಡಗೊಡಿ 2 ಮುತ್ತಿನ್ಹಾರ ಪದಕ ಜತ್ತಿಲೊಲಿಯುತಿಹುದು ಹಸ್ತ ಕಡಗ ದೋರ್ಯ ಸಿಸ್ತಿನ ಸುಂದರಿಯೆ 3 ಕರ್ತೃ ಕಮಲನಾಭ ವಿಠ್ಠಲನರಸಿಯೆ ಹಸ್ತಿಗಮನೆ ಬಾ ಬಾ ಉತ್ತಮ ಪೀಠಕೆ 4
--------------
ನಿಡಗುರುಕಿ ಜೀವೂಬಾಯಿ
ಬಂದಳು ಭಾಗ್ಯನಿಧಿ ಶ್ರೀಧರನರಸಿ ಪ. ಪೊಂದಿದ ಭಕ್ತರಾನಂದದ ಸ್ತುತಿಗಾ ನಂದ ಪಡುತ ಒಂದೊಂದ್ಹೆಜ್ಜೆನಿಡುತಾ ಅ.ಪ. ಕಡಗ ಕಂಕಣ ತೋಳ್ಬಂದಿಯ ಧರಿಶಿ ಬಡನಡು ಬಳುಕುತ ದೃಢಭಕ್ತರೆಡೆಗೆ 1 ಹೆರಳು ಬಂಗಾರದ ಶಿರದ ಮಲ್ಲಿಗೆ ಮುಡಿ ಸರಸದಿಲುದರುತ ವರಪ್ರದ ಮಾತೆ 2 ವರದ ಶ್ರೀ ಶ್ರೀನಿವಾಸ ಸ್ವರ ರಮಣಿಯು ತಾ ಥರಥರದ್ವರಗಳ ಕರುಣಿಸಲೆಮಗೆ 3
--------------
ಸರಸ್ವತಿ ಬಾಯಿ
ಬಾರೋ ನಮ್ಮ ಮನೆಗೆ ಬೇಗನೆ ಗೋಪಾಲಕೃಷ್ಣಬಾರೋ ಶ್ಯಾಮ ಸುಂದರಾಂಗನೆ ಪಬಾರೊ ಭಾಮೆ ರುಕ್ಮಿಣೀಶ ಬಾರೊಯೋಗಿಹೃದಯವಾಸಬಾರೊ ದ್ವಾರಕಾಪುರೀಶ ಬಾರೊ ಭಕ್ತಜನರ ಪೋಷ ಅ.ಪಅಂದಿಗೆ ಕಾಲ್ಗೆಜ್ಜೆ ಸರಪಣಿ ಪಾಡಗರುಳಿಯುಕೆಂದಾವರೆಯು ಪೋಲ್ವಪಾದದಿನಂದಗೋಪತನಯಗೋಪವೃಂದದೊಳಗೆ ಕುಣಿದು ನಲಿದುಇಂದಿರೇಶ ಶ್ರೀಶನೆ ಬಂದೊಂದುಹೆಜ್ಜೆನಿಡುತ ಮುದದಿ 1ಉಟ್ಟದಟ್ಟಿಯು ಪಟ್ಟೆಚಲ್ಲಣ ಹವಳಕಟ್ಟುಗಟ್ಟಿ ಸರಪಣಿ ಕಿರುಗಂಟೆಯುಕಟ್ಟಿದ ಉಡುದಾರಗೆಜ್ಜೆಶ್ರೇಷ್ಠತನದಿ ಮೆರೆಯುತಿರಲುಪುಟ್ಟಬಾಲರೊಡನೆ ಪುಟ್ಟಪುಟ್ಟ ಹೆಜ್ಜೆನಿಡುತ ನಲಿದು 2ದುಂಡು ಕರಕೆ ಗುಂಡು ಬಿಂದಲಿ ಮುಂಗೈಮುರಿಗೆಉಂಗುರಗಳು ಶೋಭಿಸುತಲಿಬಂದಿ ಬಾಪುರಿಗಳು ತೋಳಬಂದಿ ನಾಗಮುರಿಗಿ ಕರದಿಚಂದ್ರನನ್ನು ಪಿಡಿದು ನಲಿದಸುಂದರಾಂಗ ಚೆಲುವ ಕೃಷ್ಣ 3ಪದಕ ಮುತ್ತಿನ ಸರಗಳ್ಹೊಳೆಯುತವೈಜಯಂತಿಮಾಲೆಸರಿಗೆ ಏಕಾವಳಿಗಳೊಲಿಯುತಪದುಮನಾಭ ನಿನಗೆ ದಿವ್ಯಮುದದಿಕೌಸ್ತುಭಮಾಲೆ ಹೊಳೆಯೆಯದುಕುಲೇಶ ಉಡುಪಿವಾಸಉದದಿ ಶ್ರೀಶಉದ್ಧವಸಖನೆ4ಸೋಮಸೂರ್ಯರ ಕಾಂತಿ ಸೋಲಿಪ ಮುಂಗುರುಳು ಮುಖವುಕಾಮಜನಕ ಕಮಲಲೋಚನಹೇಮಮಣಿ ಕಿರೀಟಕುಂಡಲಪ್ರೇಮತೋರ್ವ ಫಣಿಯ ತಿಲಕಶ್ರೀ ಮಹೀಶ ಶ್ರೀಶನೆ ಶ್ರೀ-ಕಮಲನಾಭ ವಿಠ್ಠಲ ಒಲಿವ 5
--------------
ನಿಡಗುರುಕಿ ಜೀವೂಬಾಯಿ