ಒಟ್ಟು 7 ಕಡೆಗಳಲ್ಲಿ , 1 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(3) ರಂಗನಬೆಟ್ಟ(ಸೋಲೂರು ಸಮೀಪ)ರಂಗನಾಥ ತಟ್ಟೇಕೆರೆಯಾ ರಂಗಾ ಜಯ ಮಂಗಳಾಂಗ ಪ ಪಾದ ಭಂಗ ಅ.ಪ ಲಕ್ಷ್ಮೀನಾಯಕ ಭಕ್ತವೃಂದ ರಕ್ಷಕ ಶಕ್ತ ರಕ್ಷಿಸು ಕಮಲಾಕ್ಷ ಕರುಣಾಕಟಾಕ್ಷ 1 ಪತಿತ ಪಾವನ ಪುಣ್ಯಧಾಮ ಮಹಿತಮಾನ್ಯ ಶ್ರುತಿನುತ ಗುಣಭೂಷಾ ಭವನಾಶಾ 2 ಗಾಂಗೇಯನುತನಾಮ ಹಿಂಗದೆನ್ನಲಿ ಪ್ರೇಮ ಸಾಂಗವೇದಸ್ತೋಮ ಸುತ್ರಾಮಾ 3 ಸುರಮುನಿವಂದ್ಯ ಭಾಗವತರ ವೃಂದ ಕರಿರಾಜ ಪರಿಪೋಷಾ ಹೆಜ್ಜಾಜೀಶ 4
--------------
ಶಾಮಶರ್ಮರು
(4) ಚನ್ನಾಕೇಶವ ಶರಣು ಶರಣು ಚೆನ್ನಕೇಶವರಾಯ ಚರಣಗಳೇ ಗತಿ ನಂಬಿದೆ ಜೀಯಾ ಪ ತರಳಧ್ರುವನಿಗಿತ್ತೆಯೊ ಬಹುಶ್ರೇಯ ವರದ ವೇಂಕಟ ಶ್ರೀರಂಗ ಚೆಲ್ವರಾಯಾ ಶರಣ ಶ್ರಿತನಭಯಾ ಆನಂದನಿಲಯಾಅ.ಪ ಅಂದುಗೆ ಗೆಜ್ಜೆಯ ಘಲುಘಲು ತುಂದಿಲನಗೆಮೊಸ ಪೀತಾಂಬರದಿಂ ಧಿಂದಿಮಿಕಿಟ ಕುಣಿಗೋವಿಂದಾ ನಿತ್ಯ ಮುಕುಂದ 1 ಕವಿಕುಲಸ್ತುತ್ಯನೆ ದೇವವರೇಣ್ಯ ಭವಸಾಗರ ತಾರಣ ಪ್ರಾವೀಣ್ಯ ಭುವನಗಳೆಲ್ಲಕು ನೀನೇ ಗಣ್ಯ ಪವಿತ್ರಯೋಗಿಯ ಧ್ಯಾನ ಹಿರಣ್ಯ ಪಾವನ ಪುಣ್ಯ ಶ್ರುತಿ ಪ್ರಾಮಾಣ್ಯ 2 ವಿದುರೋದ್ಭವ ಅಕ್ರೂರ ತ್ರಾತ ಮಧುರ ಬಾಂಧವ ಬದರೀನಾಥ ವಿಧಿ ಪಿತನರನಾರಾಯಣ ಪೂತ ಮಧುಕೈಟಭಾರಿ ಬಹುಪ್ರಖ್ಯಾತ ಬುಧಪ್ರೀತ ಭಾಗ್ಯದಾತ 3 ಒಂದೇ ಅಳತೆಗೆ ಜಗವು ಮೂರಡಿ ಚಂದಿರ ಮುಖಿಮಣಿ ಕೊಟ್ಟನು ಕರಡಿ ನಿಂದೆಯಾ ಕಾಳಿಂಗನ ಮೇಲ್ಗಾರುಡಿ ತಂದೆ ಕರೆದನ ಕರುಣದಿ ಕರಪಿಡಿ ಇಂದೆ ಕಡೆಜನ್ಮಮಾಡಿ ಇಡು ನಿನ್ನಪದದಡಿ4 ಹೆಜ್ಜಾಜೀಶ್ವರ ಶಿವ ಶಂಕರನೆ ಸಜ್ಜನ ಮುನಿಗಣ ಹೃದ್ಭಾಸ್ಕರನೆ ದುರ್ಜನಶಿರಹರ ಶಂಖಚಕ್ರಧರ ವಜ್ರಿ ಅಜಹರಗಾಧಾರ ಧೀರ ಸುಜಯ ಭೂಮ್ಯೋದ್ಧಾರಿ ಜಂiು ಶ್ರೀಕರ 5
--------------
ಶಾಮಶರ್ಮರು
ಕರುಣದೆನ್ನ ಕರಪಿಡಿ ಕಾಯೋ ಪ ಸಿರಿನಾರಾಯಣ ಶರಣೆಂಬೆ ಅ.ಪ ಮೇಲ್ ಮೇಲ್ ಗುಣಗಾನವ ಮಾಡೆ ಬಾಲ್ಯಮೊದಲು ಮುದಿತನ ದೊಳಗುಂ ಸೌ ಶೀಲ್ಯ ಸ್ತುತಿಪೆ ಶುಕನುಡಿಯಂತೆ 1 ದಶರೂಪಗಳಂ ಧರಿಸುತ ಮರೆಸಲು ವಿಶ್ವವ್ಯಾಪಕಗುರು ತರವೇ ಕೃಷ್ಣನಾಮನಾವೆಯೊಳು ಬಹೇ 2 ವೈನತೇಯನನೊಡಗೊಂಡು ಬಹೆ ನಿನ್ನ ಸೆರಗ ಪಿಡಿಯುತ ಬರುವೆ3 ಸುಮನಸ ಪೂಜಿತ ನಮಿಸುವೆ ನಾಂ ಭ್ರಮೆಗಳ ಬಿಡಿಸುತ ಭವಭಯ ಹರ¸ ಕಮಲನಯನ ಹೆಜ್ಜಾಜೀಶ 4
--------------
ಶಾಮಶರ್ಮರು
ಕಷ್ಟಪಡಲಾರೆನೋ ಸೃಷ್ಟೀಶ ಶ್ರೀಶಾ ದುಷ್ಟದಮನ ದೀನವತ್ಸಲ ನಾರಾಯಣ ಪ ಒಡಲು ಕ್ಷಣಗಳು ಬಿಡದೆ ಬಾಧಿಸೆ ನಿನ್ನ ಅಡಿಯಕಾಣಿಸದಿವೆ ಕೆಡಿಪ ದುರಾಶೆಯ ಸುಡುತಲಿ ನೂಕು ದುಡುಕುವ ಮನವಂ ಸಡಲಿಸಬೇಕು ಕಡುಮುದದಿಂದಲಿ ಕಾಯುತ ಸಾಕು ಪರಾಕು 1 ಲೋಕಿಗರೊಳು ನಾನನೇಕದುಶ್ಚರ್ಯೆಯ ವಿ- ವೇಕವಿಲ್ಲದೆ ಮಾಡಿ ಕಾಕುಮನುಜನಾದೆ ಘೂಕದ ಪರಿಯೀ ಭವಸಂಸಾರ ನಾಕವಾದರೂ ಬಹು ನಿಸ್ಸಾರ ಜೋಕೆಯೊಳಿದಬಿಟ್ಟು ಒಟ್ಟು ಬಂದನೆ ತೋರಾ ಶೋಕಸಾಗರವಾ ಶೋಷಿಪಶೂರ 2 ಇಷ್ಟ ಮೂರುತಿ ನಿನ್ನ ನಿಷ್ಠೆಯಿಂ ಕಾಣುವೆ ಎಷ್ಟು ಮೊರೆಯಿಟ್ಟರೂ ದೃಷ್ಟಿಸದಿರುವೇ ಅಷ್ಟಮದಗಳನಿತಿಷ್ಟೂ ನಿಲ್ಲವೋ ಭ್ರಷ್ಟಗುಣಗಳ ನಿಷ್ಠುರಗೈವುದೋ ವಿಷ್ಣು ಶ್ರೇಷ್ಠಪದ ಕೊಟ್ಟು ಕರುಣಿಸೋ ಕೃಷ್ಣ ಕೃಪಾಳು ಹೆಜ್ಜಾಜೀಶಾ 3
--------------
ಶಾಮಶರ್ಮರು
ಘನನಂದನ ರಾಮಚಂದ್ರ ಪ ತಂದೆ ತಾಯಿ ಬಂಧು ನೀನು ಸಂದ ಯೆನ್ನ ಮಿತ್ರನೀನು ಕಂದನಿಗಾನಂದ ಬೀರಿ ಅಂದವಾದ ಪಾದತೋರು1 ಸ್ವಾಮಿ ನಿನ್ನ ನಾಮವನ್ನು ನೇಮದಿಂದ ಧ್ಯಾನಿಪೆನ್ನ ಪ್ರೇಮದಿಂದ ಕ್ಷೇಮ ಕೊಟ್ಟು ಸಾಮಗಾನಗೈಸು ವಿಷ್ಣು 2 ಅಗ್ರಹಾರಪಾಲಾಧೀಶ ಅಗ್ರಪೂಜೆಗೊಂಬ ಶ್ರೀಶ ಸುಗ್ರೀವನ್ನ ಪೊರೆದ ಉಗ್ರದೈತ್ಯನಾಶ ಹೆಜ್ಜಾಜೀಶ 3
--------------
ಶಾಮಶರ್ಮರು
ಭಕ್ತರ ಭಾಗ್ಯಕೆ ಯೆಣೆಯಂ ನಾ ಕಾಣೆನೀಜಗದಿ ನಿತ್ಯ ಸ್ತುತ್ಯದ ಮಾರ್ಗವತಿವೈಚಿತ್ರ್ಯವು ಪ ನಿತ್ಯ ಕರ್ಮವನಡಸಿ ಗೀತಾಪಾರಾಯಣ ಮಾಡುತ್ತಿಹ 1 ಸುಂದರ ಶ್ಯಾಮನ ಕಂಡಾನಂದದಿ ಮಹಿಮೆಯ ಕೊಂಡಾಡಿ ಹೃದಯದಿ ನೋಡುವ2 ನಡೆವಾಗ ನುಡಿವಾಗ ಮಡದಿ ಮಕ್ಕಳ ಕೂಡಿ ತಮ್ಮೊಡೆಯನ ನೆನೆಯುವ 3 ಹರಿಕಥೆಯಂ ಕೇಳುವರು ಶರಣರ ಕಂಡು ನಮಿಸುವರು ಪರಿ ಸಿರಿಯರಸನಿರುವನೆಂದರಿತ ಮಹಾತ್ಮರ4 ನಗಧರಲೀಲೆಗೆ ನಗುತ ಹಗರಣಹರ ಎಲ್ಲೆಂದಳುತ ಒಗೆದಾಮೋದದಿ ಕುಣಿದಾಡುತ್ತಿಹ 5 ಹೆಜ್ಜಾಜೀಶನು ಕೃಪೆಯಿಂ ಸಜ್ಜನರಂ ಪಾಲಿಸಿದ ಮಜ್ಜನಗೈಯುವ ಪುಣ್ಯ ಚರಿತ್ರರ 6
--------------
ಶಾಮಶರ್ಮರು
ರಾಘವದೇವ ಬಿಡಬೇಡ ಕೈಬಿಡಬೇಡ ಪ ಆಗಮಾರ್ಚಿತ ಪಾದಪದ್ಮಪಿಡಿದೆ ಬಿಡಬೇಡ ಕೈಬಿಡಬೇಡ ಅ.ಪ ಸೀತಾಕಾಂತನೆ ನಿನ್ನ ಭ್ರಾತಲಕ್ಷ್ಮಣನಂತೆ ಪ್ರೀತಿಸುತೆನ್ನ ಸನಾಥನೆನಿಸು 1 ನಂಬಿಬಂದ ವಿಭೀಷಣನನು ಬಲು ಸಂಭ್ರಮದೊಳು ಲಂಕಾರಾಜನ ಗೈದ2 ಹನುಮನಂದದಿ ಸೇವೆಮಾಡಿ ಮೆಚ್ಚಿಸಲಾರೆ ಕನಿಕರದೆನ್ನೊಳು ಘನಮನ ಮಾಡು 3 ದುಷ್ಟಜನಕೆ ಭಯ ಶಿಷ್ಟಜನಕೆ ಜಯ ಕೊಟ್ಟು ಭಕ್ತರಕಾವ ದಿಟ್ಟಹೆಜ್ಜಾಜೀಶ 4
--------------
ಶಾಮಶರ್ಮರು