ಒಟ್ಟು 7 ಕಡೆಗಳಲ್ಲಿ , 2 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಉ) ವಿಶೇಷ ಸಂದರ್ಭದ ಹಾಡುಗಳು 486 (1) ಹೆಜ್ಜಾಜಿಕೇಶವಸುಪ್ರಭಾತ ಏಳಯ್ಯ ಜಾಜಿಪುರೀಶ ಕೇಶವರಾಯ ಬೆಳಗಾಯಿತೇಳಯ್ಯ ಎದ್ದುರುಳಯ್ಯ ಪ ಕೋಟೆ ಚನ್ನಿಗನೆಂದು ಹೆಸರಾದವನೆ ಪೇಟೆ ಚನ್ನಿಗನಾಗಿ ನೆಲೆಸಿರುವವನೆ ಏಳಯ್ಯ ಬೆಳಗಾಯಿತು 1 ಗರುಡ ವಾಹನನಾಗಿ ಕಣ್ಗಾವಲಾಗಿಹನೆ ಕು- ದುರೆ ವಾಹನನಾಗಿ ಊರೆಲ್ಲ ಕಾಯುವನೆ ಏಳಯ್ಯ ಬೆಳಗಾಯಿತು 2 ಶ್ರೀದೇವಿ ಭೂದೇವಿಯರ ನಡುವೆ ಅರಸಾಗಿ ಬಾಧೆಹೊತ್ತಾಜನರ ಹಾರೈಸುತಿರುವನೆ ಏಳಯ್ಯ ಬೆಳಗಾಯಿತು 3 ನಾರದರು ತುಂಬುರರು ದೇವತೆಗಳೆಲ್ಲ ಎ- ದುರಲಿ ನಿಂದು ವಂದಿಸುತಿಹರಲ್ಲ ಏಳಯ್ಯ ಬೆಳಗಾಯಿತು 4 ವಂದಿ ಮಾಗಧರು ಜಯಘೋಷ ಮಾಡುತ್ತ ಮಂದಿ ಮಂದಿಯೆ ನಿಂತು ನುತಿಸುತ್ತಿಹರು ಏಳಯ್ಯ ಬೆಳಗಾಯಿತು 5 ಭಂಟರು ಬಂದು ಮಂಗಳರವದಿಂದ ಗಂಟೆ ಜಾಗಟೆಗಳ ನುಡಿಸುತಲಿಹರು ಏಳಯ್ಯ ಬೆಳಗಾಯಿತು 6 ಮುನ್ನಿನ ರವಿಯು ಉದಯಿಸುತಿರುವನು ಹೊನ್ನಿನ ಕಿರಣಗಳ ಪಸರಿಸುತಿರಿವನು ಏಳಯ್ಯ ಬೆಳಗಾಯಿತು 7 ಬೀದಿಯ ಜನರೆಲ್ಲ ಬೇಗ ಬೇಗನೆ ಎದ್ದು ಹಾದಿಯ ಸಿಂಗರಿಸಿ ಕಾಯುತಲಿರುವರು ಏಳಯ್ಯ ಬೆಳಗಾಯಿತು 8 ಪೇಟೆ ಚೆನ್ನಿಗನ ಕಡೆಯಿಂದ ದಂಡೊಂದು ಭ ರಾಟೆ ವಾದ್ಯಗಳ ನುಡಿಸುತ್ತ ಬರುತಿಹುದು ಏಳಯ್ಯ ಬೆಳಗಾಯಿತು 9 ಕೊಂಬು ಕಹಳೆಗಳ ಊದುವರು ಕೆಲವರು ತುಂಬು ಮಂತ್ರಗಳ ಹೇಳುವರು ವೈಷ್ಣವರು ಏಳಯ್ಯ ಬೆಳಗಾಯಿತು 10 ಸುಮಂಗಲೆಯರು ಕಳಸ ಹೊತ್ತಿಹರು ಸುಮ್ಮಾನದಿ ಭಕುತರು ಕುಣಿಯುತಲಿಹರು ಏಳಯ್ಯ ಬೆಳಗಾಯಿತು 11 ಅಭಯ ಹಸ್ತನೆ ಏಳ ಕಮಲವದನನೆ ಏಳು ಉಭಯ ಜನರುಗಳೆಲ್ಲ ದರುಶನಕೆ ಕಾದಿಹರು ಏಳಯ್ಯ ಬೆಳಗಾಯಿತು 12 ನಿನ್ನ ಭಕ್ತರು ನಿಂತು ಧ್ಯಾನ ಮಾಡುತಲಿಹರು ಎನ್ನರಸ ಜಾಜಿಪುರ ವರದ ಕೇಶವರಾಯ ಏಳಯ್ಯ ಬೆಳಗಾಯಿತು 13
--------------
ನಾರಾಯಣಶರ್ಮರು
ಇಂದೆ ಕುಂದುಗಳನು ಹರಿಸು ಪ ಕಂದನಮುಂದಕೆ ಬರುತಲಿ ಚಂದವಾದ ನಿನ್ನಯ ಮುಖ ಚಂದ್ರಮನಂ ತೋರಿ ನೇತ್ರೇಂದ್ರಿಯಕಾನಂದ ಬೀರೈ ಅ.ಪ ಶ್ರೀವರ ನಿನ್ನ ಭಕ್ತರ ಭಾವಿಸುತ್ತ ತಪ್ಪ ಕ್ಷಮಿಸಿ ನೋವಕೊಡದೆ ರಕ್ಷಿಸುವ ಕೃಪಾಳುವು ನೀನೈ ದೇವಕಿನಂದನ ನಿನ್ನಯ ಪಾವನತರ ಪದಪದ್ಮಕೆ ನಾ ವಿನಯದಿ ನಮಿಸಿ ತಳಿವೆ ಹೆಜ್ಜಾಜಿಕೇಶವಾ ಓ ವಿಭೀಷಣಹಿತಕರ ಸಾವಕಾಶ ಮಾಡದೆ ನೀ ಕಾವುದೆನ್ನ ಸಮಯವರಿತು ಸಾಮಗಾನಸನ್ನುತ 1 ಚಿಟ್ಟೆಸ್ವರಕ್ಕೆ ಭವ ಭಯ ಭಂಗ ವರಭಕ್ತೇಷ್ಟ ದಾತಾರ ದೈತ್ಯಾರಿ ವೈಕುಂಠ ಪುರಹರನುತ ಶುಭಗುಣಯುತ ಪರಮಚರಿತ ನಿರುಪಮಪದ ಕು ವರ ಧ್ರುವನಿಗೊಲಿದ ದ್ವಿಜನ ಪೊರೆದ ಕರುಣಾ ಧರಣೀ ಭರಹರಣಾ ಪಾವನಚರಣ ಜಾಜಿಕೇಳುವ 2
--------------
ಶಾಮಶರ್ಮರು
ದೊರೆಯೆನ್ನನು ಕಾಯೈ ಶ್ರೀಚಕ್ರಪಾಣಿ ಪ ನಿರುತವು ಶರಣೆಂದೆನ್ನುತ ಕೋರುವೆ ಪರಿಯೊಳುಸೇರೇ ಬಂದಿಹೆ ಕರಪಿಡಿ ಅ.ಪ ಆಯುರಾರೋಗ್ಯ ಸುಖಸಂಪದಕೊಡುವ ಸೌಭಾÀಗ್ಯ ಕರ್ತೃವು ಶ್ರೇಯದ ವಿದ್ಯೆಯ ಕರುಣಿಸ ಪ್ರಭೆಯೊಳು ಸನ್ಮಾನವೀವಾ ಧ್ಯೇಯನೇಭತ್ತಿಜ್ಞಾನವೈರಾಗ್ಯವನಿತ್ತುವಿಮುಕ್ತಿಕೊಡುವ ಅ ನ್ಯಾಯದೆ ನಡೆವರ ವ್ಯರ್ಥರಗೈವನು ನೀನೈ ಶ್ರೀಶ್ಯಾಮಸುಂದರ 1 ಮನ್ನರೋಗಕ್ಕೆ ನಿನ್ನ ಪಾದತೀರ್ಥ ಔಷಧವು ಬೇಡ ಉನ್ನತ ಭಯಕ್ಕೆ ಸುದರ್ಶನ ಸ್ಮರಣೆ ಮಂತ್ರವೇತಕ್ಕೆ ಇನ್ನಿತರ ಕಷ್ಟಗಳಿಗೆಲ್ಲ ನಿನ್ನ ನಾಮಮಂತ್ರ ಭಜನ ಚೆನ್ನಪಾದಕೃಪೆ ಇನ್ನೊದಗಿಹುದೈ ನಾಂ ನಿತ್ಯಸಂತೊಷಿ 2 ನಿರಾಯಾಸದಿಂ ದಾಸಗಂತ್ಯದಲಿ ಪ್ರಶಾಂತನಾಗಿ ಹರಿನಾರಾಯಣ ನಾರಾಯಣಯೆಂದು ಕರೆವಂತೆ ಮಾಡಿ ಹರುಷದಿ ನೋಹರಾಕಾರವ ತೋರಿ ವೈಕುಂಠಕೆನ್ನನು ಕರುಣದಿ ಕರೆದೊಯ್ ಅಜಪೂಜಿತ ಹೆಜ್ಜಾಜಿಕೇಶವ 3
--------------
ಶಾಮಶರ್ಮರು
ನಾರಾಯಣ ನಿನ್ನ ಚರಣ ಸೇವೆಯ ಬಿಟ್ಟು ಸಾರಸಾಕ್ಷನೆ ಪ್ರಾಣದಿರಲಾರೆ ಕ್ಷಣವೂ ಪ ದಾರಿಯೆನಗಿದೊಂದೇ ತೊರ್ಪದು ಸುಖನಿಧಿ ಬಾರಿಬಾರಿಗೂ ಹರಿ ದ್ಯಾನಾನಂದದೊಳಿಗೆ ಅ.ಪ ಅನ್ನವಸ್ತ್ರಂಗಳಿಗಾಗಿ ದುಡಿವದೊಂದು ಚೆನ್ನ ಪುತ್ರರ ರಕ್ಷಣೆಯೊಂದೆಡೆ ತನ್ನ ಮರ್ಯಾದೆ ಕುಂದುಗಳೆಂಬೊ ವ್ಯಸನದಿ ಭಿನ್ನಿಸಿ ತಾಪತ್ರಯ ಪಡುತಿರುವಿಲ್ಲಿ 1 ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ ಪ್ರೇಮ ಬಾಂಧವರಾಗೆನ್ನನಪ್ಪಿಹರೋ ಸ್ವಾಮಿ ನೀಯೆನ್ನನವರ ಧಾಳಿಗಿಡದಂತೆ ಸಾಮಜವರದ ಸಲಹೆಂದು ಸಂತೋಷದಿ 2 ಭಾಗೀರತಿಪಿತ ಭಾಗವತಪ್ರೀತ ಯೋಗಿಜನಂಗಳೊಳತಿ ಹಿತನೇ ಸಾಗರಶಯನನೆ ಭೋಗಿಗಳ ಪುಣ್ಯನೆ ಬಾಗುವ ಶರಣರ ಬಹುಭಾಗ್ಯನೇ 3 ನಾನಿಲ್ಲಿಗೆ ಬಂದ ಕಾರಣ ಕಾಣೆನೋ ದೀನಪಾಲಕ ಕಾರ್ಯಮಾಡಿಸೋಯನ್ನಿಂ ಏನಾದರು ಮಾಡು ತಪ್ಪಹೊರಿಸಬೇಡ ಶ್ರೀನಿಧಿ ಹೆಜ್ಜಾಜಿಕೇಶವ ಪಾಲಿಸು 4
--------------
ಶಾಮಶರ್ಮರು
ಬಡತನವೆನ್ನನು ಬಾಧಿಪುದೈ ಹರಿ ನುಡಿಯಲೆನಗೆ ನಾಲಗೆ ಬರದೀಪರಿಪ ಅಡಿಯೊಳು ಕೆಡೆದಿಹೆ ತಡಿಗಾಣದೆಯೆ ಕಡಲಣುಗಿಗೊರೆದು ಕಡೆಹಾಯಿಸೊ ದೊರೆ ಅ.ಪ ಮನುಜರು ಯೆನ್ನನು ಮಾನಿಸದಿರುವರು ಮನೆಯೊಳು ಮಕ್ಕಳು ಮಾತನಾಲಿಸರು ಅನುನಯದಿಂ ಸವಿ ವಚನವನುಸುರಲು ವನಿತೆಯುತಾಂ ಕೇಳದೆ ಕೋಪಿಪಳು 1 ಬಂದ ಭಾಗವತರ ಪೂಜೆಯ ಮಾಡಲು ಒಂದಾದರು ಸವಿ ವಸ್ತುವಿಲ್ಲವೈ ಸಂದಣಿ ಸೇರಲು ಮನಸು ಬಾರದು ಕುಂದಹರಿಸು ಮನಕಂಕೆಯ ತಂದು 2 ದಾನವ ಮಾಡಲು ದೀನತೆ ಬಿಡದು ಕಾನನದಿರುತಿಹ ಕುರುಡನಂತಿಹೆನೆ ಏನು ಮಾಡಲೊ ಯೆನ್ನ ಮನದೊಲುಮೆಯ ಬಲ್ಲ ಸಿರಿನಲ್ಲ 3 ಸಾಲದವರು ಗಂಟಲೊಳು ಕೋಲಿಡುವರೊ ಶ್ರೀಲೊಲನೆ ನಾಂ ಮಾಡುವುದೇನು ಲಾಲಿಸಿ ಹೆಜ್ಜಾಜಿಕೇಶವ ಪಾಲಿಸು ಲೀಲೆಯಿಂ ಬಿನ್ನೈಸಿ ಯನ್ನೊಲಿಸು 4
--------------
ಶಾಮಶರ್ಮರು
ವಿಶಿಷ್ಟಾದ್ವೈತ ಮತವೇ ಮತವು ಪ ವಿಷ್ಣು ಪದವೇ ಶಾಶ್ವತ ಪದವು ಅ.ಪ ವಸಿಷ್ಠ ನಾರದ ಸನಕಾದಿ ವಂದ್ಯರ ವಿಶಿಷ್ಟ ಪರಿಗ್ರಹ ವೇದಾಂತ ಸಾರದ 1 ಅಸೇತುಹಿಮಾಚಲ ವಿಶೇಷದ ವಿಶೇಷ ಪ್ರಮಾಣ ಚತುಷ್ಟಯದ 2 ಚಿತ್ತು ಅಚಿತ್ತೀಶ್ವರ ತತ್ತ್ವವನು ಪ್ರತ್ಯೇಕವಾಗಿಯೇ ಬೋಧಿಸಿಹ 3 ಪರ ವ್ಯೂಹ ವಿಭವಾಂತರ ಅರ್ಚಾ ಪರಿಪರಿರೂಪದ ಶ್ರೀಹರಿ ಪೂಜನ 4 ರಹಸ್ಯತ್ರಯ ಮಂತ್ರ ವಿಶಿಷ್ಟದ ಸಹಮತ ಸುಲಭೋಪಾಯವಿಧಾನದ 5 ಅಜ ಸುರರೆಲ್ಲರು ಹರಿಮತ ಹರಿಯೊಬ್ಬನ ಪಾದವೆ ಮೋಕ್ಷಪÀಥ 6 ಪ್ರಧಾನ ಧರ್ಮದ ಉಪವೃತ್ತಿಯ ಬೇಡದ ಶರಣಾಗತಿಯ 7 ಸತತವು ಹೆಜ್ಜಾಜಿಕೇಶವನಾಮ ನುತಿಸಿದವನ ಭವಬಂಧನ ಬಿಡಿಸುವ 8
--------------
ನಾರಾಯಣಶರ್ಮರು
ಹಸಿದು ನಾ ಬಳಲಲೇಕೋ ಈಸಮಯದಲ್ಲಿ ಬಿಸಿಯೂಟ ಮಾಡುವೆನು ಪ ಹಸನಾದ ಶೇಷಶಯನ ನಾಮದಡುಗೆಯು ವಸುಮತೀಧವ ನಾಮರಸಾಯನವಿರೆ ಅ.ಪ ಹರಿ ಹರಿ ಪರಮಾನ್ನವು ದುರಿತಾರಿ ಶೌರಿ ಕರಿಗಡುಬು ಗರುಗೊಬ್ಬಟ್ಟು ನರಸಿಂಹ ವಾಮನ ಅಂಬೊಡೆ ಹೂರಿಗೆಗಳು ಕರಿವರದ ರವೆಯುಂಡೆ ಸಜ್ಜಿಗೆಯಿರಲು 1 ದುಷ್ಟಮರ್ದನನೆನ್ನುವ ಇಷ್ಟವಾದ ಹುಳಿಸಾರು ಮೊಸರುಗಳು ವಾಸುದೇವ ಸಣ್ಣಕ್ಕಿಯನ್ನವು ಮಾಧವ ಬೆಣ್ಣೆಕಾಯ್ಸಿದ ತುಪ್ಪವಿದೆ 2 ನಾರಾಯಣನೆನ್ನುವ ಸಾರವಾದ ಹುಳಿಯನ್ನ ಮೊಸರನ್ನವು ಸಾರಸಾಕ್ಷ ಶ್ರೀಶ ಕ್ಷೀರ ಸಕ್ಕರೆಯಿದ್ದು ಮಾರಜನಕನೆಂಬ ಹಪ್ಳಳುಪ್ಪಿನಕಾಯಿರೆ3 ಪರಿಪರಿಯನ್ನಗಳು ಸರಿಯಾಗಿ ಭಕ್ಷ್ಯ ಕರಿದೆಡೆ ಮಾಡಿರಲು ಅರಿತು ಸವಿಯನೋಡಿ ಮರೆಯದೆ ಭುಂಜಿಸಿ ನಿರುತ ನಿಜಾನಂದ ಪಡೆಯದೆ ಬರಿದೆ 4 ಗೋಪಾಲನೆಂದೆಂಬೊ ಸೀಪಿನ ಎಳನೀರು ಸೀ ಪಾನಕವಿಹುವು ತಾಪತ್ರಯಹರ ಹೆಜ್ಜಾಜಿಕೇಶವ ಆಪದುದ್ಧಾರಕನೆಂಬಮೃತವುಣದೆ 5
--------------
ಶಾಮಶರ್ಮರು