ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉದರ ಪೂರ್ತಿಯ ಕೊಡದಿರು ಉದಧಿಶಯನ ಪ ಮುದದಿ ನಿನ್ನನು ನೆನೆದು ಮಲಗುವೆನೊ ಸುಖದಿ ಅ.ಪ ಮುದದಿ ನಿನ್ನ ಚರಣವನು ಸ್ಮರಿಸುವುದು | ಪರಿಹಾರವು ಬಹು ಗರ್ವ ಹೆಚ್ಚುವುದು ಎನಗೆ | ಅರವಿಂದನಾಭ ಹರಿ ವರವಿದೆ ನಿನ್ನ ಕೇಳ್ವೆ | ಪರಿಹಾಸ್ಯ ನುಡಿಯಲ್ಲ ಪರಮ ಪಾವನಗೆ 1 ತನುಮನವು ನಿನ್ನ ವಿಷಯಕ್ಕೆರಗಲಿ | ಅನುಮಾನವಿದ್ದ ಪರಿಯೆಲ್ಲ ತೊಲಗಿ || ವನಜಸಂಭವನೈಯ್ಯ ವೈಕುಂಠಪತಿ ನಿನಗೆ | ಅನವರತ ದೊರೆ ಎಂಬೊ | ಘನತೆ ತಪ್ಪದೆ ಇರಲಿ2 ಗಜಮದದಿ ಕಂಗೆಟ್ಟ ಪರಿಯನ್ನ ಮಾಡದೇ | ಅಜಮಿಳಗೆ ಒಲಿದಂತೆ ಎನಗೆ ವೊಲಿದೂ || ಸುಜನ ರಕ್ಷಕನೆಂಬೊ ಬಿರುದು ಬೇಕಾದರೆ | ನಿಜವಾಗಿ ದಯಮಾಡೊ ವಿಜಯವಿಠ್ಠಲನೇ3
--------------
ವಿಜಯದಾಸ
ಪತಿ ಪೋದನೆಂದು ಶೋಕಿಸುವುದ್ಯಾಕೆ ಶ್ರೀ - ಪತಿಯು ಇರಲಾಗಿ ಮರುಳೆ ಪ ಪ್ರತಿ ಪ್ರತಿ ಜನ್ಮದಿ ಜತೆ ಮಾಡಿದ ಪಂಚ - ಕಾಯ ಸತ್ಯ ಸ್ಥಿರವಲ್ಲವೇ ಮರುಳೆ ಅ.ಪ ನೋತ ಪುಣ್ಯಾಪುಣ್ಯದ ಫಲ ವ್ರಾತ ಸುಖ ಸುಖವಿತ್ತು ಬರಿದಾಗುವುದು ನಿತ್ಯವಾಗಿ ಸುಖವೆ ಇರಲೆಂದು ಬೇಡಿದರೆ ವ್ಯರ್ಥಧಾವತೆ ಅಲ್ಲದೆ ಸಾರ್ಥಕೆಲ್ಲಿ ಮರುಳೆ 1 ಸೃಷ್ಟಿಯಲಿ ಎಲ್ಲರೂ ನಷ್ಟವಾಗುವರಲ್ಲದೆ ಶ್ರೇಷ್ಠರಾಗಿ ಬಾಳುವರೊಬ್ಬರಿಲ್ಲ ಎಷ್ಟು ಶೋಕಿಸಿದರು ಪೋದ ಕಾಷ್ಠ ಬರಲರಿಯದು ಎ- ಳ್ಳಷ್ಟು ಲಾಭ ಇದರಿಂದ ಇಲ್ಲ ಮರುಳೆ2 ಮುಟ್ಟಿ ಕಟ್ಟಿದ ತಾಳಿಯ ಸಂಬಂಧ ಕೊಟ್ಟ ಹರಿ ತಾ ತಟ್ಟನೆ ಒಯ್ದ ಮೇಲೆ ದುಷ್ಟವೆನ್ನದಲೆ ಇಷ್ಟವೆಂದೆಣಿಸಲು ಸೃಷ್ಟಿಪತಿಯು ತುಷ್ಟನಾಗುವ ಮರುಳೆ 3 ಸರಿಯಲ್ಲಾ ಬರಿದೆ ಚಿಂತಿಸುವುದು ನಿನಗೆ ಕರೆಕರೆಯು ಹೆಚ್ಚುವುದು ಮುಂದೆ ಬಹಳ ಹರಿಕಥೆಯ ಕೇಳು ಹರಿದಾಸರೊಳ್ ಬೀಳು ಹರಿಗೆ ಪೇಳು ನಿನ್ನಯ ಗೋಳು 4 ಇನ್ನಾದರೂ ನೀನು ಹರಿಯ ಸಂಕಲ್ಪವಿದೆಂದು ನಿನ್ನ ಮನದೊಳು ತಿಳಿದುಕೊಂಡು ಘನ್ನ ಮಹಿಮಾ ವಿಜಯ ರಾಮಚಂದ್ರವಿಠಲನ್ನ ಸನ್ನುತಿಸಲು ಮುನ್ನೆ ಹತಿಯಾಗುವುದು ಮರುಳೆ 5
--------------
ವಿಜಯ ರಾಮಚಂದ್ರವಿಠಲ
ವಿಜಯವಿಠ್ಠಲ ನಾಮ ಭಜಿಸಿದಾ ಮಾನವಗೆ ಸತತ ಸಂಪದವಕ್ಕು ಪ ಕಾಯ ಶುಚಿಯಾಗುವದು ಕಠಿನತನ ಪೋಗುವದು ಆಯು ಹೆಚ್ಚುವುದು ನಿಯೋಗಿ ಯಾಹಾ ನಾಯಿ ಮೊದಲಾದ ಪ್ರಾರಬ್ಧ ಜನುಮಗಳಿರಲು ಬಾಯಿಲಿಂದಾಕ್ಷಣ ತೀರಿ ಪೋಪವು ಕೇಳಿ 1 ದ್ವೇಷಿಗಳು ಎಲ್ಲ ಬಾಂಧವರಾಗಿ ಇಪ್ಪರು ದ್ವೇಷ ಪುಟ್ಟದು ತನಗೇತರ ಮೇಲೆ ದೇಶ ಮಧ್ಯದಲಿ ತಾನೆ ಎಲ್ಲಿ ಇದ್ದರೂ ಕೋಶಾಧಿಪತಿಯಾಗಿ ಸಂಚರಿಸುತಿಪ್ಪರು2 ಹೀನ ವಿಷಯಂಗಳಿಗೆ ಅವನ ಮನವೆರಗಿದರೆ ಕಾಣಿಸುವನು ತಾನೆ ಮುಂದೊಲಿದು ಏನು ಹೇಳಲಿ ಹರಿಯ ಅನುಕಂಪನಾತನಕೆ ಕಾಲ ಕಡೆಗಾಣನು 3 ದೇವಾದಿ ಮುನಿತತಿಯ ಮೊದಲಾದವರು ನೆನೆದು ಆವಾವ ಸೌಖ್ಯದಲಿ ಇಪ್ಪರದಕೋ ಭಾವದಲಿ ತಿಳಿದು ಭಕುತಿಯ ಮಾಡಿರೋ ಜನರು ಕಾವುತಲಿಪ್ಪ ಸರ್ವಾಶ್ರಯನಾಗಿ ಹರಿ4 ಕಂಡವಗೆ ದೊರಕದು ಈ ನಾಮ ಜಪಿಸಿದರು ಕಂಡವಗೆ ಬಲು ಸುಲಭ ಭಯವೆಯಿಲ್ಲಾ ಮಂಡಲವ ಚರಿಸಿ ನಾನಾ ವ್ರತ ಮಾಡದಿರಿ ಕೊಂಡಾಡು ವಿಜಯವಿಠ್ಠಲನ ಆಸರ ಸೇರಿ5
--------------
ವಿಜಯದಾಸ
ಸಂಗಬೇಡವೈ ಆಶಾ ಪ ಸಂಗದಿಂದ ನಿನಗೆ ಅಂಗವೇ ಭಂಗವಾಹುದೈ ಅ.ಪ ಇದ್ದ ಕಡೆ ಇರಲೀಸದು | ಅ ಶುದ್ಧ ಮನುಜನಾದರೆಯು ಅ - ವಿದ್ಯದಿ ಮುಳುಗಿಸುವುದು 1 ನೋಡಿದುದು ಬಯಸುವುದು | ಬಲು ಮೋಡಿಯಿಂ ತಿರುಗಿಸುವುದು ಮಾಡಿಸಿ ಮಾಡಿಸಿ ದಣಿಸುವುದು 2 ಹಣವಿದ್ದರು ಕಳೆವುದು | ದುರ್ ಮನದಿ ಸಾಲ ಮಾಡಿಸುವುದು ಗುಣಿಯಲಿ ದುರ್ಗುಣವೇ ಕಾಣಿಸಿ ಹೆಣಕೆ ಸಮವೆಂದೆನಿಸುವುದು 3 ಬೋಧೆಯ ಕೇಳಲೀಯದು | ಮನೋ ವ್ಯಾಧಿಯಲ್ಲಿ ಕೃಶಿಸುವುದು ಹಾದಿ ಹೋಕರ ಕಂಡವರಂತೆ ಸಾಧನವ ಮಾಡಿಸುವುದು 4 ಅನ್ನಬಾರದನ್ನಿಸುವುದು ತಿನ್ನಬಾರದ್ದು ತಿನ್ನಿಸುವುದು ನನ್ನದೂ ನಾನೆಂಬ ಗರ್ವದಿ ಇನ್ನೂ ಮುನ್ನೆ ಕೆಡಿಸುವುದು 5 ಆಗೋ ಕಾರ್ಯ ಮಾಡಲೀಯದು ಹೋಗದೂರಿಗೇ ಹೊರಡಿಸುವುದು ಭೋಗಗಳೊಳಪೇಕ್ಷೆ ಪುಟ್ಟಿಸಿ ರೋಗದಿ ಬಳಲಿಸುವುದು 6 ಕೋಪಾದಿಗಳು ಹೆಚ್ಚುವುದು ಪಾಪಬುದ್ದಿ ಪುಟ್ಟುವುದು ಶರಣರಿಗಿದು ಸಲ್ಲದು 7
--------------
ಗುರುರಾಮವಿಠಲ
ಶ್ರೀ ಆಂಗೀರಸ ನಾಮ ಸಂವತ್ಸರ ಸ್ತೋತ್ರ149ಶ್ರೀ ಲಕ್ಷ್ಮೀ ಭೂಮಾ ನೃಸಿಂಹನ್ನ ಆರಾಧಿಸಿಶೀಲ ಉದ್ಭಕ್ತಿಯಲಿ ಸ್ತುತಿಸುವ ಶನೈಶ್ಚರಇಳೆಯಲ್ಲಿ ವಿಂಧ್ಯಾಚಲ ದಕ್ಷಿಣ ದೇಶದಲಿ ಹೊಳೆಯುತಿಹÀರಾಜನಾಗಿ ಆಂಗೀರಸ ಸಂವತ್ಸರದಿ ತಂ ನಮೋ ಪಸೂರ್ಯಛಾಯಾಸೂನುಸೂರಿಸಾಧುಗಳಿಗೆಕಾರ್ಯಾನುಕೂಲ ಸರ್ವೇಷ್ಟ ಪೂರೈಸುವನುಕ್ರಿಯಾ ರೂಪದಿ ವಿಷ್ಣುವರವಾಯು ದೇವನೊಳು ಇರುತಸಂವತ್ಸರ ನಾಯಕರೋಳು ಕ್ರಿಯೆಗಳ ಮಾಡಿಸುವ 1ನರಹರಿಯ ಒಲುಮೆ ಶನಿರಾಜನಲಿ ಬಹು ಉಂಟುನರಕ್ಷೇಮೋಪಾಯ ಅಂದು ದಶರಥಗೆ ಪೇಳಿದ ಪಾದ್ಮದಿಹರಿನಾಮೋಚ್ಛಾರಣೆ, ಶನಿಕೃತ ನೃಹರಿ ಸ್ತೋತ್ರ ಪಠಣದಿಪಾರುಗಾಣುವರು ಸಾಧು ಸಜ್ಜನ ಭಕ್ತರು 2ಅನಂದಮಯ ಹರಿಯು ಆಂಗೀರಸ ಸಂವತ್ಸರದಿಜನರಿಗೆ ಯೋಗ್ಯತಾನುಸಾರ ಸುಖವನ್ನೇಈವಜನರಿಗೆ ಆದಿಯಲಿ ಸುಕ್ಷೇಮ ಕಾಲವು ಕಥೆಯಲ್ಲಿ ದುರ್ಭಿಕ್ಷನೂತನ ವಸ್ತು ಉತ್ಪತ್ತಿ, ಧಾನ್ಯಾದಿಗಳು ಸಮೃದ್ಧಿ ಇದ್ದರೂ ಕ್ಷಾಮ 3ಬ್ರಹ್ಮಪಾರ ಸ್ತೋತ್ರವ ಕಂಡು ಋಷಿಗೆ ಉಪದೇಶಿಸಿದಬ್ರಾಹ್ಮಣೌಷಧಿ ಪತಿಯು ಸುಧಾಮೂರ್ತಿ ಚಂದ್ರಮಹಿಗೆ ಅಹ್ಲಾದವ ನೀವನು ಮಂತ್ರಿಸ್ಥಾನವ ವಹಿಸಿಅಜಸ್ಪತಿ, ಬೃಹಸ್ಪತಿ, ಶನಿಕುಜಗೋಪಾಲಸರ್ವರಿಗೂ ನಮೋ ನಮೋ 4ರಸನೆ ಲೋಲ್ಯಾಟವಾಹನಆಟೋಪ ಹೆಚ್ಚಿದರೂರಸನೆ ಸಹ ಭಕ್ತಿಯೂ ಸಹ ಹೆಚ್ಚುವುದು ಮದುವೆ ಜನನ ಕಡಿಮೆಶಾಸ್ತ್ರ, ವಿಜ್ಞಾನ, ವಿಷ್ಣು ಸಹಸ್ರನಾಮ ಪ್ರತಿಪಾದ್ಯಸರಸಿಜಾನನತಾತಪ್ರಸನ್ನ ಶ್ರೀನಿವಾಸನಲಿ ಶರಣು ಶರಣಾದೆ5ಶ್ರೀ ಲಕ್ಷ್ಮೀ ಭೂಮಾ ನೃಸಿಂಹನ್ನ ಆರಾಧಿಸಿಶೀಲ ಉದ್ಭಕ್ತಿಯಲಿ ಸ್ತುತಿಸುವ ಶನೈಶ್ಚರಇಳೆಯಲ್ಲಿ ವಿಂಧ್ಯಾಚಲ ದಕ್ಷಿಣ ದೇಶದಲಿ ಹೊಳೆಯುತಿಹರಾಜನಾಗಿ ಆಂಗೀರಸ ಸಂವತ್ಸರದಿ ತಂ ನಮೋ ಪ
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ವಿಷ್ಣು ಸ್ಮರಣೆಯಿಂ ಸಾಧು ಸಂಸರ್ಗಶ್ರೀ ವಿಷ್ಣು ಸ್ಮರಣೆಯೆಂಬುದೆಅಪವರ್ಗಶ್ರೀ ವಿಷ್ಣು ಸ್ಮರಣೆಲಿ ಸದ್ಬುದ್ಧಿ ದೀರ್ಘಶ್ರೀ ವಿಷ್ಣು ಸ್ಮರಣೆಗೆಚ್ಚರ ಬುಧವರ್ಗ ಪ.ಶೀತಲವಾಯ್ತುಹಾಲಾಹಲಹರಗೆಮಾತೆ ದ್ರೌಪದಿ ಲಜ್ಜೆ ಕಾಯಿತು ಮರುಗೆಪಾತಕಿಅಜಾಮಿಳನ ಪಾಪವು ಕರಗೆಪೂತರಾಗ್ವರು ಸುಜನರು ಒಳಹೊರಗೆ 1ಸಿರಿಅರ್ಥ ಮಾಡಲಚ್ಚರವಾದ ಸ್ಮರಣೆಪರಸೋದ್ವಾಪರಿಯೆಂಬುವ ಗುಹ್ಯಸ್ಮರಣೆವಿರಿಂಚಿಗೆ ತೃಪ್ತಿಯಾಗದ ನಾಮಸ್ಮರಣೆಉರಗೇಶನ ಜಿಹ್ವೆಗೆ ನಿಲುಕದ ಸ್ಮರಣೆ 2ತ್ಯಾಗಭೋಗಯೋಗ ಛಿದ್ರ ಮುಚ್ಚುವುದುಭೂಗಗನಸ್ಥರ ಪುಣ್ಯ ಹೆಚ್ಚುವುದುಕೂಗ್ಯಾಡಿ ಕುಣಿವರಾನಂದ ಫಲವಿದುಶ್ರೀ ಗಂಗಾಜನಕನ ತಂದು ತೋರುವುದು 3ಭೂಪ್ರದಕ್ಷಿಣೆ ತೀರ್ಥಯಾತ್ರೆಗೆ ಮಿಗಿಲು ಅಸಂಪ್ರಜ್ಞಾತಸ್ಥರಿಗೆ ಹರಿಗೋಲುಸುಪ್ರಾಪ್ತ ಮುಕ್ತರುಂಬಮೃತ ಕಣಗಳುಶ್ರೀ ಪ್ರಾಣನಾಥನ ನಾಮಾವಳಿಗಳು 4ಸ್ವಾದನ್ನದೊಟ್ಟಿಲು ಹರಿನಾಮಸ್ಮರಣೆಮಧ್ವಶಾಸ್ತ್ರಜÕರ ವಚನಾಗ್ನಿಗೆ ಅರಣಿಅದ್ವೈತಮತಧ್ವಾಂತಕ್ಕುದಿತ ಸತ್ತರಣಿ ಶ್ರೀಮದ್ವಿಷ್ಣು ಪ್ರಸನ್ವೆಂಕಟನ ಸ್ಮರಣೆ 5
--------------
ಪ್ರಸನ್ನವೆಂಕಟದಾಸರು