ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದು ಪನ್ನಗಶಯನ ಪ ಚೆನ್ನ ಪಾದಂಗಳಲಿ ಚಿನ್ನದಾ ಕಡಗರುಳಿಹನ್ನೆರಡು ನಿರುಗೆಗಳ ಹೊನ್ನ ಪೀತಾಂಬರಕೆರನ್ನಮಯದೊಡ್ಯಾಣವನ್ನು ಸುತ್ತಿದ ನಡುವುಚನ್ನ ಪದಗಳ ಮುಟ್ಟುವನ್ನಕ್ಕ ವನಮಾಲೆ 1 ನನ್ನೀಯಿಂದೆಸೆವ ಕಂಪನ್ನ ಕೌಸ್ತುಭದೆದೆಯುಕನ್ನಿಕೆಯು ಲಕ್ಷುಮಿಯ ಚಿಹ್ನ ಧರಿಸಿದ ವಕ್ಷಘನ್ನ ಚಕ್ಕರ ಶಂಖ ಸನ್ನೆ ಕೌಮೋದಕಿಯುಕನ್ನೈದಿಲೆಯ ವಿಡಿದ ಇನ್ನಂತು ನಾಲ್ಕೈಯು 2 ಪನ್ನೀರು ಬೆರೆತು ಬಾವನ್ನ ಕಂಪಿನ ಮೈಯುಬೆನ್ನಗಲ ಹೆಗಲು ದುಂಡನ್ನ ತೊಳಗುವ ಕೊರಳುಕನ್ನವುರ ಕುಂಡಲಂಗಳನ್ನು ಧರಿಸಿದ ಕಿವಿಯುಜೊನ್ನ ಪಸರಿಪ ನಗೆಯ ಮನ್ನಿಸುವ ಕೆಂದುಟಿಯು 3 ಮುನ್ನೂರು ಕೋಟಿ ರವಿ ಸನ್ನಿಭದ ಚೆಲ್ವ ಮೊಗಕನ್ನೀಲ ಕಣ್ಣು ಚಂದನ್ನ ಎಳಸಿನ ಮೂಗುಉನ್ನತದ ಹಣೆಮೇಲೆ ಸೊನ್ನಿ ಕತ್ತುರಿ ತಿಲಕಸೊನ್ನ ಮುಕುಟವ ಧರಿಸಲಿನ್ನುಳಿದ ಕರಿಗುರುಳು 4 ಮಾನವ ನಾನು ಇನ್ನೆಂತು ಬಣ್ಣಿಸುವೆನಿನ್ನ ಕೃಪೆಯಿಲ್ಲದಿದನೆನ್ನಲಪ್ಪುದೆ ದೇವಚನ್ನ ಗದುಗಿನ ವೀರನಾರಾಯಣನೆ ಮಣಿವೆ 5
--------------
ವೀರನಾರಾಯಣ
ಕೊಳಲನೂದುವ ನಮ್ಮ ಚಲುವ ಕೃಷ್ಣಯ್ಯ ನಳಿನಾಕ್ಷಿಯರ ಮಧ್ಯೆ ಪೊಳೆವ ರಂಗಯ್ಯ ಪ. ಕರದ್ವಯದಲಿ ಶಂಖ ಚಕ್ರಪಿಡಿದಿಹ ಕಿರುನಗೆ ನಗುತ ಸುಲಿಪಲ್ಲಿನ ಚಲುವ ಸ್ವರಗಳ ಪಿಡಿಯುತ ವೇಣು ನುಡಿಸುವ ಸರಸಿಜನಾಭ ಹೃನ್ಮಂದಿರದಿ ಮೆರೆವ 1 ಜಗವ ಮೋಹಿಸುವಂಥ ನಗೆಯ ಮೊಗ ಚೆಲುವ ಹೆಗಲು ಎಡದಲ್ಲಿ ಗಲ್ಲ ತಗುಲಿಸಿ ಇರುವ ಸತಿ ಹೆಗಲಲಿ ಇಡುವ ನಗಧರ ನರ್ತನವಾಡಿ ಮುದವೀವ 2 ಕಾಲಕಡಗ ಗೆಜ್ಜೆ ಪಾಡಗರುಳಿಯು ಮೇಲೆ ಪೀತಾಂಬರ ಜರಿಯ ವೈಭವವು ಸಾಲ ಮುತ್ತಿನಹಾರ ಪದಕದ್ವಜ್ರಗಳು ಓಲಾಡುವ ನೀಲಾಂಬರ ಹೊದ್ದಿಹ ಒಲಪು 3 ಕಂಠ ಕೌಸ್ತುಭಮಣಿ ಅಧರದ ಕೆಂಪು ಕರ್ಣ ಕದಪು ಕನ್ನಡಿಯು ಬಂಟರಾದವರನ್ನು ಪೊರೆಯುವ ದೃಷ್ಟಿ ವೈ - ನಾಸಿಕ ಫಣೆಯ ತಿಲುಕವು 4 ಶ್ರೀಪತಿ ಮುಂಗುರುಳು ಶಿರದಲ್ಲಿ ಮಕುಟ ಪಾಪವ ದಹಿಸುವ ಪಾವನ ವೇಣು ಆಪಾದ ಮೌಳಿಯ ರೂಪದ ಚಲುವ ಗೋಪಾಲಕೃಷ್ಣವಿಠ್ಠಲ ಎನ್ನ ಕಾವ 5
--------------
ಅಂಬಾಬಾಯಿ
ಭಕ್ತವತ್ಸಲಭಯನಿವಾರಣ ಭಾಗವತರ ಪ್ರಿಯ ನಿತ್ಯತೃಪ್ತನೆ ನೀರಜನಯನ ಸತ್ಯಭಾಮೆಪತಿ ಸರಸಿಜವದನ ಪ ಮಂಗಳ ಚರಣದಿ ಗಂಗೆಯ ಪಡೆದ ಭು- ಜಂಗನ ತುಳಿದ ಪದಾಂಬುಜಕೆ ನಮೊ1 ವಿನತೆಸುತನ ಹೆಗಲು ಘಮಿಕಿಲಿಂದೇರಿಪ ಕಣಕಾಲಂದಿಗೆಮಣಿಕಾಲಿಗೆ ನಮೊ 2 ಉಟ್ಟ ಪೀತಾಂಬರ ಕಟ್ಟಿದ ಉಡಿದಾ- ತ್ರಿಜಗ ಊರ್ಹೊಟ್ಟೆಗೆ ನಮೊ 3 ನಾಲ್ಕುಮುಖದ ಅಜನಂದನರುದಿಸಿದ ನಾರಾಯಣ ನಾಭಿಕಮಲಕ್ಕೆ ನಮೊ 4 ಕರ್ಣಕುಂಡಲವು ಕಪೋಲದಲ್ಹೊಳೆಯುತ ಸಣ್ಣ ನಾಮದರವಿಂದನೇತ್ರಕೆ ನಮೊ5 ವರ ಶಂಖಚಕ್ರದ ಕರಕÀಮಲಕೆ ನಮೊ 6 ನಾಸಿಕ ಚೆಲುವ ಪ್ರಕಾಶ ಕಿರೀಟ ಭೀ- ಮೇಶಕೃಷ್ಣನ ಮುಖಪದ್ಮಕೆ ನಮೊ 7
--------------
ಹರಪನಹಳ್ಳಿಭೀಮವ್ವ