ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಿಗಣೆಯ ಕಾಟವೇ ಕಾಟ-ಚಲ್ವ-ಸುಗುಣೆಯ ಕೂಟವೇ ಕೂಟಪ ಹಗಲಿರುಳೆನ್ನದೆ ಬಗೆಬಗೆ ರತಿಯೊಳು- ಸೊಗಯಿಸಿದೇಹಧಾತುಗಳನು ಕೆಡಿಸುವ ಅ.ಪ. ನಿಶಿಯೊಳಗನುದಿನ ಬಾಧಿಪ 1 ಹಾಸಿಗೆ ಮಂಚಾದಿಗಳಲಿ ಶರೀರದ ನಾಡಿಯನಿಲ್ಲಿಸುವ 2 ಸದ್ದಡಗಲು ಜತೆಗೂಡುತ-ಸುಖ-ನಿದ್ರೆಯ ಸಮಯವನೊಡುತ ನಮ್ಮ ನೊದ್ದಾಡಿಸುತಿಹ 3 ಹೆಗಲಿನ ಮೂಲದೊಳೇರಿ-ನಮ್ಮಬಗಲಿನ ಸಂದಿಗೆ ಸೇರಿ ಬೇಗದಿನುಗುಳಿಕದ್ದೋಡುವ 4 ಚಿಗಟದ ಹಿಂದೊಡಗೂಡಿ-ನಮ್ಮ-ತೊಗಟೆ ರಕ್ತದ ಸವಿನೋಡಿ ಬುಗುಟಿದ್ದಗಾಯವ ವಿಗಟವಮಾಡುವ 5 ನೋಟಕ ನೀನಾಗ ಬಹುದೆ-ಕಪಟ-ನಾಟಕಧಾರನೆ ಬರಿದೆ ನಿಶಾಟದಲ್ಲಣ ನಿನ್ನಕೂಟದ ಜನರಿಗೆ 6 ದುರಿತ ಕೋಲಾಹಲನೆಂದೆ-ನಿನ್ನ ಬಿರುದನು ಪೊಗಳುತ ನಿಂದೆ ಧರೆಯೊಳುತ್ತಮ-ಪುಲಿಗಿರಿಯೊಳು ನೆಲಸಿಹವರದವಿಠಲ ನಿನ್ನ ಶರಣರಾದವರಿಗೆ 7
--------------
ಸರಗೂರು ವೆಂಕಟವರದಾರ್ಯರು
ವೃಂದಾವನಕೈತಂದನು ಆ-ನಂದದಿಂ ಕ್ಷೀರಾಬ್ಧಿಯಿಂದ ಶ್ರೀಕೃಷ್ಣನು ಪ ತೆತ್ತೀಸರೂಪಿ ದೇವತೆಗಳೋಲೈಸಲುಮುತ್ತಿನ ಚಾಮರಗಳನಿಕ್ಕಲುಮುತ್ತೈದೆಯರೆಲ್ಲಾ ಧವಳವ ಪಾಡಲುಅರ್ಥಿಯಿಂದಿಂದಿರೆ ಸಹಿತ ಶ್ರೀಕೃಷ್ಣನು 1 ದ್ವಾರಾವತಿಯಿದ್ದು ಕ್ಷೀರಸಾಗರವಿದ್ದುಸಾರತರ ಶ್ವೇತದ್ವೀಪವಿರ್ದುಶ್ರೀ ವೃಂದಾವನ ಸುಖಮಂದಿರವೆನುತಲಿಕ್ಷೀರಸಾಗರವಾಸಿಯಾದ ಶ್ರೀಕೃಷ್ಣನು 2 ನಂದಗೋಕುಲವಿದ್ದು ಮಂದರಗಿರಿಯಿದ್ದುಚಂದವಾದ ವೈಕುಂಠಲೋಕವಿದ್ದುವೃಂದಾವನಪತಿಸುಖ ಗೃಹವೆನುತಲಿಇಂದಿರಾದೇವಿಯಿಂ ಸಹಿತ ಶ್ರೀಕೃಷ್ಣನು3 ಸುರದುಂದುಭಿ ದಂಧಣರೆಂದು ಮೊಳಗಲುಸುರರು ಹೂವಿನ ಮಳೆಯನು ಕರೆಯತರುಣ ತುಲಸಿಮಾಲೆಯಲುಗಲಿಂದಿರೆ ಸಹಗರುಡನ ಹೆಗಲಿನಿಂದಿಳಿದು ಶ್ರೀಕೃಷ್ಣನು4 ಉರದ ಕೌಸ್ತುಭರತ್ನ ಥಳಥಳಥಳಿಸಲುಕೊರಳ ವೈಜಯಂತಿಯ ಸರವಲುಗೆಸರಸಿಜ ಭವಮುಖ್ಯ ಸುರರೋಲೈಸಲುಪರಮ ಸಂಭ್ರಮದಿಂದ ಶ್ರೀಕೃಷ್ಣರಾಯನು5
--------------
ಕೆಳದಿ ವೆಂಕಣ್ಣ ಕವಿ
ಸಂತೆಯ ನೋಡಲು ಬಂದವನಾ | ಭ್ರಾಂತತನವ ನೋಡಿ ಮಾನವನಾ ಪ ಪರಿ ವಾಸನೆಕಾರರು ವಿಷಯದ | ಸರಕಿನ ಚಟ್ಟೆಯ ರಂಗಡಿಯು | ದುರುಳತ ನವಗುಣ ಭೂಸಿನ ರಾಶಿಯು | ನೆರೆದಿಹ ಸಂದಣಿ ಜನದೊಳಗ 1 ಇಂತಿಹ ನರದೇಹ ಪ್ಯಾಟೆಯ ಸಡಗರ | ಪ್ರಾಂತವ ಕಾಣದೆ ಮರುಳಾಗಿ | ನಿಂತಲ್ಲಿ ನಿಲ್ಲದೆ ನೋಡುತ ತಿರುಗುತ | ಕಂಥಿಯ ಕಳೆದನು ಹೆಗಲಿನಾ 2 ಗುರುಮಹೀಪತಿ ಸ್ವಾಮಿಯ ಗಡಚಿನ | ಶರಣಿರವಳಿಹುಗದೆವೆ ಮರೆದು | ಧರಿಯೊಳು ಉಣಲಿಲ್ಲ ಉಡಲಿಲ್ಲ ಬಂದಿವ | ಬರುದೆವೆ ಮುಮ್ಮಳಿ ಘಳಿಸಿದನು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು