ಒಟ್ಟು 11 ಕಡೆಗಳಲ್ಲಿ , 4 ದಾಸರು , 11 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿಪ ವೇದಶಾಸ್ತ್ರ ಪಂಚಾಂಗವ ಓದಿಕೊಂಡು ಅನ್ಯರಿಗೆಬೋಧನೆಯ ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ 1 ಚಂಡಭಟರಾಗಿ ನಡೆದು ಕತ್ತಿ ಢಾಲು ಕೈಲಿ ಹಿಡಿದುಖಂಡ ತುಂಡ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 2 ಅಂಗಡಿ ಮುಂಗಟ್ಟನ್ಹೂಡಿ ವ್ಯಂಗ್ಯ ಮಾತುಗಳನ್ನಾಡಿಭಂಗ ಬಿದ್ದು ಗಳಿಸುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 3 ಕುಂಟೆ ತುದಿಗೆ ಕೊರಡು ಹಾಕಿ ಹೆಂಟೆ ಮಣ್ಣು ಸಮನು ಮಾಡಿರೆಂಟೆ ಹೊಡೆದು ಬೆಳೆಸುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 4 ಬೆಲ್ಲದಂತೆ ಮಾತಾನಾಡಿ ಎಲ್ಲರನ್ನು ಮರುಳು ಮಾಡಿಸುಳ್ಳು ಬೊಗಳಿ ತಿಂಬುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 5 ಕೊಟ್ಟಣವನು ಕುಟ್ಟಿಕೊಂಡು ಕಟ್ಟಿಗೆಯನು ಹೊತ್ತುಕೊಂಡುಕಷ್ಟ ಮಾಡಿ ಉಣ್ಣುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 6 ತಾಳ ದಂಡಿಗೆ ಶ್ರುತಿ ಮೇಳ ತಂಬೂರಿಯ ಹಿಡಿದುಕೊಂಡುಸೂಳೆಯಂತೆ ಕುಣಿಯುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 7 ಸಂನ್ಯಾಸಿ ಜಂಗಮ ಜೋಗಿ ಜಟ್ಟಿ ಮೊಂಡ ಬೈರಾಗಿನಾನಾ ವೇಷಗಳೆಲ್ಲ ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 8 ಹಳ್ಳದಲ್ಲಿ ಕುಳಿತುಕೊಂಡು ಕಲ್ಲು ದೊಣ್ಣೆ ಹಿಡಿದುಕೊಂಡುಕಳ್ಳತನವ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 9 ಅಂದಣ ಪಲ್ಲಕ್ಕಿ ಏರಿ ಮಂದಿ ಮಾರ್ಬಲ ಕೂಡಿಚಂದದಿಂದ ಮೆರೆಯುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 10 ಉನ್ನತ ಕಾಗಿನೆಲೆಯಾದಿಕೇಶವನಾ ಧ್ಯಾನವನ್ನುಮನಮುಟ್ಟಿ ಮಾಡುವುದು ಮುಕ್ತಿಗಾಗಿ ಆನಂದಕಾಗಿ 11
--------------
ಕನಕದಾಸ
ಏನು ನಡತೆಯೋ ಏಕೆ ಕೆಡುವೆಯೋಮನುಜ ಜನ್ಮವನ್ನು ವ್ಯರ್ಥಮಾಡಿಬಿಟ್ಟೆ ಮೂರ್ಖ ಪ ಹಂಡತಿ ಕದಪನು ನೀನು ಸವರಿ ನೋಡುವಂತೆ ಮೊನ್ನೆಕೊಂಡ ಸಾಲಗ್ರಾಮವನ್ನು ಮುಟ್ಟಬಾರದೇ ತಡಹಬಾರದೇರಂಡೆಯರ ವಿಷಯವಾಗಿ ಕಾಲಿಗೆರಗಿದಂತೆ ತತ್ತ್ವಪಂಡಿತರ ಚರಣಕ್ಕೆ ಬೀಳಬಾರದೆ ಹೊರಳಬಾರದೆದುಂಡು ಮುತ್ತಿನ ಸರವ ಸತಿಗೆ ಕೊಂಡು ಹಾಕಿದಂತೆಪಿಂಡಾಂಡ ವಿವರಿಪರಿಗೆ ವಂದನೆ ಮಾಡಬಾರದೇಭಂಡ ಮಾತನು ನಾರಿ ಕಿವಿಯ ಖಂಡಿ ಯೊಳು ಪೇಳ್ದ ತೆರದಿಸುವಚನ ಸಾಧುಗಳೊಳು ಉಸುರಬಾರದೇ ಅರುಹಬಾರದೆ 1 ನನ್ನ ಮಕ್ಕಳೆಂದು ನೀನು ಬನ್ನಬಟ್ಟ ತೆರದಿ ಇತರಸಣ್ಣವರ ಮೇಲೆ ನೀನು ಕರಗಬಾರದೆ ತೋರಬಾರದೆಹೊನ್ನು ಹಣವು ಬಿದ್ದುಯಿರೆ ಹೆಂಟೆಯೆನುತಲಾಗ ಎರಡುಕಣ್ಣು ತೆರೆದು ದೃಷ್ಟಿಸಿ ನೋಡಬಾರದೆ ಕಾಣಬಾರದೆಮನ್ನಣೆ ಎಂಬುದನ್ನು ಸೂಕರನ ವಿಷೈ ಸಮನುಎನ್ನುತಲಿ ಚಿತ್ತದಲ್ಲಿ ಎಣಿಸಬಾರದೆ ಹತ್ತಬಾರದೆಉನ್ನತದ ಜೀವರಾಶಿ ಎಲ್ಲ ಒಬ್ಬ ಶಿವನು ಎಂದುಭಿನ್ನ ಕಳೆದು ಆತ್ಮ ಸುಖದಿ ಮುಳುಗಬಾರದೆ ಬೆಳಗಬಾರದೆ 2 ನಾನಾ ಜನ್ಮ ಜನ್ಮ ತಿರುಗಿ ನರನ ಜನುಮ ಬಂದುನಾನಾರೋ ಎಂದು ನಿನ್ನ ತಿಳಿಯಬಾರದೆ ಅರಿಯಬಾರದೆಜ್ಞಾನಿಗಳ ಮುಖಗಳಿಂದ ನಿನ್ನ ಒಳಗೆ ನಿನ್ನ ಕಂಡುನಾನೆ ಬ್ರಹ್ಮವೆಂದು ನಿಜವ ಕಾಣಬಾರದೆ ಕೂಡಬಾರದೆನಾನಾಧ್ವನಿಯು ನಾನಾಕಳೆಯು ದೇಹದೊಳು ತೋರುತಿರಲುಆನೆಯಂತೆ ನೀನು ಈಗ ತೊನೆಯಬಾರದೆ ತೂಗಬಾರದೆತಾನಾದ ಚಿದಾನಂದ ಗುರುವು ತಾನೆ ತಾನೆಯಾಗಿನಾನು ನೀನು ಎಂಬುದನ್ನು ತಿಳಿಯಬಾರದೆ ಕಳೆಯಬಾರದೆ 3
--------------
ಚಿದಾನಂದ ಅವಧೂತರು
ಧ್ಯಾನವಿರಲಿ ಗುರುವೆ ನಿನ್ನಯಧ್ಯಾನವಿರಲಿ ಗುರುವೆನಿನ್ನ ನಿತ್ಯಾ ಕಾಲದಿ ಪದಧ್ಯಾನದೊಳಗೋಲಾಡುವಂತೆ ಗುರು ಚಿದಾನಂದ ಎಂಬ ಪ ಗಿರಿಯೊಳಿರಲಿ ಧರೆಯೊಳಿರಲಿಗಿರಿಯ ಗುಹೆಯ ಗೃಹದೊಳಿರಲಿಪುರದೊಳಿರಲರಣ್ಯಗಳೊಳುಚರಿಸುತಿರಲಿ ಮರೆಯದೇ 1 ಮರದೊಳಿರಲಿ ಮುಳ್ಳೊಳಿರಲಿಕೆರೆಯ ತೀರ್ಥ ಕ್ಷೇತ್ರದೊಳಿರಲಿಹರವು ಹಳ್ಳ ಕೊಳ್ಳಗಳೊಳುಹರಿವುತಿರಲಿ ಮರೆಯದೆ2 ಹಸಿವೆಯಿರಲಿ ತೃಷೆಯೊಳಿರಲಿಬಿಸಿಲು ಮಳೆ ಛಳಿಗಳೊಳಿರಲಿವಿಷಯ ವ್ಯಾಧಿ ಕಂಟಕಗಳೊಳ್ವಿಷಮವಿರಲಿ ಮರೆಯದೇ 3 ನಡೆವುತಿರಲಿ ಎಡವುತಿರಲಿನಡೆಯಲಾರದೆ ಕೆಡೆಯುತಿರಲಿಕಡುವಿರೋಧದಿಂ ಕುವಾದತಡೆಯುತಿರಲಿ ಮರೆಯದೆ 4 ಹೆಂಡೆಲಿಡಲಿ ಹೆಂಟೆಲಿಡಲಿಕಂಡ ಕಂಡದರಲಿಡಲಿಭಂಡ ಮನುಜರವರು ಏನುಮಾಡುತಿರಲಿ ಮರೆಯದೇ5 ನಿನ್ನ ಧ್ಯಾನ ಷಟ್ಸಮಾಧಿನಿನ್ನ ಧ್ಯಾನ ಮುಕ್ತಿ ನಿಲಯನಿನ್ನ ಧ್ಯಾನಕಧಿಕವಿಲ್ಲ ನಿನ್ನ ಧ್ಯಾನವೆನಗೆ ನಿತ್ಯವಿರಲಿ ಮರೆಯದೆ6 ಪಾದ ಯೋಗಿ 7
--------------
ಚಿದಾನಂದ ಅವಧೂತರು
ನಿನ್ನ ದಯಾ ದೃಷ್ಟಿಯು ಎನ್ನ ಮೇಲಿರಬೇಕು ಪನ್ನಂಗಶಯನ ಭಕ್ತ ವಿಜಯವಿಠಲಯ್ಯ ಪ ಮುನ್ನ ಭಕ್ತನಿಗೊಲಿದು ಭಿನ್ನವಿಲ್ಲದೆ ಬಂದು ಮಣ್ಣಿನ್ಹೆಂಟೆಯ ಮೇಲೆ ಇನ್ನು ನಿಂತುದನು ಕಣ್ಣಿನಿಂದ ನಾ ಕಂಡು ಧನ್ಯನಾದೆನು ಜಗದಿ ಇನ್ಯಾಕೆ ಭವದಂಜು ತನು ನಿನ್ನದಯ್ಯ1 ಹೆತ್ತಮಕ್ಕಳ ತೆರದಿ ಅತ್ಯಧಿಕ ಪ್ರೀತಿಯಿಂ ಭಕ್ತರನು ಬಿಗಿದಪ್ಪಿ ಮುಕ್ತಿ ಸೋಪಾನ ಹತ್ತಿಸಿದ ನಿನ್ನಡಿ ಭಕ್ತಿಯಿಂ ಕಂಡೆ ಮತ್ತು ಮೃತ್ಯುವಿನ ಭೀತ್ಯಾಕೆ ಮನ ನಿನ್ನದಯ್ಯ 2 ಕಡಲನಿಲಯನೆ ನಿನ್ನ ಅಡಿ ನಂಬಿ ಮರೆಹೊಕ್ಕೆ ದೃಢಭಕುತಿ ನೀಡೆನ್ನ ನುಡಿಯೊಳಗೆ ನೆಲಸು ಎಡರು ತೊಡರನು ಕಡಿದು ದೃಢಕರನು ಬಿಡದಾಳ್ವ ಒಡೆಯ ಶ್ರೀರಾಮಯ್ಯ ಧನ ನಿನ್ನದಯ್ಯ 3
--------------
ರಾಮದಾಸರು
ಬಿಟ್ಟೆನಯ್ಯ ಬಿಟ್ಟೆನಯ್ಯ ಪ್ರಪಂಚವಮುಟ್ಟಿದೆನು ಬ್ರಹ್ಮವನು ಮುಕ್ತನಾದೆನುಹುಚ್ಚು ಮೂಳಿ ಹೆಂಡತಿಯ ಪ ಮೆಚ್ಚಿ ನಲಿವ ಮಗನು ಸೊಸೆಯುಉಜ್ಜಿ ಬದುಕನೆಲ್ಲ ನಾನು ಉಡುಗಿ ಕಳೆದೆನು 1 ನೆಂಟರಿಷ್ಟರೆಲ್ಲರನ್ನು ದೂರಮಾಡಿ ಕುಳಿತೆ ನಾನುಹೆಂಟೆಯಂತೆ ಕಂಡೆನಯ್ಯ ಹೇರು ಹೇಮವ 2 ಅಷ್ಟದೇವರನ್ನು ನಾನು ಅಡವಿಗೆಂದು ಅಟ್ಟಿಬಿಟ್ಟೆಕಷ್ಟಪಡಿಪ ಪುರೋಹಿತನ ಕಡೆಗೆ ತಳ್ಳಿದೆ 3 ವಾರವಾರ ನೇಮವನ್ನು ಒಲೆಯನೀಗ ಹೊಗಿಸಿದೆದಾರಿ ಹಚ್ಚಿಸಿದೆನು ಕುಲವ ಶೀಲವ್ರತಗಳ 4 ಮತಗಳೆಂಬ ವಾದವನ್ನು ಮಣ್ಣುಪಾಲು ಮಾಡಿದೆನುಸತತ ಚಿದಾನಂದ ಬ್ರಹ್ಮ ಸಾಕ್ಷಿಯಾದನು 5
--------------
ಚಿದಾನಂದ ಅವಧೂತರು
ಇಂತುಶ್ರುತಿ -ಸ್ಮøತಿ ಸಾರುತಿದೆ ಕೋ |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಕಂತುಪಿನ ಗುಣಗಳ ತಿಳಿಯಬೇಕೆಂದು ಪ.ಮನವ ಶ್ರೀಹರಿಯ ಚರಣಕೆ ಸಮರ್ಪಿಸಬೇಕು |ತನುವ ತೊಂಡರಿಗಡ್ಡ ಕೆಡವಬೇಕು ||ವನಿತೆಯರ ಚೆಲುವಿಕೆಗೆ ಮರುಳಾಗದಿರಬೇಕು |ಘನತೆಯಲಿಹರಿಚರಣಸ್ಮರಿಸುತಿರಬೇಕು1ಕಂದರ್ಪನಟ್ಟುಳಿಗೆ ಕಳವಳಿಸದಿರಬೇಕು |ಇಂದ್ರಿಯಂಗಳನು ನಿಗ್ರಹಿಸಬೇಕು |ಚಂದಲೀಲೆಗಳಿಂಗೆ ಮನವೆಳಿಸದಿರಬೇಕು |ಇಂದಿರೇಶನ ಪದದ ಪಥವರಿಯಬೇಕು 2ಒಂಟಿಯಲಿ ಮುನಿಗಳಾಶ್ರಮದಿ ನೆಲೆಸಲುಬೇಕು |ಹೆಂಟೆ ಬಂಗಾರ ಸಮ ತಿಳಿಯಬೇಕು ||ಕಂಟಕದ ಭಯಗಳನು ನೀಗುತಿರಬೇಕು ವೈ - |ಕುಂಠ ಪುರಂದರವಿಠಲನೊಲಿಸಬೇಕು 3
--------------
ಪುರಂದರದಾಸರು
ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ಪ.ವೇದ ಶಾಸ್ತ್ರ ಪಂಚಾಗ ಓದಿಕೊಂಡು ಪರರಿಗೆಬೋಧನೆಯ ಮಾಡವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 1ಚಂಡ ಭಟರಾಗಿ ನಡೆದು ಕತ್ತಿಢಾಲು ಕೈಲಿ ಹಿಡಿದುಖಂಡ ತುಂಡು ಮಾಡುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 2ಅಂಗಡಿಗಳನ್ನೆ ಹೂಡಿ ವ್ಯಂಗ್ಯ ಮಾತುಗಳಾಡಿಭಂಗಬಿದ್ದು ಗಳಿಸುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 3ಕುಂಟಿ ತುದಿಗೆ ಕೊರಡುಹಾಕಿ ಹೆಂಟೆಮಣ್ಣು ಸಮಮಾಡಿರೆಂಟೆ ಹೊಡೆದು ಬೆಳೆಸುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 4ಬೆಲ್ಲದಂತೆ ಮಾತನಾಡಿ ಎಲ್ಲರನ್ನು ಮರುಳು ಮಾಡಿಸುಳ್ಳು ಬೊಗಳಿ ತಿಂಬುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 5ಕೊಟ್ಟಣವ ಕುಟ್ಟಿಕೊಂಡು ಕಟ್ಟಿಗೆಯ ಹೊತ್ತುಕೊಂಡುಕಷ್ಟಮಾಡಿ ತಿಂಬುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 6ತಾಳದಂಡಿಗೆ ಶೃತಿ ಮೇಳ ತಂಬೂರಿ ಹಿಡಿದುಕೊಂಡುಸೂಳೆಯಂತೆ ಕುಣಿಯುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 7ಸನ್ಯಾಸಿ ಜಂಗಮ ಜೋಗಿ ಜಟ್ಟಿ ಮೊಂಡ ಭೈರಾಗಿನಾನಾ ವೇಷ ಹಾಕುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 8ಹಳ್ಳದಲ್ಲಿ ಕುಳಿತು ಕೊಂಡು ಕಲ್ಲು ದೊಣ್ಣೆ ಹಿಡುದುಕೊಂಡುಕಳ್ಳತನವ ಮಾಡುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 9ಅಂದಣ ಪಲ್ಲಕ್ಕಿ ಏರಿ ಮಂದಿ ಮಾರ್ಬಲ ಕೂಡಿಚಂದದಿಂದ ಮೆರೆಯುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 10ಉನ್ನಂತಪುರಂದರ ರಾಯನ ಧ್ಯಾನವನುಮನಮುಟ್ಟಿ ಮಾಡುವುದುಮುಕ್ತಿಗಾಗಿ ಆನಂದಕಾಗಿ* 11
--------------
ಪುರಂದರದಾಸರು
ಕಾಳಬೆಳದಿಂಗಳು - ಈ ಸಂಸಾರ -ಕತ್ತಲೆ ಬೆಳುದಿಂಗಳು ಪ.ಸತ್ಯಕೆ ಧರ್ಮಜ ಲೆತ್ತ ಪಗಡೆಯಾಡಿ |ವ್ಯರ್ಥ ಭಂಢಾರವೆಲ್ಲವನು ಸೋತು ||ಬತ್ತಲೆ ಪೋಗಿ ವಿರಾಟನ ಮನೆಯೊಳು |ತೊತ್ತಾದಳು ದ್ರೌಪದಿ ಒಂದು ವರುಷ 1ಉಂಬಾಗ ಉಡುವಾಗ ಕೊಂಬಾಗ ಕೊಡುವಾಗ |ಬೆಂಬತ್ತಿ ತಿರುಗುತಲಿಪ್ಪರು ||ಎಂಬಾತಗೆ ನೋಡಿ ಬಡತನ ಬಂದರೆ |ಇಂಬಿಲ್ಲ ಅತ್ತತ್ತ ಹೋಗೆಂಬರಯ್ಯ 2ಉಂಟಾದ ಕಾಲಕ್ಕೆ ನೆಂಟರಿಷ್ಟರು ಬಂದು |ಬಂಟರಂತೆ ಬಾಗಿಲ ಕಾಯ್ವರು |ಉಂಟುತನವು ಪೋಗೆ ಅಂತ್ಯಕಾಲಕೆ ಕಂಡು |ಹೆಂಟೆಯಾಗಿ ತಿರುಗುತಿಪ್ಪರಯ್ಯ 3ಪುಂಡರೀಕಾಕ್ಷ ಶ್ರೀ ಪುರುಷೋತ್ತಮ ರಥ - |ಕೊಂಡು ಸಾರಥಿಯಾದ ಫಲ್ಗುಣನ ||ಮಂಡಲವಾಳವ ಹರಿಶ್ಚಂದ್ರರಾಯನು ||ಕೊಂಡು ಕಾಯ್ದ ಚಂಡಾಲನ ಮನೆಯ 4ನೊಂದಿತು ಕಾಯವು ಬೆಂದಿತುಒಡಲು |ಬೆಂದ ಒಡಲಿಗಾಗಿ ಹಾಸ್ಯಮಾಡಿ ||ಪುಂಡರೀಕಾಕ್ಷ ಶ್ರೀ ಪುರಂದರವಿಠಲನ |ತೊಂಡನಾಗಿ ನೀ ಸುಖವಾಗಿ ಬಾಳು 5
--------------
ಪುರಂದರದಾಸರು
ಮುಕ್ತನು ನೀನಣ್ಣ ನಿನಗೆ ಎತ್ತ ಜನನವಣ್ಣ ಪಹೆಣ್ಣಿನ ಕಾಲನು ನೀನೀಗ ಗಂಡೆಂದು ನೋಡಿದರೆಚೆನ್ನವು ಬಿದ್ದಿರೆ ಮನದಲಿ ಹೆಂಟೆಂದು ತಿಳಿದರೆ1ಕಲ್ಲನು ಮುಳ್ಳನು ಕೇವಲ ದೇವರೆಂದರಿತರೆಎಲ್ಲಪಮಾನವು ತನಗೆ ಸ್ತೋತ್ರವು ಎಂದರೆ2ನರನು ಆದವನತ್ರಿಪುರಹರನೆಂದರಿತರೆಚರಅಚರವನೆಲ್ಲ ಚಿದಾನಂದ ಗುರುವೆಂದು ಕಂಡರೆ3
--------------
ಚಿದಾನಂದ ಅವಧೂತರು
ಯೋಗಿಯ ನಡತೆ ಲೋಕಕ್ಕೆ ವಿರುದ್ಧಆಗಲೆಂದೇ ಮೂಡುತಿರಲವನೇ ಗೆದ್ದಪಸ್ನಾನವೆಂಬುದು ಇಲ್ಲ ಸಂಧ್ಯಾದಿ ಮೊದಲಿಲ್ಲಹೀನ ಶೀಲತ್ವವದು ಇರುತಿಹುದುಏನೇನು ಶುಚಿಯಿಲ್ಲ ಜಾತಿ ಸಂಕರವೆಲ್ಲತಾನು ಪಿಶಾಚಿಯಂತಿಹನುಯೋಗಿ1ಕಂಡಲ್ಲಿಯೆ ಉಂಬ ಕಂಡ ಕಡೆಯೆತ್ತಿಂಬಹೆಂಟೆ ಹುಡಿಯನ್ನದಲೆ ಮಲಗಿಕೊಂಬಭಂಡ ನಡತೆಯ ನಡೆದು ಭ್ರಷ್ಟನಾಗಿ ಕಾಣಿಸುತಉಂಡ ಬಾಯಿಯ ತಾನು ತೊಳೆಯದಿಹಯೋಗಿ2ದೇಹಸ್ಥಿತಿಯನು ನೋಡೆ ಮಣ್ಣಿಹುದು ಗೇಣುದ್ದಊಹಿಸಲು ತಲೆಯಲ್ಲ ಜಡೆಗಟ್ಟಿ ಬಿದ್ದಿಹುದುದೇಹಪರವಶನಾಗಿಉನ್ಮತ್ತಸ್ಥಿತಿಯಾಗಿದೇಹಿ ಚಿದಾನಂದಗುರುತಾನಾದಯೋಗಿ3
--------------
ಚಿದಾನಂದ ಅವಧೂತರು
ವಿಷಯದ ವಿಚಾರ ಬಿಡು ವಿಹಿತಕರ್ಮವಮಾಡು|ವೈರಾಗ್ಯ ಭಾಗ್ಯಬೇಡು ಪ.ವಿಷವೆಂದು ಕಾಮ - ಕ್ರೋಧಗಳೆಲ್ಲವೀಡಾಡು |ಮಸಣಮನವೇ ಮಾಧವನನು ಕೊಂಡಾಡು ಅಪಅನುದಿನದಿ ಹರಿಕಥೆಯಕೇಳಿ ಸಂತೋಷಪಡು |ದಿನದಿನವು ಸಜ್ಜನರ ಕೂಡು ||ಮನಮುಟ್ಟಿ ದುರಾಚಾರ ಮಾಳ್ಪರನು ನೀ ಕಾಡು |ಹಣ - ಹೊನ್ನು ಪರಹೆಣ್ಣು ಹೆಂಟೆಯಂತೆನೋಡು1ವೇದ ಶಾಸ್ತ್ರಾರ್ಥ ತತ್ವದ ವಿಚಾರವಮಾಡು |ಮಾಧವನ ಭಕ್ತಿ ಬೇಡು ||ಪಾದದಲಿ ಪುಣ್ಯತೀರ್ಥದ ಯಾತ್ರೆಮಾಡು ಮಧು - |ಸೂದನನ ಕೀರ್ತಿ ಸಂಕಿರ್ತನೆಯಮಾಡು2ಅಂಬುಗುಳ್ಳಗಳಂತೆ ಎಂದಿಗಿದ್ದರು ದೇಹ |ನಂಬಿ ನೀ ಕೆಡಲುಬೇಡ ||ಕೊಂಬುವರು ಬಂದರಾಕ್ಷಣಕೆ ಬೆಲೆಯಾಗುವುದು |ಅಂಬುಜಾಕ್ಷ ಪುರಂದರವಿಠಲನ ನೆನೆ ಮನವೆ 3
--------------
ಪುರಂದರದಾಸರು