ಒಟ್ಟು 5 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉಡುಪಿಯ ಕೃಷ್ಣ ನೋಡಿರಿವನೊಳದ್ಭುತವಾ ಪಾಡುವರಿಗೆ ಸುಪ್ರೀತ ದಾತಾ ಪ ಮುರಳಿ ಮುಖದೊಳಿಟ್ಟು ನಿಂತುಕೊಂಡಿಹನೊಕರುಣಾಮೃತ ಸುಧೆ ಸುರಿಸುತಲಿಹನೊಕರುಣಾಪಾಂಗದಿ ನೋಡು ತಲಿಹನೋ ಸುಸ್ವಭಾವದಾತ 1 ಶುಕ್ರವಾರದಿ ಸೀರೆಯನುಡುವನೋ ಮಕ್ಕಳ ಪಡೆದ್ಹೆಂಗಸು ಇವನೋಲಕ್ಕುಮಿದೇವಿಗೆ ವರನಾಗಿಹನೋ ವಿಲಕ್ಷಣ ಸ್ವಭಾವದಾತ 2 ಈಶನು ಕ್ಷಣದಲಿ ದಾಸನಾಗುವನೋ ಭೂಷಣ ಭೂಷಿತ ಬತ್ತಲಾಗುವನೋಪೋಷ ಪೋಷಕ ಇಂದಿರೇಶ ಭೂಷಿತನೋ ದಾಸರಪೋಷಿಪನೋ 3
--------------
ಇಂದಿರೇಶರು
ದ್ಯಾವಿ ನಮ್ಮ ದ್ಯಾವರು ಬಂದರು ಬನ್ನೀರೆ, ನೋಡ ಬನ್ನಿರೆ ಪ ಕೆಂಗಣ್ಣ ಮೀನನಾಗಿ ನಮ ರಂಗಗುಂಗಾಡು ಸೋಮನ ಕೊಂದಾನ್ಮ್ಯಾಗುಂಗಾಡು ಸೋಮನ ಕೊಂದು ವೇದವನುಬಂಗಾರದೊಡಲನಿಗಿತ್ತಾನ್ಮ್ಯಾ1 ದೊಡ್ಡ ಮಡುವಿನೊಳಗೆ ನಮ ರಂಗಗುಡ್ಡವ ಹೊತ್ಕೊಂಡು ನಿಂತಾನ್ಮ್ಯಾಗುಡ್ಡವ ಹೊತ್ಕೊಂಡು ನಿಂತು ಸುರರನುದೊಡ್ಡವರನ್ನ ಮಾಡ್ಯಾನ್ಮ್ಯಾ 2 ಚೆನ್ನ ಕಾಡಿನ ಹಂದಿಯಾಗಿ ನಮ ರಂಗಚಿನ್ನದ ಕಣ್ಣನ ಕೊಂದಾನ್ಮ್ಯಾಚಿನ್ನದ ಕಣ್ಣನ ಕೊಂದು ಭೂಮಿಯವನಜಸಂಭವಗಿತ್ತಾನ್ಮ್ಯಾ 3 ಸಿಟ್ಟಿಂದ ಸಿಂಹನಾಗಿ ನಮ ರಂಗಹೊಟ್ಟೆಯ ಕರುಳ ಬಗೆದಾನ್ಮ್ಯಾಹೊಟ್ಟೆಯ ಕರುಳ ಹಾರವ ಮಾಡಿ ಪುಟ್ಟಗೆ ವರವ ಕೊಟ್ಟಾನ್ಮ್ಯಾ4 ಹುಡುಗ ಹಾರುವನಾಗಿ ನಮ ರಂಗಬೆಡಗಲಿ ಮುಗಿಲಿಗೆ ಬೆಳೆದಾನ್ಮ್ಯಾಬೆಡಗಲಿ ಮುಗಿಲಿಗೆ ಬೆಳೆದು ಬಲಿಯನ್ನಅಡಿಯಿಂದ ಪಾತಾಳಕೊತ್ತ್ಯಾನ್ಮ್ಯಾ 5 ತಾಯ ಮಾತನು ಕೇಳಿ ಸಾಸಿರ ತೋಳಿನಆವಿನ ಕಳ್ಳನ ಕೊಂದಾನ್ಮ್ಯಾಆವಿನ ಕಳ್ಳನ ಕೊಂದು ಭೂಮಿಯಅವನಿಸುರರಿಗೆ ಇತ್ತಾನ್ಮ್ಯಾ 6 ಪಿಂಗಳ ಕಣ್ಣಿನ ಕೊಂಗಗಳ ಕೂಡಿಛಂಗನೆ ಲಂಕೆಗೆ ಪೋದಾನ್ಮ್ಯಾಛಂಗನೆ ಲಂಕೆಗೆ ಪೋಗಿ ನಮ ರಂಗಹೆಂಗಸುಗಳ್ಳನ ಕೊಂದಾನ್ಮ್ಯಾ7 ಕರಿಯ ಹೊಳೆಯ ಬಳಿ ತುರುಗಳ ಕಾಯುತಉರಗನ ಮಡುವ ಧುಮುಕ್ಯಾನ್ಮ್ಯಾಉರಗನ ಹೆಡೆ ಮೇಲೆ ಹಾರ್ಹಾರಿ ಕುಣಿವಾಗವರವ ನಾರೇರ್ಗೆ ಕೊಟ್ಟಾನ್ಮ್ಯಾ 8 ಭಂಡನಂದದಿ ಕುಂಡೆಯ ಬಿಟುಗೊಂಡುಕಂಡ ಕಂಡಲ್ಲಿಗೆ ತಿರುಗ್ಯಾನ್ಮ್ಯಾಕಂಡ ಕಂಡಲ್ಲಿಗೆ ತಿರುಗಿ ತ್ರಿಪುರರಹೆಂಡಿರನೆಲ್ಲ ಕೆಡಿಸ್ಯಾನ್ಮ್ಯಾ 9 ಚೆಲುವ ಹೆಂಡತಿಯ ಕುದುರೆಯ ಮಾಡಿಒಳ್ಳೆ ರಾಹುತನಾದಾನ್ಮ್ಯಾಒಳ್ಳೆ ರಾಹುತನಾಗಿ ಮ್ಲೇಚ್ಛರಡೊಳ್ಳು ಹೊಟ್ಟೆಯ ಮ್ಯಾಲೊದ್ದಾನ್ಮ್ಯಾ 10 ಡೊಳ್ಳಿನ ಮ್ಯಾಲ್ ಕೈ ಭರಮಪ್ಪ ಹಾಕ್ಯಾನುತಾಳವ ಶಿವನಪ್ಪ ತಟ್ಟಾನ್ಮ್ಯಾಒಳ್ಳೊಳ್ಳೆ ಪದಗಳ ಹನುಮಪ್ಪ ಹಾಡ್ಯಾನುಚೆಲುವ ಕನಕಪ್ಪ ಕುಣಿದಾನ್ಮ್ಯಾ11
--------------
ಕನಕದಾಸ
ಏನ ಮಾಡಲಿ ಮಗನೆ ಏಕೆ ಬೆಳಗಾಯಿತು |ಮಾನಿನಿಯರು ಬಂದುಮಾನಕಳೆಯುವರುಪಹಾಲು, ಮೊಸರು, ಬೆಣ್ಣೆ, ಕದ್ದನೆಂತೆಂಬುವರು |ಮೇಲಿಟ್ಟ ಕೆನೆಯನು ಮೆದ್ದನೆಂಬುವರು ||ಬಾಲರನೆಲ್ಲರ ಬಡಿದನೆಂಬರು ಎಂಥ |ಕಾಳು ಹೆಂಗಸು ಇವನ ಹಡೆದಳೆಂಬುವರೊ 1ಕಟ್ಟಿದ ಕರುಗಳ ಬಿಟ್ಟನೆಂತೆಂಬರೊ |ಮೆಟ್ಟಿ ಸರ್ಪನ ಮೇಲೆ ತುಳಿದನೆಂಬುವರೊ ||ಪುಟ್ಟ ಬಾಲೆಯರ ಮೋಹಿಸಿದನೆಂಬುವರೊ ಎಂಥ |ಕೆಟ್ಟ ಹೆಂಗಸು ಇವನ ಹಡೆದಳೆಂಬುವರೊ 2ಗಂಗಾಜನಕನಿನ್ನ ಜಾರನೆಂತೆಂಬರೊ |ಶೃಂಗಾರ ಮುಖ ನಿನ್ನ ಬರಿದೆ ದೂರುವರೊ ||ಮಂಗಳಮಹಿಮ ಶ್ರೀ ಪುರಂದರವಿಠಲ |ಹಿಂಗದೆ ಎಮ್ಮನು ಸಲಹೆಂತೆಂಬುವರೊ 3
--------------
ಪುರಂದರದಾಸರು
ಹರಿಯೆನ್ನು ಹರಿಯೆನ್ನು ಹರಿಯೆನ್ನು ಪ್ರಾಣಿಹರಿಯೆನ್ನದಿದ್ದರೆ ನರಹರಿಯಾಣೆ ಪ.ಹೆಂಗಸು ಮಕ್ಕಳು ಹೆರವರು ಪ್ರಾಣಿ |ಸಂಗಡ ಬರುವವರೊಬ್ಬರ ಕಾಣೆ 1ದಾನವಿಲ್ಲದ ದ್ರವ್ಯ ಗಳಿಸದೆ ಪ್ರಾಣಿಪ್ರಾಣ ಹೋಗುವಾಗ ಕಾಣೆ ದುಗ್ಗಾಣೆ 2ನೀರ ಮೇಲಿನ ಗುಳ್ಳೆ ಸಂಸಾರ ಪ್ರಾಣಿಸಾರಿದ ಪುರಂದರವಿಠಲನ ವಾಣಿ 3
--------------
ಪುರಂದರದಾಸರು