ಒಟ್ಟು 5 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ಗಣಪತಿಗೆ ವಂದಿಸಿ ಕೆಳದಿಯ ಪುರದಭೋಗಮಂದಿರ ರಾಮೇಶ್ವರನ ರಂಭೋಗಮಂದಿರ ರಾಮೇಶ್ವರನ ಸನ್ನುತಿಸುತರಾಗದಿ ಪಾಡಿ ಪೊಗಳುವೆ ರಂ1 ವಾಣಿ ಪುಸ್ತಕ ವೀಣಾಪಾಣಿ ಪನ್ನಗನಿಭವೇಣಿ ಕಲ್ಯಾಣಿ ಶುಕ ರಂ-ವಾಣಿ ಶುಕವಾಣಿ ಬೊಮ್ಮನರಾಣಿ ಸನ್ಮತಿಯ ಕರುಣಿಸು ರಂ 2 ಧೃವ ಅಟ್ಠ ರೂಪಕ ಏಕತಾಳವು ಝಂಪೆತ್ರಿವಡೆ ತಾಳಗಳೊಡಂಬಡಲು ರಂ-ತ್ರಿವಡೆ ತಾಳಗಳೊಡಂಬಡೆ ಹೊಸ ಹರೆಯದಯುವತಿಯರೊಲಿದು ಹಾಡಿದರು ರಂ 3 ಗಂಗಾಧರ ಜಯ ಗೌರೀಪ್ರಿಯ ಜಯಅಂಗಜಹರ ಜಯವೆನುತ ರಂ-ಜಯವೆನುತಲಂಗನೆಯರುಪೊಂಗೋಲ ಪೊಯಿದು ಪಾಡಿದರು ರಂ 4 ಕಪ್ಪುಗೊರಳ ಜಯ ಸರ್ಪಭೂಷಣ ಜಯಮುಪ್ಪುರವನು ಜಯಿಸಿದವನೆ ರಂ-ಜಯಿಸಿದನೆ ಜಯವೆಂದುಒಪ್ಪದೆ ಪಾಡುತಾಡಿದರೆ ರಂ5 ದಿಮಿದಿಮಿ ದಿಮಿಕೀಟ ತಕಕಿಟನ ಕಕಿಟಕ್ರಮದಿ ನರ್ತಿಸುತಬಲೆಯರು ರಂ-ಅಬಲೆಯರು ಚಿನ್ನದ ಕೋಲಪ್ರಮುದದೊಳಾಡುತೊಪ್ಪಿದರು ರಂ6 ಅಚ್ಚ ಮುತ್ತಿನ ನಿಚ್ಚಳ ಸುಲಿಪಲ್ಲಒಚ್ಚೇರೆಗಣ್ಣು ಬಾಲೆಯರು ರಂ-ಬಾಲೆಯರು ಸಂಭ್ರಮದಿ ಮೈಮೆಚ್ಚುತ ಕೋಲನಾಡಿದರು ರಂ 7 ಭೃಂಗ ಕುಂತಳದ ಮತಂಗಜ ಗಮನದರಂಗುದುಟಿಯ ರಮಣೆಯರು ರಂರಮಣಿಯರು ಸೊಬಗನಾಂತುಹೆಂಗಳು ಪಾಡುತೊಪ್ಪಿದರು ರಂ8 ಜಲಜಗಂಧದ ನಳಿತೋಳ್ಗಳ ರಿಂಕಿದನೆಲೆಮೊಲೆಗಳ ತುಂಬಿಗುರುಳ ರಂಕರುಳ ಪದ್ಮಿನಿಯರುಚಳಕದಿ ಪಾಡುತಾಡಿದರು ರಂ9 ಪೊಂಬೊಗರಿಯ ತೆರದಿ ತುಂಬಿದ ಕುಚಗಳಬಿಂಬಾಧರದ ಕಂಬುಗಳದ ರಂಬಿಂಬಾಧರದ ಕಂಬುಗಳದ ಪದ್ಮಿನಿಯರುಸಂಭ್ರಮದಿಂದ ಪಾಡಿದರು10 ತೆಳುವಸುರಿನ ಕೊಬ್ಬಿದ ಕುಚಯುಗಳದಕಲಹಂಸಗತಿಯ ಮೋಹನದ ರಂಮೋಹನದ ಚಿತ್ತಿನಿಯರುಒಲಪಿನಂ ಪಾಡುತಾಡಿದರು ರಂ11 ಚಿನ್ನದ ಲತೆಯಂತೆ ಚೆನ್ನಾಗಿ ಬಳುಕುವಸನ್ನುತಾಂಗದ ಶಂಖರವದ ರಂರವದ ಶಂಖಿನಿಯರುಚೆನ್ನಾಗಿ ಪಾಡುತಾಡಿದರು ರಂ 12 ಅಪಳ್ಗಣ್ಣ ಮಂದಗತಿಯ ಮದಗಂಧದಶರೀರದ ಕೊಬ್ಬಿದ ಕೊರಳ ರಂಕೊರಳಿನ ಹಸ್ತಿನಿ(ಯರು)ತರುಣಿಯರೊಲಿದು ಪಾಡಿದರು ರಂ 13 ಸಿರಿಮೊಗದೊಳು ಬೆಮರೊಗೆಯೆ ಮೇಲುದುಜಾರೆ ಕರದ ಕಂಕಣ ಝಣರೆನಲು ರಂಕರದ ಕಂಕಣ ಝಣಝಣಝಣಝಣರೆನೆತರಳೆಯರ್ಪಾಡುತಾಡಿದರು ರಂ14 ದುಂಡುಮುತ್ತಿನ ಹಾರವಲುಗಲು ವಜ್ರದಕುಂಡಲಗಳು ನರ್ತಿಸಲು ರಂನರ್ತಿಸಲಂಗನೆಯರತಂಡ ಸಂಭ್ರಮದೊಳಾಡಿದರು ರಂ 15 ಕರುಣಸಾಗರ ಜಯ ಕರಿಚರ್ಮಾಂಬರ ಜಯವರದ ರಾಮೇಶ ಜಯವೆಂದು ರಂ-ವರದ ರಾಮೇಶ್ವರ ಪಾರ್ವತಿ ಜಯವೆಂದುಹರುಷದಿ ಕೋಲನಾಡಿದರು 16
--------------
ಕೆಳದಿ ವೆಂಕಣ್ಣ ಕವಿ
ತುಳಸಿ ಮಧ್ಯದಿ ಇರುವ ಕೃಷ್ಣನಬಳಸಿ ನೋಡುವ ಬನ್ನಿರೆ ಪ ಗೊಲ್ಲ ಸತಿಯರ ಗಲ್ಲ ಪಿಡಿದುಎಲ್ಲ ನಟನೆಯ ತೋರುವಫುಲ್ಲ ನಾಭನಮೆಲ್ಲ ಮೆಲ್ಲನೆಎಲ್ಲ ಹೆಂಗಳು ನೋಡಿರೆ 1 ಕಾಮಿ ಜನರಿಗೆ ಕಾಮಿತಾರ್ಥವಪ್ರೇಮದಿಂದಲಿ ಕೊಡುತಿಹಕಾಮನೈಯನ ಚರಣ ಕಮಲವನಂಬಿ ಬದುಕುವ ಬನ್ನಿರೆ2 ಅಂಗರಾಗ ಶ್ರೀರಂಗ ಮಂಗಳಸಿಂಗರದಿ ತಾ ನಿಂತಿಹಮಂಗಳಾಂಗನ ಮಂಗಳಾರತಿಎಲ್ಲ ಹೆಂಗಳು ನೋಡಿರೆ 3 ಒಂದು ಕೈಯಲಿ ಗಂಧಪುಷ್ಪ ಮ-ತ್ತೊಂದು ಕೈಯಲಿ ರಂಗನುಮಂದಹಾಸದಿ ಇಂದುಮುಖಿಯರಿ-ಗ್ಹೊಂದಿಸುವನತಿ ಚಂದದಿ 4 ಶುಕ್ರವಾರದಿ ಪೂಜೆಗೊಂಬುವಚಕ್ರಧರ ಶ್ರೀಕೃಷ್ಣನು ನಕ್ರಹರ ತ್ರಿವಿಕ್ರಮನು ಮನ-ವಾಕ್ರಮಿಸಿ ಸುಖ ಕೊಡುತಿಹ 5
--------------
ವ್ಯಾಸರಾಯರು
ಸೈಯವ್ವ ಇದು ಸೈಯೆ, ಗೋಪಿ, ಸೈಯವ್ವ ಇದು ಸೈಯೆ ಪ ಸೈಯೆ ಗೋಪಿ, ನಿನ್ನ ಮಗರಾಮನಿಗೆ ಒಳ್ಳೆ ಬುದ್ಧಿ ಕಲಿಸಿದ್ದೀಯೆ ಅ ಸಂಜೆಯ ವೇಳೆಗೆ ಬಂದು - ಸಟೆಯಲ್ಲ - ಮನೆಯ ಒಳಗಡೆ ನಿಂದುಕುಂಜರಗಮನೆ ಬಾರೆಂದು ಎನ್ನ ಮುಂಗುರುಳ ತಿದ್ದಿದಗಂಜಿ ಶಲ್ಯವ ಎನಗೆ ಮುಸುಕಿಟ್ಟು ಮುದ್ದಾಡಿ ಕಡೆಗೆಕಂಜಲೋಚನೆ ಕುಚದ ಗಂಟು ಬಿಚ್ಚೆಂದ ನೋಡು 1 ಬಿಟ್ಟ ಮಂಡೆಯಲಿ ಗಂಡ ಮೈಮರೆತು ಮಲಗಿಹುದ ಕಂಡುಜುಟ್ಟನ್ನು ಬಿಚ್ಚಿ ಮಂಚದ ನುಲಿಗೆ ಬಿಗಿದು ಕಟ್ಟಿದಕೊಟ್ಟಿಗೆ ಸುಡುತಿದೆ ಏಳೆಂದು ಬೊಬ್ಬೆಯಿಟ್ಟುದ ಕೇಳಿಥಟ್ಟನೇಳಲು ಗಂಡ, ಜುಟ್ಟು ಕಿತ್ತು ಹೋಯಿತಮ್ಮ2 ಅಡವಿ ಜಟ್ಟಿಂಗನ ಮಾಡಲಿಕೆ ಒಳ್ಳೆ ಸಡಗರ ಸಂಭ್ರಮದಿಂದಹೆಡಗೆ ತುಂಬ ಹೋಳಿಗೆ ಮಾಡಿ ಕೊಡ ನೀರು ತರಲು ಹೋದೆನೆಕಡೆಗೊಂದು ಹೋಳಿಗೆ ಬಿಡದೆ ಕೊಡದುಪ್ಪ ಹಾಲ್ಮೊಸರು ಪಾಯಸಕಡು ಫಟಿಂಗ ತುಡುಗು ತಿಂದು ಮೀಸಲಳಿದು ಎಡೆಗೆಡಿಸಿ ಹೋದನೆ 3 ಊರೊಳಿಂತಾಯ್ತೆಂದು ಸಾರಿದೆವೆ ನಾರೇರುಅಡವಿಯಲಿ ಕೂಡಿದೆವೆ ಹಲವಾರು ಹೆಂಗಸರುನೂರಾರು ಗೆಳತೇರು ಉಳಿದ ಹಾಲನು ಮಾರಿದಾರಿ ಹಿಡಿದು ಬರುವಾಗೊಂದು ಕೊಳವ ಕಂಡೆವೆ ನೊಡು 4 ಓರಗೆ ಹೆಂಗಳು ನಾವು ನೀರಾಟವಾಡಲಿಕೆಸೀರೆ ಕುಬಸವ ದಡದೊಳಿಟ್ಟು ಕೊಳಕೆ ಧುಮುಕಿದೆವೆಚೋರ ನಿನ್ನ ಮಗ ಸೀರೆಕುಬಸವನೆಲ್ಲ ತಕ್ಕೊಂಡು ಹೋಗಿತೋರದುಂಚ ಕಡಹದ ಮರನೇರಿ ನೋಡುತ ಕುಂತನೆ 5 ನೆಟ್ಟನೆ ನೀರಾಟವಾಡಿ ನಾಲ್ಕೂ ದಿಕ್ಕಿನಲಿ ನಾವು ಅಡರಿದೆವೆಇಟ್ಟಲ್ಲಿ ಸೀರೆಕುಬಸಗಳಿಲ್ಲ ಕೆಟ್ಟೆವಯ್ಯಯ್ಯೋಕಿಟ್ಟನ ಕೈಚಳಕವೆಂದು ನಾವಷ್ಟದಿಕ್ಕುಗಳ ನೋಡಿದೆವೆತುಟ್ಟತುದಿ ಕೊಂಬೆಯಲಿ ಕುಂತಿರುವ ಪುಟ್ಟನ್ನ ಕಂಡೆವೆ 6 ಮುಂದೆ ಹಸ್ತದಿ ಮುಚ್ಚಿಗೊಂಡು ಕೃಷ್ಣನಿಗೆ ಗೋಗರೆದು ಕೇಳಲುವಂದನೆ ಮಾಡಿದರೆ ನಿಮಗೆ ಸೀರೆ ಕುಬಸವ ಕೊಡುವೆನೆಂದಒಂದು ಕರದಿ ಮುಗಿವೆವೆಂದರೆ ಎರಡು ಕರದಿ ಮುಗಿಯಿರೆಂದಬಂಧನಕ್ಕೊಳಗಾದೆವೆಂದು ವಿಧಿಯಿಲ್ಲದೆ ಮುಗಿದೆವೆ 7 ಪುಷ್ಪಗಂಧಿಯರೆ ಒಪ್ಪಿತವಾಗಲಿಲ್ಲ ನನ್ನ ಮನಕೆಚಪ್ಪಾಳೆ ಇಕ್ಕುತ ಮರದ ಸುತ್ತ ತಿರುಗಿರೆಂದತಪ್ಪದು ಎಷ್ಟೊತ್ತಾದರು ಬಿಡನೆಂದು ಜಯಜಯವೆನುತಚಪ್ಪಾಳೆ ಇಕ್ಕುತ ಮರದ ಸುತ್ತಲೂ ತಿರುಗಿದೆವೆ8 ಪಗಡೆಕಾಯಿ ಕುಚದ ದಗಡಿಯರೆ ಪುಗಡಿ ಹಾಕಿರಿ ಎನ್ನೆದುರುತೆಗೆದು ಕೊಡುವೆ ನಿಮ್ಮ ವಸ್ತ್ರಗಳ ಬಗೆಬಗೆಯಿಂದಜಗದೊಳು ನಗೆಗೇಡಾದೆವು ಇನ್ನು ನುಡಿದು ಫಲವಿಲ್ಲೆಂದುಪುಗಡಿ ಹಾಕಿದೆವೆ ನಾವು ಛೀ ಛೀ ಎನ್ನುತಲಿ 9 ಕಡೆಯಾಟ ಕಮಲನೇತ್ರೆಯರೆ ಎಡೆಯಾಗಿ ಹೋಗಿ ನಿಲ್ಲಿರಿಓಡಿಬಂದರೊಂಟಿಯಾಗಿ ಹಿಡಿದು ನೋಡಿ ಕೊಡುವೆ ಎಂದಕೋಡಗ ಕೊರವಂಗೆ ಸಿಕ್ಕಿ ಆಡಿದಂತೆ ನಾವಾಡಿದೆವೆಓಡಿ ಬಂದೊಬ್ಬೊಬ್ಬರಿಗೂ ಹಿಡಿದು ಸವರಿ ವಸ್ತ್ರವನಿತ್ತನೆ 10 ತಂಡತಂಡದ ನಮಗೆ ಬಣ್ಣಬಣ್ಣದ ಬಳೆಯನಿಟ್ಟುಮಂಡೆ ಬಾಚಿ ಕುರುಳ ತಿದ್ದಿ ಕುಂಕುಮವಿಟ್ಟನೆಪುಂಡ ನಿನ್ನಣುಗ ನೆಲೆಯಾದಿಕೇಶವರಾಯಬಂಡು ಮಾಡಿ ಬಳಲಿಸಿ ಕೊನೆಗೆ ರಮಿಸಿ ಕಳಿಸಿಕೊಟ್ಟನೆ 11
--------------
ಕನಕದಾಸ
ಮಕ್ಕಳ ಮಾಣಿಕ ಮನೋಹರ ನಿಧಿ-ವೈರಿ-|ರಕ್ಕಸ ಶಕಟನ ತುಳಿದು ದೀಪಾದವೆ ಪಬಲಿಯ ದಾನವ ಬೇಡಿ ನೆಲವಈರಡಿಮಾಡಿ |ಜಲಧಿಯ ಪಡೆದದ್ದು ಈ ಪಾದವೆ ||ಹಲವು ಕಾಲಗಳಿಂದಶಿಲೆಶಾಪವಡೆದಿರಲು |ಫಲಕಾಲಕ್ಕೊದಗಿದುದೀ ಪಾದವೆ 1ಕಡುಕೋಪದಿ ಕಾಳಿಂಗನ ಮಡುವ ಕಲಕಿ |ಹೆಡೆಯನು ತುಳಿದುದು ಈ ಪಾದವೆ ||ಸಡಗರದಿಂದ ಕೌರವನ ಸಿಂಹಾಸನವ |ಹೊಡೆಮಗುಚಿ ಕೆಡಹಿದುದೀ ಪಾದವೆ 2ಶೃಂಗಾರದಿಂದ ಹೆಂಗಳು ಲಕ್ಷುಮಿಯ ಸಹಿತ |ಅಂಗನೆಯರೊತ್ತುವುದೀ ಪಾದವೆ ||ಸಂಗಸುಖದಿಂದ ಶ್ರೀ ಪುರಂದರವಿಠಲನ |ಅಂಗದೊಳಡಗಿದ್ದುದೀ ಪಾದವೆ 3
--------------
ಪುರಂದರದಾಸರು