ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಕಿಷ್ಟು ಕರುಣವೊ ಶ್ರೀಕೃಷ್ಣದೇವ ಪ ನಾಲ್ಕ್ಹತ್ತು ಲೋಕದಲಿ ಸುಖ ಸೂರೆ ಮಾಳ್ಪೊ ಹರಿ ಅ.ಪ ಮುಕ್ತಗಣ ನೋಡಯ್ಯ ನಿತ್ಯಮುಕ್ತಳ ನೋಡು ಶಕ್ತವಿಧಿ ವಾಣೀಶ ಭಕ್ತಿ ದೇವ ಫಣಿ ರುದ್ರ ಇವರ ಸತಿಯರ ನೋಡು ಉತ್ತಮೋತ್ತಮ ಸುಖವ ಸೂರೆಗೊಂಬರೊ ಹರಿಯೆ 1 ನಿನ್ನಾರು ಮಹಿಷಿಯರ ಸುರಪ ಸುರಗಣ ನೋಡು ಪುಣ್ಯತಮ ಸುರಮನಿಯ ಭೃಗುವ ನೋಡು ಚಿಣ್ಣ ಪ್ರಹ್ಲಾದನನ್ನ ಬಲಿ ಧ್ರುವ ಭೀಷ್ಮನ್ನ ಇನ್ನು ದ್ರೌಪದಿ ಶುಕನ ಆನಂದ ನೋಡಂiÀi್ಯ 2 ಅಂಬರೀಷನ ನೋಡು ರಾವಣಾನುಜ ಜನಕ ಪರೀಕ್ಷಿತ ವೃತ್ತ ಶಬರಿ ತುಂಬಿದ ಸದ್ಭಕ್ತ ಋಷಿಪತ್ನಿಯರ ನೋಡು ಕಂಬನಿಯ ಸುರಿಸುವೆನೊ ಕರುಣಿಸೊ ಹೃದ್ಗøಹದಿ 3 ನೀಯೆನ್ನ ಸತ್ವ ನೀಯೆನ್ನ ಜ್ಞಾನ ನೀಯೆನ್ನ ಮನ ಬುದ್ಧಿ ಕರುಣ ನಿಧಿಯೆ ನೀಯೆನ್ನ ಪ್ರಾಣರತಿ ನೀಯೆನ್ನ ಸತ್ಕರಣ ನೀಯೆನ್ನ ಧೃತಿ ಶಾಂತಿ ನೀಯೆನ್ನ ಸರ್ವನಿಧಿ 4 ನೀ ಮಾಡೆ ನಾ ಮಾಳ್ಪೆ ನೀನಾಡಿಸಿದರಾಡ್ವೆ ಕಾಮದನೆ ಕಾಮಪಿತ ಜಯೇಶವಿಠಲ ಶ್ರೀ ರಮಣ ಸರ್ವೇಶ ಈ ಮನಸು ನಿನ್ನಲ್ಲಿ ಪ್ರೇಮದಿ ನೆಲಸಿ ಇರುವಂತೆ ಕೃಪೆಮಾಡು 5
--------------
ಜಯೇಶವಿಠಲ
ಮಂಗಳ ಮಾಧವಗೆ ಮಾರಮಣಗೆ ಮಂಗಳ ಶ್ರೀಧರಗೆ ಪ ಭಂಗ ಭವಗಜ ಸಿಂಗ ಕರುಣಾಪಾಂಗ ಶ್ರೀಶಗೆ ಗಂಗಾಜನಕಗೆ ತುಂಗ ಮಹಿಮಗೆ ಭಂಗರಹಿತಗೆ ಅನಂಗಪಿತನಿಗೆ 1 ಭುವನ ಮೋಹನ ಸುಮನಸರ ಪ್ರಿಯ ಕವಿಜನರ ಹೃದ್ಗøಹ ನಿವಾಸಗೆ ನವನವ ಲೀಲೆಗಳ ತೋರ್ದಗೆ ನವರತುನದಾರತಿಯ ಬೆಳಗಿರೆ 2 ಗರುಡಗಮನಗೆ ಉರಗಶಯನಗೆ ಪರಮಪುರುಷಗೆ ಪುಣ್ಯಚರಿತಗೆ ಉರಗಗಿರಿವಾಸನಿಗೆ ದೇವಗೆ ಸುರರೊಡೆಯ ಶ್ರೀ ಶ್ರೀನಿವಾಸಗೆ3 ಸೌಮ್ಯನಾಮ ಸಂವತ್ಸರದಂದು ನೇಮದಿಂದ ಭಜಿಪ ಭಕುತರ ಕಾಮ್ಯಕರ್ಮವ ತರಿದು ಪೊರೆಯುವ ಕಮಲನಾಭ ವಿಠ್ಠಲನ ಪ್ರತಿದಿನ4
--------------
ನಿಡಗುರುಕಿ ಜೀವೂಬಾಯಿ
ರಾಘವೇಂದ್ರಯತಿ ಗುರುರಾಯರ ಮಹಿಮೆ ಕೇಳಿರಿ ನಮ್ಮ ಗುರುರಾಯರ ಮಹಿಮೆ ಪ ಪರಮ ಭಕುತಿಯಿಂದ ಸ್ಮರಿಸುವ ಸುಜನರ ದುರಿತಗಳÀ್ಹರಿಸಿ ಸದ್ಗತಿ ಪಥವ ತೋರುವ ಅ.ಪ ಇಂದಿರೇಶನ ಮಹಿಮೆ ಪೊಗಳುವ ಭಕ್ತ ಸಂದಣಿ ಪೊರೆಯುವರ ಹಿಂದಿನ ಅಘಗಳನೊಂದೂ ನೋಡದೆ ಶ್ರೀ- ಮುಕುಂದನ ಭಜಕರ ಸಂಗಡ ನೀಡುವ ದಿವ್ಯ 1 ದೇಶ ದೇಶದೊಳಿವರ ಮಹಿಮೆಗಳ ಉ- ಲ್ಲಾಸದಿ ಪೊಗಳುವರ ದಾಸರೆಂತೆಂದು ಸಂತೋಷದಿ ಸೇವಿಪ ಮೀಸಲ ಮನದವರ ಪೋಷಿಸುತಿರುವಂಥ 2 ಹಲವು ಸಾಧನವೇತಕೆ ತನುಮನವ ಶ್ರೀ- ಹರಿಗೆ ಸಮರ್ಪಿಸಿರಲು ಕುಲಕೋಟಿ ಪಾವನ ಮಾಳ್ಪ ಶ್ರೀ ಗುರುಗಳ ಚರಣ ಸೇವಕರೆಂದು ಸಿರಬಾಗಿ ನುತಿಸಿರೊ 3 ನಿದ್ರೆ ಮಾಡುವ ಬಾಲೆಯ ಕರಗಳಿಗೆ ಶ್ರೀ- ಮುದ್ರಾಧಾರಣ ಮಾಡಿಹ ಸಜ್ಜನರಿಗಿವರ ಭಯ ವಜ್ರಕವಚವು ಸತ್ಯ ಹೃದ್ಗøಹದಲಿ ರಾಮಭದ್ರ ಮೂರುತಿ ಕಾಂಬ 4 ಸವಿನಯ ತೋರುವರ ಕನಲಿಕೆ ಕಳೆದು ಶ್ರೀ ಕಮಲನಾಭ ವಿಠ್ಠಲನೊಲುಮೆಯ ಪಡೆದ ಮಂತ್ರಾಲಯ ನಿಲಯ5
--------------
ನಿಡಗುರುಕಿ ಜೀವೂಬಾಯಿ
ಹೆಜ್ಜೆಗಳಿವೆ ನೋಡಿರಿ ರಂಗಯ್ಯನಹೆಜ್ಜೆಗಳಿವೆ ನೋಡಿರಿ ಪಹೆಜ್ಜೆಗಳಿವೆ ನೋಡಿರಿ ಮೂರ್ಜಗದÉೂಡೆಯನಅಬ್ಜಭವಾದ್ಯರ ಹೃದ್ಗøಹವಾಸನ ಅ.ಪಮಧುರಾಪುರದಿ ಜನಿಸಿದನ ಬೇಗಮಾವ ಕಂಸನ ಛೇದಿಸಿದನಚದುರೇರಿಗೊಲಿದ ಶ್ರೀಶನ ದಿವ್ಯಮದನಮೋಹನ ಕೃಷ್ಣವಿಧಿಭವಾರಾಧ್ಯನ1ಗೋಕುಲವಾಸನೆಂದೆನಿಪ ದಿವ್ಯನಾಕೇಶವಂದ್ಯ ಸರ್ವೇಶನಭೀಕರ ದೈತ್ಯರ ಸದೆದನ ಸವ್ಯ-ಸಾಚಿಯ ರಥದೊಳು ಏಕಾಂತ ನುಡಿದನ 2ವೇದ ಚೋರನ ಭೇದಿಸಿದನ ಗಿರಿಭಾರಬೆನ್ನಿಲಿ ಪೊತ್ತು ನಿಂತನಆದಿ ದೈತ್ಯನ ಸೀಳಿ ಭೂಮಿಯ ತಂದುಕ್ರೂರ ದೈತ್ಯನ ಕರುಳ್ಹಾರ ಮಾಡಿದ ಹರಿಯ 3ಬಲಿಯ ದಾನವ ಬೇಡಿದನ ಬಲುಛಲದಿ ಕ್ಷತ್ರಿಯರ ಸೋಲಿಸಿದನಲಲನೆಯ ತಂದ ಶ್ರೀವರನಗೊಲ್ಲರ ಕುಲದಲ್ಲಿ ಬೆಳೆದ ಶ್ರೀಚಲುವ ಗೋಪಾಲನ 4ದುಷ್ಟಕಾಳಿಂಗನ ಮದವನಳಿದುಮೆಟ್ಟಿನಾಟ್ಯದಿ ಸಿರದಿ ತುಳಿದನಪುಟ್ಟಪಾದದ ದಿವ್ಯ ಚಲುವನ ಗೋವ್ಗ-ಳಟ್ಟಿ ಹೋಗುವ ನಮ್ಮ ಪುಟ್ಟ ಗೋಪಾಲನ 5ಶಂಖು ಚಕ್ರವು ಗದ ಪದ್ಮವು ಹೊಳೆವÀಕಿಂಕಿಣಿಪೈಜನಿನಾದವುಬಿಂಕದಿ ಊದುವ ಕೊಳಲಗಾನವು ನಿ-ಶ್ಶಂಕೆಯಿಂದಲಿ ಭಕ್ತವೃಂದವ ಪೊರೆದನ 6ಥಳಥಳಿಸುವ ದಿವ್ಯ ತಿಲಕವು ಹೊಳೆಯೆಬರಿಮೈಯ್ಯ ತೋರುತ ನಿಂತನಕುದುರೆಯನೇರುತ್ತ ಬರುವನಸಿರಿಕಮಲನಾಭ ವಿಠ್ಠಲ ಭಕ್ತಪೋಷನ7
--------------
ನಿಡಗುರುಕಿ ಜೀವೂಬಾಯಿ