ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೇವಿ ಶ್ರೀಸರಸ್ವತಿಯೆ ಕಾಯೇ ಪ ಮಾವಿನುತ ಹರಿನಾಮ ಸಂತತದಿ | ನುಡಿಸೀ ಅ.ಪ. ಪತಿ ಮಾತೆ | ನಾಲಗೆಯಲೀ ನಿಂತುಕಾಲ ಕಾಲಕೆ ಹರಿಯ | ಲೀಲಾತಿಶಯವಾ |ಪೇಳಿಸುತ ಜಿಹ್ವಾಂಗ | ಸಾರ್ಥಕೆನಿಪುದು ಎಂದುಕೇಳುವೆನು ವರ ನಿನ್ನ | ಪಾಲಿಪುದು ಅದನ 1 ವಿದೈಗಳಿಗಭಿಮಾನಿ | ಬುದ್ಧಿ ಪೂರ್ವಕ ಬೇಡ್ವೆತಿದ್ದಿ ಎನ್ನಲಿ ಇಹ ಅ | ವಿದ್ಯೆಗಳನೆಲ್ಲಾ |ಮಧ್ವೇಶ ಹರಿಯೊಲಿವ | ಶುದ್ಧ ಸಾಧನವಿತ್ತುನಿದ್ರೆಯಿಂದೆಚ್ಚರಿಸಿ | ಬುದ್ಧಿ ಪ್ರದಳೆನಿಸೇ 2 ಅಜನ ಅರ್ಧಾಂಗಿನಿಯೆ | ಪ್ರಜ್ವರವ ಕಳೆವಂಥಸುಜನ ಸಂಗವನಿತ್ತು | ರಜ ದೂರನೆನಿಸು |ಅಜನ ಜನಕನು ಗುರು | ಗೋವಿಂದ ವಿಠಲ | ಪದಅಬ್ಜವನು ತೋರವ್ವ | ನಿಜ ಹೃದಾಬ್ಜದಲೀ3
--------------
ಗುರುಗೋವಿಂದವಿಠಲರು
ಬಾದರಾಯಣ ಮದದಿ ಮರೆತೆನೊ ಸದಯದಿಂ ಮುದ ಪಾಲಿಸೊ ಪ ಬೋಧ ಮೂರುತೆ ಭಕ್ತರಾ ನುಡಿ ಸಾದರದಿ ನೀನಾಲಿಸೋ ಅ.ಪ ವೇದಭಾಗವ ಮಾಡಿ ವೇದವ್ಯಾಸನೆಂದೆನಿಸಿದಿ ಸದಮಲಾಭಾವದಲಿ ನಿನ್ನಯ ಪಾದಕಮಲವ ತೋರಿದಿ 1 ಗಾತ್ರ ಎನ್ನಯ ಖೇದ ಭಾವವನೋಡಿಸೊ ಮೋದತೀರ್ಥ ಹೃದಾಬ್ಜ ಮಂದಿರ ಸಾಧು ಸಂಗವ ಮಾಡಿಸೋ 2 ತರ್ಕಮುಧ್ರಾಧರನೆ ಎನ್ನ ಕುತರ್ಕ ಬುದ್ಧಿಯನೋಡಿಸೋ ಅರ್ಕಸನ್ನಿಭ ಬ್ರಹ್ಮ ಸುತರ್ಕ ಮಾರ್ಗವ ಬೋಧಿಸೋ 3 ಅಭಯಪ್ರದಕರ ಎನ್ನಭವ ಭಯ ತ್ರಿಭುವನೇಶ್ವರ ಓಡಿಸೀ ಇಭವರದ ಮಧ್ವೇಶ ಸಂತತ ಸಭೆಯ ಸಹನೀ ತೋರೆಲೊ4 ಯೋಗ ಪೀಠನೆ ನೀಗಿಸೆನ್ನಯ ಭೋಗಬುದ್ಧಿಯ ಸರ್ವದಾ ಯೋಗಿಕುಲವರ ಬಾಗಿ ನಮಿಸುವೆ ಯೋಗಮಾರ್ಗವ ತೋರಿಸೊ5 ಮಾ ಕಮಲಜ ಭವೇಂದ್ರವಂದಿತ ಮಾಕಳತ್ರ ನಮೋಸ್ತುತೇ ಯಾಕೆ ಎನ್ನಲಿ ನಿರ್ದಯವು ನೀ ಸಾಕಲಾರದ ಪಾಪಿಯೇ 6 ಸನ್ನುತಿಸಿ ನಾ ನಿನ್ನ ಬೇಡುವೆ ಸನ್ನುತಾಂಘ್ರಿಯ ಸೇವೆಯಾ ಸನ್ಮುನೀವರ ಶ್ರೀ ನರಹರೆ ದಾಸದಾಸರ ದಾಸ್ಯವಾ 7
--------------
ಪ್ರದ್ಯುಮ್ನತೀರ್ಥರು