ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾಲಿಸೊ ಶ್ರೀಹರಿ ಎನ್ನ ಪಾಲಿಸೊ ಪಾಲಿಸೊ ನಾ ನಿನ್ನ ಕಾಲಿಗೆ ಎರಗುವೆ ಶ್ರೀಲೋಲ ನೀ ಹೃದಯಾಲಯದೊಳು ಬಂದು ಪ ಪರಿ ನಾಮಾಮೃತವನ್ನು ಪರಮ ಔಷಧÀವೆಂದು ಸುರಿದು ಸುಖಿಸುವಂತೆ 1 ಸುಂದರ ಸುಗುಣನೊಂದೊಂದು ಗುಣದ ಮಾತ್ರೆ ಸಂದೇಹವಿಲ್ಲದಾನಂದದಿಂದರೆದ್ಹಾಕಿ 2 ಭವ ಬಂಧ ಬಿಡಿಸಿನ್ನು ಅನುಮಾನವ್ಯಾತಕಾನಂತ ಹಸ್ತಗಳಿಂದ 3 ಲಕ್ಕುಮಿರಮಣನೆ ಲೆಕ್ಕಿಸೊ ಎನ ಮಾತು ದುಷ್ಟ ಜ್ವರವ ನಿನ್ನ ಚಕ್ರದಿಂದ್ಹತಮಾಡಿ 4 ಭೀತಿ ಬಡುವೆನಯ್ಯ ಭೀಮೇಶಕೃಷ್ಣನೆ ಯಾತಕೆ ತಡವಿನ್ನು ಪ್ರೀತಿಮಾಡೆನ್ನಲ್ಲಿ ಪಾಲಿಸೊ 5
--------------
ಹರಪನಹಳ್ಳಿಭೀಮವ್ವ
ಮುದ್ದು ಮೋಹನದಾಸರೆ | ಎನ್ನನು ಬೇಗ ಉದ್ಧರಿಸಿರಿ ಪ್ರೀತರೆ ಪ. ಬಿದ್ದಿಹೆ ದುರ್ವಿಷಯಾಂಧ ಕೂಪದೊಳೀಗ ಶುದ್ಧ ಜ್ಞಾನವನಿತ್ತು ಪದ್ಮನಾಭನ ತೋರಿ ಅ.ಪ. ಪರಮಯತಿಚರ್ಯರೆ | ಈ ಜಗದೊಳು ವರ ಭಕ್ತಿವೆಗ್ಗಳರೆ ತರಳತನದಲಿ ಪಾದಚಾರಿಗಳಾಗಿ ಧರೆಯ ಕ್ಷೇತ್ರವನೆಲ್ಲ ಚರಿಸಿರ್ಪ ವಶಗೈದು ಹರಿಯ ಮೆಚ್ಚಿಸಿ ದಾಸಭಾವದಿ ಪರಿಪರಿಯ ಅಂಕಿತದಿ ಶಿಷ್ಯರ ಪರಮ ಸಂಭ್ರಮಗೊಳಿಸಿ ಮೆರೆಯುತ ಸಿರಿವರನ ಪದಸಾರಿದಂಥ 1 ಶೀಲವಂತರೆ ನಿಮ್ಮನು | ಕೊಂಡಾಡೆ ಈ ಸ್ಥೂಲಮತಿಗೆ ಸಾಧ್ಯವೆ ಕಾಲಕಾಲದಿ ಹರಿಲೀಲೆಯ ಪಾಡುತ ನೀಲವರ್ಣನ ಹೃದಯಾಲಯದಿ ಕಂಡು ಮೂಲರೂಪಿಯ ಪಾದಕಮಲದಿ ಲೋಲುಪಡುತಲಿ ಓಲ್ಯಾಡಿದ ಬಹು ಶೀಲಗುಣಗಣಪಾಲರೆ ಎನ್ನ ಪಾಲಿಸಿರಿ ಸಿರಿಲೋಲನ ತೋರಿ 2 ಸಂದೇಹವಿನ್ಯಾತಕೆ | ಮಂತ್ರದ ಮನೆ ಮಂದಿರದೊಳಗಿರೆ ಬಂದಿರಿ ದಾಸತ್ವದಿಂದ ಧರೆಯೊಳು ನಂದಕಂದನ ಲೀಲೆ ಅಂದ ಪಾಡುತಲಿ ಅಂದು ಗ್ರಂಥಗಳನೋದಿ ಪದವನು ಒಂದು ರಚಿಸಿ ಸಾಲದೆ ಮು- ಕುಂದನಾ ಗುಣವೃಂದ ಪೊಗಳಲು ಚಂದದಿಂದ ವಸುಂಧರೆಯೊಳು 3 ವರತತ್ವ ಅಂಶದಲಿ | ಶ್ರೀ ಗುರುವಿಗೆ ತಾರಕರೆನಿಸಿದಿರಿ ಸಾರಿರೆ ನಿಮ್ಮ ಪದ ಸ್ವಪ್ನದೊಳು ತೋರಿ ತೀರುಥವನೆ ಕೊಟ್ಟು ಸುಮ್ಮನಿರಲು ಗುರು ಸಾರಿ ಬಂದು ಬದಿಯಲಿ ನಿಂದು ಭೂರಿ ಕರುಣವ ಮಾಡಬೇಕೆಂದು ತೋರಿ ಪೇಳಲು ಹರಿ ನಿರ್ಮಾಲ್ಯ ಅಪಾರ ಕರುಣದಿ ಕೊಟ್ಟು ಪೊರೆದಿರಿ 4 ಸ್ತುತಿಸಲಳವೆ ನಿಮ್ಮನು | ಈ ಜಡಮತಿ ಕೃತಕವಲ್ಲವು ಇದಿನ್ನು ಅತಿಪ್ರೇಮ ಗುರುಗಳ ಹಿತದಿಂದ ನುಡಿದುದು ಚ್ಯುತದೂರ ಗೋಪಾಲಕೃಷ್ಣವಿಠ್ಠಲನ ಸತತ ಸ್ತುತಿಸುವ ಮತಿಯ ಪಾಲಿಸಿ ಪಥವ ತೋರಿರಿ ಕರ್ಮಜರೆ ಬೇಗ ಸತತ ಶ್ರೀ ಗುರು ವ್ರತವ ಪಾಲಿಪ ಮತಿಯ ದೃಢದಲಿ ಹಿತದಿ ಕರುಣಿಸಿ 5
--------------
ಅಂಬಾಬಾಯಿ
ವೆಂಕಟಗಿರಿವಾಸ ವೆಂಕಟಗಿರಿವಾಸ ವೆಂಕಟಗಿರಿವಾಸ ಶ್ರೀ ವೆಂಕಟೇಶ ಪಸುರ ಸಮುದಾಯ ಶಿರೋಮಣಿ ರಾಜಿತಚರಣಸರೋರುಹ ಶ್ರೀ ವೆಂಕಟೇಶ 1ಕಮನೀಯ ವಿಗ್ರಹ ಕಮಲಾಲಯಾಕರಕಮಲಶೋಭಿತಪಾದ ಶ್ರೀ ವೆಂಕಟೇಶ 2ವಿಧಿಮುಖಾಮರಗಣ ವಿಧಿವಿಹಿತಾರ್ಚಿತಬುಧಹೃದಯಾಲಯ ಶ್ರೀ ವೆಂಕಟೇಶ 3ಸನಕಾದಿಮುನಿವಂದ್ಯ ಸಾಧುಸಂರಕ್ಷಕವನಧಿಸುತಾ ಭೂಮಿಧವ ವೆಂಕಟೇಶ 4ಅಂಜನವೃಷಶೇಷ ವಿನತಾತನುಜ ನಾಮರಂಜಿತಾಚಲವಾಸ ಶ್ರೀ ವೆಂಕಟೇಶ 5ನಾರಯಣಾದ್ರಿ ಸಿಂಹಾದ್ರಿ ಶ್ರೀಶೈಲೇತಿಸಾರ ವೆಂಕಟನಾಮಾಷ್ಟಕ ಭೂಧರೇಶ 6‘ವೆಂ ಪಾಪಂ ಕಟತಿ ನಾಶಯತೀತಿ’ ವಿಖ್ಯಾತಸಾಂಪ್ರತ ಸುಸ್ಥಿರ ಶ್ರೀ ವೆಂಕಟೇಶ 7ನಿತ್ಯ ನಿಜಾನಂದ ನಿರುಪಮಾಮಿತಶಕ್ತಿವೃತ್ತಿ ಪ್ರವರ್ತಕ ಶ್ರೀ ವೆಂಕಟೇಶ 8ದಿವ್ಯ ದಕ್ಷಿಣಮುಖ್ಯದೋರ್ಧೃತ ಶ್ರೀ ಚಕ್ರಸವ್ಯದೋರ್ಧೃತ ಶಂಖ ಶ್ರೀ ವೆಂಕಟೇಶ 9ಭಜಿತವ್ಯಂ ಪಾದಪಂಕಜಮಿತಿ ದರ್ಶಿತನಿಜ ದಕ್ಷಾಧಃಪಾಣೇ ಶ್ರೀ ವೆಂಕಟೇಶ 10ಭಜತಾಂ ಭವಾಂಭೋಧಿ ಕಟಿಮಿತಮಿತಿ ವಾಮಕಟಿ ನ್ಯಸ್ತ ಕರಕಂಜ ಶ್ರೀ ವೆಂಕಟೇಶ11ಹಾರ ಕಿರೀಟ ಕುಂಡಲ ಗಾತ್ರ ಶ್ರೀ ವೆಂಕಟೇಶ 12ಕಂಕಣ ಕೇಯೂರ ವಲಯ ಶೋಭಿತ ಕರಕುಂಕುಮಾಂಕಿತ ಮಾಲ ಶ್ರೀ ವೆಂಕಟೇಶ 13ಕಟಿಸೂತ್ರ ಕಲಿತ ಪೀತಾಂಬರ ಕಿಂಕಿಣಿಕಟಕಮಂಡಿತಪಾದ ಶ್ರೀ ವೆಂಕಟೇಶ 14ತಿರುಪತೀತಿಖ್ಯಾತ ತೀರ್ಥಭೂತಾದ್ರೀಶವರದ ವಿಶ್ವಾಧಾರ ಶ್ರೀ ವೆಂಕಟೇಶ 15ಓಂ ಮುರಾರಯೇ ನಮಃ
--------------
ತಿಮ್ಮಪ್ಪದಾಸರು
ಪಾಲಿಸಯ್ಯ ಪವನನಯ್ಯಕಾಲಕಾಲಕೆ ಹೃದಯಾಲಯದೊಳು ನಿನ್ನಶ್ರೀಶ ಸಂಸಾರವೆಂಬೊ ಸೂಸುವ ಶರಧಿಯೊ-ಮೂರು ಗುಣಗಳಿಂದ ಮೂರು ತಾಪಗಳಿಂದಕರುಣಾಸಾಗರ ನಿನ್ನ ಸ್ಮರಣೆ ಮಾತ್ರದಿ ಸಕಲ
--------------
ಗೋಪಾಲದಾಸರು
ಶ್ರೀ ವೆಂಕಟೇಶ ಸಲಹು ವೆಂಕಟೇಶಭಾವಿಕ ಸೇವಕ ಭವಭಯನಾಶ ಪ.ಸುರಾರಿ ಗಜಗಳೆಂಬ ಗಣಕೆಕಂಠೀರವಕರಿರಾಜ ಸಂಕಟ ಛಿತ್ತ ದೇವಪರಮಭಾಗವತರ ಸಮೂಹ ಸಂಜೀವನಪುರಹರವರಮತ್ತವೃಕ( ಷ?)ಮಥನ 1ವನಜಭವ ಸವಿೂರರೊಡೆಯ ಶ್ರೀರಮಣಮುನಿ ಹೃದಯಾಲಯ ಪರಿಪೂರ್ಣಫಣಿವರಶಾಯಿಪರಾತ್ಪರಅಗಣಿತಗುಣಗಂಭೀರ ಜಗದದಾತ2ಶುಕಶೌನಕ ಸನಕಾದಿ ದೇವಋಷಿಸಕಳ ಸುರಭೂಸುರ ರಾಜಾಧೀಶಭಕುತವತ್ಸಲಬಾದರಾಯಣಹರಿಹಯಮುಖ ಪ್ರಸನ್ವೆಂಕಟ ಗಿರಿನಿಲಯ 3
--------------
ಪ್ರಸನ್ನವೆಂಕಟದಾಸರು