ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನುದಿನ ಚರಣಕಮಲವ ತೋರಮ್ಮ ನಮ್ಮಮ್ಮಾ ಪ. ಮನೋಭಿಮಾನಿಯೇ ಎನ್ನವಗುಣಗಳೆಣಿಸದೆ ತ್ವರಿತದಿ ಬಂದು ಮುತ್ತಿನ ಗದ್ದಿಗೆಯನೇರಮ್ಮ ನಮ್ಮಮ್ಮಾ ಅ.ಪ. ದಕ್ಷಕುವರಿ ದಾಕ್ಷಾಯಿಣಿ ಗೌರಿ ಪಕ್ಷಿವಾಹನನ ಸೋದರಿ ಈಕ್ಷಿಸುತಿರುವೆನು ಉಪೇಕ್ಷಿಸದೆ ಎನ್ನ ರಕ್ಷಿಸಿ ಕಾಯೆ ಪಾರ್ವತಿ ತಾಯೆ 1 ಶಂಭುದೇವನ ರಾಣಿ ಹೃದಯಾಂಬರದೊಳು ನಿಂದು ಅಂಬರ ಪೂಜಿತೆ ನಂಬಿದ ಭಕ್ತರ ಪೊರೆವ ಸದ್ಗುಣ ಚರಿತೆ 2 ಗೆಜ್ಜೆ ಪಾದಗಳಿಂದ ಘಲ್ ಘಲ್ ಎನುತ ಬಾರಮ್ಮ ಹೆಜ್ಜೆಯನಿಡುತ ಮುಗುಳ್ನಗೆ ನಗುತ ಬಾರಮ್ಮ ಸುಜ್ಞಾನ ಮತಿಯಿತ್ತು ಕಾಯುವ ತಾಯಿ ಬಾರಮ್ಮ 3 ಕಂಚುಕ ಪಟ್ಟೆಯ ಪದಕ ಕಟ್ಟಿದ ಕಠಾಣೆ ಮುತ್ತಿನಮೂಗುತಿ ಪಚ್ಚೆಯ ಓಲೆ ಇಟ್ಟ ಕಸ್ತೂರಿತಿಲಕ ಕೆತ್ತಿದ ಕಿರೀಟ ಹೊಳೆಯುತ 4 ಬೇಡಿಕೊಂಬೆವೆ ತಾಯೆ ನೀ ಎನ್ನ ಆಪತ್ತು ಪರಿಹರಿಸಿ ಪಾಡಿ ಪೊಗಳಿ ಕೊಂಡಾಡುವೆ ಕಾಯೆ ತಾಯೆ ಬೇಡಿದ ವರಗಳ ರುಕ್ಮಿಣೀಶವಿಠಲನ ಕರುಣದೆ ನೀಡೆ ತಾಯೆ 5
--------------
ಗುಂಡಮ್ಮ
ನಂದಿವಾಹನಾ ಪಾಲೀಸೊ ನೀ | ಕಂದ ನೆಂದನಾ ಪ ಕಂದು ಗೊರಳ ಮೌ | ಳೆಂದು ಶಿಖರ ಅಮರೇಂದ್ರ ಮುಖರು ಸುರ | ವೃಂದ ವ್ಯಂದ್ಯ ಪದಅ.ಪ. ನಂದ - ನಂದನಾ - ಪ್ರಿಯ ಸಖ | ಮಂದಜಾಸನಾಕಂದ ನೆನಿಸಿ ದುರ್ | ವೃಂದ ತ್ಯಜಿಸಿ ತವತಂದೆ ಯಾಜ್ಞೆಯಲಿ | ನಿಂದು ಸರಿದ ಹರ 1 ದಿತಿಸುತ | ಸ್ತೋಮ - ಪ್ರೀಯನೇ ||ಶಾಮ ಸುಂದರ ಹರಿ | ಪ್ರೇಮಾನ್ವಿತ ಸುತಕಾಮಾರಿಯೆ ಹರ | ಸಾಮಜವಾಸಾ 2 ಸೇವ್ಯ ನಂಘ್ರಿ ದಶದಿವ್ಯ ಕಲ್ಪ ತಪ | ಗೈಯ್ಯೆ ಶಯ್ಯನಾದೆ 3 ಯೋಗಿ ರೂಪ ಭವರೋಗ ವೈದ್ಯ ಹೃ | ದ್ರೋಗ ಕಳೆಯೊ ಶಿವ4 ಗೌರಿ ಮನೊ - ಹರಾ - ಕೈಲಾಸವಾಸ | ಕೈರಾತಾ ಕೃತಿಧರಾ ||ಗಿರಿ ಇಂದ್ರ ಕೀಲದಿ | ಘೋರ ತಪಸಿ ನರಸಾರೆ ನಿನ್ನ ಪದ | ಶೂರ ಪಡೆದ ಶರ 5 ಶುಕ | ಲಿಂಗಾಕಾರನೇ ||ತುಂಗ ಮಹಿಮ ನಿ | ಸ್ಸಂಗ ಹರಿಯ ದ್ವಿತಿಯಂಗ ಡಮರು ಶೂ | ಲಿಂಗಳ ಪಿಡಿದಿಹ 6 ತೈಜಸ - ತಾಮಸ | ಸಾಕಾರಿ - ಓಜಸಾ ||ನೀ ಕುಶಾಸ್ತ್ರದಲಿ | ಭೀಕರರನು ಅವಿವೇಕರ ಮಾಡ್ದೆ | ಪಿ | ನಾಕಿ ಧರ ಹರ 7 ರುಂಡ - ಮಾಲನೇ - ಮುನಿಜ ಮೃ | ಕಂಡ - ಪಾಲನೇ ||ಅಂಡಜ ಮಹ ಬ್ರ | ಹ್ಮಾಂಡ ದೊಡೆಯ ಪದಪುಂಡರೀಕದೊಳು | ಬಂಡುಣಿ ಎನಿಸಿಹೆ 8 ಶಂಭೊ - ಶಂಕರ - ಧೂರ್ಜಟೆಯೆ | ಅಂಚೆ - ಮನೋಹರಾ ||ಕಂಬು ಪಾಣಿ ಪದ | ಹಂಬಲಿಸುವೆ ಹೃದಯಾಂಬರದೊಳು ಎನ | ಬಿಂಬನ ತೋರಿಸು 9 ಸೋಮರ್ಕಾನಲ - ಈಕ್ಷಣಾ | ಭೀಮ - ಕೈಕಪಾಲ ||ಭೀಮ ಭವಾಟವಿ | ಧೂಮಕೇತು ಸಿರಿರಾಮ ಪದಾಶ್ರಿತ | ವೈಮನ ಕಳೆಯೊ 10 ಭಾವ - ಜಾರಿಯೇ - ಮುರುಹರ | ರಾವಣಾದಿ - ಪ್ರಿಯಾ ||ಸಾವಧಾನದೊಳು | ಭಾವ ಶುದ್ಧಿಸುತತೋರ್ವುವೆನಗೆ ಗುರು | ಗೋವಿಂದ ವಿಠಲನ 11
--------------
ಗುರುಗೋವಿಂದವಿಠಲರು
ಬಂದ ಶಿರಿ ರಾಘವೇಂದ್ರಮೂರುತಿ ಮನ ಮಂದಿರದೊಳಗೆ ಸರಸದಿ ಪ ಬಂದನು ಭಕುತನ ಬಂಧನ ಬಿಡಿಸ್ಯಾ - ನಂದನೀಡುತ ಮುದದಿಂದಲಿ ಭರದಿಂದಅ.ಪ ಮುದದಲಿ ಶೋಭಿಪ ವದÀನದೊಳೊಪ್ಪುವ ರದನದಿ ಶೋಭಿತನು ಉದಿಸಿದ ಎನ್ನಯ ಹೃದಯಾಂಬರದೊಳು ಸದಯ ಮೂರುತಿ ಧರನು ಆಗಾಡಿದ ಮೃದು ನುಡಿಯಾ ಅತಿ ಭಿಡಿಯಾ ಪದಸಕಿತ - ಸುಖನೀಡುತ ಇದು ಮೊದಲಾ ಗಿಹ - ಅದ್ಭುತ ಮಹಿಮೆಯ ಪದÀದಲಿ ತೋರುತ ಸದಮಲ ಮನದೊಳು 1 ಕುಣಿದಾಡುತ ಗುಣಗಳ ಗಣಿಸುವ ಭಕ್ತರ ದಣಿಸೆನೊ ಭವದೊಳಗೆ ಗಣಿಸುವೆ ದಾಸರ ಗಣದೊಳಗವನಿಗೆ ಉಣಿಸುವೆ ಪರಸುಖ ಕೊನಿಗೆ ಬೇಡಿದ ಇಷ್ಟವ ಕೊಡುವೆ ದುರಿತವ ತಡಿವೆ ಪೊರೆಯುತಾ ಬೆರೆಯುತಾ ಮಣಿಸುತಾ ತಿಳಿಸುತಾ ಕ್ಷಣ ಕ್ಷಣದಲಿ ವೀಕ್ಷಣದಿಂದಲಿ ಶÀ್ರಮ ತೃಣ ಸಮವೋ ಧಣಿ ನಾ ನಿನಗೆಂದು 2 ಧಿಟಜ್ಞಾನ - ಭಕುತಿಯ ಥಟನೆ ಕೊಡುವೊ ಉತ್ಕಟ ಮಹಿಮನೋ ನಾನು ಪಟುತರ ಎನಪದ ಚಟುಲ ನಳಿನಯುಗ ಷಟ್ಪದ ಸಮ ನೀನೋ ನಾನಾಡಿದ ನುಡಿ ಖರೆಯಾ - ಮರೆಯಾ ಕೊಂಡಾಡೆಲೋ ನೀಡೆಲೋ ಘಟಿಸುವೆ ಸಮಯಕೆ - ಧಿಟ ಗುರುಜಗನ್ನಾಥ ವಿಠಲನ ಹೃತ್ಯಂ - ಪುಟದಿ ತೋರುವೆನೆಂದು 3
--------------
ಗುರುಜಗನ್ನಾಥದಾಸರು
ಭವ ವನಧಿಯ ಪೋತ ಪ ಪಂಕಜ ಪಾಣಿಯೆ ಅ.ಪ. ಅರ | ವಿಂದ ನಯನ ಹೃನ್ಮಂದಿರದಲಿ ಆ | ನಂದವನೀಯೋ 1 ಭವ ಬಂಧನವ ಬಿಡಿಸೊ | ಸ್ಮರಿಸುವರಘ ಹರಿಸೋಶಂಬರಾರಿಯ ಪಿತ ಮನವನೆ ನಿಲಿಸೋ ನಿನ್ನೊಳು ನೆಲೆಗೊಳಿಸೋ ಶಾಂಭವಿ ಧನುವನು ಭಂಜಿಸಿದಾತನೆಶಂಭು ನಿಶುಂಭರ ಸವರಿದ ರಾಮನೆ 2 ಬಿಂಬಾನೆ ಗುರು ಗೋವಿಂದ ವಿಠಲಯ್ಯ | ನೀಯನ್ನ ಸಲಹಯ್ಯ| ತುಂಬೀಹ ಷಡ್ವೈರಿಯ ಕಳೆಯಯ್ಯ | ನಿನ್ನಯ ಮಹಿಮೆಯ ||ಹಂಬಲ ಹೃದಯಾಂಬರದೊಳು ತುಂಬಿಸಿಪೊಂಬರಿಸಯ್ಯನೆ ತವಪದ ತೋರಿಸೊ 3
--------------
ಗುರುಗೋವಿಂದವಿಠಲರು