ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಸು ಜನ್ಮದಲೇನು ಪುಣ್ಯಮಾಡಿದೆವೊ ಲೇಸಾಗಿನ್ನು ಸ್ವಾಮಿ ನಿಮ್ಮನ ಕಂಡೆವೊ ಧ್ರುವ ಸಾಧನವೆಂಥಾದೆಂಬುದು ನಾವಿನ್ನರಿಯೆವೊ ನಿಮ್ಮ ದರುಶನದಲಿ ಪಾವನಾದೆವೊ ಇದೆ ಸಕಲ ಸಾಧನದ ಸುಫಲವೊ ಸ್ವಾಮಿ ನಿಮ್ಮ ದಯಕ ಸಾನುಕೂಲವೊ 1 ಮನೋಹರ ಮೋಹನಮೂರ್ತಿ ಕಂಡೆವೊ ಕೃಷ್ಣ ನಿಮ್ಮನ ಬಿಗಿದಪ್ಪಿಕೊಂಡೆವೊ ನಾನಾಸವಿಯ ನೆಲೆಗಳೂಟ ಉಂಡೆವೊ ಎಂದೂ ಬಿಡದೆ ಹೃದಯಲಿಟ್ಟುಕೊಂಡೆವೊ 2 ಹೆಣ್ಣು ಪ್ರಾಣಿಗಳು ನಾವೇನು ಬಲ್ಲ್ಲಿವೊ ನಿಮ್ಮ ವಿನಾ ಇನ್ನೊಂದು ನಾವೊಲ್ಲಿವೊ ಚನ್ನಾಗೊಲಿದ ಭಾನುಕೋಟಿ ನಮ್ಮಲ್ಲಿವೊ ಚಿಣ್ಣಮಹಿಪತಿಗಿದೆ ಸಾಫಲ್ಯವೊ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬಾರಯ್ಯ ಬಾರೊ ಗುರುರಾಯ ತೋರಯ್ಯ ನಿಜಪ್ರಭೆಯ ಬೀರಿಸಯ್ಯ ನಿಮ್ಮದಯಕರುಣಿಸಯ್ಯಾನಂದೋದಯ ಧ್ರುವ ಇಂದು ಪುಣ್ಯಚರಣ ನೋಡೇನೆಂದು ಮನ್ನಿಸಯ್ಯ ಕೃಪಾಸಿಂಧು ಧನ್ಯಗೈಸಯ್ಯ ನೀ ಬಂದು 1 ಮನವು ನೆನವುತದೆ ನಿಮ್ಮ ಅನುವಾಗಿ ನೋಡೇನೊಮ್ಮೆ ಕನಗರಿಸೇಳುತ್ತದೆ ನಿಮ್ಮ ಅನುಕೂಲಾಗಾನಂದೋಬ್ರಹ್ಮ 2 ನೆವನಗೊಂಡಿದೆನ್ನಪ್ರಾಣ ಹವಣಿಸಿ ನೋಡಲು ಖೂನ ಭಾವಿಸುತಿದೆ ಜೀವನ ದೈವಾಗಿಬಾರಯ್ಯ ಪೂರ್ಣ 3 ಕಂದ ನಿಮ್ಮ ಮಹಿಪತೆಂದು ಬಂದು ಕೂಡೊ ಹೃದಯಲಿಂದು ತಂದೆ ತಾಯಿ ನೀನೆ ಬಂಧು ಎಂದೆಂದಗಲದಿರೊ ಬಂದು 4
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹೆಳೆಲೆ ಸಖಿ ಘಮ್ಮನೆ ಸುಳಿದವನಾರೇ | ಕೇಳಮ್ಮ ಒಮ್ಮಿಂ ದೊಮ್ಮೆಲೆ ಕಂಡೆ ನಾನೀರೆ | ಒಲಿದು ಕರೆ ತಂದೆನಗಿನ್ನೊಮ್ಮೆ ದೋರೇ | ಚಲುವಿಕೆಯವನ ಉಸುರಲಾರೆ ಪ ಪದುಮ ಶಂಖ ಚಕ್ರಾಂಕಿ ತರುಣ ತಳದಾ | ಬಿದಿಗೆ ಚಂದ್ರಮನ ನೀಲಮಣಿಯಂತೆ ಹರಡಿನ ಪಾದಾ | ಚದುರ ನೂಪುರ ಗೆಜ್ಜೆ ರವದಾ 1 ಜಾನೂರು ಪೋಂಬಾಳೆ ಕಟಿ ತಟಾ | ಸುನಾಭಿ ತ್ರಿವಳಿಯ ಕೂಟಾ 2 ಕಿರಿಡೊಳ್ಳು ಮಧ್ಯ ಯಳೆ ವಾಸೆ ಹೃದಯಲಿ ಪದಕಾ | ಸಿರಿವತ್ಸ ಗ್ರೀವ ಕರ ಕಡಗ ತೋಳ ಬಂದಿ ಕುಂಡಲ ರನ್ನನೇಕಾ 3 ಕುರು ಮರಿಯಂದದಿ ಕದಪಿನಮುಖಾ | ಕಿರುನಗೆ ದಂತಾರ ನಯನ ಭ್ರೂತಿಲಕಾ | ನೊಸಲು ಕಸ್ತೂರಿ ತಿಲಕಾ 4 ತೆರಳಿದ ಬೆರಳುಂಗುರ ಸನ್ನೆ ಮಾಡುತಾ | ಗುರು ಮಹಿಪತಿ ನಂದನ ಪ್ರಭುನಿವಸತ್ಯ | ಧರಿಯೋಳಳಿವನ ಗಾಣಿ ಪರತಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು