ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂಬ ನಾಮವನು ಉಚ್ಚರಿಸೆ ಸಾರುವರು ಭಕುತರಾದವರು ವೈಕುಂಠವನು ಆರಾದರೇನು ಮರೆಯದೆ ಹರಿಯಧ್ಯಾನಿಸಲು ಸಿರಿಯರಸ ಕಾಯ್ದು ಕೊಂಬ ಪ ಅರಸಕೇಳೈ ಬಳೀಕ ಪಾಂಡ್ಯದೇಶದೊಳೋರ್ವ ಪತಿ ಪೆಸರು ಇಂದ್ರ ದ್ಯುಮ್ನಧರಾತ್ಮ ಹರಿ ಪರಾಯಣನೆನಿಸಿ ನಿರುತಸತ್ಯ ಸುಶೀಲ ಕರಿತುರಗದಾಸೇಯ ತೊರೆದು ವಿರತನಾಗಿಯೆ ಪುರವ ಪೊರಟು ಸುಸ್ಥಿರನಾಗಿ ಬರವಾಯ್ತ ಗಸ್ತ ಶಿಷ್ಯವೆರಸಿ 1 ಸದಮಳಾತ್ಮರನ ಚಿಂತೆಯಿಂದ ಭೂಪೇಳದಿರೆ ಮದಮುಖನ ತಪವ ನೋಡುವೆನೆನುತ ಮುನಿ ಮುನಿದು ತದುಬಿಗರ್ಜಿಸಿ ಶಾಪವೀಯಗಜವಾಗೆನುತ ಸದು ಹೃದಯನೆದ್ದು ಬಳಿಕ ಪಾದಕ್ಕೆ ವಂದಿಸಿ ಶಾಪ ವೆಂದು ಬಿಗುಗಡೆಯೆನಲು ಸಾದರದಿಂ ಮುನಿಪನೆಲ ನೆಗಳು ಪಿಡಿಯೆಗತಿನಿನ ಗೆಂದು ಹೋದ ಮುನಿಪತಿ ಇತ್ತಲು 2 ಇಂತು ಭೂಮೀಶ ಶಾಪವ ತಾಳ್ದು ಬಿಸುಸುಯ್ದು ಕಂತು ಜನಕನೆ ಬಲ್ಲನೆಂತು ಗೆಲಿದಪೆನ್‍ನುತ ದಂತಿ ಮುಖವಾಗಿ ಭೂಕಾಂತೆಯೊಳು ಜನಿಸಿ ಸುರ ಸಂತತಿಗಳಲ್ಲು ಮಾ ಇಂತೆಸೆದನು 3 ತರುನಿಕರ ಚೂತಾಮಲಕ ಸುರಹೊನ್ನೆ ಪುನ್ನಾಗ ಮೆರೆವಬಿಲ್ವಶ್ವತ್ಥಮಾ ಕಿರುಗಿಡುವಿನೊಳಗೆ ಚರಿಸುವ ಕರಡಿ ಸೀಳ್ನಾಯಿ ಭೇರುಂಡ ಮುಂತಿರುತಿರಲು ಗರುಡ ಗಂಧರ್ವ ಚಾರಣರು ಸುರಕಿನ್ನರರು ಇರುತಿಹರು ಕಿಂಪುರುಷರು 4 ತ್ರಿಜಗದೊಳಗೆಣೆ ಗಾಣೆ ಭುಜಗಶಯನನೆ ಬಲ್ಲ ಗಜರಾಜ ಬೆಳೆದು ಕುಜನರ ಮಾರ್ಗವಂ ಪಿಡಿದು ಅಜಸೃಷ್ಟಿ ಬಿರಿಯೆ ಒದರಿ ನಿಜಪುತ್ರ ಮಿತ್ರಸ್ತ್ರೀಜನ ಸಹಿತಲೊಡಗೊಂಡು ಬುಜ್ಜಸತ್ವದಿಂದ ವನವನು ಮುರಿದು ಸಂಹರಿಸಿ ಭೂಜಲವ ನರಸಿ ಬಂದ 5 ಗಂಡು ಹೆಣ್ಣಾನೆಗಳ ತಂಡ ಸಹಿತಲೆ ಬಂದು ಕಂಡು ಜಲವನು ಈಂಟಿಗುಂಡಿ ಮಡುವನುಸಾರಿ ಚಂಡಿಗೊಳಿಸುತ ಧರಣಿಯ ಅಂಡೆಲೆವ ಮದದ ಸ್ತ್ರೀಯರ ಕೂಡಿ ನೆಗಳು ಖತಿಗೊಂಡು ಮಡುವಿನೊಳಗೆಳೆಯಲು 6 ನೆಗಳು ಸುತ್ತಲಿಹ ಕರಿಘಟೆಗಳೇನಿದದ್ಬುತವೆಂದು ಮತ್ತೆ ಸತ್ವದಲೆಳೆಯೆ ತೆತ್ತಿಗನು ಬಾರದಿರೆ ತಮ್ಮಗುತ್ತಿಗುಳಿದಿಹ ಹಸ್ತಿ ಇತ್ತ ಗಜರಾಜ ಕಾದುತಿರಲು ಹಲಕಾಲ ಬತ್ತಿ ಅಸುಗುಂದಿ ಚಿತ್ತದಿ ತಿಳಿದು ಧ್ಯಾನಿಸುತ ಮತ್ತಾರು ಕಾಯ್ವರೆನುತ 7 ಇಕ್ಕರ್ತರಿಂತು ಕಾದುತ್ತಿರಲು ಕರಿವರನ ಸೊಕ್ಕು ಮುರಿದುದು ತಮವುಚೊಕ್ಕಿ ಮುಖವನು ನಭಕೆ ಸೊಕ್ಕಿದುದುನೆಗಳು ಬಳಿಕ ಮುಕ್ಕುರು ದಿವ್ಯಸಾಗರ ವರುಷ ಪರಿಯಂತ ಸಿಕ್ಕಿ ನಗಳೊಳು ಕಾದಿ ಕುಕ್ಕುರಿಸಿ ನೀರಿನೊಳು ದಿಕ್ಕನೊಡುತ್ತ ಕಕ್ಕನೆ ಕರಗಿ ಜ್ಞಾನದಲಿ ಭಕ್ತವತ್ಸಲನ ನೆನೆದ 8 ರಕ್ಷಿಸೆನ್ನನು ಬಿಡದೆ ಪಕ್ಷಿವಾಹನಗಮನ ಸೇವ್ಯ ಕುಕ್ಷಿಯೊಳಗಿಂಬಿಟ್ಟು ರಕ್ಷಿಸುವೆ ಭಜಕರನು ಮೋಕ್ಷದಾಯಕನೆ ಕಾಯೋ ಲಕ್ಷ್ಮೀಶ ಕೇಶವ ಉಪೇಕ್ಷಿಸದೆ ನೀ ಬಂದು ಭಕ್ಷಿಸುವ ನೆಗಳನೀ ಶಿಕ್ಷಿಸಲು ಬೇಕು ಅಕ್ಷಿಯನು ಇಟ್ಟುಬಂದು 9 ಸರಸಿರುಹದಳನಯನ ಮೂರ್ತಿ ಪರಿ ಹರಿಸೋ ಕ್ಷೀರಾಬ್ಧಿ ಶಯನನೆಂದು ಪರಿ ಪರಿಯ ಸ್ತುತಿಸಲಾಕ್ಷಣ ಮಹಿಮ ಧ್ವನಿಗೇಳ್ದು ನಾಗಿಕರದಿ ಚಕ್ರವ ಕೊಂಡು ಭರದಿ ಭಕುತನ ಕಂಡು ಕರಿರಾಜಗಭಯವಿತ್ತ 10 ಸಿರಿ ಮೊಗದ ನಳಿನಾಯತೇಕ್ಷಣದ ತೊಳಪ ಕದಪಿನ ಮಿಸುಪ ನವರತ್ನ ಕುಂಡಲದ ಕೌಸ್ತುಭ ಹಾರದುರಸ್ಥಳದ ಹೊಳೆವ ಮಣಿಮಕುಟ ನೇಳಿವದಂತಪಂಕ್ತಿಯ ಚಾರು ಕೋರವಿಸೆ ಕಂಡ 11 ಮೇಲೆ ಕೈವಾರಿಸುವ ಸುರರ ದುಂದುಭಿ ಮೊಳಗೆ ಹೊಳೆಯ ಎತ್ತಿದ ತೋರ ಸತ್ತಿಗೆಯ ತೋರಣದ ಸಾಲುಗಳ ಸಂದಣಿಯ ಸಂಭ್ರಮದ ಜಾಲವನು ಕಂಡುಗಜವು ಪಾಲಿಸೈ ಗೋವಿಂದನಾಥ ಬಂಧು ತ್ರಾಹಿ ಭವಾಬ್ಧಿಸಾರ ತ್ರಾಹಿ ಪಾಲಿಸೈ ತ್ರಾಹಿ ಎನುತ 12 ಗಡಗಡನೆ ನಡುಗತಿರೆ ಕಡಲಶಯನನು ಕಂಡು ಕಡುಕೃಪೆಯೊಳೈ ತಂದು ಮಡುವ ಧುಮುಕಿಯ ಗಜವ ಪಿಡಿದಾಗ ವಾಮಕರದಿಂದಳೆಯನೆಗಳು ಸಹತಡಿಗೆ ಬರಲಾಗಕಂಡು ಘುಡು ಘುಡಿಸಿ ಕೋಪದಿಂ ತುಡುಕಿ ಚಕ್ರವತೆಗೆದು ಪಿಡಿದು ನೆಗಳನು ಕಡಿಯೆ ಒಡನಾಗ ನಿಜರೂಪ ಬಿಡುಗಡೆಯಾಯಿತೆಂದು ನಡೆದು 13 ಹರಿ ಬಳಿಕ ಕರಿವರಗೆ ವಿಶ್ವರೂಪವತೋರಿ ತರಣಿಕೋಟಿ ಸಹಸ್ರತೇಜದಿಲ ರಂಜಿಸಿಯೆ ಪರಿದುಹರಿವೋಲೆಸೆದನು ಬಳಲಿದೆಯಾ ಎಂದು ಕರುಣಾಕಟಾಕ್ಷದಿಂ ಕರಿವರನ ಸಹಿತ ವಾಸ ದೆಡೆಗೆ 14 ಅವನುದಯ ಕಾಲದೊಳೆದ್ದು ಪೇಳುವನು ಆವರಿದ ಭಕ್ತಿ ಭಾವದಲಿದನು ಕೇಳುವರು ಪಾವನರು ಪುಣ್ಯಾತ್ಮರು ಕೋವಿದರು ಧರಗೆ ಗಜರಾಜೇಂದ್ರ ಮೋಕ್ಷವನು ಸಾವದಾನ ದಲಿದನು ನೇಮದಲಿ ಕೇಳ್ವವರ ನೆನೆದವರ ಕಾಯ್ವನೆಂದು 15
--------------
ಕವಿ ಪರಮದೇವದಾಸರು
ತೆರಳೆ ನೀ ಮಧುರೆಗೆ ಗೋಕುಲದಲಿ ನಾವುಇರಲಾರೆ ಇರಲಾರೆವೋ ಗೋಪಾಲ ಪ ತರಳತನದಿ ನೀ ಆಡಿದ ಆಟಗಳ ಸ್ಮರಿಸಿಸ್ಮರಿಸಿ ನಾವು ಮರುಗುವುದೆಲೋ ದೇವಅ.ಪ. ವ್ರಜದ ಒಳಗೆ ನೀನು ಇದ್ದದ್ದು ಕೇಳಿಭರದಿ ಪೂತನಿಯ ಕಳುಹಿ ಕೊಟ್ಟರೆತೊಡೆಯ ಒಳಗೆ ಇಟ್ಟು ಸ್ತನಕೊಡುತಿರಲವಳಹುಲಿಯಂತೆ ಹೀರಿ ಹಿಪ್ಪೆಯಮಾಡಿದೆಯೊ ದೇವ ತೃಣದ ಅಸುರನ ಕೊರಳಮಿಸುಗುತ್ತ ಅವನ ಕೆಡಹಿದಿಭರದಿ ಬಂಡಿಯ ಒದ್ದು ಶಕಟನ ಪುಡಿಯಮಾಡಿದ ಪರಮ ಪುರುಷನೆ 1 ಕೊಲ್ಲಕಂಸನು ಭಾಳ ಯೋಚಿಸಿ ಮನದಿಕೊಲ್ಲಬೇಕೆಂದೆನುತ ಸೂಚಿಸೆಬಿಲ್ಲನೆ ಮುರಿದು ಆ ನಲ್ಲೆಯ ಕರಪಿಡಿದುಒಳ್ಳೆ ಪುರಕೆ ಹೋಗಿ ಎಲ್ಲ ಕಾರ್ಯವ ನಡೆಸಿಮೆಲ್ಲನೆ ಏಕಾಂತ ಗೃಹದಲ್ಲಿಸೊಲ್ಲ ಕೇಳುತ ಅವನನು ಕೋಪಿಸೆಅಲ್ಲಿಯನುಜನ ತರಿದು ಅವನಕೊಲ್ಲ ಕಳುಹಿದ ಕಠಿನ ಹೃದಯನೆ2 ಎಲ್ಲ ಹಿಂದಿನ ಸುದ್ದಿ ಬಲ್ಲೆವೊ ನಾವುಇಲ್ಲಿ ಮರೆತೀಯೆಂದು ತಿಳಿದೆವೋಬಲ್ಲ ಅಕ್ರೂರನು ಬಂದು ಇಲ್ಲಿಗೆ ನಮ್ಮಇಲ್ಲದ ಮಾತ ಕೇಳಿ ಮೆಲ್ಲನೆ ಕರೆದೊಯ್ದಅಲ್ಲಿ ರಥವನೆ ಕಾಣುತ ಎದೆಝಲ್ಲೆನಿಸಿ ನಡುಗಿದೆವೊಪುಲ್ಲನಾಭನೆ ಜ್ಞಾನ ಭಕುತಿ ನ-ಮ್ಮೆಲ್ಲರಿಗೆ ನೀನಿತ್ತು ಪೋಗೆಲೊ 3 ಹೆಂಡತಿಯ ಕೂಡಿ ಕದನ ಮಾಡಿಮುಂದೆ ಮೂವರು ತೆರಳಿದಿರಿಬಂದು ಋಷಿಯಾಶ್ರಮದಿ ನಿಂತು ಗ್ರಾಸವ ಬೇಡೆಮಂದಗಮನೆ ನೋಡಿ ಚೆಂದಾಯಿ -ತೆಂದೆ ತಂದು ಕಲಶೋದಕವ ಚೆಲ್ಲಲುಕಂದರುಗಳು ನೀವಾದಿರೊ ತಂದ ಹಲಸಿನ ದೊನ್ನೆ ಪಾಲನುಚೆಂದದಿಂದಲಿ ಕುಡಿದ ದೇವನೆ4 ಮಂದಗಮನೇರಿಂದ ನಿಮಗೆ ಮತ್ತೆಒಂದುಪಕಾರವ ಕಾಣೆವೊಚೆಂದಾಗಿ ಮಾನದಿ ಮಂದಿರದಲಿ ಇರದೆಗಂಡರ ಬಿಟ್ಟು ನಿಮ್ಹಿಂದೆ ತಿರುಗಿದೆವೊಇಂದಿರೆಯು ಕಾರಣಗಳಲ್ಲವೊನಿಂಗೆ ನೀನೆ ಸ್ವರಮಣನಂಮಂಗಳಾಂಗನೆ ಮಾರಜನಕನೆರಂಗವಿಠಲನೆ ರಾಜೀವಾಕ್ಷನೆ5
--------------
ಶ್ರೀಪಾದರಾಜರು
ನಿನ್ನನ್ನೆ ನಂಬಿದೆನೊ ಪನ್ನಂಗಶಾಯಿ ಎನ್ನ ನೀ ಕಾಯಬೇಕೊ ಪ ದೀನದಯಾಳು ದೇವ ನೀನೆ ಕಾಯದೆ ಬಿಟ್ಟ ರಿನ್ನಾರು ಕಾಯ್ವರು ಎನ್ನನೀ ಜಗದೊಳುಅ.ಪ ಉನ್ನತ ಹೃದಯನೆ ಮುನ್ನ ನಾ ಮಾಡಿದ ಗನ್ನಗತಕತನವನ್ನು ದಯದಿ ಕ್ಷಮಿಸು ಇನ್ನೀಭವದಿ ಎನಗೆ ನಿನ್ನಯ ಸನ್ನುತಿ ಯನ್ನು ಪಾಲಿಸಿ ಸತತ ಬನ್ನಬಡಿಸದೆ ಕಾಯೊ 1 ಶರಣಾಗತರಕ್ಷಣಾನಾಥಜನಬಂಧುವೇ ಕರುಣದಿ ನಿಮ್ಮಂಥ ದೇವರನುಕಾಣೆ ದುರಿತದೂರನೆ ಎನ್ನ ದುರಿತದುರ್ಗಣವನ್ನು ಪರಿಹರಿಸಿ ಸಲಹಯ್ಯ ಶರಣುಜನರ ಪ್ರೀಯ 2 ಕೈಯ ಪಿಡಿದು ಪೊರೆಯೊ ಬಿಡದೆನಮ್ಮಯ್ಯ ಜಗ ದಯ್ಯ ಶ್ರೀರಾಮ ವಿಜಯವಿಠಲರಾಯ ಕೈಯ ಮುಗಿದು ಮರೆಹೊಕ್ಕು ಬೇಡುವೆಯ್ಯ ಜೀಯ ದಯದಿ ಕಾಯೊ ಪಂಢರಿರಾಯ 3
--------------
ರಾಮದಾಸರು
ಬದರೀನಾಥ ವಿಠಲ | ಪೊರೆಯ ಬೇಕಿವನಾ ಪ ಸದಯ ಹೃದಯನೆ ಇವಗೆ | ಮುದವನ್ನೆ ಬೀರತಲಿಹದುಳದಲಿ ಕೈಪಿಡಿದು | ಕಾಪಾಡೊ ಹರಿಯೇ ಅ.ಪ. ಮೇಶ ಮಧ್ವೇಶ ಮಹಿ | ದಾಸ ನಿನ್ನಡಿ ದಾಸ್ಯಆಸಿಸುವ ಬಾಲಕನ | ಆಶೆಯನು ಸಲಿಸೀ |ಕ್ಲೇಶಗಳ ಪರಿಹರಿಸಿ | ನೀ ಸಲಹೆ ಭಿನ್ನವಿಪೆಹೇಸದಾಗತಿ ವಂದ್ಯ | ವಾಸವಾನುಜನೇ 1 ಲೌಕಿಕದ ಸಂಪತ್ತು | ಬೇಕಾದ ವರವಿತ್ತುಕಾಕು ಸಂಗವ ಕೊಡದೆ | ನೀಕಾಯ ಬೇಕೋ ||ತೋಕನಿಗೆ ನಿನ್ನಲ್ಲಿ | ಭಕುತಿ ಜ್ಞಾನಗಳಿತ್ತುಲೌಕಿಕವನೆಲ್ಲ ವೈ | ದೀಕ ವೆಂದೆನಿಸೋ 2 ಮೋದ ಕೊಡು ಸತತಾ 3 ಸ್ವಾಪದಲಿ ಮತ್ಸ್ಯಾದಿ | ರೂಪಗಳ ಸ್ತೋತ್ರವೆನೆವ್ಯಾಪಾರ ಮಾಡಿಸುತ | ಕೃಪೆ ತೋರ್ದೆ ಹರಿಯೇವೈಪರೀತ್ಸದ ಮನದ ಚಾಪಲ್ಯ ಕಳೆಯಲ್ಕೆಸ್ವಾಪದಲಿ ಸೂಚಿಸುತ | ನೀಪೇಳ್ದೆ ಧೃಡವಾ 4 ಪತಿ ವಿನುತ | ನಾರಾಯಣಾಖ್ಯ ಹರಿಘೋರಭವ ಕೂಪಾರ | ಪಾರಗಾಣಿಸುವಾಭಾರ ನಿನ್ನದು ಎಂದು | ಪೋರನ್ನ ಒಪ್ಪಿಸಿಹೆಧೀರ ಗುರು ಗೋವಿಂದ | ವಿಠಲ ಪೊರೆ ಇವನಾ 5
--------------
ಗುರುಗೋವಿಂದವಿಠಲರು
ರಕ್ಷಿಸೆನ್ನ ರಕ್ಷಿಸೆನ್ನನು ಸುರಯಕ್ಷರಕ್ಷಕ ಮಹಾದಕ್ಷ ಯತಿ ಮುನಿ ಪಕ್ಷ ವಿರೂಪಾಕ್ಷಕುಕ್ಷಿಯೊಳು ನೀ ನೆಲಸಿ ಎನ್ನ ಕೃಪೇಕ್ಷಣದಿ ಕೈವಿಡಿದುರಕ್ಷಿಪಅಕ್ಷಯರಾಕ್ಷಸಾಂತಕ ಪಕ್ಷಿವಾಹನ ದೇವಪ್ರಿಯಪವೇದವೇದ್ಯಸುಜನರಕ್ಷ ನಾದಭೇದ್ಯಸಾಧನ ನಾಲ್ಕನು ಸಾಧಿಪ ಸಾಧಕನಾದ ದೇವನೆ ನಿನ್ನ ಪಾದವ ಸ್ತುತಿಪೆನುವೇದ ಸ್ಮøತಿಗಳು ಆದಿಶೇಷನುಸಾಧಿಸುತ ಭೇದಿಸಿಯೆ ನಿನ್ನನುಹಾದಿ ಕಾಣದು ಪೊಗಳ್ವಡೆನಗೆ ಅರಿಯದಾ-ಗಿದೆ ಅನಾದಿ ಮೂರುತಿ1ಹಾರಹೀರ ಫಲಿಸಿದಂಥಾ ಶೂರ ವೀರಸಾರವಿಲ್ಲದ ಸಂಸಾರ ದೂರ ವಿ-ದೂರ ಭಯ ಜರ್ಜರ ಕರುಣಾಕರಸಾರಪೂರಿತಕಾರಣಾತ್ಮಕಮಾರವೈರಿಯೆ ಧೀರ ಜಗದುದ್ಧಾರ ಎನಗೆತೋರಿ ಶಕುತಿಯಸಾರಹೃದಯನೆಗೌರಿ ವಲ್ಲಭನೆ2ಪರಮಪುರುಷ ಪಾರ್ವತೀಪ್ರಿಯಶರಣ ಹೃದಯ ನಿರುತ ಪಾಲಿಪ ಶಂಭುಹರಪಿನಾಕಿಶಿವವರಚಿದಾನಂದಗುರುಅವಧೂತಾತ್ಮ ನಿರುಪಮ ನಿರ್ಮಾಯನಿರವಯ ನಿರುತಪರಮಶಿವ ವಿಶ್ವಹೃದಯಪರತರಾತ್ಮಕಪರಮಮಂಗಳಪರಮಚೈತನ್ಯಾತ್ಮ ವಸ್ತುವೇ3
--------------
ಚಿದಾನಂದ ಅವಧೂತರು