ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಳು ರಂಗಯ್ಯ ನೀನೇಳು ಕೃಷ್ಣಯ್ಯ ಏಳಯ್ಯ ದೊರೆ ಬೆಳಗಾಯಿತೇಳೆಂದು ಪಾಲ್ಗಡಲೊಡೆಯ ಹರಿಯನೆಬ್ಬಿಸಿದಳಂದು ಬಾಲೆ ಯಶೋದೆಯು ಬಹು ಸಂಭ್ರಮದಿಂದ ಪ ಶಕ್ರನುಪಟಳವ ನೀ ಪರಿಹರಿಸಬೇಕು ವಿಕ್ರಮದಿ ಗೋವರ್ಧನ ಎತ್ತಬೇಕು ಚಕ್ರಧರ ನಿನ್ನ ಮಧುರೆಗೆ ಕರೆದೊಯ್ಯೆ 1 ಮಾವ ಕಂಸನು ನಿನ್ನ ಬಾ ಎಂದನಂತೆ ಸಾವು ಅವನಿಗೆ ಸಮೀಪದಲಿದೆಯಂತೆ ದೇವಕಿ ವಸುದೇವ ಸೆರೆಯಲಿರುವರಂತೆ ಕಾವುದಕೆ ನೀ ಪೋಗಲೇಬೇಕಂತೆ 2 ಬಿಲ್ಲ್ಹಬ್ಬದಲಿ ಜಯಶೀಲನಾಗಬೇಕು ಖುಲ್ಲ ರಕ್ಕಸ ದಲ್ಲಣನೆನಿಸಬೇಕು ಬಲ್ಲಿದ ಮಗಧನ ಕೊಲ್ಲಿಸಲುಬೇಕು 3 ದೇವಿ ದ್ರೌಪದಿಗೆ ಸುಚೇಲವೀಯಬೇಕು ಭಾವಮೈದುಗೆ ಬೋವÀನಾಗಬೇಕು ಪಾವಿನ ಶರದಿಂದವನ ಪೊರೆಯಬೇಕು ಯಾವತ್ತು ಭೂ ಭಾರವನಿಳುಹಬೇಕು 4 ಮಧ್ವರಾಯರ ಹೃತ್ಪದ್ಮದಿ ನಿಲಬೇಕು ಇದ್ದು ಉಡುಪಿಯೊಳು ಪೂಜೆಗೊಳಲುಬೇಕು ಶುದ್ಧ ವೈಷ್ಣವರಿಷ್ಟಗಳ ಸಲಿಸಬೇಕು ಮುದ್ದು ರಂಗೇಶವಿಠಲನೆನಿಸಬೇಕು 5
--------------
ರಂಗೇಶವಿಠಲದಾಸರು
ದುರ್ಗೆ ಪಾಲಿಸೆ ಕರುಣದಿ | ಮಹಾ ಲಕುಮಿ ದುರ್ಗೆ ಪಾಲಿಸೆ ಕರುಣದಿ ಪ. ಅಪವರ್ಗ ಪದವಿ ಇತ್ತು ದುರ್ಗಮವಾಗಿಹ ದುಃಖವ ಬಿಡಿಸಿ ಭಾರ್ಗವಿರಮಣನ ಮಾರ್ಗವ ತೋರೆ ಭೋರ್ಗರೆಯುತ ಖಳರ ನಿಗ್ರಹಿಸುವಳೆ ಅ.ಪ. ಕ್ಷೀರವಾರಿಧಿ ತನಯೆ | ಶ್ರೀ ರಮಣನ ಜಾಯೆ ನಾರಸಿಂಹನ ಅರಸಿಯೆ ಸಾರಿದೆ ನಿನ ಪದ ತೋರಿಸೆ ಹರಿಪದ ಕಾರುಣ್ಯಾತ್ಮಳೆ ಕರುಣವ ಬೀರೆ ವಾರವಾರಕೆ ನಿನ್ನ ಆರಾಧಿಸುವಂಥ ಚಾರುಮತಿಯ ನೀಡೆ ನಾರಿರನ್ನಳೆ 1 ಪದ್ಮಾವತಿಯೆ ಪದ್ಮಿನಿ | ಪದ್ಮಾಕ್ಷಿದೇವಿ ಪದ್ಮಸಂಭವೆ ಕಾಮಿನಿ ಪದ್ಮನಾಭ ಶ್ರೀ ಶ್ರೀನಿವಾಸನ ಪದ್ಮಪಾದವ ಹೃತ್ಪದ್ಮದಿ ತೋರೆ ಪದ್ಮಸರೋವರ ತೀರವಾಸಿ ಕರ ಪದ್ಮಯುತಳೆ ಮುಖಪದ್ಮವ ತೋರೆ2 ರೂಪತ್ರಯಳೆ ಕಾಮಿನಿ | ಕಾಮಪೂರಿಣೀ ತಾಪಹರಿಸೆ ಭಾಮಿನಿ ಪಾಪಗಳÉಲ್ಲವ ನೀ ಪರಿಹರಿಸುತ ಗೋಪಾಲಕೃಷ್ಣವಿಠ್ಠಲನನು ತೋರುತ ನೀ ಪರಿ ನುಡಿವೆನೆ ನೀ ಪಾಲಿಸುವುದು ಆಪವರ್ಗದಲಿ 3
--------------
ಅಂಬಾಬಾಯಿ
ಮೂರ್ತಿ ಸ್ತೋತ್ರ ಗುರುವರ ದಕ್ಷಿಣಾ ಮೂರ್ತಿಗೆ ಎರಗುವೆ ಪುರಂದರ ಮುಖ ಸುರ ವೃಂದ ವಂದಿತರು ಪರಮಾತ್ಮನು ಶ್ರೀ ರಾಘವ ಸಿಂಹನ ಸುರತರು ಪ ಅಮೃತ ಕಲಶ ಅಭಯ ವಿದ್ಯಾಮುದ್ರಾ ದರ್ಶಕ ಕೈ ಪದ್ಮಗಳ್ ಸುಂದರ ತರ ಶುದ್ಧ ಸ್ಫಟಿಕಾಮಲವರ್ಣ ಇಂಥ ದಕ್ಷಿಣ ಮೂರ್ತಿಗೆ ಆನಮಿಸುವೆ 1 ಉರಗ ಭೂಷಣ ದಿವ್ಯ ಹೊಳೆವ ಆಭರಣಗಳ್ ಚಂದ್ರ ಚೂಡ ತ್ರಿನೇತ್ರ ಕೃಪಾಕರ ದಕ್ಷ ಪ್ರಜೇಶ್ವರಾ ದ್ಯಮರರಿಂದೀಡ್ಯ ಈ ದಕ್ಷಿಣ ಮೂರ್ತಿಯ ಸ್ಮರಿಸೆ ಸಂತೈಪರು 2 ಶ್ರೀಪತಿ ಜ್ಞಾನ ಪ್ರದರ್ಶಸಿ ತೇಜಸ್ ಐಶ್ವರ್ಯ ಈವೋರು ಅಪಮೃತ್ಯು ವಿಷರೋಗ ಪರಿಹರಿಸುವರು ಅಬ್ಜಜ ಪಿತ ಶ್ರೀ ಪ್ರಸನ್ನ ಶ್ರೀನಿವಾಸ ಹೃತ್ಪದ್ಮದಿ ಕಾಂಬ ಮೇಧಾಕೊಡುವರು | ಗುರುವರ ದಕ್ಷಣಾ ಮೂರ್ತಿಗೆ ಎರಗುವೆ 3
--------------
ಪ್ರಸನ್ನ ಶ್ರೀನಿವಾಸದಾಸರು
ರಕ್ಷಿಸೊ ಶ್ರೀಶ ಶ್ರೀನಿವಾಸ ಪ ರಕ್ಷಿಸೆನ್ನ ಪದ್ಮಾಕ್ಷ ತ್ರಿಜಗದ ಧ್ಯಕ್ಷ ಖಳ ಜನಶಿಕ್ಷ ಪಾಂಡವ ಪಕ್ಷ ಕರುಣ ಕಟಾಕ್ಷದಲಿ ನೀ ವಾಹನ ಅ.ಪ. ಕೊಂಚ ಮತಿಯಲಿ ಕುಜನರ ಸೇರಿ ಸಂಚರಿಸುತಲಿ ದೀನನಾದೆ ಪಂಚಶರಸ್ಮರ ವಂಚಿಸುತ ಬಿಡೆ ಚಂಚಲಾಕ್ಷೇರ ಸಂಚು ನೋಟದ ಮಿಂಚಿಗೆನ್ನ ಮನ ಚಂಚಲಾಗುತೆ ವಂಚಿಸೆ ಯಮನಂಚಿಗೆ ಸಿಲುಕಿದೆ 1 ಕಿಟ್ಟಗಟ್ಟಿದ ಕಬ್ಬಿಣದಂತೆ ಕೆಟ್ಟ ಕಿಲ್ಬಿಷದ ರೂಪದಿ ಬಿದ್ದು ದಿಟ್ಟ ನಿನ್ನಯ ಗುಟ್ಟು ತಿಳಿಯದೆ ಪೊಟ್ಟೆ ಗೋಸುಗ ಕೆಟ್ಟ ಕುಜನರ ಘಟ್ಟನಾ ಕಾಲ್ಗಟ್ಟೆ ಬಹುಶ್ರಮ ಪಟ್ಟು ಭವದಿ ಕಂಗೆಟ್ಟೆ ಪ್ರತಿದಿನ 2 ಶ್ರೀ ಕಮಲೇಶ ಹೃತ್ಪದ್ಮದಿನೇಶ ಪ್ರಕಾಶ ಬೇಗನೆ ಬಂದು ಯಾಕೇ ತಡೆವೆನ್ನ ವಾಕ್ಕುಲಾಲಿಸಿ ಕರವ ಪಿಡಿ ದಾ ಕುಚೇಲನ ಸಾಕಿದಾಪರಿ ಕರ ಜಗನ್ನಾಥ ವಿಠಲ 3
--------------
ಜಗನ್ನಾಥದಾಸರು
ಸದಾ ಪೂಜಿಪೆ ನಿನ್ನ ಸೌಭಾಗ್ಯಳೆ ಪಇಂದಿರಾದೇವಿಯೆ ಮಂದರೋದ್ಧರನ ರಾಣಿಇಂದೀವರಾಕ್ಷಿ ಆನಂದದಲಿ 1ಪದ್ಮಾಕ್ಷಿ ಎನ್ನ ಹೃತ್ಪದ್ಮದಿ ಹರಿಪಾದಪದ್ಮವ ತೋರಿ ಉದ್ಧರಿಸುವಳೆ 2ಅಂಬುಜಪಾಣಿಯೆ ಅಂಜುಜಾಕ್ಷನ ರಾಣಿಅಂಬುಧಿಶಯನನ ಪೊಂದಿರ್ಪಳೆ 3ಆದಿಕಾರಿಣಿ ಪತ್ರಾದಿ ರೂಪದಿ ಹರಿಯಆರಾಧಿಸುವಿ ಸರ್ವರಾಧಾರಿಯೆ 4ಹೆದರದೆ ಭೃಗುಮುನಿ ಒದೆಯೆ ಪಾದದಿಂದಕದನವ ಮಾಡಿದ ಕಲ್ಯಾಣಿಯೆ 5ಭಕ್ತಜನರು ನಿನ್ನ ಭಕ್ತಿಯಿಂ ಪೂಜಿಸಲುಮುಕ್ತಿ ಮಾರ್ಗವ ತೋರಿ ಸಲಹುವಳೆ 6ಸರಸಿಜಾಸನ ಮಾತೆ ಸ್ಮರಿಸುವೆ ನಿಮ್ಮಪಾದಸ್ಮರಣೆ ಮರೆಯದಂತೆ ಕರುಣಿಪುದು 7ಪಂಕಜನಾಭನ ಕಿಂಕರರನ್ನು ಕಾಯ್ವಬಿಂಕನಿನ್ನದು ಸರ್ವ ಅಲಂಕಾರಿಣಿ8ಕಮಲನಯನನೆ ಶ್ರೀ ಕಮಲನಾಭ ವಿಠ್ಠಲನಕ್ಷಣ ಬಿಡದಲೆ ತೋರು ನಮಿಸುವೆನು 9
--------------
ನಿಡಗುರುಕಿ ಜೀವೂಬಾಯಿ