ಒಟ್ಟು 6 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೃಂದಾವನಿ ಜನನಿ ವಂದಿಸುವೆ ಸತತ ಜ ಲಂಧರನ ರಾಣಿ ಕಲ್ಯಾಣಿ | ಕಲ್ಯಾಣಿ ಶ್ರೀ ತುಲಸಿ ನಿಜ ಮಂದಿರೆ ಎನಗೆ ದಯವಾಗೆ 1 ಜಲಜಾಕ್ಷನಮಲ ಕಜ್ಜಲ ಬಿಂದು ಪೀಯೂಷ ಕಲಶದಲಿ ಬೀಳೆ ಜನಿಸಿದಿ | ಜನಿಸಿದಿ ಹರಿಯಿಂದ ಶ್ರೀ ತುಲಸಿ ನೀನೆಂದು ಕರೆಸೀದಿ2 ಶ್ರೀ ತರುಣಿವಲ್ಲಭನ ಪ್ರೀತಿ ವಿಷಯಳೆ ನಿನ್ನ ಕೈ ಮುಗಿವೆ ಎನ್ನಯ ಮಹ ಪಾತಕವ ಕಳೆದು ಪೊರೆಯಮ್ಮ 3 ತುಲಸಿ ನಿನ್ನಡಿಗೆ ನಾ ತಲೆವಾಗಿ ಬಿನ್ನೈಪೆ ಕಲುಷ ಕರ್ಮಗಳ ಎಣಿಸದೆ | ಎಣಿಸದೆ ಸಂಸಾರ ಜಲಧಿಯಿಂದೆಮ್ಮ ಕಡೆ ಹಾಯ್ಸು 4 ದುರಿತ ಈಡಾಡಿದವ ನಿನ್ನ ಕೊಂ ನಿತ್ಯ ಹರಿಪಾದ | ಹರಿಪಾದ ಕಮಲಗಳ ಕೂಡಿಸುವೆ ಸತ್ಯವೆಂದೆಂದು 5 ನಿಂದಿಸಿದವರೆಲ್ಲ ನಿಂದ್ಯರಾಗುವರು ಅಭಿ ವಂದಿಸಿದ ಜನರು ಸುರರಿಂದ | ಸುರರಿಂದ ನರರಿಂದ ವಂದ್ಯರಾಗುವರು ಎಂದೆಂದು 6 ಕಲುಷವರ್ಜಿತ ನಿನ್ನ ದಳಗಳಿಂದಲಿ ಲಕ್ಷ್ಮೀ ಪೂಜಿಪರಿಗೆ ಪರಮಮಂ ಗಳದ ಪದವಿತ್ತು ಸಲಹೂವಿ 7 ಶ್ರೀ ತುಲಸಿದೇವಿ ಮನ್ಮಾತೆ ಲಾಲಿಸು ಜಗ ಎನ್ನ ಹೃತ್ಪದ್ಮದಲಿ ನೀ ತೋರೆ ಕೃಪೆಯಿಂದ 8
--------------
ಜಗನ್ನಾಥದಾಸರು
ನಿರ್ವಿಘ್ನವನೆ ನೀಡೋ ನಭಕೀಶ ಪ ಉರ್ವಿಯೊಳಗೆ ಕಾರ್ಯ ಪ್ರಾರಂಭಿಕ್ಕೀಶ ಅ.ಪ. ಶೈಲಜೆ ಶರೀರ ಮಲಜನೆಂದೆನಿಸುತ್ತಶೀಲ ಸತ್ಕರ್ಮಾಳಿ ಪ್ರಾರಂಭದೀ |ಮಾಲೋಲನಾಜ್ಞಾದಿ ಪೂಜೆಯ ಕೊಳ್ಳುತ್ತಪಾಲಿಪೆ ಭಕುತರಾಭೀಷ್ಟವ ದಯದಿ 1 ಗಮನ ಪಿತ ಶ್ರೀಶಾನುಗ್ರಹ ಪಾತ್ರಾ 2 ವಿಶ್ವ ಮೂರುತಿಯಸತ್ಯ ಮೂರುತಿ ಗುರು ಗೋವಿಂದ ವಿಠಲನಹೃತ್ಪದ್ಮದಲಿ ತೋರಿ ಕೃತಕೃತ್ಯನೆನಿಸೋ 3
--------------
ಗುರುಗೋವಿಂದವಿಠಲರು
ಪರಿಪಾಲಿಸುವುದು ಎಮ್ಮನು ಪರಮಾತ್ಮನ ರಾಣಿ ಕರುಣಾಕರನ ಪಾದಸ್ಮರಣೆಯನೆ ಕೊಟ್ಟು ಪ ಅಮರೇಶ ವಂದ್ಯಳೆ ಕಮಲಾಲಯೆ ನೀಬಂದು ಶ್ರಮವಿಲ್ಲದೆಯನ್ನೆಯ ಮಮತೆಯನು ಬಿಡಿಸು 1 ವಸುದೇವಸುತನ ರಾಣಿ ಅಸುರ ಸಂಹಾರಳೇ ನಿನ್ನ ವಶವಾದ ಮೇಲೆ ಅಂಭ್ರಣಿಯೆ ನಸುನಗುತ ಈಗ 2 ಮಂದರೋದ್ಧಾರಎನ್ನ ಸಂದುಸಂದಲಿ ಕಾರ್ಯವ ನಿಂದುಮಾಡಿಸುವಂಥದನ್ನು ಚಂದದೀಬೋಧವಕೊಟ್ಟು 3 ಮಂಗಳಾಂಗಿಯೆ ನಿನ್ನ ಮುಂಗಾಣದೆಸೊರಗಿದೆ ಅಂಗಜಪಿತನ ಜಾಯೇ ಭಂಗಪಡಿಸದೆಬೇಗಾ 4 ಪದ್ಮಸಂಭವನಮಾತೆ ಮುದ್ದುಮೋಹನವಿಠಲ ಪದ ಪದ್ಮಗಳನೀನೊಲಿದು ಹೃತ್ಪದ್ಮದಲಿ ಕಾಣಿಸುತ 5
--------------
ಮುದ್ದುಮೋಹನವಿಠಲದಾಸರು
ಶ್ರೀಮನೋಹರ ನಿನ್ನ ನಾಮವೇ ಯೆನ್ನುಸಿರು ಕ್ಷೇಮ ನಾಡಿಗಳಲ್ಲಿ ತಿರುಗುತಿರಲಿ ಪ ಕಾಮಾದಿ ಷಡ್ವರ್ಗವ್ಯಾಪನೆಯನೋಡಿಸುತ ಪ್ರೇಮದಿಂ ಹೃತ್ಪದ್ಮದಲಿ ತೋರು ಸತತ ಅ.ಪ ಪ್ರಾಪಂಚಿಕರ ಮನವು ವಿಷಯಗಳಿಗೆಳೆವಂತೆ ಪಾಪಹರ ನಿನ್ನೊಳಗೆ ಯನ್ನ ಮನವಿರಲಿ ತಾಪತ್ರಯಂಗಳಿಗೆ ತನಯನನು ಸಿಲುಕಿಸದೆ ಕಾಪಾಡಿಕೋ ಸ್ವಾಮಿ ದಾಸಾನುದಾಸನಂ1 ಕನಸು ಎಚ್ಚರ ನಿದ್ದೆ ಎಂಬವಸ್ಥೆಗಳಲ್ಲಿ ದಿನಕರಪ್ರಭು ಮೂರ್ತಿಯವತಾರ ತೋರಿ ಅನುನಯದಿ ಪದಯುಗವ ಶರಣು ಹೊಂದುವ ಪರಿಯ ಕನಿಕರದಿ ಕರುಣಿಸೈ ಕಮಲನಯನ 2 ಕಫವಾತ ಪಿತ್ಥಗಳ ವಿಕೃತಿಗಳು ಬಾರದೆಲೆ ಅಪರಿಮಿತ ಸುಂದರಾನಂದ ನೀಡಿ ಸಫಲಮಂತ್ರವ ನುಡಿಸಿ ಕೃಪೆಯಿಂದ ಕೈಪಿಡಿದು ಸುಪಥದಿಂ ನದಿದಾಟಿ ಸೇರಿಸಿಕೊ ಅಡಿಗೆ 3 ಹರಿಹರೀ ಹರಿಯೆಂಬೆ ತಾಯಿ ತಂದೆಯೆ ಗುರುವೆ ದೊರೆಯೆನೀ ಸೋದರನು ಸಖನು ಬಂಧೂ ಧರಣೀಧರ ಸರ್ವತ್ರ ಬೆಂಬಿಡದೆ ಸಹಕರಿಸಿ ಪೊರೆವುದೈ ಭವನಾಶ ಹೆಜ್ಜಾಜಿ ಶ್ರೀಶಾ 4
--------------
ಶಾಮಶರ್ಮರು
ಮಹಾಲಕ್ಷ್ಮಿ50ದಯಮಾಡಮ್ಮ ದಯಮಾಡಮ್ಮಹಯವದನನ ಪ್ರಿಯೆ ಪವಿನಯದಿಂದ ಬೇಡುವೆನೆ ಕಮಲನೇತ್ರೆಯೆ ಅ.ಪಶಂಬರಾರಿಪಿತನ ರಾಣಿ ನಂಬಿಸ್ತುತಿಸುವೆಅಂಬುಜನಾಭನ ಧ್ಯಾನಸಂಭ್ರಮಎನಗೀಯೆ1ಗೆಜ್ಜೆಪಾದ ಧ್ವನಿಗಳಿಂದ ಮೂರ್ಜಗ ಮೋಹಿಸುತ್ತಸಜ್ಜನರ ಸೇವೆಗೊಳ್ಳುತ ಜನಾರ್ದನನ ಪ್ರೀತೆ 2ತ್ರಿಗುಣಾಭಿಮಾನಿಯೆ ನಿನ್ನ ಪೊಗಳುವ ಭಕ್ತರಬಗೆ ಬಗೆ ತಾಪತ್ರಯಗಳ ಕಳೆದುಮಿಗೆ ಸೌಖ್ಯವ ನೀಯೆ 3ಪದ್ಮಾಕ್ಷಿಯೆ ಪದ್ಮಸದನೆ ಪದ್ಮಪಾಣಿಯೆಪದ್ಮನಾಭನಗೂಡುತಲಿ ಹೃತ್ಪದ್ಮದಲಿ ಪೊಳೆಯೆ 4ಕನಕಾಭರಣಗಳಿಂದಲಿ ಪೊಳೆಯುವ ಕಮಲನೇತ್ರೆಯೆಕಮಲನಾಭವಿಠ್ಠಲನ ಕೂಡಿಕರುಣದಿ ಬಾರೆತಾಯೆ 5
--------------
ನಿಡಗುರುಕಿ ಜೀವೂಬಾಯಿ
ಸತ್ಯಪ್ರಜÕರಾಯರಂಘ್ರಿಗಳ ಸಂತತಹೃತ್ಪದ್ಮದಲಿ ನೆನೆಯಿರಯ್ಯ ಪುನರಪಿಭವ.....ತ್ವತಿಯಂ ತೋರಿ ಸಾಪ್ರಾಯ ಪದ್ಧತಿಯ ವಿಪ್ರತಿಯಂ ತೋರುವಹೊರೆವಪ.ಸೂತ್ರಾರ್ಥಸ್ತೇಯ ದಾನವರಿಳೆಗೆ ಭಾರಾಗಿವೇತ್ತøಜನಗಳ ಮತಿಗೆಡಿಸಿ ಬಾಧಿಸುತಿರಲುಗೋತ್ರಧರನಾಜÕದಿಂ ಶ್ರೀ ಮಾರುತನು ತನ್ನಯ ತೃತೀಯಾವತಾರದಿಂದ್ವಾತ್ರಿಂಶತ್ ಲಕ್ಷಣಾನ್ವಿತನಾಗಿ ಋಜುಗಣದಗೋತ್ರದಲ್ಲೆಸೆದು ನಿಜಜನನಿಗ್ಹರುಷವನಿತ್ತುಧಾತ್ರಿಗೆ ಭೂಷಣದ ಮಣಿಯಂತೆ ಹೊಳೆ ಹೊಳೆವಸುತ್ರಾಮಾಶೇಷವರದ ಅಭಯದ 1ವಿಶ್ವವೆಲ್ಲ ಮಿಥ್ಯಪ್ರತಿಷ್ಠಿತವು ಅಲ್ಲವು ನಿರೀಶ್ವರ ಭುವನವೆಂಬ ಕುಮತಿಘಟಿಗಳ ಮಾತರಿಶ್ವಕಂಠೀರವನೀ ಯತಿ ರೂಪದಲಿ ಸದೆದುಸುಸ್ವಭಾವದಲ್ಲಿ ಒಪ್ಪುತ ಸುಶಶ್ವದೇಕ ಶ್ರೀ ಹರಿಯು ಜೀವ ಜಗದೊಡೆಯನಶ್ವರಾನಶ್ವರಾರ್ಥೇತರ ಮುಕುಂದೆನ್ನುತತಾ ಸ್ವಕೀಯರಿಗೆಲ್ಲಶ್ರುತಿಸ್ಮøತಿಸುವಾಕ್ಯದಿಂವಿಶ್ವಾಸವಂ ಬಲಿಸಿದ ಸುಬೋಧ 2ಮತ್ರ್ಯದ ಬುಧರು ಬುದ್ಧಿಭ್ರಂಶದಲಿ ಮಾಯಿಮತಗರ್ತದಲಿ ಬಿದ್ದಿರಲು ಕಂಡು ಕರುಣದಲಿ ಸುಖತೀರ್ಥ ಮಧ್ವಾನಂದ ದಶಪ್ರಮತಿಯೆಂಬ ವೇದಾರ್ಥ ನಾಮದಲಿ ಮೆರೆದುಧೂರ್ತದುರ್ಭಾಷ್ಯಾಂಧಕಾರವಂ ಬಿಡಿಸಿ ವಿದ್ಯಾರ್ಥಿಗಳಿಗೊಲಿದು ಸದ್ಭಾಷ್ಯಗಳ ರಚಿಸಿಪರಮಾರ್ಥ ವ್ಯಾಖ್ಯಾನಗಳ ಪೇಳಿ ಉದ್ಧರಿಸಿದ ಸಮರ್ಥ ಮಾರ್ತಾಂಡನಾದ ಸುಖದ 3ಮಬ್ಬು ಮುಸುಕಿದ ಪರೆಯ ತೆರೆದ ಸುಜನರ ಹೊರೆದಕೊಬ್ಬಿದ ಕುತರ್ಕಿಗಳ ತರಿದ ಇಂದುವ ಜರಿದÀಸಭ್ಯರಿಗೆ ತತ್ವಸುಧೆಯೆರೆದ ಮಂತ್ರವನೊರೆದನಬ್ಬಗುರುಪೂರ್ಣಬೋಧದುಬ್ಬಿ ತಮಸಿನೊಳು ಮಿಥ್ಯಾತ್ಮಕ ದುರಾತ್ಮರಿಳೆಗುಬ್ಬಸದ ದರ್ಶನಗಳೊರೆಸಿ ಸತ್ಯವ ಮೆರೆಸಿಅಬ್ಬರದ ತಪ್ತ ಮುದ್ರೆಯನಿತ್ತಘವ ಕಿತ್ತುನಿರ್ಭಯವ ಪದವನೀವಕಾವ4ಇಂಥ ಸಂಕರ್ಷಣನ ಪ್ರೀತಿಯ ಕುವರ ಅಮಲವಾತನಿಖಿಳಪ್ರಾಣನಾಥ ರಘುಪತಿಯಸೇವ್ಯತ್ರೇತೆಯಲಿ ಮೂಡಿ ಪ್ರಖ್ಯಾತಾಕ್ಷಯ ಪ್ರಮುಖಭೂತಳದ ಭಾರರೊದೆದಪೂತನಾರಿಯ ಪಕ್ಷಪಾತದಿಂ ಬಕ ಜರಾಜಾತ ಗಾಂಧಾರ್ಯರಂ ಘಾತಿಸಿದ ಶ್ರೀಸವಿತನಯನಾಜÕದಲಿ ಪಾತಕಿಗಳೊರಸಿದಾದ್ವೈತ ಮತ ಕಾಲನೆನಿಪ್ಪ 5ಹತ್ತುಪನಿಷದ್ಭಾಷ್ಯಸೂತ್ರಗೀತಾಭಾಷ್ಯಮತ್ತೆ ಅಣುಭಾಷ್ಯ ಋಗ್ಭಾಷ್ಯಭಾಗವತತಾತ್ಪರ್ಯ ವಿಷ್ಣುಸ್ತೋತ್ರದ್ವಯಂ ಕಲ್ಪದ್ವಯಂಹತ್ತು ಪ್ರಕರಣವು ಕೃತಿಯುತಂತ್ರಸಾರಕೃಷ್ಣಾಮೃತಾಬ್ಧಿಯ ಮಹಾಭಾರತಾನ್ವಯ ವಿವರ್ಣನವೆಂಬ ಸದ್ಗ್ರಂಥ ಮೂವತ್ತೇಳು ರಚಿಸಿ ಮೋಕ್ಷೋಪಾಯವರುಹಿದ ವಿಧಾತ್ರ ಪದಕರ್ತನೀತತಾತ6ಭಾಟ್ಟ ಪ್ರಭಾತ ಛೆರಾನಾಯತ ? ಪ್ರತ್ಯಕ್ಷ ಮತಿ............... ಚಾರ್ವಾಕ....................ಚೌದ್ಧನೆ............ಶಂಕರನೆ ಕಡೆಯಾಗಿಪ್ಪತ್ತೊಂದುನಷ್ಟ ಭಾಷ್ಯವನಂಘ್ರಿಯಲಿಮೆಟ್ಟಿ ಸದ್ಗುಣಶರಧಿಹರಿಯು ಭುವನಂಗಳನುಹುಟ್ಟಿಸೆತ್ತಿಳಿದಾಡಿ ಮುಕುತಿಯ ನಿಜರ್ಗಿತ್ತುಕಷ್ಟವ ಖಳರ್ಗೀವನೆಂದು ಡಂಗುರಿದದಿಟ್ಟಾಲವಬೋಧ ರಾಜತೇಜ 7ಶ್ರುತಿವೇದನಿಕರ ಚಕ್ರವ ಪಿಡಿದು ಬ್ರಹ್ಮತರ್ಕಾವಳಿಯ ಶಂಖದ ಭೀಕರ ಘೋಷದಿಂದ ಜಗತ್ಪ್ಪಾವನನ ಪುರಾಣಗದೆ ಇತಿಹಾಸ ಪಂಚರಾತ್ರಭಾವಶಾಙ್ರ್ಗವಿಡಿದುಜೀವೇಶ ಭೇದಶರಪಂಚಕದಿ ಬ್ರಹ್ಮಸೂತ್ರಾವಳಿಯಿಂಬಿನ ನಂದಕವ ಧರಿಸಿ ಬೆಂಬತ್ತಿದೇವರಿಪುದುರ್ಮತವ ಓಡಿಸಿದಮಧ್ವನಾರಾಯಣ ಪಾರಾಯಣ ಯತಿ ಸುಮತಿ 8ತರುಣರವಿತೇಜಸುಸ್ಮಿತ ಸುಂದರ ನಾನಾ ಸುವರ್ಣಕಾಪಿನ ಭ್ರಾತ ಪ್ರಬೋಧ ಮುದ್ರಾಭಯಕರಸರೋರುಹದಿಂದ ಮೆರೆವ ವಿಧಿಪನಶರಣಜನ ಮಂದಾರನಪರಮನವರತ್ನದ ಪದ್ಮದ ಮಾಲೆಯಿದು ಪುಣ್ಯಕರವು ವೈಷ್ಣವರ್ಗೆ ಅಘದೋಟ ಮುಕ್ತಿಯ ಕೂಟಗುರುಮೂರ್ತಿಯ ಕೀರ್ತಿ ಪ್ರಸನ್ನವೆಂಕಟಪತಿಯವರಪ್ರಧಾನಾಂಗ ಮೂರ್ತಿಯ ವಾರ್ತಿ9
--------------
ಪ್ರಸನ್ನವೆಂಕಟದಾಸರು