ಒಟ್ಟು 5 ಕಡೆಗಳಲ್ಲಿ , 3 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉಗಾಭೋಗ ಕಮಲಮಾರ್ಗಣಪಿತ ನಿನ್ನ ಸಮವಾದ ದೈವಗಳ ನಾ ಕಾಣೆ ಕಮಲಜಾಂಡದೊಳಗೆ ಜಗಕೆ ಗುರುವೆನಿಪ ಕಮಲಭವನ ನೀ ಪೆತ್ತೆ ಜಗನ್ಮಾತೆಯಾ ಕಮಲಾಲಯೆಗೆ ನೀ ಪತಿಯಾದೆ ಕಮಲಸಖ ಕೋಟಿತೇಜ ನಿನ್ನ ಪಾದ ಕಮಲವನೆನ್ನ ಹೃತ್ಕಮಲದೊಳು ತೋರಿ ಸಲಹೊ ಕಮಲಾಕ್ಷ ಶ್ರೀ ರಂಗೇಶವಿಠಲ
--------------
ರಂಗೇಶವಿಠಲದಾಸರು
ಕಣ್ಣಾರೆ ಕಂಡೆವು ಚಿನ್ಮಯದ ರೂಪ ಕಣ್ಣಾರೆ ಕಂಡೆವು ಮಾ ಧ್ರುವ ದೋರುವದು ಮಾ ಪೂರ್ಣಗೈಸುವದು ಮಾ 1 ತಾನಾಗಿಹುದು ಮಾ ಘೋಷಗೈವದು ಮಾ 2 ದೋರುದು ಮಾ ಕೈಗೂಡದು ಮಾ 3 ತಿಳಿಯಗೊಡದು ಮಾ ತಾನೆ ಭಾಸುದು ಮಾ 4 ಉತ್ತಮರೊಳಗೆ ಅತ್ಯಂತವಾಗಿನ್ನು ಅತ್ತಿತ್ತಲಾಗದೆ ಇಹುದು ಮಾ ಹೃತ್ಕಮಲದೊಳು ಕಂಡೆನು ಮಾ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದತ್ತ ನಮ್ಮನಿ ದೈವ ಚಿತ್ತಮನದೊಳಗಿಹ್ಯ ಎತ್ತ ಹೋದರು ನಮ್ಮ ಹತ್ತಿಲಿಹನೊ 1 ನಿತ್ಯ ನಿಜ ಘನವಾಗಿ ಹೃತ್ಕಮಲದೊಳು ತಾಂ ಮುತ್ತಿನಂತೆ 2 ಗುತ್ತಳಿದು ಒಳಗ ತಾಂ ಪುಥ್ಥಳಿಯು ಹೊಳೆವ ಪರಿ ಮೊತ್ತವಾಗಿಹ್ಯ ಪೂರ್ಣ ನೆತ್ತಿವೊಳಗ 3 ದತ್ತವುಳ್ಳವನಿಗೆ ಹತ್ತಿಸಂಗಡ ಬಾಹ ವಿತ್ತ ಒಡಿವ್ಯಾಗೆ ತಾಂ ಕರ್ತುನಮ್ಮ 4 ದತ್ತಗಿಂದಧಿಕ ಮತ್ತೊಂದು ದೈವವು ಕಾಣೆ ಪೃಥ್ವಿಯೊಳು ಮಹಿಪತಿವಸ್ತು ಒಂದೆ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಶರಧಿಸುತೆ ಮಾತೆ ಶರಧಿಸುತೆ ಮಾತೆ ಪ ಪೊರೆಯೇ ಜಗನ್ಮಾತೆ ಅ.ಪ ಸರಸಿಜಭವ ಶಿವ ಗರುಡ ಶೇಷ ಮುಖ ಸುಮನಸ ವಂದಿತ ಪದಯುಗಳೆ ಮನಸಿಜ ಜನಕನ ಕೋಮಲತಮ ಹೃತ್ಕಮಲದೊಳು ಸದಾ ನೆಲಸಿದ ಶುಭಗೆ 1 ವಂದಿಪೆ ನಿನ್ನಯ ಚರಣ ಕಮಲ ಎನಗೊಂದುಪಕಾರವ ದಯಮಾಡೆ ಒಂದನು ಅರಿಯದ ಭಕುತರೊಳಗೆ ಇವ ನೊಂದು ಎಂದು ಗೋವಿಂದನಿಗರುಹೆ 2 ತುಂಗಮಹಿಮನನು ಎಡಬಿಡದೆಲೆ ಅವ ನಿಂಗಿತವನು ನೀನರಿತಿರುವೆ ಮಂಗಳದೇವತೆ ಅದನರುಹಿ ಕೃಪಾ ಪಾಂಗವ ಬೀರೆ ಪ್ರಸನ್ನ ಸುವದನೇ 3
--------------
ವಿದ್ಯಾಪ್ರಸನ್ನತೀರ್ಥರು
ಸುಮ್ಮನಿರಬ್ಯಾಡಿ ನಿಮ್ಮೊಳು ನೀಟ ನೋಡಿಒಮ್ಮನವ ಮಾಡಿ ಪರಬ್ರಹ್ಮನೊಲು ಕೂಡಿ ಧ್ರುವ ಹೊತ್ತುಗಳಿಯಲು ಬ್ಯಾಡಿ ಹೃತ್ಕಮಲದೊಳು ನೋಡಿ ಅತ್ತಿತ್ತಲಾಗದೆ ಚಿತ್ತಸ್ವಸ್ಥ ಮಾಡಿ ಹತ್ತಿಲಿಹ ವಸ್ತುವನು ಪ್ರತ್ಯಕ್ಷ ಮಾಡಿ ನಿತ್ಯ ನಿಜಾನಂದ ಸುಪಥವು ಗೂಡಿ 1 ಮುತ್ತಿನಂಥ ಜನ್ಮ ವ್ಯರ್ಥಗಳಿಯಲಿ ಬ್ಯಾಡಿ ನಿತ್ಯ ಸಾರ್ಥಕದ ಸಾಧನವ ಮಾಡಿ ಸತ್ಯ ಶಾಶ್ವತದಾವದೆಂದು ಖೂನದಲಿ ಅಡಿ ಕೃತ್ಯಾ ಕೃತ್ಯಾಗುವ ಸ್ವಸುಖ ಬೆರೆದಾಡಿ 2 ದೀನ ಮಹಿಪತಿ ಸ್ವಾಮಿ ತಾನೊಲಿದು ಬಾವ್ಹಾಂಗ ಜ್ಞಾನಾಭ್ಯಾಸವ ಮಾಡಿಕೊಳ್ಳಿ ಬ್ಯಾಗ ಭಾನುಕೋಟಿ ತೇಜ ದೀನದಯಾಳು ತಾಂ ನೆನೆವರಿಗನುಕೂಲವಾಗುತಿಹ್ಯ ಈಗ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು