ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುಡಿಯ ತುಂಬ ದೇವರ ಕಂಡೆ | ಅಡಿಯಿಡಗೊಡದೆನ್ನ ಹಿಡಿಕೊಂಡಿತಕ್ಕ ಪ ಕೈಯಿಲ್ಲ ಕಾಲಿಲ್ಲ ಮೂಗಿಲ್ಲ ಮಾರಿಲ್ಲ | ಮೈಯೆಲ್ಲ ನೋಡಲು ಮರಿಯಾದೆ ಇಲ್ಲ | ಸೈಯೆನಿಸಿ ಜಗಕೆಲ್ಲಕೆ ಮಿಗಿಲಾದ ದೇವರು | ವೈಯಾರ ಇಲ್ಲದೆ ಸಿಕ್ಕಿತಕ್ಕ 1 ಹೆಣ್ಣಲ್ಲ ಗಂಡಲ್ಲ ಹಣ್ಣಲ್ಲ ಕಾಯಲ್ಲ | ಹೂವಿಲ್ಲದೆ ಪೂಜೆಗೊಂಡಿಹುದಕ್ಕ | ಪೂಜೆಯ ಮಾಡುವ ಪೂಜಾರಿಯ ನುಂಗಿತು | ಮೂಜಗದೊಳು ಇದು ಸೋಜಿಗವೆನ್ನಿ 2 ಅರಿತು ನೋಡಲು ಬೆರೆತು ನಿಂತಿಹುದಲ್ಲ | ಮರೆತು ಹೋಯಿತು ನಾನೆಂಬುವದೆಲ್ಲ | ಗುರುತವ ಬಲ್ಲದು ಗುರು ಭವತಾರಕ | ಭಜಕರ ಹೊರತು ತಿಳಿಯದು ಜನಕೆ 3
--------------
ಭಾವತರಕರು
ವಸ್ತು ಒಂದೆ ಅದೆ ಅನಾದಿಯಿಂದ ಸ್ವಸ್ತ ಮಾಡಿಕೊಳ್ಳಿ ಗುರುಮುಖದಿಂದ ಧ್ರುವ ಹೂವಿಲ್ಲದೆ ಫಲವಾಗುವ ಕಾಯಿ ಠಾವಿಲ್ಲದೆ ಮ್ಯಾಲೆ ಮುಚ್ಯಾದೆ ಮಾಯಿ ಭಾವಿಕರಿಗಾದೆವು ಪಾಯಿ ಠಾವಿಕಿ ಮಾಡಿಕೊಬೇಕು ತಾಯಿ 1 ಬೀಜಿಲ್ಲದೆ ಫಲ ನಿಜವಾಗ್ಯದೆ ಮೂಜಗದೊಳು ರಾಜಿಸುತ್ತದೆ ಸೂಜಿಮೊನೆಗಿಂತ ಸಣ್ಣವ್ಯಾಗದೆ ವಾಜಿಹೀನರ ವರ್ಜಿಸುತದೆ 2 ನೋಡೇನೆಂದರೆ ನೋಟಕತೀತ ಹಿಡಿದೇನಂದರೆ ಸಿಕ್ಕದು ಸ್ವಸ್ಥ ಪಡೆದುಕೊಂಡವರಿಗೈದೆ ಆಯಿತ ಮೂಢ ಮಹಿಮತಿ ಗುರು ನಿಜಹಿತ3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬಯಲಭಾವಿಯ ನೀರಿಗೆ ಬಂದಳೊಬ್ಬಳು ಬಾಲೆ |ಬಾಯಾರಿ ಬಿದ್ದಳು ಕೊಡವೊಡೆಯಿತು ನೀರುರುಳಿತು ಪ.ನೀರಿಲ್ಲದೆ ನೆರಳಿಲ್ಲದೆ ಬೇರಿಲ್ಲದೆ ಸಸಿಹುಟ್ಟಿಹೂವಿಲ್ಲದೆ ಕಾಯಿಲ್ಲದೆ ಅದು ಫಲಕೆ ಬಂದು ||ಕರವಿಲ್ಲದೆ ಕಾಲಿಲ್ಲದೆ ಕೊಯ್ವರಯ್ವರು ಆ ಹಣ್ಣನು |ಮರುಳಾಯಿತು ಮೂವತ್ತು ಸಾವಿರ ಮಂದಿ 1ಕುರುಡ ಕಂಡನು ಸರ್ಪನಡುವಿರುಳು ಬಾಹುದನು |ಮೂಕ ಕಂಡನು ಕನಸ ಕಿವುಡನು ಕೇಳಿದ ||ಇರವು ಹಾರಿತು ಗಗನಕೆ ಮರವು ಮುರಿಯಿತು ನೋಡಿ |ವಿಧಿತನ್ನ ಬೇಟಿಗೆ ಹೋಗುವ ಸಡಗರ ನೋಡಿ2ಕಿಚ್ಚಿನ ಕೊಡದವಳೆ ನೀ ಬಂದೆ ತೋರಣಗಟ್ಟಿ |ರಚ್ಚಿಗೆ ಬಾಹೋರು ನಾಲುವರೊಳಗೆಉಚ್ಚರಿಸಲೂ ಸಲ್ಲ ಕೇಳು ಪುರುಷನ ಸೊಲ್ಲಅಚ್ಚಪುರಂದರವಿಠಲ ತಾನೆ ಬಲ್ಲ 3
--------------
ಪುರಂದರದಾಸರು