ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣದಿ ಕೊಡು ಕಾರ್ತಿಕೇಯಾ | ತವ | ಶಿರದ ಮೇಲಿಹ ಗಂಧ ಸಿಂಗಾರ ಹೂವಾ ಪ ದುರಿತ ಕೋಟಿಗಳನು ತರಿಯೇ | ಮಹಾ | ದುರುಳರುಪದ್ರದ ಗಿರಿಯನು ಮುರಿಯೇ ಪರಮ ಕುಲಿಶದಂತೆ ಇರುವಾ | ತವ | ಶಿರದ ಮೇಲಿರುವ ಸಂಪಿಗೆ ಹೂವ | ದೇವಾ 1 ಕೆಡುಕಿನ ತಾಮಸವಳಿದೂ | ತವ | ದೃಢಭಕ್ತಿ ಎನ್ನಯ ಮನದೊಳು ಮೊಳೆದೂದೃಢವಾಗಿ ನೆಲೆಸುವ ತೆರದೀ | ತವ | ಮುಡಿ ಮೇಲಿಹ ಮಲ್ಲಿಗೆಯನತಿ ಮುದದೀ2 ಆಶಾದಿಗಳ ಪರಿತ್ಯಜಿಪಾ | ತವ | ದಾಸರ ಚರಣಯುಗ್ಮಕೆ ನಮಸ್ಕರಿಪಾ | ಲೇಸಿನ ತಿಳಿ ಜನಿಸಲಿಕೇ ಪಾವಂ- ಜೇಶ ನೀ ಪೊತ್ತು ಕೊಂಡಿರುವ ಅಶೋಕೇ 3
--------------
ಬೆಳ್ಳೆ ದಾಸಪ್ಪಯ್ಯ
ಹೂವಾ ಕೊಟ್ಟಳು ಮಹಾದೇವಿ ಮೂಕಾಂಬಾ ಭೂಪವರ ಬಸವ ನೃಪನ ಭಾವಭಕ್ತಿಗೆ ಒಲಿದು ಪ ತನ್ನ ಮಗನೆಂಬ ತಾತ್ಪರ್ಯದಲಿ ಕೈವಿಡಿದು ಮನ್ನಿಸುವೆನೆನುತ ಮೋಹದಲಿ ಕರೆದು ಅನ್ಯ ವೈರಿಗಳ ಜಯಿಸೆಂದು ಅಭಯವನಿತ್ತು ಚೆನ್ನಾಗಿ ಸಾಮ್ರಜ್ಯ ಪದವಿಯನನುಭವಿಸೆನುತಾ 1 ದೃಢಭಕ್ತಿವಿಡಿದು ತನ್ನಡಿಗಳನು ಪೂಜಿಸಲು ಒಡನೊಡನೆ ಬಂದು ಭೂಮಿಪನ ನೋಡಿ ಪಡುಗಡಲ ಒಡೆಯ ಬಾರೆಂದು ನಂಬಿಗೆಯನ್ನು ಕೊಡುವ ತೆರದಲಿ ವಿಶ್ವದೊಡತಿ ತನ್ನಯ ಬಲದ 2 ಪರಿಯಂತ ನೃಪನೇನಿಸಿ ಚಂದದಿಂದಲಿ ವಿಮಲಾನಂದವಾಗಿ ಎಂದೆಂದು ಸ್ಥಿರದಿ ಬಾಳೆಂದು ಬಸವೇಂದ್ರನಿಗೆ ಇಂದೀವರಾಕ್ಷಿ ಕೊಲ್ಲೂರ ಮೂಕಾಂಬಾ 3
--------------
ಭಟಕಳ ಅಪ್ಪಯ್ಯ