ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲೆ ಎಲೆ ಎಲೆ ಥೂ ಪರದೇಸಿ ನೀ ಸುಳ್ಳೆ ಸುಳ್ಳೆ ಮಾಡಬೇಡ ಚೌಕಾಸಿ ಪ ತಿಳಕೊಂಡು ನೋಡು ನೀನು ಸುಧಾರಿಸಿ ಬಲವಾಗಿ ಬರದೇನು ಹಿಂಬಾಲಿಸಿ ಅ.ಪ ಎಷ್ಟು ದುಡಿದಿ ಸತಿಸುತರಿಗಾಗಿ ಗಂಟು ಕಟ್ಟಿಕಟ್ಹ್ಹೂಳಿಟ್ಟಿ ಇವರಿಗಾಗಿ ಅಷ್ಟು ಬಿಟ್ಟು ನಡೀತಿದ್ದಿ ಹಾಳಾಗಿ ನಿನ್ನ ಇಟ್ಟು ಬಂದು ಉಣುತಾರೋ ಹೋಳಿಗಿ 1 ಕಣ್ಣು ಮುಚ್ಚ್ಯಾಟವನಾಡುತಿದ್ದಿ ನೀ ಬಣ್ಣಗೆಟ್ಟು ಖರೆಯೆನುತಿದ್ದಿ ಸುಣ್ಣದ್ಹರಳ್ಹೊತ್ತ ಕೋಣ ಹೋಗಿ ಭರದಿ ಕಂಡು ತಣ್ಣೀರಿನೊಳು ಬಿದ್ದು ಸತ್ತ ಗಾದಿ2 ಘಟ ಇದು ಪುಸಿಯು ಬರಿದೆ ಗಾಳಿಯ ಮಟ್ಟ ವಸುಧೇಯೊಳಧಿಕೆಂದು ತೊಡು ನಿಷ್ಠೆ ನಮ್ಮ ಅಸಮ ಶ್ರೀರಾಮನ ಪಾದ್ಹಿಡಿ ಗಟ್ಟಿ 3
--------------
ರಾಮದಾಸರು
ನಾನೊಂದು ಮಾಡಲು ತಾನೊಂದಾದಮೇಲಿನ್ನೇನಿನ್ನೇನು ದೇವರೆಂದು ನಮಿಸಲು ದೆವ್ವಾಗಿ ಬಡಿದ ಮೇಲಿನ್ನೇನಿನ್ನೇನು ಜೀವದಾಪ್ತರೆ ತನ್ನ ಕೊಲ್ಲಲೆತ್ನಿಸಿದರಿನ್ನೇನಿನ್ನೇನು 1 ತಾಯ್ತಂದೆಗಳೆ ಸುತರಿಗ್ವಿಷವನೆರೆದ ಮೇಲಿನ್ನೇನಿನ್ನೇನು ಕೈಯೊಳು ಪಿಡಿದ ಬೆತ್ತ ಹಾವಾಗಿ ಕಚ್ಚಲು ಇನ್ನೇನಿನ್ನೇನು 2 ಕಣ್ಣಿಲ್ಲದವನಿಗೆ ಮಾರ್ಗ ತಪ್ಪಿದ ಮೇಲೆನ್ನೇನಿನ್ನೇನು 3 ಹಾಲೆಂದು ಸವಿದರೆ ಹಲ್ಲು ಮುರಿದಮೇಲಿನ್ನೇನಿನ್ನೇನು ಮಾಲ್ಯೆಂದು ಧರಿಸಲು ಉರುಲು ಬಿದ್ದ ಮೇಲಿನ್ನೇನಿನ್ನೇನು 4 ಬೇಲ್ಯೆದ್ದು ಹೊಲದ ಬೆಳೆಯ ತಾ ಮೇಯಲಿನ್ನೇನಿನ್ನೇನು ಮಾಳಿಗೆ ಮನೆಯೆ ತಾ ಗಾಳಿಗೆ ಸಡಲಿದರರಿನ್ನೇನಿನ್ನೇನು 5 ಭೂಪತಿಗಳತಿನೀತಿತಪ್ಪಿದ ಮೇಲಿನ್ನೇನಿನ್ನೇನು ಪಾಪಿಗಳತಿಶಯಯಕೋಪ ತಾಳಿದ ಮೇಲಿನ್ನೇನಿನ್ನೇನು 6 ನೋಪಿದ ಗೌರಿಯೆ ಶಾಪವಿತ್ತ ಮೇಲಿನ್ನೇನಿನ್ನೇನು ದೀಪವೆ ಕಾಲಾಗ್ನಿಯಾಗಿ ಉರಿದಮೇಲಿನ್ನೇನಿನ್ನೇನು 7 ಹೂಳಿಟ್ಟ ಹಣವೆಲ್ಲ ಚೇಳಾಗ್ಹರಿದ ಮೇಲಿನ್ನೇನಿನ್ನೇನು ಅಳಿದ ಗೋವುಗಳು ಹುಲಿಯಾಗ್ಹಾರಿದ ಮೇಲಿನ್ನೇನಿನ್ನೇನು 8 ಆಳುವ ಒಡೆಯರೆ ಅಹಿತರಾದ ಮೇಲಿನ್ನೇನಿನ್ನೇನು ಬಾಳುವುದೆಂತಯ್ಯ ಶ್ರೀರಾಮ ನೀಮುನಿದರಿನ್ನೇನಿನ್ನೇನು 9
--------------
ರಾಮದಾಸರು
ಲೋಕನೀತಿ ಇಳೆಯೊಳಗೆ ದೇಹತಾಳಿ ಬಂದೆಲ್ಲಾ ತಮ್ಮಾ ಗಳಸಿ ಮನೆ ಹೆಂಡಿರು ಮಕ್ಕಳಿಟ್ಟಿಲ್ಲಾ ಬಲಿಸಿ ಹಣ ಹೊನ್ನು ಹೂಳಿಟ್ಟಿಲ್ಲಾ ತಮ್ಮಾ ಒಲಿದು ಉಂಡಿ ವಿಷಯ ಸುಖವಾ ಪೇಳಲ್ಲಾ 1 ತೆರಪೀರಾದೆ ಜನಿಸಿದಾವು ಸುತ್ತಲು ಪರಿಪರಿಯ ಸುಖದುಃಖ ಪಗಲಿರುಳು ತಮ್ಮಾ ಇರದೆಯೊದಗಿ ದಣಿಸಿದಾವು ನಿನ್ನ ಮರುಳೆ 2 ಯಮನವರು ಬರುವದು ಮರೆತೇಯ ತಮ್ಮಾ ರಮಣೀ ಮೋಹಾ ಕೇಳಿರು ನೀನರಿಯಾ ಅಮಿತ ಧನ ಬಳಗ ಇನ್ನೆಲ್ಲಯ್ಯಾ ತಮ್ಮಾ ನಮೋ ನರಸಿಂಹವಿಠಲ ಎನ್ನಯ್ಯ 3
--------------
ನರಸಿಂಹವಿಠಲರು