ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಡುವರೇಚಕ ಪೂರಕ ನಂದಿಯ | ಜೋಡಿಸಿ ಎರಡನು ಮೆರೆವಸುಷಮ್ನಿಯ | ನಾಡಿಯ ರಥಿಕರ ಹೂಡುತ ಮೆಲ್ಲನೆ | ನಿಜಮನ ಸಾರಥಿಯಾ | ಕೂಡಿಸಿ ಹರುಷಲೇರಿ ನಡೆಸುತ ಸ | ವಾಡಿಕಿಯಿಂದಲಿ ಮೇಲ್ಗುರಿಯಾತ್ರೆಯ | ಮಾಡಿ ವಿಲಾಸದಲಾಡಿದ ಮಹಿಪತಿ | ಗುರುಮೂರ್ತಿಗೆ ಶರಣು
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮುಂದೆನಗೆ ಗತಿಯೇನೋ ಇಂದಿರೇಶಾ ತಂದೆ ನೀನೆಂದೆನುತ ತಪ್ಪನೊಪ್ಪಿಸುವೇ ಪ ಶ್ರೀಕಾಂತನೇ ನಿನಗೆ ಅಭಿಷೇಕ ಮಾಡದೆಯೆ ನಾ ಕಂಠಪರಿಯಂತ ಕುಡಿದೆನೊ ಹಾಲ ಬೇಕೆಂದು ಹರಿವಾಸರಂಗಳಾಚರಿಸದೆಯೆ ಸಾಕೆಂಬವೊಲು ಸುಖವ ಸೂರೆಗೊಂಡೇ 1 ಅತಿಶಯದಿ ನಾನಿನ್ನ ಪೂಜೆಯನು ಮಾಡದೆಯೆ ಸತಿಸುತರೆ ಸರ್ವಸ್ವವೆಂದಿರ್ದೆನೋ ಹಿತಮಿತ್ರ ಬಾಂಧವರೊಳತಿ ವಂಚನೆಯಮಾಡಿ ಮತಿವಿಕಳನಾದೆನೋ ಪತಿತಪಾವನನೇ 2 ಕಲ್ಯಾಣ ಸಮಯದಲಿ ಕಲಹಗಳ ಹೂಡುತ್ತ ಉಲ್ಲಪದಿ ನಾಕುಳಿತು ನೋಡುತಿದ್ದೆ ಸಲ್ಲಲಿತ ವಾಕ್ಯಗಳನಾಡದೆಯೆ ಸರ್ವತ್ರ ಖುಲ್ಲುಮಾತುಗಳಾಡಿ ನೋಯಿಸಿದೆ ನರರ 3 ತಾರೆಂಬುದಕೆನಾನು ತೌರುಮನೆಯಾಗಿರುವೆ ಪಾರಮಾರ್ಥಕವಾಗಿ ಕೊಡುವುದರಿಯೆ ವೀರವೈಷ್ಣವರಲ್ಲಿ ವಂದಿಸದೆ ದೂಷಿಸುತ ಘೋರಪಾತಕಿಯಾಗಿ ಇರುವೆಯೀ ಜಗದಿ 4 ನರ್ಮದಾನದಿ ಸ್ನಾನ ನಿರ್ಮಲೋದಕಪಾನ ಧರ್ಮ ಮರ್ಮಗಳರಿತು ಮಾಡುವುದು ದಾನ ಪೆರ್ಮೆಯಂಶ್ರೀಹರಿಯ ಧ್ಯಾನ ನಿದಾನ ನೆಮ್ಮದಿಯ ಮಾರ್ಗದಿಂ ಪೊರೆ ನಾನು ದೀನ 5 ನಿತ್ಯ ಜೀವಿಸುವುದನ್ನು ಕಾಡದೆಯೆ ಕಡೆಯಲ್ಲಿ ಉಸಿರುಬಿಡುವುದನು ನೋಡುತ್ತ ಗುರುತರದ ಶ್ರೀಪತಿಯ ಪದಯುಗಕೆ ಗಾಢದಿಂ ಮುಡಿಯಿಕ್ಕಿ ಪಿಡಿವಂತೆ ಮಾಡು 6 ನೀನು ಒಲಿಯುವ ಪರಿಯದಾವುದನು ಮಾಡಿಲ್ಲ ಏನು ಮಾಡಲು ಎನಗೆ ಮನಸು ಬರದು ದೀನ ಪಾಲಕ ನಮ್ಮ ಹೆಜ್ಜಾಜಿ ಕೇಶವನೆ ಸಾನುರಾಗದಿ ನಿನ್ನ ಧ್ಯಾನಿಪುದ ನೀಡೈ7
--------------
ಶಾಮಶರ್ಮರು
ಸ್ವಾಗತ ಸುಗುಣಗೆ ಸ್ವಾಗತ ಕರುಣಿಗೆ ಸ್ವಾಗತವು ನವಸಚಿವರಿಗೆ | ಸ್ವಾಗತ ಸ್ವಾರ್ಥ ವಿದೂರರಾದ ಜಗನ್ನಾಯಕ ನಾಮ ರಾಯರಿಗೆ || ತರಳತನದಿ ಇವರು ಸರಳ ಮನಸ್ಸಿನಲ್ಲಿ ಸರಸ್ವತಿದೇವಿಯನೊಲಿಸಿದರು | ಪರಮಪೂಜ್ಯ ಮಹತ್ವರ ತತ್ವ ತಿರುಳು ತಿಳಿದು ಆಚರಿಸಿದರು 1 ಪ್ರಾಂತದ ಬಡವರ ಚಿಂತೆಕಡಿಯಲು ಸ್ವಾಂತದಿ ಪಂಥವ ಗೈದವರೋ || ಕ್ರಾಂತಿಯ ಹೂಡುತ ಶಾಂತಿ ಸಂಗರದಿ ನಿಂತು ಹೋರಾಡಿದ ಯೋಧರು 2 ದುರುಳರಾಳಿಕೆಯಲಿ ಜರಿದು ಧಿಃಕರಿಸಿ ಸೆರೆಮನೆ ಕಷ್ಟವ ಸಹಿಸಿದರು | ದೊರೆಯ ಸ್ವತಂತ್ರವು ಬಹುಮತದಲಿ ಸ್ವೀಕರಿಸಿದರು ಮಂತ್ರಿಪದವಿಯನು 3 ಉಚ್ಚನೀಚವೆಂಬ ಕುತ್ಸಿತ ಭಾವವ | ಕೊಚ್ಚಿ ಬೀಸಾಡಿದ ಜಾಣರು | ಅಚ್ಚಗನ್ನಡದ ವೀರ ಜನನಿಗೆ ಅಚ್ಭದ ಪ್ರೀಯ ಸುಕುಮಾರರು 4 ಈ ಮಹಾಚತುರನ ಪಡೆದ ಚಂಡ್ರಿಕಿ ಗ್ರಾಮದೇವಿ ಬಹುಪುಣ್ಯವತಿ | ಪ್ರೇಮ ದಿಂದಿವರ ನೇಮವ ನಡೆಸುವ ಶಾಮಸುಂದರನು ದಿನಂಪ್ರತಿ5
--------------
ಶಾಮಸುಂದರ ವಿಠಲ