ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾರೋ ಮನೆಗೆ ಶ್ರೀಧರನೆ ನಿಜಪರಿ ವಾರದೊಡನೆ ಗುಣವಾರಿಧಿಯೆ ಪ ಮಾರಜನಕ ಸುಕುಮಾರಾಂಗ ಪರಮೋ ದಾರಾಕೃತಿಯ ನೀ ತೋರಿಸೆನಗೆ 1 ಎಷ್ಟು ಜನ್ಮದ ತಪ ಒಟ್ಟಾಗಿ ಸೇರಲು ದೃಷ್ಟಿಸುವೆನೊ ಶ್ರೀ ಕೃಷ್ಣ ನಿನ್ನನು 2 ಚಿನ್ನದ ಪೀಠದಿ ರನ್ನದ ಕಲಶದಿ ಚನ್ನಾಗಿ ತೊಳೆಯವೆ ನಿನ್ನಡಿಗಳ 3 ಗಂಧವ ಹಚ್ಚಿ ಸುಗಂಧ ತುಳಸೀದಳ ದಿಂದಾಲಂಕರಿಸುವೆ ಸುಂದರಾಂಗನೆ 4 ಜಾಜಿಯು ಮೊದಲಾದ ಹೂಜಾತಿಗಳ ತಂದು ಮೂಜಗದೊಡೆಯನನು ಪೂಜಿಸುವೆನೊ5 ಲೋಪವಿಲ್ಲದೆ ದಿವ್ಯ ಧೂಪವನರ್ಪಿಸಿ ದೀಪಂಗಳನು ಬಹು ದೀಪಿಸುವೆನು 6 ಘೃತ ಮೇಲಾದ ಭೋಜ್ಯವ ಮೇಳೈಸುವೆನು ಶ್ರೀಲೋಲನಿಗೆ 7 ಕರ್ಪೂರವೀಳ್ಯವನರ್ಪಿಸಿ ಮೋದದಿ ಕರ್ಪೂರದಾರತಿಗಳರ್ಪಿಸುವೆನು 8 ಮಣಿದು ನಿನ್ನಂಘ್ರಿಗೆ ಹಣೆಯ ಚಾಚುತ ಮನ ದಣಿಯುವಂದದಿ ನಾ ಕುಣಿದಾಡುವೆ 9 ಸದಯ ನಿನ್ನಂಘ್ರಿಯ ಹೃದಯಾರವಿಂದದ ಸದನದೊಳಿಂಬಿಟ್ಟು ಮುದಮೊಂದುವೆ 10 ಶರಣಾಗತರನೆಲ್ಲ ಕರುಣದಿ ಸಲಹುವ ವರದವಿಠಲ ಪುಲಿಗಿರಿಧಾಮನೆ 11
--------------
ವೆಂಕಟವರದಾರ್ಯರು