ಒಟ್ಟು 6 ಕಡೆಗಳಲ್ಲಿ , 4 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಚ್ಯುತ ಅನಂತ ಗೋವಿಂದಾಯ ಕಾಯ ಪೂಜಾ ಪ ದ್ವಾದಶನಾಮದ ನಾರಾಯಣಾರ್ಚನೆ ದ್ವಾದಶಬಾಧೆಯ ಕಳೆಯುವ ಕೀರ್ತನೆ ಅ.ಪ ಕೇಶವಾಯ ನಮಃ ಓಂ ಕೇಶವಾಯ ನಮಃ ಕ್ಲೇಶವು ಕರಗಿ ಈಶನು ಮನದಲಿ ನಿಲ್ಲುವನು 1 ಮಾಧವಾಯನಮಃ ಓಂ ಮಾಧವನೆನೆ ಕ್ರೋಧವು ಅಳಿದು ಮೋದದಿ ಮನ ಮಿಡಿಯುವುದು 2 ವಿಷ್ಣುವೇನ್ನಮಃ ಓಂ ವಿಷ್ಣುವೆನ್ನಿರಿ ಸ- ಕಾಯ ಕರ್ಮನಿಷ್ಠೆಯಲಿ 3 ಮಧುಸೂದನಾಯನಮಃ ಓಂ ಮಧುಸೂಧನಾಯ ಮದಗಳೆಂದೂ ಮಥಿಸೋಡುವವು ತಿಳಿಯ 4 ತ್ರಿವಿಕ್ರಮಾಯನಮಃ ಓಂ ತ್ರಿವಿಕ್ರಮನೆನಲು ಭವಿಯುಕಾಮಮೋಹತೊಲಗಿ ಕೋಮಲನಾಗುವನು 5 ಶ್ರೀಧರಾಯನಮಃ ಓಂ ಶ್ರೀಧರಾಯವೆನ್ನಿ ಸೋದರತ್ವಮೂಡಿ ಮತ್ಸರ ಮರೆಯುವುದು 6 ಹೃಷಿಕೇಶಾಯನಮಃ ಓಂ ಹೃಷಿಕೇಶನೆನು ಹುಸಿಯನಾಡದ ಲೋಭರಹಿತ ತನುವೀಯುವನು 7 ಪದ್ಮನಾಭಾಯನಮಃ ಓಂ ಪದ್ಮನಾಭನೆನಲು ಛದ್ಮವೇಶನ ದ್ವಾದಶಾಪೇಕ್ಷೆಗಳೀಡಾಡುವವು 8 ದಾಮೋದರಾಯ ನಮ:ಓಂ ದಾಮೋದರೆಂದರೆ ಆಮೋದದಿ ಮನ ಶ್ರೀಹರಿಪದಕೆರಗುವುದು9 ವಾಮನಾಯನಮ:ಓಂ ವಾಮನನೆಂದರೆ ಅಮಮ! ನಿಲ್ಲುವ ಕಣ್ಮುಂದೆ ನೆಲಮುಗಿಲೊಂದಾಗಿ 10 ಆಳ್ವಾರಾಚಾರ್ಯರಾದಿ ಗುರುಗಳು ಪೇಳಿದ ಈ ಮಂತ್ರ ಸೂತ್ರ 11 ಅನುದಿನ ಬಿಡದೆ ಮನದಲಂದರು ಸಾಕು ಸನುಮತದಲಿ ಕಾಯ್ವ ನಮ್ಮ ಜಾಜಿಕೇಶವ 12
--------------
ನಾರಾಯಣಶರ್ಮರು
ಈಶ ನಿನ್ನ ಚರಣ ಭಜನೆ ಆಶೆಯಿಂದ ಮಾಡುವೆನುದೋಷ ರಾಶಿ ನಾಶ ಮಾಡು ಶ್ರೀಶ ಕೇಶವ ಪ ಶರಣು ಹೊಕ್ಕೆನಯ್ಯ ಎನ್ನ ಮರಣ ಸಮಯದಲ್ಲಿ ನಿನ್ನಚರಣ ಸ್ಮರಣೆ ಕರುಣಿಸಯ್ಯ ನಾರಾಯಣ1 ಕಲುಷ ಮಾಧವ 2 ಹಿಂದನೇಕ ಯೋನಿಗಳಲಿ ಬಂದು ಬಂದು ನೊಂದೆ ನಾನುಇಂದು ಭವದ ಬಂಧ ಬಿಡಿಸು ತಂದೆ ಗೋವಿಂದನೆ 3 ಭ್ರಷ್ಟನೆನಿಸ ಬೇಡ ಕೃಷ್ಣ ಇಷ್ಟು ಮಾತ್ರ ಬೇಡಿಕೊಂಬೆಶಿಷ್ಟರೊಳಗೆ ಇಟ್ಟು ಕಷ್ಟ ಬಿಡಿಸು ವಿಷ್ಣುವೆ 4 ಪಾದ ಪೂಜೆ ಮುದದಿ ಗೈವೆನಯ್ಯ ನಾನುಹೃದಯದೊಳಗೆ ಒದಗಿಸಯ್ಯ ಮಧುಸೂದನ 5 ಕವಿದುಕೊಂಡು ಇರುವ ಪಾಪ ಸವೆದು ಹೋಗುವಂತೆ ಮಾಡಿಜವನ ಬಾಧೆಯನ್ನು ಬಿಡಿಸೊ ಘನ ತ್ರಿವಿಕ್ರಮ 6 ಕಾಮಜನಕ ನಿನ್ನ ನಾಮ ಪ್ರೇಮದಿಂದ ಪಾಡುವಂಥನೇಮವೆನಗೆ ಪಾಲಿಸಯ್ಯ ಸ್ವಾಮಿ ವಾಮನ 7 ಸದನ ಮಾಡು ಮುದದಿ ಶ್ರೀಧರ 8 ಹುಸಿಯನಾಡಿ ಹೊಟ್ಟೆ ಹೊರೆವ ವಿಷಯದಲ್ಲಿ ರಸಿಕನೆಂದುಹುಸಿಗೆ ನನ್ನ ಹಾಕದಿರೋ ಹೃಷಿಕೇಶನೆ 9 ಅಬ್ಧಿಯೊಳಗೆ ಬಿದ್ದು ನಾನು ಒದ್ದುಕೊಂಬೆನಯ್ಯ ಭವದಿಗೆದ್ದು ಪೋಪ ಬುದ್ಧಿ ತೋರೊ ಪದ್ಮನಾಭನೆ10 ಕಾಮಕ್ರೋಧ ಬಿಡಿಸಿ ನಿನ್ನ ನಾಮ ಜಿಹ್ವೆಯೊಳಗೆ ನುಡಿಸುಶ್ರೀಮಹಾನುಭಾವನಾದ ದಾಮೋದರ 11 ಪಂಕಜಾಕ್ಷ ನೀನು ಎನ್ನ ಮಂಕುಬುದ್ಧಿ ಬಿಡಿಸಿ ನಿನ್ನಕಿಂಕರನ್ನ ಮಾಡಿಕೊಳ್ಳೊ ಸಂಕರುಷಣ12 ಏಸು ಜನ್ಮ ಬಂದರೇನು ದಾಸನಲ್ಲವೇನೊ ನಿನ್ನಘಾಸಿ ಮಾಡದಿರೋ ಎನ್ನ ವಾಸುದೇವನೆ 13 ಬುದ್ಧಿ ಶೂನ್ಯನಾಗಿ ನಾನು ಕದ್ದ ಕಳ್ಳನಾದೆನಯ್ಯತಿದ್ದಿ ಹೃದಯ ಶುದ್ಧಿ ಮಾಡೊ ಪ್ರದ್ಯುಮ್ನನೆ 14 ಜನನಿ ಜನಕ ನೀನೆ ಎಂದು ಎನುವೆನಯ್ಯ ದೀನಬಂಧುಎನಗೆ ಮುಕ್ತಿ ಪಾಲಿಸಿಂದು ಅನಿರುದ್ಧನೆ 15 ಹರುಷದಿಂದ ನಿನ್ನ ನಾಮ ಸ್ಮರಿಸುವಂತೆ ಮಾಡು ನೇಮಇರಿಸು ಚರಣದಲ್ಲಿ ಕ್ಷೇಮ ಪುರುಷೋತ್ತಮ 16 ಅಧೋಕ್ಷಜ 17 ಚಾರುಚರಣ ತೋರಿ ಎನಗೆ ಪಾರುಗಾಣಿಸಯ್ಯ ಕೊನೆಗೆಭಾರ ಹಾಕಿ ಇರುವೆ ನಿನಗೆ ನಾರಸಿಂಹನೆ 18 ಸಂಚಿತಾರ್ಥ ಪಾಪಗಳನು ಕಿಂಚಿತಾದರುಳಿಯದಂತೆಮುಂಚಿತಾಗಿ ಕಳೆದು ಪೊರೆಯೊ ಸ್ವಾಮಿ ಅಚ್ಯುತ19 ಜ್ಞಾನ ಭಕ್ತಿ ಕೊಟ್ಟು ನಿನ್ನ ಧ್ಯಾನದಲ್ಲಿ ಇಟ್ಟು ಎನ್ನಹೀನ ಬುದ್ಧಿ ಬಿಡಿಸೊ ಮುನ್ನ ಜನಾರ್ದನ 20 ಜಪತಪಾನುಷ್ಠಾನ ನೀನು ಒಪ್ಪುವಂತೆ ಮಾಡಲಿಲ್ಲತಪ್ಪ ಕೋಟಿ ಕ್ಷಮಿಸಬೇಕು ಉಪೇಂದ್ರನೆ 21 ಮೊರೆಯನಿಡುವೆನಯ್ಯ ನಿನಗೆ ಸೆರೆಯ ಬಿಡಿಸು ಭವದ ಎನಗೆಇರಿಸು ಭಕ್ತರೊಳಗೆ ಪರಮಪುರುಷ ಶ್ರೀಹರೇ22 ಪುಟ್ಟಿಸಲೇ ಬೇಡವಿನ್ನು ಪುಟ್ಟಿಸಿದಕೆ ಪಾಲಿಸಿನ್ನುಇಷ್ಟು ಬೇಡಿಕೊಂಬೆ ನಾನು ಶ್ರೀಕೃಷ್ಣನೆ23 ಸತ್ಯವಾದ ನಾಮಗಳನು ನಿತ್ಯದಲ್ಲಿ ಪಠಿಸುವವರಅರ್ತಿಯಿಂದ ಕಾಯದಿರನು ಕರ್ತೃ ಕೇಶವ 24 ಮರೆತು ಬಿಡದೆ ಹರಿಯ ನಾಮ ಬರೆದು ಓದಿ ಕೇಳುವರಿಗೆಕರೆದು ಮುಕ್ತಿ ಕೊಡುವ ಬಾಡದಾದಿಕೇಶವ 25
--------------
ಕನಕದಾಸ
ಶ್ರೀಕೃಷ್ಣಸಂಕೀರ್ತನೆ ಅಕ್ಕ ನಂದಗೋಪನ ಅರಮನೆಯೊಳಗೊಬ್ಬಅಕ್ರೂರ ಬಂದನಂತೆಹೊಕ್ಕು ಬಳಸಲಿಲ್ಲ ಹುಸಿಯನಾಡುವಳಲ್ಲಇಕ್ಕೋ ಬಾಗಿಲಮುಂದೆ ಈಗ ರಥವ ಕಂಡೆಪ. ಮಧುರಾಪಟ್ಟಣವಂತೆ ಮಾವನ ಮನೆಯಂತೆನದಿಯ ದಾಟಲಿಬೇಕಂತೆಎದುರು ದಾರಿಲ್ಲವಂತೆ ಏನೆಂಬೆ ಏಣಾಕ್ಷಿಉದಯದಲ್ಲಿ ಪಯಣವಂತೆ ಒಳ್ಳೆಯ ವೇಳೆಯಂತೆ1 ಮಲ್ಲರ ಕೂಟವಂತೆ ಮತ್ತೆ ಕಾಳಗವಂತೆಬಲ್ಲಿದ ಗಜಗಳಂತೆಬಿಲ್ಲಹಬ್ಬವಂತೆ ಬೀದಿ ಶೃಂಗಾರವಂತೆಅಲ್ಲಿ ತಾಯಿ[ತಂದೆಯರ]ಕಾಲಿಗೆ ನಿಗಡವಂತೆ 2 ಅಲ್ಲಿ ಹುಟ್ಟಿದನಂತೆ ಅರಸಿನ ಮಗನಂತೆಇಲ್ಲಿಗೆ ಬಂದನಂತೆಎಲ್ಲ ಕಪಟವಂತೆ ಎಂದೂ ಹೀಗಿಲ್ಲವಂತೆನಿಲ್ಲದೆ ಯಶೋದೆಯ ಕಣ್ಣಲುದಕವಂತೆ3 ಮತ್ತೆ ಪಾಂಡವರಂತೆ ಮೋಹದ ಸೋದರರಂತೆಅತ್ತೆಯ ಮಕ್ಕಳಂತೆಸುತ್ತ ಶತ್ರುಗಳಂತೆ ಸಕಲ ಕಾರ್ಯಗಳಂತೆಚಿತ್ತಜನಯ್ಯನ ಚಿತ್ತವೆರಡಾದುವಂತೆ4 ತಾಳಲಾರೆವು ನಾವು ತಾಟಂಕ ಹಯವದನಬಾಲಕನಗಲಿದನೆನೀಲವೇಣಿಯರೆಲ್ಲ ನಾಳೆ ಉದಯದಲ್ಲಿಆಲೋಚನೆ ಮಾಡದೆ ಆಣೆಯಿಕ್ಕಿ ತಡೆವ 5 * ಈ ಕೀರ್ತನೆ ಪುರಂದರದಾಸರ ಅಂಕಿತದಲ್ಲೂ ಇದೆ.
--------------
ವಾದಿರಾಜ
ಗಾಳಿ ಬಂದ ಕೈಯಲಿ ತೂರಿಕೊಳ್ಳಿರೊ |ನಾಲಗೆಯಿದ್ದ ಕೈಯಲಿ ನಾರಾಯಣನೆನ್ನಿರೊ ಪ.ಕದ್ದು ಹುಸಿಯನಾಡಿಅಪಾರ |ಬುದ್ದಿಯಿಂದ ಕೆಡಲು ಬೇಡಿ ||ಬುದ್ದಿವಂತರಾಗಿ - ಅನಿ |ರುದ್ಧನ ನೆನಯಿರೊ 1ನಿತ್ಯವಿಲ್ಲ ನೇಮವಿಲ್ಲ |ಮತ್ತೆ ಧಾನಧರ್ಮವಿಲ್ಲ ||ವ್ಯರ್ಥವಾಗಿ ಕೆಡದೆ - ಪುರು |ಷೋತ್ತಮನೆನ್ನಿರೊ 2ಭಕ್ತಿಕೊಡುವ ಮುಕ್ತಿಕೊಡುವ |ಮತ್ತೆ ದಾಯುಜ್ಯ ಕೊಡುವ ||ಕರ್ತೃ ಪುರಂದರವಿಠಲನ |ನಿತ್ಯನೆನೆಯಿರೊ3
--------------
ಪುರಂದರದಾಸರು
ಪೇಳಲಳವೆ ನಿನ್ನ ಮಹಿಮೆಯ-ಶ್ರೀರಂಗಧಾಮ|ಪೇಳಲಳವೆ ನಿನ್ನ ಮಹಿಮೆಯ ಪನೀಲಮೇಘಶ್ಯಾಮ ನಿನ್ನ |ಬಾಲಲೀಲೆಯಾಟವ ಅ.ಪವಿಷದ ಮೊಲೆಯ ಪೂತನಿಯ |ಅಸುವ ಹೀರಿದ ಶೂರನಾದೆ |||ಉಸಿರಲಳವೆ ನಿನ್ನ ಮಹಿಮೆ |ಅಮ್ಮಮ್ಮಮ್ಮಮ್ಮಮ್ಮ ||ಕೆಸರ ತಿನಬೇಡೆನುತ ತಾಯಿ |ಶಿಶುವಿನ ವದನವ ನೋಡಿದಳಾಗ |ದಶಚತುರ್ಭುವನವ ತೋರಿದ ಬಾಯೊಳ |ಗಲ್ಲಲ್ಲಲಲ್ಲಲ್ಲಲ್ಲೇ 1ಬಾಲಲೀಲೆಯ ಬಂಡಿ |ಕಾಲಿಲೊದ್ದು ಶಕಟಾಸುರನ ||ಮೂಲನಾಶ ಮಾಡಿದೆ ನೀ |ನಬ್ಬಬ್ಬಬ್ಬಬ್ಬಬ್ಬಬ್ಬ ||ತಾಳಮರದ ನಡುವೆಒರಳ|ಕಾಲಿಗೆ ಕಟ್ಟೆಳೆಯುತಿರಲು |ಬಾಲ ಸತ್ತನೆಂದುಗೋಪಿಅತ್ತ-|ಳಯ್ಯಯ್ಯಯ್ಯಯ್ಯಯ್ಯಯ್ಯೊ 2ಸಣ್ಣವನಿವನಲ್ಲ ನಮ್ಮ |ಬೆಣ್ಣೆ ಕದ್ದು ಗೊಲ್ಲರ ಮನೆಯ |ಹೆಣ್ಣು ಮಕ್ಕಳನು ಹಿಡಿದ ಕಳ್ಳ |ಎಲ್ಲೆಲ್ಲೆಲ್ಲೆಲ್ಲೆಲ್ಲೆಲ್ಲೆ ||ನಿನ್ನಾಣೆಯಿಲ್ಲೆಂಬ ರಂಗನ |ಬಿನ್ನಾಣಕೆ ನಕ್ಕವರನು ಬಯ್ಯುತ |ಎನ್ನ ಕಂದ ಹುಸಿಯನಾಡ |ನೆಂದೆಂದೆಂದೆಂದೆಂದು 3ನಾರಿಯರೆಲ್ಲ ಬತ್ತಲೆಯಾಗಿ |ನೀರಾಟವನಾಡುತಿರಲು |ಸೀರೆಗಳೊಯ್ದು ಮರವನೇರಿದ |ನತ್ತತ್ತತ್ತತ್ತತ್ತತ್ತ ||ವಾರಿಜಮುಖಿಯರು ಲಜ್ಜೆಯ ದೊರೆದು |ಸೀರೆಗಳನು ಬೇಡಲವರಮೋರೆ ನೋಡಿ ರಂಗ ನಕ್ಕ |ಅಬ್ಬಬ್ಬಬ್ಬಬ್ಬಬ್ಬಬ್ಬ 4ಕಾಡು ಕಿಚ್ಚು ಮುಸುಕಿ ಗೋವ-|ವಾಡಿಯು ಬೆಂದದ್ದು ನೋಡಿ |ಈಡಿಲ್ಲದ ಉರಿಯ ತೀಡಿದ |ಅತ್ತತ್ತತ್ತತ್ತತ್ತತ್ತ ||ಬೇಡಿದ ವರಗಳನೀವ |ಪುರಂದರವಿಠಲನ ಲೀಲೆಯ |ರೂಢಿಯೊಳೀಡನ ಸಮರು ಯಾರುಇಲ್ಲಿಲ್ಲಿಲ್ಲಿಲ್ಲಿಲ್ಲಿಲ್ಲ 5
--------------
ಪುರಂದರದಾಸರು
ಭಾಷೆ ಹೀನರ ಆಸೆ ಪ್ರಾಣಗಾಸಿ |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಬೇಸತ್ತು ಬೇಲಿ ಮೇಲೊರಗಿದಂತೆ ಪ.ಚಳಿಗೆ ನಡುಗುತ ಹೋಗಿ ಜಲದೊಳಗೆ ಪೊಕ್ಕಂತೆ |ಮಳೆಯ ರಭಸಕೆ ಮರವನೇರಿ ಕುಳಿತಂತೆ |ಹುಳುವನಟ್ಟುಳಿಗಂಜಿ ಹುತ್ತಿನೊಳು ಹೊಕ್ಕಂತೆ |ಎಳೆನರಿಯು ಒಂಟೆಯಾ ತುಟಿಗೆ ಜೋತಂತೆ 1ಹಸಿವೆಗಾರದೆ ಬೆಕ್ಕು ಹತ್ತಿಯನು ತಿಂದಂತೆ |ತೃಷೆಗಾರದವ ತೆವರ ತೋಡಿದಂತೆ ||ಬಿಸಿಲಿಗಾರದೆ ಕೋತಿ ಬಂಡೆ ಮೇಲ್ಕುಳಿತಂತೆ |ಕುಸುಬಿಯ ಹೊಲದೊಳಗೆ ಕಳ್ಳ ಪೊಕ್ಕಂತೆ 2ಹುಸಿಯನಾಡುವರಾಸೆ ಪುರುಷ ನಾರಿಯ ವೇಷಬಿಸಿಲುಗುದಿರೆಯಭಾವ ಒಂದೆ ಕಾಣೊ ||ಬಿಸಜಾಕ್ಷ ವರದ ಶ್ರೀ ಪುರಂದರವಿಠಲನ |ಎಸೆವ ಪಾದದ ಸೇವೆ ಪರಮಸುಖ ಮನುಜಾ 3
--------------
ಪುರಂದರದಾಸರು