ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಿಡೋ ಇನ್ನು ಬಿಡೋ ಇನ್ನು ಪ ಕಡೆಗಾದರೂ ನಿನ್ನ ಹುಡುಗು ಬುದ್ಧಿಯನು ಅ.ಪ. ಜೀರ್ಣವಾಯಿತು ದೇಹವು ನಿನಗೆ ಜೀರ್ಣವಾಗಲಿಲ್ಲ ನೇಹವು ಕೊನೆಗೆ 1 ವಾಹನ ಮೃಷ್ಟಾನ್ನಗ ಳಾ ಮಹನೀಯನೊಲಿಸವೊ ಮೂಢ 2 ಸ್ನಾನ ದಾನ ಅಧ್ಯಯನಾದಿಗಳಿಗೆ ಶ್ರೀನಿವಾಸ ತಾನೊಲಿಯನೊ ಬರಿದೆ 3 ತಾಳ ಮೇಳ ಸಂಗೀತಾದಿಗಳನು ಕೇಳನು ಪ್ರೇಮದ ಭಾವವಿಲ್ಲದೊಡೆ 4 ಚಿತ್ತ ಮಲಿನವಿದ್ದು ಸತ್ಕಾರವಗೈಯ್ಯೆ ಆಪ್ತ ಕಾಮ ತಾ ತೃಪ್ತಿಯ ಪೊಂದನು 5 ಶ್ರೀಧರ ತಾ ದಯದಿಂದೊಲಿದಲ್ಲದೆ ಸಾಧನ ಮಾತ್ರಕ್ಕೆ ಒಲಿಯಲು ಸಾಧ್ಯವೆ 6 ನಳಿನನಯನನಾಜ್ಞೆಯ ನೀ ಪಾಲಿಸೆ ಒಲಿವನು ನಿಜವಿದು ನಲಿಯುತ ನಿನಗೆ 7 ಮೃಡವಂದಿತ ಶ್ರೀ ಕರಿಗಿರೀಶನೊಳ್ ದೃಢ ಭಕ್ತಿಯನಿಡು ಬಿಡದೆ ಪೊರೆವನೊ 8
--------------
ವರಾವಾಣಿರಾಮರಾಯದಾಸರು
ಭೋಗ ಬೇರಿಹುದಣ್ಣ ಭವ ಭೋಗಗಳೆಲ್ಲವು ರೋಗಗಳಣ್ಣ ಭೋಗವ ಪೊಂದುವ ಯೋಗವ ಮರೆಸುವ ರೋಗಗಳಿಗೆ ಗುರಿಯಾಗದಿರಣ್ಣ 1 ಬಗೆ ಬಗೆ ಭಕ್ಷಗಳ ಭೋಗವು ಸೊಗಸೆಂದರಿಯದಿರು ಹಗರಣದಲಿ ತನು ದುಗುಡಕೆ ಸಿಲುಕಲು ಸೊಗಸುಗಳೆಲ್ಲವು ಹಗೆಯಾಗುವುವು 2 ಅಂಗನೆಯರ ಸರಸ ಎಳೆಯ ಭು ಜಂಗನ ಸಹವಾಸ ಅಂಗಗಳಲಿ ಬಲ ಸಡಲಲು ನಿನ್ನಯ ಹಂಗಿಲ್ಲದೆ ಮಾನಭಂಗ ಮಾಡುವರು 3 ಉಡಿಗೆ ತೊಡುಗೆ ಯೋಗ ಜಗದಲಿ ಹುಡುಗುತನದ ಭೋಗ ಗಿಡಗ ಗಿಳಿಮರಿಯನೊಯ್ಯುವ ತೆರದಲಿ ಪಿಡಿಯಲು ದೂತರು ತಡೆ ಮಾಡುವರೇ 4 ಪ್ರಕೃತಿಯೊಳ್ ಸಿಲುಕಿರಲು ಭೋಗಕೆ ಶಕುತಿ ಸಾಲದಣ್ಣ ಭಕುತ ಪ್ರಸನ್ನನು ಭಕುತಿಯೆಂಬೊ ನಿನ್ನ ಯುಕುತಿಗೆ ನೀಡುವ ಮುಕುತಿಯೆಂಬ ದಿವ್ಯ 5
--------------
ವಿದ್ಯಾಪ್ರಸನ್ನತೀರ್ಥರು