ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂಥ ಸೂಕ್ಷ್ಮವ ನೋಡಿರಿವನ ನಮ್ಮ ಕಾಂತೆ ದ್ರೌಪತಿದೇವಿಗೆ ವರಹೀನ ಪ. ಸಣ್ಣ ಕೂಸಿದ್ದಾಗ ಇವನು ಸೂರ್ಯಗೆ ಹಣ್ಣೆಂದುಹಾರಿದ ಗಗನಕ್ಕೆ ತಾನು ಉಡ್ಡೀನ ಗೈದುನೀರಧಿಯ ದಾಟಿದನುಇವನ ಅಂಗದ ಕೋಮಲ ಬಣ್ಣ ವರ್ಣಿಸಲೇನು 1 ಗಂಧಮಾದನ ಗಿರಿ ತಂದು ನೋಡಿ ಗಿರಿ ನಿಂದಲ್ಲೆ ಹಿಂದಕ್ಕೆ ಒಗೆದ ಈಡ್ಯಾಡಿಒಂದೊಂದು ಬೆಡಗವ ನೋಡಿನಮ್ಮ ಇಂದಿರೇಶನು ನಕ್ಕ ಕೌತುಕ ಮಾಡಿ 2 ಹುಟ್ಟಿದಾಗ ಭೀಮ ಒಂದಿಷ್ಟು ಎತ್ತಿಪಟ್ಟನೆ ಬಿದ್ದು ಕೌತುಕ ಮಾಡಿದನೆಷ್ಟುಬೆಟ್ಟಗಳ ಒಡೆದು ಹಿಟ್ಟೆಟ್ಟುಇವನ ಅಂಗದ ಕೋಮಲ ವರ್ಣಿಸಲೆಷ್ಟು3 ಭಿಕ್ಷೆ ಬೇಡಿದನಂತೆ ಕಂಡು ತಾನರಿಯಳು ಕಾಂತೆ ಇಂಥ ದಿಂಡ ಪುರುಷನ ಬೆರೆದಳು ಕಾಂತೆ4 ಘನ್ನಗರಳ ಕುಡಿದನಂತೆ ಅದು ತನ್ನ ದೇಹವ ತಪಿಸುತಲಿದ್ದವರಂತೆಸನ್ಯಾಸ ಇವಗ್ಯಾಕೆ ಕಾಂತೆನಮ್ಮ ಚೆನ್ನ ರಾಮೇಶ ನೋಡಿನಕ್ಕನಂತೆ 5
--------------
ಗಲಗಲಿಅವ್ವನವರು
ಏಕೆ ಚಿಂತಿಸುತಿರುವೆ ಕೋತಿಮನವೆ |ಶ್ರೀ ಕೃಷ್ಣರಾಯನನು ಸ್ತುತಿಸಲೊಲ್ಲದಲೆ ಪ.ಹುಟ್ಟಿದಾಗುತ್ಪತ್ತಿಗಾರು ಚಿಂತಿಸಿದವರು |ಕಟ್ಟಕಡೆಯಲಿ ಲಯಕೆ ಏನು ಚಿಂತೆ ? ||ನಟ್ಟನಡುವಿನ ಬದುಕಿಗೇಕೆ ಚಿಂತಿಸುತಿರುವೆ ? |ಕಟ್ಟಕಡೆಯಲಿ ಮೂರುಬಟ್ಟೆತಾನಲ್ಲವೆ ?1ನವಿಲಿಂಗೆ ಚಿತ್ರಪತ್ರವನಾರು ಬರೆದವರು ? |ಪವಳಜಾತಿಗೆ ಕೆಂಪನಾರಿತ್ತರು ? ||ಸವಿಮಾತಿನರಗಿಳಿಗೆ ಹಸಿರಾರು ಬರೆದವರು ? |ಇವ ಮಾಡಿದವ ಕೃಷ್ಣ ನಮ್ಮ ಮರೆದಿಹನೆ ? 2ಬಸಿರೊಳಗೆ ಇದ್ದಾಗ ಶಿಶುವ ಹೊರೆದವರಾರು |ವಸುಧೆಯನು ಬಸಿರೊಳಗೆ ಹೆತ್ತರಾರು ?ವಸುದೇವಸುತ ನಮ್ಮ ಪುರಂದರವಿಠಲನ |ಪೆಸರ ಬಸಿರೊಳಗಿಟ್ಟು ಸ್ತುತಿಸುತಿರು ಮನವೆ 3
--------------
ಪುರಂದರದಾಸರು