ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆವುದೊಳ್ಳೆಯದೊ ನಿನ್ನಂಗ - ಚೆಲುವದೇವ ಬಂಕಾಪುರದ ಲಕುಮಿ ನರಸಿಂಗ ಪ ಜಗದೊಳಗೆ ತಾನು ತಂದೆಯ ಮಾತು ಕೇಳದಾಮಗನು ಇಹ ಪರಕೆ ಸಲುವ ಪ್ರಾಜ್ಞನೆ ?ಬಗೆಗೊಳಿಸಿ ಪ್ರಹ್ಲಾದ ಪಿತನೊಡಲ ನಿನ್ನ ಕೂ-ರುಗುರಿನಿಂ ಬಗೆಸಿದಾತಂಗೆ ಮುಕುತಿಯನೀವೆ 1 ಪೊಡವಿಯೊಳು ಅಣ್ಣನಾಜ್ಞೆಯ ಮೀರಿ ನಡೆಯುತಿಹಒಡಹುಟ್ಟಿದವಗೆ ಕೈವಲ್ಯವುಂಟೆ ?ದೃಢದಲಿ ವಿಭೀಷಣಾಗ್ರಜನನ್ನು ಬಾಣದಲಿಕೆಡಹಿಸಿದ ಬಳಿಕವಗೆ ಸ್ಥಿರಪಟ್ಟ ಕಟ್ಟಿದೆ2 ರೂಢಿಯಲಿ ಗುರುದ್ರೋಹವನು ಮಾಡಿದವನ ಮೊಗನೋಡಿದಾಗಲೆ ಪ್ರಾಯಶ್ಚಿತ್ತವುಂಟುನೋಡಿದಾಗಲೆ ಬೃಹಸ್ಪತಿಸತಿಗೆ ಅಳುಪಿದನಸೂಡಿದಾತನ ಸ್ನೇಹವನು ಮಾಡಿಕೊಂಡಿರ್ಪೆ 3 ದೇಶದೊಳು ವಂಶಕಂಟಕರೆನಿಸಿದವರೊಳಗೆಭಾಷಣವ ಮಾಡಬಪ್ಪುದೆ ಪ್ರಾಜ್ಞರು ?ಬೇಸರಿಸದೆ ಕೌರವರ ಕೊಂದ ಪಾಂಡವರ ಸಂ-ತೋಷದಲಿ ಪಕ್ಷಿಕರ ಮಾಡಿಕೊಂಡಿರ್ಪೆ 4 ಪೊಡವಿಪತಿ ಕೇಳು ಶ್ರೀ ಆದಿಕೇಶವನೆ ಹಿಂ-ಗಡೆಯಲ್ಲಿ ಮನೆಯ ಕಟ್ಟಿಸಬಾರದೆ ?ಬಿಡೆಯವಿಲ್ಲದೆ ಸಭಾಮಧ್ಯದಲಿ ಹೆಂಡತಿಯತೊಡೆಯ ಮೇಲ್ಕುಳ್ಳಿರಿಸಿಕೊಂಡಿರ್ಪ ಹಿರಿಯತನ 5
--------------
ಕನಕದಾಸ
ದಾಸನಾದವನಿಗೆ ಭವಭೀತಿಯುಂಟೆ ಆಸೆಬಿಟ್ಟವನಿಗೆ ಘಾಸಿಯಿನ್ನುಂಟೆ ಪ ವನಿತೆಯರಾಸ್ಯಳಿದವಗೆ ಮನಸಿಜನರ ಭೀತಿಯೆ ಮಣ್ಣಿನಾಸೆ ಪೋದವಗೆ ಅವನಿಪರ ಭಯವೆ ಧನದಾಸೆ ಪೋದವಗೆ ಬಿನುಗುಜನರಂಜಿಕೆಯೆ ತನುಮೋಹ ಬಿಟ್ಟವಗೆ ಮರಣದ ಭಯವೆ 1 ನಿಂದೆಯನು ಬಿಟ್ಟವಗೆ ಬಂಧಸೋಂಕುವ ಭಯವೆ ಸಂದೇಹವಳಿದವಗೆ ಕರ್ಮಗಳ ಭಯವೆ ಮಂದಿಗೋಷ್ಠಿಯಿಲ್ಲದವಗೆ ಅಪವಾದ ಭೀತಿಯೆ ಸಿಂಧುಶಯನನರ್ಚಕಗೆ ಕಾಲನ ಭಯವೆ 2 ಪರಮ ಧಾರ್ಮಿಕನಿಗೆ ಬಡತನದ ಭೀತಿಯೆ ಪರವ ಸಾಧಿಪನಿಗೆ ಕಷ್ಟಗಳ ಭಯವೆ ಅರಿವಿಟ್ಟು ನಡೆವವಗೆ ದುರಿತದ ಭಯವಿಹುದೆ ಶರಣರೊಳಾಡುವಗೆ ನರಕಂದಜಿಕೆಯೆ 3 ತತ್ವದರ್ಥಿಕನಿಗೆ ಮಿಥ್ಯಶಾಸ್ತ್ರದ ಭಯವೆ ನಿತ್ಯನಿರ್ಮಲನಿಗೆ ಮಡಿ ಮುಟ್ಟು ಭಯವೆ ಸತ್ಯಸನ್ಮಾರ್ಗಿಕಗೆ ಮತ್ರ್ಯದವರಂಜಿಕೆಯೆ ಸತ್ಯರೊಳಾಡುವಗೆ ಮೃತ್ಯುವಿನ ಭಯವೆ 4 ಕೊಟ್ಟು ಹುಟ್ಟಿದವಗೆ ಹೊಟ್ಟೆ ಬಟ್ಟೆಯ ಭಯವೆ ಇಟ್ಟು ಹಂಗಿಸದವಗೆ ಹೊಟ್ಟೆ ಬೇನೆ ಭಯವೆ ಸೃಷ್ಟಿಯೊಳಗೆ ನಮ್ಮ ದಿಟ್ಟ ಶ್ರೀರಾಮನಡಿ ಮುಟ್ಟಿ ಭಜಿಪಗೆ ಮತ್ತೆ ಹುಟ್ಟುವ ಭಯವೆ 5
--------------
ರಾಮದಾಸರು