ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಾವಲ್ಲಿ ಕೂತಿದ್ದೀಯೊ ರೋಗಿಷ್ಠ ಕಾಯ ಎನ್ನನು ಕಾಯ್ಕೊಂಡು ಪ ಜೀವಕಂಟಕನಾಗಿ ಹೇಯದಿಂದೊಡಗೂಡಿ ಆವಕಾಲದಿ ರೋಗದ್ಹೊರಳುತ ಎಲೆ ಖೋಡಿ ಅ.ಪ ಏನು ಕರ್ಮವ ಮಾಡಿದ್ದೋ ಪಾಪಾತ್ಮ ನೀ ಹೀನಸ್ಥಿತಿಯ ಪೊಂದಿದಿ ನಾನಾವಿಧದಿ ಮಹಬೇನೆಯಿಂ ನರಳುತ ನೀನೆನ್ನ ಜತೆಗೂಡಿ ಬನ್ನಬಡಿಸುವಿ ಪಾಪಿ1 ಹೊಲಸಿನ ದ್ವಾರದಿಂದ ಇಹ್ಯಕೆ ಬಂದಿ ಮಲಮೂತ್ರ ತುಂಬಿಕೊಂಡು ತೊಳೆಯದಿರಲು ನಿಮಿಷ ಹೊಲಸಿಕ್ಕಿನಾರುವಿ ತಿಳಿದುನೋಡಲು ನಿನ್ನ ಸಲಿಗೆಯಿಂ ನಾ ಕೆಡುವೆ 2 ಎನ್ನ ಜೊತೆಯ ಪೊಂದಿರ್ದ ಕಾರಣದಿಂ ನಾ ನಿನ್ನ ಕ್ಷೇಮವ ಬಯಸುವೆ ಎನ್ನಯ್ಯ ಶ್ರೀರಾಮನುನ್ನತಡಿಗಳ ನಂಬಿ ಸನ್ನುತಿಯಿಂ ಕ್ಷಮೆಬೇಡಿ ಧನ್ಯನಾಗೆಲೋದೇಹ್ಯ3
--------------
ರಾಮದಾಸರು
ಭಕ್ತರ ಸುರಧೇನು ಶಕ್ತರ ಬಂಧು ನೀ ಪ ಭಕ್ತರ ಮೊರೆ ಕೇಳೋ ಲಕ್ಷ್ಮೀಪ್ರಿಯ ರಮಣ ಅ.ಪ ಪ್ರಾಚೀನ ಹಿರಿಯರ ಯೋಚಿಸಿ ನೋಡಲು ಕಂಟಕ ವಿಮೋಚಿಸಿ ಕಾಯ್ದಯ್ಯ1 ಕರಿರಾಜ ಧ್ರುವಮುನಿ ವರ ವಿಭೀಷಣರನ್ನು ಪರಮಪದವನಿತ್ತು ಕರುಣದಿ ಪೊರೆದಯ್ಯಾ 2 ದೀನನೋಳ್ದಯವಾಗಿ ಹೀನಸ್ಥಿತಿ ಪರಿಹರಿಸೊ ಧ್ಯಾನಿಸುವರಿಗತಿ ಸುಲಭನೆ ಶ್ರೀರಾಮ 3
--------------
ರಾಮದಾಸರು