ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಲ್ಲೇ ಹರಿ ಇರುವ ಪ ಬಲ್ಲವರದ ನೋಡಲಲ್ಲೇ ತೋರುವ ಅ.ಪ ಗಿಡದ ಬೇರು ಕಾಂಡ ಕೊಂಬೆ ರೆಂಬೆಗಳಲ್ಲಿ ಅಡಗಿ ಎಲೆಯೊಳ್ಹೀಚು ಹೂವ್ಕಾಯ್ಗಳಲ್ಲಿ ಮೃಡ ಸಖನಲ್ಲಲ್ಲೆ ವಿವಿಧ ರೂಪಗಳಿಂದ ಅಡಗಿದ್ದು ಬೆಳೆಸುವ ಕಳೆಗೊಳಿಸುವನು1 ವಸ್ತ್ರದ್ಹಾಸುಹೊಕ್ಕು ದಾರಗಳಂದದಿ ವಿಸ್ತಾರಗೊಂಡ ಈ ಲೋಕದೊಳು ಹಸ್ತಿವರದನಾದಿಮೂಲ ತಾ ನೆಲೆಗೊಂಡು ಸ್ವಸ್ಥದಿ ಪೊರೆವನನಂತ ಪ್ರಾಣಿಗಳ 2 ಅನಿರುದ್ಧ ಪ್ರದ್ಯುಮ್ನ ಸಂಕರ್ಷಣ ರೂಪ ವನು ತಾಳಿ ನಾರಾಯಣ ವಾಸುದೇವನು ಅನಿಮಿತ್ತಬಂಧು ಚರಾಚರ ಪೃಥ್ವಿಯ ನನುದಿನ ಪೊರೆವ ರಘುರಾಮವಿಠಲನು 3
--------------
ರಘುರಾಮವಿಠಲದಾಸರು
ತೋರಿಸೋ ಶ್ರೀಹರಿ ನಿನ್ನ ತೋರಿಸೋ ಪ ತೋರಿಸೋ ಹರಿ ವಿಶ್ವಮಯ ನಿನ್ನರೂಪವ ತಾರಿಸೋ ಭವಸಾಗರದಿಂದಲೆನ್ನನು ಅ.ಪ ಜಲ ಭೂ ಖೇಚರ ಪ್ರಾಣಿವರ್ಗಗಳೊಳು ನೆಲಸಿ ಅವ್ಯಕ್ತನಾಗಿಹ ನಿನ್ನ ರೂಪವ 1 ತೃಣ ಲತೆ ತರು ವನಸ್ಪತಿ ವರ್ಗಗಳೊಳು ಅಣಗಿ ಅವ್ಯಕ್ತನಾಗಿಹ ನಿನ್ನ ಮೂರ್ತಿಯ2 ಪಂಚಭೂತ ತನ್ಮಾತ್ರಂಗಳೊಳಡಗಿ ಪ್ರ ಪಂಚಕವ್ಯಕ್ತನಾಗಿಹ ನಿನ್ನ ಮೂರ್ತಿಯ 3 ಭೂತಜಾಲದ ಹೃತ್ಪೀಠದಿ ಮಂಡಿಸಿ ರಥಿಕನಾಗಿ ದೇಹರಥವ ಚಾಲಿಪ ನಿನ್ನ 4 ತಾರಾಗಣದಿ ಚಂದ್ರ ಸೂರ್ಯಾದಿಗ್ರಹ ಪರಿ ವಾರದೊಳಡಗಿ ಜ್ಯೋತಿರ್ಮಯನಹ ನಿನ್ನ 5 ತಳಿರೆಲೆ ಹೂ ಹೀಚು ಕಾಯಿ ಧಾನ್ಯಂಗಳ ಬೆಳೆಸಿ ಶೋಭಿಪ ದಿವ್ಯ ವಿವಿಧರೂಪಂಗಳ 6 ಅಂಗ ಪ್ರತ್ಯಂಗ ಕರಣಗಳೊಳಡಗಿಹ ಮಂಗಳಮಯ ಚತುರ್ಮೂರ್ತಿಗಳಿರವನು 7 ಅಜಭವ ಸುರಮುಖ್ಯ ದೇವಗಣದೊಳಿಪ್ಪ ಸುಜನರಂತರ್ಯಾಮಿ ಚರಪ್ರತಿಮೆಗಳನ್ನು 8 ಅಂಬುಜಾಂಬಕಿ ಜಗದಂಬೆ ಸಿತಾಪತಿ ಬಿಂಬಮೂರುತಿ ರಘುರಾಮವಿಠಲ ನಿನ್ನ9
--------------
ರಘುರಾಮವಿಠಲದಾಸರು