ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀನೆ ರಕ್ಷಿಸೋ ಎನ್ನನು ಕೃಪೆಮಾಡಿ ಜ್ಞಾನ ಮೂರುತಿ ಗುರುವರನೆ ದಿಗಂಬರ ಪ ಕಾಲ ಹಿಡುದು ಬೇಡಿ ಕೊಂಡುಪದೇಶವ ಕೇಳಿಹೆ ನಾನು ದಿಗಂಬರ ಮೂರ್ತಿಯೆ 1 ವಿಲಾಸದಿ ಜಗವೆ ಚಿದಂಬರನೆಂದು ಮೂರ್ತಿ 2 ಈ ಧರೆಯ ಜನರನು ಪವಿತ್ರಿ ಕರಿಪ ಪುಣ್ಯಪುರುಷರೆಂಬುದನು ಬಲ್ಲವರೆ ಬಲ್ಲರು ಮೂಢ ಮೂರ್ತಿ 3 ಕಣ್ಣಾರೆ ಕಂಡೆ ನಿಂದಿನ ದಿನವೆನ್ನ ಪುಣ್ಯೋದಯದಲಿ ನಿಮ್ಮ ದರುಶನವೆನಗೆ ಸಂಪೂರ್ಣವಾಯಿತು ಕೃತಕೃತ್ಯನಾದೆನು ಮೂರ್ತಿ 4 ನಂಬಿದೆ ನಿಮ್ಮ ಪಾದಾಂಬುಜವನು ಕರುಣಾಂಬುಧಿ ಕಾಯೊ ಕಮಲ ಮಿತ್ರತೇಜ ಸುಖಾಂಬುಧಿ ರೂಪ ನಿರಂಜನಗುರುವೆ ಸೂನು ಮೂರ್ತಿ 5
--------------
ಕವಿ ಪರಮದೇವದಾಸರು
ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ಪ.ವೇದ ಶಾಸ್ತ್ರ ಪಂಚಾಗ ಓದಿಕೊಂಡು ಪರರಿಗೆಬೋಧನೆಯ ಮಾಡವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 1ಚಂಡ ಭಟರಾಗಿ ನಡೆದು ಕತ್ತಿಢಾಲು ಕೈಲಿ ಹಿಡಿದುಖಂಡ ತುಂಡು ಮಾಡುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 2ಅಂಗಡಿಗಳನ್ನೆ ಹೂಡಿ ವ್ಯಂಗ್ಯ ಮಾತುಗಳಾಡಿಭಂಗಬಿದ್ದು ಗಳಿಸುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 3ಕುಂಟಿ ತುದಿಗೆ ಕೊರಡುಹಾಕಿ ಹೆಂಟೆಮಣ್ಣು ಸಮಮಾಡಿರೆಂಟೆ ಹೊಡೆದು ಬೆಳೆಸುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 4ಬೆಲ್ಲದಂತೆ ಮಾತನಾಡಿ ಎಲ್ಲರನ್ನು ಮರುಳು ಮಾಡಿಸುಳ್ಳು ಬೊಗಳಿ ತಿಂಬುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 5ಕೊಟ್ಟಣವ ಕುಟ್ಟಿಕೊಂಡು ಕಟ್ಟಿಗೆಯ ಹೊತ್ತುಕೊಂಡುಕಷ್ಟಮಾಡಿ ತಿಂಬುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 6ತಾಳದಂಡಿಗೆ ಶೃತಿ ಮೇಳ ತಂಬೂರಿ ಹಿಡಿದುಕೊಂಡುಸೂಳೆಯಂತೆ ಕುಣಿಯುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 7ಸನ್ಯಾಸಿ ಜಂಗಮ ಜೋಗಿ ಜಟ್ಟಿ ಮೊಂಡ ಭೈರಾಗಿನಾನಾ ವೇಷ ಹಾಕುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 8ಹಳ್ಳದಲ್ಲಿ ಕುಳಿತು ಕೊಂಡು ಕಲ್ಲು ದೊಣ್ಣೆ ಹಿಡುದುಕೊಂಡುಕಳ್ಳತನವ ಮಾಡುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 9ಅಂದಣ ಪಲ್ಲಕ್ಕಿ ಏರಿ ಮಂದಿ ಮಾರ್ಬಲ ಕೂಡಿಚಂದದಿಂದ ಮೆರೆಯುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 10ಉನ್ನಂತಪುರಂದರ ರಾಯನ ಧ್ಯಾನವನುಮನಮುಟ್ಟಿ ಮಾಡುವುದುಮುಕ್ತಿಗಾಗಿ ಆನಂದಕಾಗಿ* 11
--------------
ಪುರಂದರದಾಸರು