ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆವಭೂತ ಬಡಕೊಂಡಿತೆಲೊ ನಿನಗೆ ದೇವ ಕೇಶವನಂಘ್ರಿಧ್ಯಾಸವೆ ಮರೆದಿ ಪ ಸತಿಸುತರ ಮಮತೆಂಬ ವ್ಯಥೆ ಭೂತ ಬಡಿಯಿತೆ ಅತಿ ವಿಷಯಲಂಪಟದ ದುರ್ಮತಿಭೂತ ಹಿಡಿಯಿತೆ ಅತಿ ಸಿರಿಯಭೂತ ನಿನ್ನ ಮತಿಗೆಡಿಸಿತೇನೆಲೊ ರತಿಪತಿಪಿತನಂಘ್ರಿಸ್ತುತಿಯನೆ ಮರೆತಿ 1 ಸೂಳೆಯರ ಗಾಳ್ಯೆಂಬ ಹಾಳುಬವ್ವ ತಾಕಿತೇ ಕೀಳು ಸಂಸಾರದ ಮಹ ಗೋಳು ಭೂತ್ಹಿಡೀತೇ ಸಾಲಿಗರ ಭಯಭೂತ ನಾಲಿಗೆಯ ಸೆಳೆಯಿತೇ ನೀಲಶಾಮನ ಭಜನಫಲವೆ ಮರೆತೆಲ್ಲೊ 2 ಪೋದವಯ ಪೋಯಿತು ಆದದ್ದಾಗ್ಹೋಯಿತು ಪಾದದಾಸರಕೂಡಿ ಶೋಧಮಾಡಿನ್ನು ಭೂಧವ ಶ್ರೀರಾಮನ ಪಾದವನು ನಂಬಿ ಭವ ಬಾಧೆ ಗೆಲಿದಿನ್ನು ಮುಕ್ತಿ ಹಾದಿಯ ಕಾಣೊ 3
--------------
ರಾಮದಾಸರು
ನಡೆದು ಬಾರಯ್ಯ ಕೃಷ್ಣ ನಡೆದು ಪ ಪಕ್ಷಿವಾಹನ ಪರಪೇಕ್ಷಾರಹಿತ ನಿನ್ನ ಕುಕ್ಷಿಯೊಳಗೆ ಜಗ ರಕ್ಷಿಸುವಾತನೆಂದು ವಕ್ಷಸ್ಥಳದಿ ಶ್ರೀಮಾ- ರೀಕ್ಷಕನುಳುಹಿದಂತಕ್ಷದಿ ನೋಡುತಧೋಕ್ಷಜ ಹರಿಯೆ 1 ಸತ್ಯವಂತನೆ ಕೇಳಸತ್ಯ ಅಜ್ಞಾನ ಭವ- ಕತ್ತಲೊಳಗೆ ಬಹಳ ಶತ್ರು ಸಮೂಹದಲ್ಲಿ ಸುತ್ತಿ ಬಳಲುವೆ ಕೇಳಾಪತ್ತು ಬಾಂಧವ ನಿನ್ನ ಚಿತ್ತಕ್ಕೆ ತಂದು ಸಮಸ್ತ ಸುರೇಶ ನಿನ್ನ ಕರಿ ಸರ್ವೋತ್ತಮ ಹರಿಯೆ 2 ಚಾರ ಮಾಡಿದರು ನಿನ್ನಾರು ತಿಳಿಯಲಿಲ್ಲೊ ಶೂರ ಸುತಗೆ ಸುಕುಮಾರನೆನಿಸಿದಂಥ ಅ- ಸಮೀರಜ ಭವ ಸುರ ನಾರದಪ್ರಿಯನೆ ಉದ್ಧಾರಮಾಡು ಎನ್ನನು 3 ಧ್ವಜ ವಜ್ರಾಂಕುಶ ಪಾದಭಜಕರೆನಿಸುವಂಥ ಸುಜನರ್ವಂದಿತನಾದ ಕುಜನ ಕುಠಾರಿಯೆ ನೀ ಅಜಮಿಳಗೊಲಿದಂಥಜಗಣೇಂದ್ರನ ಪ್ರಿಯ ನಿಜವಾಗಿ ನೋಡೆನ್ನ ರಜತಮ ಕಳೆಯುವ 4 ಕಡಲಶಯನನಾದ ಉಡುರಾಜ್ವದನ ಬಿಟ್ಟು ಭಿಡಿಯ ಭೀಮೇಶ ಕೃಷ್ಣ್ನೆನ್ನೊಡೆಯನೆನುತ ಬಂದ ಬಡವ ಸುದಾಮಗಿಟ್ಟಿ ಹಿಡಿ ಹಿಡೀ ಎಂದು ಭಾಗ್ಯ ತಡೆಯದೆ ನಾ ನಿನ್ನಡಿಗಳಿಗೆರಗುವೆ ಕೊಡು ಕೊಡು ವರಗಳ ಪೊಡವಿ ಪಾಲಿಪನೆ 5
--------------
ಹರಪನಹಳ್ಳಿಭೀಮವ್ವ
ರಘುರಾಮರ ಪಾದವ ಹಿಡೀ ಹಿಡಿ ಪ ಕಾಮ ಕ್ರೋಧ ಮದ ಮತ್ಸರಗಳೆಂಬೋ ದುರಿತವ ಬ್ಯಾಗನೆ ಹೊಡಿ ಹೊಡಿ 1 ಹೆಣ್ಣು ಹೊನ್ನು ಮಣ್ಣು ಮೂರರಾಶೆಯ ಮಾಡಿದೆ ಅದರೊಳಗೇನಿದೆ ಹುಡಿ ಹುಡೀ 2 ಶ್ರೀದವಿಠಲನ ಪಾದಸ್ಮರಣೆಯ ಮರೆಯದೆ ಬೇಗನೆ ನುಡಿ ನುಡೀ3
--------------
ಶ್ರೀದವಿಠಲರು