ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೈಹಿಡಿದೆನ್ನನು ನಡೆಸೋ ರಂಗ ಚೋಹವ ಬಿಡಿಸಿ ನಿನ್ನಡಿಗಳ ಹಿಡಿಸೊ ಪ ಮೋಹ ಮಾತ್ಸರ್ಯದ ದಾಹವ ಬಿಡಿಸೋ ಶ್ರೀಹರಿ ನಿನ್ನ ನಾಮಂಗಳ ನುಡಿಸೋ ಅ.ಪ ಇಂದಿರೆಯರಸ ಮುಕುಂದ ನಿನ್ನ | ಕಂದನ ಮರೆವರೆ ತಂದೆ ಗೋವಿಂದಾ | ಮಂದಮತಿಯು ನಾನೆ ಗೋಪೀ ಕಂದ | ಮಂದರಧರ ಕಾಯೋ ನಿತ್ಯಾನಂದ1 ಮಂಗಳಕರ ಶುಭನಾಮ | ಹಿಂಗದೆ ಭಜಿಪೆನು ಅರಿಕುಲಭೀಮ ಭಂಗಿಸು ದುರಿತವ ಮಾಂಗಿರಿಧಾಮ 2 ದಾಸರದಾಸ ನಾನೆಂಬುದನುಳಿಸೋ ವಾಸುದೇವ ನಿನ್ನ ಬೇಡುವುದೆನಿಸೊ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನೀ ಕರುಣಿಸದಿರೆ ಸಾಕುವರ್ಯಾರು ದಯಾಕರ ಮೂರುತಿ ರಾಘವೇಂದ್ರ ಪ ಪಾರು ಮಾಡೊ ಸಂಸಾರಭವದಿ ಅ- ಪಾರ ಮಹಿಮ ಗುರು ರಾಘವೇಂದ್ರಾ ದೂರ ನೋಡಿದರೆ ಬಿಡಿಸೋ ತವ ಚರ- ಣಾರವಿಂದಕೆ ಕೊರಳನು ಕಟ್ಟಿಸೊ 1 ಒಡವೆ ವಸ್ತುಗಳ ಮಡದಿ ಮಕ್ಕಳ ಕೊಡು ಎನುತಲಿ ಬೇಡುವುದಿಲ್ಲ ಒಡೆÉಯನೆ ನಿನ್ನಯ ಅಡಿಗಳಲಿ ದೃಢ ಭಕುತಿಯ ಕೊಡದಿರೆ ಬಿಟ್ಟವನಲ್ಲ 2 ನರರ ಸೇವೆಯಾ ಬಿಡಿಸೋ ಹರಿವಾಯುಗಳ ಸೇವೆಯಾ ಹಿಡಿಸೊ ವರದ ಹನುಮೇಶವಿಠಲನಾ ಸರ್ವೋತ್ತಮನೆಂದು ಕರೆದವನೆ 3
--------------
ಹನುಮೇಶವಿಠಲ