ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುರಾಯನಂಥ ಕರುಣಾಳು ಕಾಣೆನು ಜಗದೊಳಗೆ ಪ ಏನೆಂದರಿಯದ ಪಾಮರ ನಾನು | ತಾನೊಲಿದೀಗೆನ್ನ ನುದ್ಧರಿಸಿದನು1 ತನ್ನನುಭವ ನಿಜ ಮಾತಿನ ಗುಟ್ಟು | ಎನ್ನೊಳುಸುರಿ ಘನ ತೋರಿಸಿ ಕೊಟ್ಟು | ಧನ್ಯನ ಮಾಡಿದಸೇವೆಯಲಿಟ್ಟು 2 ಮಾಡುವ ಘನ ತುಸು ತಪ್ಪನೆ ಹಿಡಿಯಾ | ಬೇಡಿಸಿಕೊಳ್ಳದೆ ನೀಡುತ ಪಡಿಯಾ | ರೂಢಿಗಾದನು ಇಹಪರದೊಡೆಯಾ3 ತನ್ನವನೆನಿಸಿದ ಮಾತಿಗೆ ಕೂಡಿ | ಮನ್ನಣೆಯಿತ್ತನು ಅಭಯವ ನೀಡಿ | ಇನ್ನೇನ ಹೇಳಲಿ ಸುಖ ನೋಡಿ4 ತಂದೆ ತಾಯಿ ಬಂಧು ಬಳಗೆನಗಾಗಿ | ನಿಂದೆ ಸದ್ಗುರು ಮಹೀಪತಿ ಮಹಾಯೋಗಿ | ಕಂದನ ಸಲಹುವ ಲೇಸಾಗಿ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬೇಡಿಕೊಂಬೆನು ನಿನ್ನ ಮನಬಿಚ್ಚಿ ತೋರಿಸುವೆ ಪ ಪಶುವಾದ ಎನ್ನ ಮನಸು ಪಿಸುಮಾತು ಹೇಳುತಿಹುದು ತುಸುಗುಣವಿಲ್ಲ ನಿನಗಂತೆ ಬಕುತಿಯೇಕಯ್ಯ ನಿನಗೆ ಅ.ಪ ಬದುಕು ತಪ್ಪಿಸಿ ನಿಲ್ಲು ನೀನಾಗಿ ಎನ್ನುತಿದೆ ಕದಿಮೋಸ ಮನವನು ನಂಬಿ ಬಾಳುವೆನೆಂತು ಬುದ್ಧಿ ಕಲಿಸಯ್ಯ ಮನಕೆ ಬೆಳಕು ತೋರಿಸು ನಿನ್ನ ಬದ್ಧಗೆಳೆಯನಾಗಿಸು ಅದನು ಬದುಕಿ ಬಾಳುವೆನಯ್ಯ 1 ಹಿಡಿಯಾಸೆ ಎನಗುಂಟು ಗಂಟುಕಟ್ಟಿ ನಿನ್ನೊಡನೆ ನಡೆವೆ ದಿಟ್ಟತನದಲಿ ಕಮಲಾಕ್ಷ ಲಾಲಿಸಯ್ಯ ಬಿಡಲಾರೆ ನಿನ್ನನೀಗ ಬೆಳಕು ಕಂಡಿತು ಎನಗೆ ಒಡೆಯ ಶೆಲ್ವರಾಯ ನನಸು ಕನಸಾಗಿ ಮಾಡದಿರು 2
--------------
ಸಂಪತ್ತಯ್ಯಂಗಾರ್