ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂದರೇನೋ ಆ ನಾರಿಯರು ನಿನ್ನಂದರೇನೋ ಪ ಕಂದಯ್ಯ ನಿನ್ನಂದಾರೇನೋ ಅ.ಪ ಬಿಸಿಲೊಳು ಮನೆಕಟ್ಟಿ ಬಿಸಿಬಿಸಿಯಾಗಿ ಹಾಲೆರದೂ ಕೊಲ್ಲೀಸುವೆ ನೀನಳದಿರಣ್ಣಾ1 ನಿನ್ನಾಡಿಕೊಂಬೋರಚೆನ್ನಾಗಿ ಹಿಡಿದೆಳತಂದು ಬೆನ್ಹಾ ಹೊಯಿಸುವೆನೀನಳಬೇಡವೋ ಚಿನ್ನಾ 2 ಬಲುಭಂಗಾ ಪೋಗಾಬೇಡಾ 3 ಪಾಲು ಮೊಸರನ್ನವ ಕಲೆಸಿ ನಾ ಉಣಿಸುವೆ ಸದ್ದು ಮಾಡದೆ ಉಂಡು ನಿದ್ರೆ ಮಾಡೆನ್ನ ಕಂದಾ 4 ಮುದ್ದು ಕಂದಯ್ಯ ನೀನು ಮಡುವ ಧುಮಿಕಿದರೆ ಮನದಾ ಸಂತಾಪ ಸೈರಿಸಲಾರೆನೋ 5 ಶೇಷ ಗಿರೀಶನೆ ದಾಸರಧಿನನೇ ಶೇಷ ಶಯನನೇ ವೇಂಕಟ ವಿಠಲನೇ 6
--------------
ರಾಧಾಬಾಯಿ
ಬಾ ಬಾ ಬಾ ಬಾ ಭಕ್ತಾಧಾರ ಬಾ ಬಾರೊ ಶ್ರೀಧರ ಪ ಬಾ ಬಾ ಬಾರೆಂದು ಬೇಡಲು ಪ್ರಹ್ಲಾದ ಕೋರಿದ ಕಂಬದಿ ತೋರಿ ಬಂದೆ ಹರಿ ಅ.ಪ. ಎಲ್ಲಿಹ ನಿನ್ನ ಹರಿಯ ತೋರೊ ಕೊಲ್ಲುವೆನೆನಲಾ ಖುಲ್ಲ ದೈತ್ಯನ ಉದರವ ಸೀಳಿ ಕರುಳನು ಚೆಲ್ಲಿ ಎಲ್ಲೆಲ್ಲಿ ನೋಡಲು ನೀನಿಲ್ಲದಿಲ್ಲವೆಂಬ ಸೊಲ್ಲು ನಿಜಕೆ ತಂದ ಬಲ್ಲಿದ ಹರಿಯೆ 1 ಸರ್ವಾಧಾರನೆ ಸರ್ವೋತ್ತಮನೆ ಸರ್ವಕಾರಣನೆ ಸರ್ವೇಶ ಬಂಧು ನೀ ಸಲಹೆಂದು ಕರಿಮೊರೆಯಿಡಲಂದು ಸರ್ವತ್ರಿದಶರು ಬೆದರುತ ನೋಡಲು ಸರ್ವಮೂಲ ನೀನೊರ್ವನೆ ಬಂದೈ 2 ಪಾಪಿ ದುಶ್ಯಾಸನ ಸಭೆಯೊಳಗಂದು ನಿರಪರಾಧಿನಿ ದ್ರೌಪದಿಯನ್ನು ಹಿಡಿದೆಳತಂದು ಹಿಂಸಿಸುತಿರಲಂದು ಹೇ ಪರಮಾತ್ಮನೆ ನೀ ಪಾಲಿಸು ಎನೆ ಆಪತ್ತಿಗೊದಗಿದ ಭೂಪ ಶ್ರೀಕಾಂತನೆ 3
--------------
ಲಕ್ಷ್ಮೀನಾರಯಣರಾಯರು