ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚೆಂಡನಾಡುತ ಬಂದ ಪುಂಡ ಕೃಷ್ಣನು ತನ್ನ |ಹಿಂಡುಗೋಪಾಲಕರ ಕೊಂಡು ಯಮುನೆಯ ತಡಿಗೆಪಓರೆ ತುರುಬನೆಕಟ್ಟಿಗೀರುನಾಮವನಿಟ್ಟು |ಹಾರ ಕಂಕಣ ತೋಳಬಂದಿ ಘುಂಗುರ ಘನ-|ಸಾರಕುಂಕುಮ ಕೇಸರಿಗಂಧ ಕೂಡಿಸಿ |ಸೇರಿಸುತ ನಡುವಿಗೆ ಕಾಸಿದಟ್ಟಿಯನುಟ್ಟು |ಹಾರಾಡುತಲಿ ಬಂದ-ತೊಡರಗಾಲ |ತೋರ ಚಿನ್ಮಣಿಗಳಿಂದ. ಮುತ್ತಿನ ಚೆಂಡು |ಧಾರಿಣಿಗೆ ಪುಟಿಸಿ ನಿಂದ-ವಜ್ರದಖಣಿ|ತೋರಿ ಗೆಳೆಯರ ಕೂಡ ಬಂದರಾ ಮನೆಯಿಂದ 1ಕೊಂಡಾಲ ತಿಮ್ಮನು ಚೆಂಡನೆ ಹೊಡೆದನು |ಮಿಂಡೆಯರ ಮೊಲೆಗಾಗಿ ಹಾರಿಹರಿದು ಬೀಳೆ |ಹಿಂಡುನಾರಿಯರೆಲ್ಲ ಸುತ್ತಿಕೊಂಡಿರೆಅವರ|ಮುಂಡೆಗೆ ತಗುಲಿಸಿ ಪುರದ ಬಾಗಿಲ ಬಿಟ್ಟು |ಕಿಂಡಿಯಿಂದಲಿ ಬಂದನು-ನಾರಿಯರ |ಮಂಡೆಗೆ ಚೆಂಡಿಟ್ಟನು-ತೋರಿಸುವರ |ಕಂಡು ತಾ ನಗುತಿದ್ದನು-ಕೌತುಕವೆಂದು |ದಿಂಡೆಯರುಮಡುವಿನೊಳಗೆ ಹಾಕಿ ನಡೆದರು2ಗೆಳೆಯರೆಲ್ಲರು ಕೂಡಿ ಚೆಂಡು ತಾ ಎನಲಾಗಿ |ಗುಳುಗುಳಿಸುವ ವಿಷದ ಯಮುನಾ ತಡಿಯಲಿನಿಂದು|ಬಳಿಯ ವೃಕ್ಷದ ಮೇಲೇರಿ ತಾ ಧುಮುಕಲು |ಕಳಕಳಿಸುವ ಗೋಪಾಲರಳುತಿರೆ |ಇಳಿದ ನೀರೊಳಗಾಗಲು-ನಾಗರಫಣಿ|ತುಳಿದು ಕುಣಿಕುಣಿಯುತಿರಲು-ಬ್ರಹ್ಮನು ಬಂದು |ತಿಳಿದು ಮದ್ದಲೆ ಹೊಯ್ಯಲು-ಇಂದ್ರಾದ್ಯರು |ನಲಿದು ತಾಳವನಿಟ್ಟು ಕೊಂಡಾಡುತಿದ್ದರು 3ಮಗನ ಸುದ್ದಿಯಕೇಳಿಹರಿದು ಬಂದಳುಗೋಪಿ|ನಗರದ ಹೊರಗಾಗಿ ಬಾಯ ನಾದದಿಂದ |ವಿಗಡೆಯರು ಬಿಟ್ಟ ಮಂಡೆಯ ಜುಂಜು ಕೆದರುತ |ತೆಗೆದು ಮಣ್ಣನೆ ತೂರಿ ಕುಳಿತಲ್ಲಿಂದಲೆ ನಮ್ಮ-|ನ್ನಗಲಿ ಹೋಗುವರೆ ಹೀಗೆ-ರಂಗ ನಮ್ಮ |ಮೊಗವ ನೋಡುವುದೆಂದಿಗೆ-ನೋಡಿದ ಕಣ್ಣ |ತೆಗೆದು ಕೀಳುವೆನಿಂದಿಗೆ-ಪಡೆದ ಪೊಟ್ಟೆ |ದಗದಗಿಸಲು ಕೊಟ್ಟು ಮುನಿಯದೆ ಬಾ ಬೇಗ 4ಏನನೆಂಬೆನು ಕೃಷ್ಣ ನಿನ್ನ ಕಾಣದೆ ಪುರದ |ಮಾನಿನಿಯರು ಬೆರಗಾಗಿ ಬೀಳುತ ಕರುವ |ಕಾಣದಿರೆತ್ತಿಗೆ ಕರುವನು ಬಿಡುವರು |ಆ ನಾಸಿಕದ ಮೂಗುತಿ ಕಿವಿಗಿಡುವರು |ಧೇನುಮೇವನೆ ತೊರೆದುವು-ಗೋವುಗಳನ್ಯ-|ರಾಮನೆಗೋಡಿದುವು-ವತ್ಯಗಳೆಲ್ಲ |ಮೌನದಿ ಮೊಲೆ ತೊರೆದುವು ಕೃಷ್ಣಯ್ಯನ |ವೇಣುನಾದದ ಧ್ವನಿ ಕೇಳದೆ ಮೆಚ್ಚವು 5ದ್ವಾರಕಿ ಕೃಷ್ಣ ನೀ ಬಾಯೆಂದು ಕರೆವೆನೊ |ತೋರುವ ಸಮಪಾದ ವಿಠಲನೆಂಬೆನೊ |ಶ್ರೀರಮಣ ವೆಂಕಟನೆಂದು ಒದರುವೆನೊ |ಶ್ರೀರಂಗಶಯನನೆಂದೆನಲ್ಲದೆ ನಿನ್ನ |ಚೋರ-ಜಾರನೆಂದೆನೆ-ಹದ್ದಿನ ಮೇಲೆ |ಏರಿ ತಿರುಗುವನೆಂದೆನೆ-ಬೆಣ್ಣೆಯ ಕದ್ದು |ಸೂರೆ ಮಾಡುವನೆಂದೆನೆ-ಕೃಷ್ಣಯ್ಯ ನೀ |ಬಾರಯ್ಯ ಬಾರದಿದ್ದರೆ ಪ್ರಾಣ ನೀಗುವೆ 6ಕಣ್ಣೆತ್ತಿ ನೋಡಿದನೆಂದೆನೆ ಕಡೆಗೋಲ |ಬೆನ್ನಲಿ ಪಿಡಿದನೆಂದೆನೆ ಹಲ್ಲಳನೂರಿ |ಮಣ್ಣ ಕಚ್ಚಲು ಬಾಯ ತೆರೆಯುವನೆಂದೆನೆ |ಮಣ್ಣ ಬೇಡಲು ನಾ ಕೊಡಲಾರೆನೆಂದೆನೆ |ಎನ್ನ ಕುತ್ತಿಗೆ ಕೊಯ್ವರೆ-ಮಾತೆಯ ಮಾತು |ಮನ್ನಿಸಿ ವನಕೆ ಪೋಪರೆ-ಬಲಭದ್ರ |ಅಣ್ಣನಿಗೆ ಮುಖವ ತೋರೆ-ಕೃಷ್ಣಯ್ಯ ನೀ |ಸಣ್ಣವನೆನ್ನದೆ ಹರಿಯ ಕೊಂಡಾಡಿದೆ 7ಎಂದ ಮಾತನು ಕೇಳುವಾ ಸಮಯ ನಾಗಿಣಿ-|ವೃಂದವೆಲ್ಲವು ತಮ್ಮ ಕಂಠಭೂಷಣರಾಗಿ |ಅಂದದ ಮೇಲುದ ಸುತ್ತಿಕೊಂಡಿರೆ ಅರ-|ವಿಂದನಾಭಾಚ್ಯತ ಕೇಶವಮುರಹರ|ಮಂದರಧರಹರಿಯೆ-ನಿನಗೆ ನಾವು |ಮಂದಾಕಿನಿಯ ಸರಿಯೆ-ಮಾಂಗಲ್ಯದ |ಚೆಂದ ಕಾಯೈ ದೊರೆಯೆ-ಹರಿಯ ಕೃಪೆ-|ಯಿಂದ ಕರೆದು ನಮ್ಮ ಕಾಯಬೇಕೆಂದರು 8ಇಂತಿಂತು ಸ್ತವನವ ಮಾಡೆ ಕಾಳಿಂಗನ |ಕಾಂತೆಯರ ಸ್ತೋತ್ರಕ್ಕೆ ಮೆಚ್ಚಿ ನಾಗನ ಬಿಟ್ಟು |ಕಂತುಕ ಸಹಿತ ಪಂಕಜನಾಳವನೆ ಕೊಂಡು |ಸಂತಸದಲಿ ಇಕ್ಕುತ-ಶೋಕದಿ ನೀವು |ಭ್ರಾಂತಿ ಬಿಡಿರಿ ಎನ್ನುತ-ಬರಿದೆ ಎಲ್ಲ |ಸಂತೆ ಕೂಡಿದೆ ಎನ್ನುತ-ನಾ ಹಸಿದೆನು |ಪಂತಿಭೋಜನ ಕೊಂಡು ನಡೆಯಿರಿ ಮನೆಗೆಂದ 9ಸುರರಿಗೆಸುಧೆಮುಂಚೆ ಉಣಿಸಿದ ಪರಬ್ರಹ್ಮ |ಪರಿಪರಿ ಭೋಜನ ಮಾಳ್ಪ ಕಂಡುವರಾರು? |ಸುರದುಂದುಭಿ ಪೊಡೆದು ಪಾರಿಜಾತದ ಮಳೆ |ಸುರಿಸಿದರಾಕ್ಷಣಕೆ-ಬ್ರಹ್ಮನು ತಾನು |ತೆರಳಿದನಾಶ್ರಮಕೆ-ಪುರಂದರವಿಠಲ |ತಿರುಗಿದ ನಿಜಧಾಮಕೆ-ಕೃಷ್ಣನ ಲೀಲೆ |ಗುರುದಯೆಯಲಿ ನಮ್ಮ ಹರಿಯ ಕೊಂಡಾಡಿದೆ 10
--------------
ಪುರಂದರದಾಸರು
ಮೀಸಲ ಗುಣದೆಯರನೆಲ್ಲ ಮೋಸಗೈಸಿ ಕೊಳಲನೂದಿರಾಸಕ್ರೀಡೆ ಮಾಡಿದಾಭಾಸಬಹಳಯ್ಯಾ ಪ.ನೀನೆ ಎಂದವರೆದೊಡ್ಡ ಕಾನನದಿ ಬಿಟ್ಟು ಒಬ್ಬಮಾನಿನಿಯಜರಿದುನಡೆದಿ ಇನ್ನೇನು ಉಚಿತವಯ್ಯ ಕೃಷ್ಣ1ಎಳೆಯಬಳ್ಳಿ ಗಿಳಿಪಕ್ಷಿನಳಿನನಾಭನ ಕಂಡಿರೇನನಳಿನಮುಖಿಯರೆಲ್ಲ ತಿರುಗಿ ಬಳಲಿ ನಿಂತಾರೊ ಕೃಷ್ಣ2ಸೂಸು ಮಲ್ಲಿಗೆ ಸಂಪಿಗೆ ಜಾಜಿ ಹಾಸಿಕೆಯ ಮಾಡಿ ಅವಳಸೋಸುಪೂರೈಸುವ ಬಗಿಯು ಶ್ರೀಶ ರಮಸಿದಿಯೋ ಕೃಷ್ಣ3ಚಂದ್ರವದನೆಗೆ ಅಂಗದಲ್ಲಿ ಗಂಧ ಕಸ್ತೂರಿ ಕುಂಕುಮವಿಟ್ಟುಮಂದಾರಮಲ್ಲಿಗೆಯ ಮುಡಿಸಿ ಆನಂದ ಬಡಿಸಿದಿಯೊ ಕೃಷ್ಣ4ಇಂದಿರೇಶನ ಕಾಣದಲೆ ನೊಂದವರ ಮ್ಯಾಲೆ ಪರಿಮಳತಂದು ಹಾಕಿದ ವಾಯು ಪಾಪಿ ಎಂದು ಬಯ್ಯುತ ಕೃಷ್ಣ 5ತಂದು ಕನ್ನಡಿ ನಿಲ್ಲಿಸಿ ಒಳಗೆ ಚಂದ್ರನ್ಹೊಗಿಸಿಮ್ಯಾಲೆಕಲ್ಲುತಂದು ಹಾಕಿ ಅವನ ನಾವು ಕೊಂದರೆ ಪಾಪಿಲ್ಲ ಎನುತ6ಬೆಂದವರ ಮ್ಯಾಲೆ ಪರಿಮಳ ಚಂದ್ರನುಡಿಸಿದ ಕಂದನಿವನುಹಿಂದಿನ ವೈರವೇ ಸವತಿ ಇಂದಿನವನೆಂದು ಭವಿತ 7ಮಲ್ಲಿಗೆ ಸಂಪಿಗೆ ಜಾಜಿ ಚಲ್ವ ತುಳಸಿ ಯಮುನಾದೇವಿಫುಲ್ಲನಾಭನ ಕಂಡಿರೇನ ನಲ್ಲೆಯರು ಹಲಬುತ ಕೃಷ್ಣ 8ನೋಡುನೋಡುಕೆಳದಿ ಇಲ್ಲೆ ಜೋಡು ಹೆಜ್ಜಿ ತೋರುತಾವಮಾಡಿ ಕಪಟದಿ ರಂಗನ ಒಬ್ಬಳು ಓಡಿಸಿ ಒಯ್ದಾಳೆ ಎನುv 9ನಗಧರಒಬ್ಬ ಬಾಲೆಯಳ ಜಿಗಿದು ಎತ್ತಿದ ಹೆಜ್ಜೆ ನೋಡಿಸಿಗಲಿ ಅವಳು ರಂಗನ ಬೆರೆದ ಬಗಿಯ ತೋರೆನುತ ಕೃಷ್ಣ 10ಹಿಂಡುನಾರಿಯರೆಲ್ಲ ಕೂಡಿಕೊಂಡು ಅವಳ ಮಂಡೆಕುಕ್ಕಿಪುಂಡರಿಕಾಕ್ಷನ ತೋರೆದಿಂಡೆಮನುಜಳೆ ಎನುತ11ಇಷ್ಟು ನಾರಿಯರೊಳು ರಾಧೆ ಶ್ರೇಷ್ಠಳೆಂದು ಗರುವಿಸ್ಯಾಳುಅಷ್ಟರೊಳಗೆ ಅವಳ ನೀನು ಬಿಟ್ಟು ಪೋಗಿದ್ಯೊ ಕೃಷ್ಣ 12ಗಲ್ಲಕುಕ್ಕಿ ಅಂಜಿ ಅವಳು ಎಲ್ಲ ನಾರಿಯರಿಗೆ ಎರಗಿಫುಲ್ಲನಾಭಮಾಡಿದಪಾಟನಎಲ್ಲಿ ಉಸಿರಲೆ ಎನುತ13ವಿಧಿಗೆ ದಯವಿಲ್ಲ ನಮ್ಮ ಚದುರ ರಂಗನ ಅಗಲಿಸಿತುಮದನಬಾಣ ನೆಟ್ಟಿತೆಂದು ಸುದತೆಯರು ಹಲಬುತ ಕೃಷ್ಣ14ಶ್ರೀಶ ರಾಮೇಶನ ಯಾವ ದೇಶದಲ್ಲಿ ಹುಡುಕಲೆಂದುಕ್ಲೇಶಬಡಲು ಕೆಲದೆಯರೆಲ್ಲ ಸರ್ವೇಶ ಬಂದೆಂದ ಪಾರ್ಥ15
--------------
ಗಲಗಲಿಅವ್ವನವರು