ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶೇಷ-ರುದ್ರದೇವರು ಪಾದ ಭೂ- ಪಾದ ಪ. ಹರಿಗೆ ಹಾಸಿಗೆಯಾಗಿ ಹರುಷಪಡುವ ಪಾದ ಹರಿಯ ಮಂದಿರಲ್ಲಿ ಇರುವ ಪಾದ ಹರ ಪುರಂದರರಿಗೆ ಪೂಜ್ಯವಾಗಿಹ ಪಾದ ಪಾದ 1 ವಾರುಣಿ ದೇವಿಗೆ ವರನೆನಿಸಿದ ಪಾದ ಶ್ರೀ ರಾಮಗೆ ಕಿರಿಯನಾದ ಪಾದ ಘೋರ ಇಂದ್ರಾರಿಯ ಸಂಹರಿಸಿದ ಪಾದ ಪಾದ 2 ವಾಯುದೇವರು ಜೊತೆಗೆ ವಾದವಾಡಿದ ಪಾದ ನೋಯದೆ ಭೂಮಿಯನು ಪೊತ್ತಿಹ ಪಾದ ಶ್ರೀಯರಸನ ಪಾದಪದ್ಮ ಸೇವಿಪ ಪಾದ ಸುರರು ಪಾದ 3 ಸಪ್ತೆರಡು ಭುವನದಲಿ ಗುಪ್ತವಾಗಿಹ ಪಾದ ಚಿತ್ತದಭಿಮಾನಿಗೆ ಸೇವಕನಾದ ಪಾದ ಮತ್ತೆ ಮನ ಅಹಂಕಾರ ತತ್ವದೊಡೆಯನ ಪಾದ ಪಾದ 4 ಘೋರರೂಪವ ತೊರೆದು ಸೌಮ್ಯವಾಗಿಹ ಪಾದ ಸೇರಿದವರನು ಪೊರೆವ ಶ್ರೇಷ್ಠ ಪಾದ ಹಾರೈಸಿ ಗೋಪಾಲಕೃಷ್ಣವಿಠ್ಠಲನ ಪಾದ ಪಾದ 5
--------------
ಅಂಬಾಬಾಯಿ
ಶೇಷಮೂರುತಿ ಪೋಷಿಸೆನ್ನ ಹಾಸಿಗೆಯಾಗಿ ನೀ ಹರಿಯ ಪೊತ್ತಿರುವಿ ಪ ಶ್ವೇತದ್ವೀಪದ ಮಧ್ಯದಲ್ಲಿ ದೇವನರಸಿಯ ಕೂಡುತ್ತಲಿರಲು ಭಕ್ತಿಯಿಂದಲಿ ಕಂಗಳಿಂದ ಬಿಡದೆ ನೋಡುತಲಿಪ್ಪ ಸಮಯ1 ಮಗಳ ಲಜ್ಜೆಯ ಕಂಡು ಪಿತನು ಹಾಲಿನ ತೆರೆಯಿಂದ ಕಣ್ಣನೆ ಮುಚ್ಚಿಸಿಹನು ಮಗಳ ಮೇಲಿನ ಪ್ರೀತಿ ಪಿತಗೆ ಯೆಣಿಸಲಾಗದು ಲೋಕದೊಳಗೆ 2 ರಾಜೇಶ ಹಯಮುಖ ಹರಿಗೆ ಮಂಚವೆಂದರೆ ನೀನೆ ಖರೆಯು ರಾಜರಾಜರಿಗಿಂಥ ಮಂಚ ದೊರಕದೆಂದೆಂದಿಗೂ ದೇವ 3
--------------
ವಿಶ್ವೇಂದ್ರತೀರ್ಥ
ಶ್ರೀ ಗುರುವಿನ ಮನೆಯ ಮುಂದಣ ಬಾಗಿಲ ಕಾಯ್ದಿರುವೆ ಪ ತ್ಯಾಗಿಸಿ ಸಂಸಾರಾ ಶ್ರೀ ಗುರುವಿನ ಯೋಗಾಸನವಹೆನು ಅ.ಪ. ಕೊಪ್ಪರಿಗೆಯಾಗಿಹೆ ನಾನು ಜಲಹರಿಯಾಗಿಹೆ ನಾನು ಗುರುವಿನ ಚರಣಾಲಂಕರಿಸುವ ಕೇತಕಿ ಗರಿಯಾಗಿದೆ ನಾನು ಗುರು ಮಂತ್ರವನುಚ್ಚರಿಸಿ ಜಪಿಸುವ ಸರವಾಗಿಹೆ ನಾನು 1 ಗುರುವಿನ ಕೊರಳೊಳಗಿಹ ರುದ್ರಾಕ್ಷದ ಸರವಾಗಿಹೆ ನಾನು ಭರಣಿಯಾಗಿಹೆ ನಾನು ಘಟ ಪರಿಯಾಗಿಹೆ ನಾನು ಗುರುವಿನ ಭುಂಜಿಸಿ ಮಿಕ್ಕ ಪ್ರಸಾದಕೆ ಗುರಿಯಾಗಿದೆ ನಾನು2 ನಡೆವ ಹಾವಿಗೆಯಾಗಿಹೆ ನಾನು ಮಿಗೆ ನಿರ್ಮಲದೊಳು ಪವಡಿಸುತ್ತಿಹ ಹಾಸಿಗೆಯಾಗಿಹೆ ನಾನು ಹೊರಜರುಲಿಯ ಸಾರಿಹೆ ನಾನು ಜಗದೀಶ್ವರ ವಿಮಲಾನಂದ ಗುರುವಿಗೆ ಮಗನಾಗಿಹೆ ನಾನು 3
--------------
ಭಟಕಳ ಅಪ್ಪಯ್ಯ
ಶ್ರೀ ಹರಿ ಪಾಲಿಪುದೈ ದಾಸನಾಗಿ ಸೇವೆಗೈವುದ ಪ ನೀನು ಕೂಡುವ ಪೀಠವಾಗಿ ಮಲಗಲು ಹಾಸಿಗೆಯಾಗಿ ನಾನು ಎದುರ ಕನ್ನಡಿಯಾಗುತ ಮಂಗಳದೀಪ ಪಿಡಿವೆನೈ 1 ನಿನ್ನ ಮೇಲಿನ ಛತ್ರಿಯಾಗಿ ಚಾಮರಹಿಡಿದು ಬೀಸುವೆನೈ ಚನ್ನವೈಜಯಂತಿಮಾಲೆ ಧನ್ಯ ಮುದ್ರಿಕೆಯನ್ನು ಮಾಡಿಕೊ 2 ಭೋಜನಪಾತ್ರ ತಾಂಬೂಲಭರಣಿ ರಾಜಿಪ ಫಲತಟ್ಟೆಯು ಆಗಿ ವಿಜಯಧ್ವಜವನಾಗಿಸೈ 3 ಬರೆದು ಓದುವ ಪತ್ರವಾಗಿ ಕೈಯ ಲೀಲಾಶುಕವಾಗೀ ಕೊರಳ ಕೌಸ್ತುಭಮಣಿಯಮಾಡಿ ಶಂಖಚಕ್ರಗಳನು ಹೊರಿಸು 4 ಜಾಜಿಕೇಶವ ದಿವ್ಯಸನ್ನಿಧಿ ಸಾಹ್ಯವಸ್ತುಗಳಾಗಿಸೈ ರಾಜಾಧಿರಾಜಪೂಜ್ಯ ಮಾಜದೆ ನಾಂ ಮಣಿವೆ ಬೇಡಿ5
--------------
ಶಾಮಶರ್ಮರು
ಮಲಗಯ್ಯ ಜಲಜನಾಭ ಪಆದಿಶೇಷ್ಟನು ಬಂದು ಹಾಸಿಗೆಯಾಗಿಹವೇದವಿನುತ ಜಗದಾದಿ ಪುರುಷ ಕೇಳೊ 1ಸಿರಿ ಭೂ ದುರ್ಗೆಯರು ತರುಣಿಯರು ಮೂವರುಚರಣವೊತ್ತಲಿಕೆ ಕೈಕಟ್ಟಿ ನಿಂತಿಹರು 2ಸರುವಜÕ ಮುನಿವಂದ್ಯ ಸರುವ ಸ್ವತಂತ್ರನೇಪರಮ ಸುಂದರ ಪುರಂದರವಿಠಲರಾಯಾ3
--------------
ಪುರಂದರದಾಸರು