ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಪ್ಪುಗಳೊಪ್ಪುವೆ ಎನ್ನಲಿ ತಿಮ್ಮಪ್ಪ ನೀ ಕ್ಷಮಿಸಿ ರಕ್ಷಿಸು ಕರುಣದಲಿ ಪ. ಬುದ್ಧಿ ಹೀನನಾಗಿ ಎದ್ದು ಹಾಸಿಕೆಯಿಂದ ಮೇಧ್ಯವಸ್ತುಗಳೆಲ್ಲ ತಂದು ತಿಂದು ಮಧ್ಯಾನದಲಿ ನಿದ್ರೆ ಗೈದು ಮೋಹದಲಿ ನಿ- ಸತಿ ಸಂಗ ಗೈದಿಹೆನು 1 ಗುರು ಹಿರಿಯರ ಕೆಟ್ಟ ಗರುವದಿಂದ ನೀ ಕರಿಸಿ ಲೋಭದೊಳತಿಥಿಗಳ ಬಿಟ್ಟು ಪರ ಧನವನು ನಾನಾ ತರದಿಂದ ಕೊಂಡು ಶ್ರೀ ವರ ನೀನೆ ಗತಿಯೆಂದು ಸ್ಮರಿಸಿಕೊಂಡಿಹೆನು 2 ಇಂಥಾನಂತಾನಂತ ಪಾತಕಿಗಳ ರಮಾ ಕಾಂತ ನೀ ಕ್ಷಮಿಸಲು ಶಕ್ತನೆಂದು ಚಿಂತಿಸಿ ನುಡಿದೆನು ಲಾಲಿಸಿ ಕಾಯೊ ದು- ರಂತ ಮಹಿಮ ವೆಂಕಟೇಶ ನೀ ದಯದಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ಭಾರ ನಮ್ಮಪ್ಪನಿಗೀ ಸಂಸಾರ ಉಪ್ಪಿನ ಹೇರಂತಿದು ಬಹುಕ್ಷಾರ ಕೈ- ತಪ್ಪಿದರೆ ಬಾರದು ಸಣ್ಣ ಚೂರಾ ಪ. ಅಗಳಿನಾಶೆಗೆ ಪೋಗಿ ನಿಗಳ ಕಂಠಗೆ ಸಿಲುಕಿ ನೆಗೆದು ಬೀಳ್ವ ಮಚ್ಛ್ಯಗಳಂದದಿ ಬಹು ಹಗರಣಗೊಳ್ಳುತ ಮರುಳಾಗಿಹೆನು 1 ಬಾಲಬುದ್ಧಿಯೊಳೆರಡು ಶಾಲೆ ಕೊಂಡರೆ ಪರರ ಮೇಲೊಡ್ಡುತ ಬಹು ಸಾಲಗಾರನೋಲೆ ಕೋಳುಗೊಂಬನು ಪಂಚಗೋಲ ಸುಖತಿಯಲಿ 2 ಪುಣ್ಯಕರ್ಮವ ಮಾಡಿ ತನ್ನದೆಂದರೆ ನಿಲದು ದಾನವರೊಯ್ವರು ಘನಪಾತಕಗಳು ಬೆನ್ನ ಬಿಡವು ಮಕ್ಷಿಕಾನ್ನದಂತಿಹವು 3 ಕರ್ಮಶಾಸ್ತ್ರವ ಗಹನ ಮರ್ಮವ ತಾಳದ ನರನಾ ನಿರ್ಮಲ ಮಾಡಲು ಚವರ್i ತೊಳಿಯೆ ದು- ಷ್ಕರ್ಮ ಕಲುಷವನು ನಿರ್ಮೂಲಗೊಳಿಸದೆ 4 ಹೇಸಿಕೆ ಜೊಲ್ಲಿನ ಮುಸುಡಾ ಹಾಸಿಕೆಯಿಂದೆತ್ತುತಲಿ ದೂಷಿಸುತನ್ಯರ ಮೀಸೆಯ ತಿರುಹುತ ಲೇಸಗಾಣದೆ ಬಹು ಮೋಸಗೊಂಡಿಹೆನು 5 ಹಸ್ತಪಾದಾದಿಗಳ ಮೃತ್ತಿಕೆಯಿಂದಲಿ ತೊಳೆವ ತತ್ವ ನೋಡಲು ಕಣ್ಣು ಕತ್ತಲೆ ಬರುವುದು ಕತ್ತೆಗೆ ಷಡ್ರಸವೆತ್ತಲು ದೊರೆಯದು 6 ಸ್ನಾನದ ರೀತಿಯನಿನ್ನೇನೆಂದು ವರ್ಣಿಪೆನು ಮಾನವರಿದಿರು ನಿಧಾನದಿ ನಡೆವುದು ಮಾನಸ ವೈಶಿಕಧಾನಿಯಾಗಿಹುದು 7 ಮಡಿಯೆಂದು ಕೂತಿರಲು ಮಡದಿ ಹತ್ತಿರ ಬರಲು ಒಡವೆಯ ನೋಡುತ ಅಡಿಗೆಯ ಪಣ್ಕೆಯ ನುಡಿಯಲ್ಲದೆ ಜಪಗೊಡವೆಯೇನಿರದು 8 ಪಾಕ ಪೂರಣವಾಗೆ ಈಗ ಸಾಕೆಂಬೆ ಹರಿಪೂಜೆ ಶಾಕಾದಿಗಳು ವಿವೇಕವಾಗದಿರೆ ಭೀಕರಿಸುತ ಅವಿವೇಕನಾಗುವೆನು 9 ತದನಂತರದಿ ಪರರ ಕದನವನೆಬ್ಬಿಸುತಲಿ ಒದಗುತ ನಾನಾ ವಿಧದಲಿ ಎನ್ನಯ ವದನ ತುಂಬುವ ಮಾರ್ಗದಿ ದಿನ ಕಳೆವೆನು 10 ಇಂತು ದಿವಾಯುಷವನ್ನು ಸಂತರಿಸುತ ನಿಶೆಯೊಳ್ ಕಂತು ಕಲಾಪದ ಭ್ರಾಂತಿಗೊಂಡು ಮರ ದಂತೆ ಬೀಳಲು ನಿಮಿಷಾಂತರ ದೊರೆಯದು 11 ಪಾರಾವಾರದಕಿಂತ ಘೋರವಾಗಿರುವೀ ಸಂ- ಸಾರದಿ ಸಿಲುಕಿದರ್ಯಾರು ಕಾವರಿಲ್ಲ ಶ್ರೀರಮಾಪತಿ ಚರಣಾರವಿಂದವೆ ಗತಿ 12 ಈ ವಿಧ ದುಷ್ಕøತದಿಂದ ಕಾವನು ನೀ ಗೋವಿಂದ ಪಾವನಾತ್ಮಕ ಶೇಷಾವತಾರ ಗಿರಿ ಭವ ನಾವ ಮುಕುಂದ 13
--------------
ತುಪಾಕಿ ವೆಂಕಟರಮಣಾಚಾರ್ಯ